ಕಾವೇರಿ ನದಿ ನೀರಿನ ವಿವಾದದಲ್ಲಿ ಮೈಸೂರು ಮತ್ತು ಮಂಡ್ಯ ಸುತ್ತಮುತ್ತಲಿನ ಮಕ್ಕಳಿಗೆ ಭರ್ಜರಿ ರಜೆ ಆಫರ್ ಬಂದಿದ್ದು ನಿಮಗೆಲ್ರಿಗೂ ಗೊತ್ತಿರೋದೆ ಅಲ್ವ.. ಆದ್ರೆ ಇದೀಗ ರಾಷ್ಟ್ರ ರಾಜಧಾನಿ ದೆಹಲಿಯ ಸುಮಾರು 1800 ಶಾಲೆಗಳಿಗೆ ರಜೆ ನೀಡಿ ಆದೇಶ ಹೊರಡಿಸಿದ್ದಾರೆ.. ಅರೇ ಯಾಕೆ ರಜೆ ಕೊಟ್ಟಿದ್ದಾರೆ ಏನಾದ್ರೂ ದುರ್ಘಟನೆ ಸಂಭವಿಸಿದಿಯಾ ಅಂತ ನಿಮಗೆ ಪ್ರಶ್ನೆ ಉದ್ಭವಿಸಿದ್ರೆ ಖಂಡಿತ ಹೌದು.. ಅದೂ ಅಂತಿಂತ ಘಟನೆಯಲ್ಲ ಸ್ವಾಮಿ ದೆಹಲಿ ಸುತ್ತ ಮುತ್ತ ಉಸಿರಾಡೋಕು ಗಾಳಿ ಸಿಗದಂತಹ ವಾಯು ಮಾಲಿನ್ಯ ಉಂಟಾಗಿದೆ..! ಈಗಾಗ್ಲೇ ಅತೀ ಹೆಚ್ಚು ವಾಹನ ದಟ್ಟಣೆಯಿಂದ ಬೇಸತ್ತು ಹೋಗಿದ್ದ ದೆಹಲಿಗೆ ಈ ಬಾರಿಯ ದೀಪಾವಳಿಯೂ ಕೂಡ ಅದಕ್ಕಿಂತ ಕೆಟ್ಟ ಪರಿಣಾಮ ಬೀರಿದೆ.. ಮಕ್ಕಳಂತೂ ದೀಪಾವಳಿ ರಜೆ ಕಳೆದು ಇನ್ನು ವಾರಗಳೇ ಕಳೆದಿಲ್ಲ.. ಇದೀಗ ವಾಯು ಮಾಲಿನ್ಯದಿಂದ ರಜೆ ಪಡೆಯೋ ಸ್ಥಿತಿಗೆ ರಾಜಧಾನಿ ಬಂದಿದೆ ಅಂದ್ರೆ ನೀವೆ ಊಹಿಸಿ ಅಲ್ಲಿನ ಸ್ಥಿತಿನಾ..! ದೀಪಾವಳಿ ಕಳೆದರೂ ದೆಹಲಿಯಲ್ಲಿ ಮಾಲಿನ್ಯ ಮಾತ್ರ ಇನ್ನೂ ಕಡಿಮೆಯಾಗ್ಲೇ ಇಲ್ಲ.. ಮಲಿನಗೊಂಡ ಗಾಳಿ ಸೇವಿಸಿದ ಅದೆಷ್ಟೋ ವಿದ್ಯಾರ್ಥಿಗಳು ಅಸ್ತಮಾ, ಉಸಿರಾಟ ತೊಂದರೆಗಳಿಂದ ಬಳಲುತ್ತಿದ್ದಾರೆ. ಹೀಗಾಗಿ ದೆಹಲಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಇನ್ನು ರಾಜಧಾನಿಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವಾಯುಮಾಲಿನ್ಯಕ್ಕೆ ಕಾರಣ ಯಾರು..? ಎಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಪೀಠ ಸರ್ಕಾರಕ್ಕೆ ಪ್ರಶ್ನೆ ಮಾಡಿದೆ. ಎರಡು ಸರ್ಕಾರಗಳು ಪರಸ್ಪರ ಟೀಕೆಗಳನ್ನು ಮಾಡಿಕೊಳ್ಳುತ್ತಾ ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದಾರೆ ಎಂದು ಗುಡುಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಕಳೆದಬಾರಿ ನ್ಯಾಯಾಲಯವು 10 ವರ್ಷ ಮೇಲ್ಪಟ್ಟ ವಾಹನಗಳನ್ನು ರಸ್ತೆಗಿಳಿಸಬೇಡಿ ಎಂದು ಖಡಕ್ ಎಚ್ಚರಿಕೆ ನೀಡಿದ್ದರೂ ಕೂಡ ಇದು ಸರಿಯಾಗಿ ಪಾಲನೆಯಾಗ್ತಾ ಇಲ್ಲ.. ಕೇವಲ ಕೃಷಿ ತ್ಯಾಜ್ಯಗಳಿಂದ ಇಷ್ಟೊಂದು ಪ್ರಮಾಣದಲ್ಲಿ ಮಾಲಿನ್ಯ ಉಂಟಾಗುವುದು ಸಾಧ್ಯವೇ ಇಲ್ಲ ಎಂದು ಹಸಿರು ನ್ಯಾಯಾಧಿಕರಣ ಮುಖ್ಯಸ್ಥ ಸ್ವತಂತ್ರಕುಮಾರ್ ಹೇಳಿದ್ದಾರೆ.
Like us on Facebook The New India Times
POPULAR STORIES :
ಇಂಡಿಯನ್ ಸ್ಟೀಲ್ ಮ್ಯಾನ್ ಸಾಹಸ ನೋಡುದ್ರೆ ಬೆಚ್ಚಿ ಬೀಳ್ತೀರ..!
ಲವ್ ಅಟ್ ಫಸ್ಟ್ ಸೈಟ್ ಅಂದ್ರೆ ಇದೇನಾ..!