ಧಾರವಾಡದಲ್ಲಿ ಹೃದಯಾಘಾತಕ್ಕೆ 22 ವರ್ಷದ LLB ವಿದ್ಯಾರ್ಥಿ ಬಲಿ!
ಧಾರವಾಡ: ಹೃದಯಾಘಾತದಿಂದ ಎಲ್ಎಲ್ಬಿ ಅಂತಿಮ ವರ್ಷದ ವಿದ್ಯಾರ್ಥಿಯೊಬ್ಬರು ಮೃತಪಟ್ಟಿರುವ ಘಟನೆ ಧಾರವಾಡದಲ್ಲಿ ನಡೆದಿದೆ. ಮೃತರನ್ನು 22 ವರ್ಷದ ಸಮರ್ಥ್ ದೇಶಪಾಂಡೆ ಎಂದು ಗುರುತಿಸಲಾಗಿದೆ.
ಧಾರವಾಡದ ಹಿರಿಯ ವಕೀಲ ಅನೂಪ್ ದೇಶಪಾಂಡೆ ಅವರ ಪುತ್ರನಾಗಿದ್ದ ಸಮರ್ಥ್, ಎಲ್ಎಲ್ಬಿ ಪದವಿಯ ಕೊನೆಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದರು. ಅವರ ತಂದೆ ಅನೂಪ್ ದೇಶಪಾಂಡೆ ಅವರು ಸಹಕಾರಿ ಸಂಘಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ನಡೆಸುತ್ತಿದ್ದರು.
ಯುವ ವಿದ್ಯಾರ್ಥಿಯ ಅಕಾಲಿಕ ಸಾವಿನಿಂದ ಕುಟುಂಬದಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ. ಮೃತ ಸಮರ್ಥ್ ಅವರ ಅಂತ್ಯಕ್ರಿಯೆ ಮಧ್ಯಾಹ್ನ ಧಾರವಾಡದ ಹೊಸಯಲ್ಲಾಪುರದಲ್ಲಿರುವ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ.



