ಸೈಲೆಂಟಾಗಿ ಭಾರತದ ನಂಬರ್.1 ಶ್ರೀಮಂತನಾದವರ ಸ್ಟೋರಿ…!

0
135

ನಮಗೂ ನಿಮಗೂ ಗೊತ್ತಿರೋ ಹಾಗೆ ಮುಖೇಶ್ ಅಂಬಾನಿ ಭಾರತದ ನಂಬರ್ 1 ಶ್ರೀಮಂತ ಅಲ್ವಾ..? ಈಗ ಲೀಸ್ಟ್ ಚೇಂಜ್ ಆಗಿದೆ..! ವಿಶ್ವದ ಶ್ರೀಮಂತರ ಪಟ್ಟಿ ಬಿಡುಗಡೆ ಮಾಡೋ ಫೋರ್ಬ್ಸ್ ಸಂಸ್ಥೆಯ ರಿಯಲ್ ಟೈಂ ಲೀಸ್ಟಿನ ಪ್ರಕಾರ ದಿಲೀಪ್ ಶಾಂಘ್ವಿ, ಮುಖೇಶ್ ಅಂಬಾನಿಯವರನ್ನು ಹಿಂದಿಕ್ಕಿದ್ದಾರೆ.. ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಮುಖೇಶ್ 45ನೇ ಸ್ಥಾನದಲ್ಲಿದ್ರೆ, ದಿಲೀಪ್ 41ನೇ ಸ್ಥಾನದಲ್ಲಿದ್ದಾರೆ…!

This website and its content is copyright of – © Thenewindiantimes.com 2015. All rights reserved.
Any redistribution or reproduction of part or all of the contents Without Permission or Courtesy in any form is prohibited.

ಅರೆರೆ, ಇದೇನಪ್ಪಾ..? ಈ ಮನುಷ್ಯನ ಹೆಸರೇ ಸರಿಯಾಗಿ ಕೇಳಿಲ್ಲ ನಾವು. ಈಗ ನೋಡಿದ್ರೆ ಇಡೀ ಇಂಡಿಯಾಗೆ ಅವರೇ ಶ್ರೀಮಂತ ಅಂತಿದೀಯಲ್ಲ ಅಂತ ಆಶ್ಚರ್ಯ ಪಡಬೇಡಿ, ನಿಮಗೆ ಅನುಮಾನವಿದ್ರೆ ಫೋರ್ಬ್ಸ್ ನ ಈ ಲೀಸ್ಟ್ ನೋಡಿ ನಿಮಗೇ ಗೊತ್ತಾಗುತ್ತೆ..! 2015ರ ಪಟ್ಟಿಯಲ್ಲಿ ಮುಖೇಶ್ ಅಂಬಾನಿ, ದಿಲೀಪ್ ಶಾಂಘ್ವಿಗಿಂತ ಮುಂದಿದ್ದರೂ ಸಹ, ರಿಯಲ್ ಟೈಂ ಲೀಸ್ಟಲ್ಲಿ ದಿಲೀಪ್ ತುಂಬಾ ಮುಂದಿದ್ದಾರೆ..! ಅಷ್ಟಕ್ಕೂ ಯಾರಪ್ಪಾ ಈ ದಿಲೀಪ್ ಶಾಂಘ್ವಿ..? ಎಲ್ಲಿದ್ರು ಇಷ್ಟ್ ದಿನ? ಅವರ ಕಂಪನಿ ಯಾವ್ದು ಅಂದ್ರಾ..? ಇಲ್ಲಿದೆ ನೊಡಿ ಡಿಟೇಲ್ಸ್…
ಈ ದಿಲೀಪ್ ಶಾಂಘ್ವಿ ಸನ್ ಫಾರ್ಮ ಕಂಪನಿಯ ಮಾಲೀಕ..! ನಾವು ನೀವು ಸೇವಿಸೋ ಮಾತ್ರೆ, ಔಷಧಿಗಳಲ್ಲಿ ಬಹುಪಾಲು ಇವರ ಕಂಪನಿಯದ್ದೇ. ಇತ್ತೀಚೆಗೆ ಅವರ ಎದುರಾಳಿ ಕಂಪನಿ ರ್ಯಾನ್ ಬ್ಯಾಕ್ಸಿಯನ್ನು ಕೊಂಡುಕೊಂಡ ಮೇಲೆ ದಿಲೀಪ್ ಶಾಂಘ್ವಿ ಆಸ್ತಿ ಮೇಲೇರ್ತಾ ಇದೆ.. ಈಗ ಭಾರತದ ನಂಬರ್ ವನ್ ಮತ್ತು ವಿಶ್ವದ ಐದನೇ ಅತಿದೊಡ್ಡ ಫಾರ್ಮಸಿಟಿಕಲ್ ಕಂಪನಿಯ ಮಾಲೀಕ ಈ ದಿಲೀಪ್ ಶಾಂಘ್ವಿ..! ಪ್ರಸ್ತುತ ಅವರ ಆಸ್ತಿ ಎಷ್ಟು ಗೊತ್ತಾ…? 1328589000000 ರೂಪಾಯಿ….! www.tnit.in
ಈ ಹೆಸರು, ದುಡ್ಡು, ಕಂಪನಿ ಎಲ್ಲಾ ಸುಮ್ಮನೆ ಈಸಿಯಾಗಿ ಒಲಿದು ಬರಲಿಲ್ಲ ದಿಲೀಪ್ ಅವರಿಗೆ. ಅದರ ಹಿಂದೆ ಅವರ ಸಿಕ್ಕಾಪಟ್ಟೆ ಶ್ರಮ ಇದೆ. ಅವರು ಓದಿದ್ದಕ್ಕೂ, ಅವರ ಈಗಿನ ಬಿಸ್ನೆಸ್ ಗೂ ಸಂಬಂಧವೇ ಇಲ್ಲ..! ಅವರು ಓದಿದ್ದು ಆರ್ಟ್ಸ್ ಡಿಗ್ರಿ, ಆದ್ರೆ ಸಾಧಿಸಿದ್ದು ಔಷಧಿ ಕ್ಷೇತ್ರದಲ್ಲಿ..! ಆದ್ರೆ ದಿಲೀಪ್ ಅವರ ತಂದೆ ಔಷಧಿಗೆ ಸಂಬಂಧಿಸಿದ ಸಣ್ಣಪುಟ್ಟ ವ್ಯಾಪಾರ ಮಾಡ್ತಾ ಇದ್ದವರು. ವಿವಿಧ ಕಂಪನಿಗಳ ಮಾತ್ರೆ ಮತ್ತು ಔಷಧಿ ಕೊಂಡುಕೊಂಡು ಮೆಡಿಕಲ್ಸ್ ಗಳಿಗೆ ಡೆಲಿವರಿ ಕೊಡೋ ಕೆಲಸ ಮಾಡ್ತಿದ್ರು. ಅದಕ್ಕೆ ದಿಲೀಪ್ ಅವರು ಅಪ್ಪನಿಗೆ ಸಹಾಯ ಮಾಡ್ತಿದ್ರು.. 1983ರಲ್ಲಿ ತನ್ನ ಹುಟ್ಟೂರು ಕೋಲ್ಕತ್ತಾ ಬಿಟ್ಟು ಮುಂಬೈಗೆ ಬಂದಾಗ ಕೈಲಿದ್ದಿದ್ದು ಅಪ್ಪ ಕೊಟ್ಟ 10 ಸಾವಿರ ರೂಪಾಯಿ…! ಆ 10 ಸಾವಿರದಲ್ಲಿ ಶುರುವಾದ ಸನ್ ಫಾರ್ಮ ಇವತ್ತು ಬೆಳೆದ ರೀತಿಗೆ ವಿಶ್ವವೇ ಬೆರಗಾಗಿದೆ..! ಆರಂಭದಲ್ಲಿ ತಲೆ ಓಡಿಸಿ ಅತ್ಯಂತ ಕೊಳಚೆ ನಗರ ಎಂದು ಕುಖ್ಯಾತಿ ಪಡೆದಿದ್ದ ಗುಜರಾತ್ ನ ವಾಪಿ ನಗರದಲ್ಲಿ ಕಾರ್ಯಾರಂಭ ಮಾಡಿದ ಸನ್ ಫಾರ್ಮ ಒಳ್ಳೆಯ ರೆಸ್ಪಾನ್ಸ್ ಪಡೀತು..! ಅಲ್ಲಿಂದ ತಮ್ಮ ವಹಿವಾಟನ್ನು ದೇಶಾದ್ಯಂತ ವಿಸ್ತರಿಸಿದ್ರು ದಿಲೀಪ್ ಶಾಂಘ್ವಿ…! 1996ರಲ್ಲಿ ಔಷಧಿ ತಯಾರಿಕಾ ಕಂಪನಿ ನೋಲ್ ಫಾರ್ಮ ಕಂಪನಿಯನ್ನು ಕೊಂಡುಕೊಂಡ ಸನ್ ಫಾರ್ಮ ತನ್ನ ಔಷಧ ಎಕ್ಸ್ ಪೋರ್ಟನ್ನು 24 ದೇಶಗಳಿಗೆ ವಿಸ್ತರಿಸಿತು..! ಅಲ್ಲಿಂದ ಆರಂಭವಾದ ಅವರ ಕಂಪನಿ ಕೊಂಡುಕೊಳ್ಳುವ ಕಾರ್ಯ ಮುಂದೆ 19 ಬೇರೆಬೇರೆ ಕಂಪನಿಗಳನ್ನು ಕೊಂಡುಕೊಳ್ಳೋದರ ತನಕ ಮುಂದುವರೆಯಿತು. 2010ರ ಹೊತ್ತಿಗೆ ಸನ್ ಫಾರ್ಮ, ಅಮೆರಿಕ, ಕೆನಡಾ ಸೇರಿದಂತೆ ವಿಶ್ವದ ದೊಡ್ಡದೊಡ್ಡ ರಾಷ್ಟ್ರಗಳಲ್ಲಿ ಹೆಸರು ಮಾಡಿತ್ತು.. ಆದ್ರೆ 2014ರಲ್ಲಿ ತನ್ನ ಬದ್ಧವೈರಿ ಕಂಪನಿ ಅಂತಲೇ ಕರೆಸಿಕೊಂಡಿದ್ದ ರ್ಯಾನ್ ಬ್ಯಾಕ್ಸಿಯನ್ನು 25 ಸಾವಿರ ಕೋಟಿಗೆ ತಮ್ಮದಾಗಿಸಿಕೊಂಡ್ರು ದಿಲೀಪ್ ಶಾಂಘ್ವಿ..! ಅದಾದ ಮೇಲೆ ವಿಶ್ವದ ಅತಿದೊಡ್ಡ ಔಷಧಿ ಕಂಪನಿಗಳ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೇರಿತು ಸನ್ ಫಾರ್ಮ..!www.tnit.in
ಈ ದಾರಿಯಲ್ಲಿ ಸಾಕಷ್ಟು ಏಳುಬೀಳುಗಳನ್ನೂ ಕಂಡಿತ್ತು ಸನ್ ಫಾರ್ಮ. 2014ರಲ್ಲಿ ಅಮೆರಿಕ ಸನ್ ಫಾರ್ಮದ ಹಲವು ಔಷಧಿಗಳನ್ನು ಕ್ವಾಲಿಟಿ ಸರಿ ಇಲ್ಲ ಅಂತ ಬ್ಯಾನ್ ಮಾಡಿತ್ತು..! ಆ ಟೈಮಲ್ಲಿ ಅಮೆರಿಕಾಗೆ ರಫ್ತು ಮಾಡಿದ್ದ ಅಷ್ಟೂ ಔಷಧಿಗಳನ್ನು ಹಿಂಪಡೆದು ಹೊಸ ಪ್ರಾಡಕ್ಟ್ ಕಳಿಸಿ ಮತ್ತೆ ತಮ್ಮ ವರ್ಚಸ್ಸು ಉಳಿಸಿಕೊಂಡ್ರು…! ಹೀಗೆ ಎಂಥಾ ಟೈಮಲ್ಲೂ ಧೃತಿಗೆಡದೇ ತಾನೊಬ್ಬ ಬೆಸ್ಟ್ ಬಿಸ್ನೆಸ್ ಮ್ಯಾನ್ ಅಂತ ಪ್ರೂವ್ ಮಾಡಿದ ದಿಲೀಪ್ ಶಾಂಘ್ವಿ ಇವತ್ತು ವಿಶ್ವದ ನಲವತ್ತನೇ ಹಾಗೂ ಭಾರತದ ನಂಬರ್ ವನ್ ಶ್ರೀಮಂತ…! ದುಡ್ಡು ಜಾಸ್ತಿ ಆಗ್ತಾ ಇದ್ದ ಹಾಗೇ ಉಳಿಸೋದರ ಕಡೆ ಗಮನ ಹರಿಸೋರು ಜಾಸ್ತಿ, ಆದ್ರೆ ದಿಲೀಪ್ ಅವರ ಸಕ್ಸಸ್ ಸೂತ್ರ ಏನು ಗೊತ್ತಾ..? ಲಾಭ ಬಂದಹಾಗೇ ಬೇರೆಬೇರೆ ಕಂಪನಿಗಳನ್ನು ತಮ್ಮದಾಗಿಸಿಕೊಂಡಿದ್ದು…! ಇವತ್ತು ಅವರು 20ಕ್ಕೂ ಹೆಚ್ಚು ಕಂಪನಿಗಳನ್ನು ಸ್ವಂತ ಮಾಡಿಕೊಂಡಿರೋ ದಿಲೀಪ್ ಶಾಂಘ್ವಿ ಭಾರತದ ಔಷಧೀಯ ಕ್ಷೇತ್ರದ ಅನಭಿಶಕ್ತ ದೊರೆ ಅಂದ್ರೆ ತಪ್ಪಾಗಲ್ಲ..!
ಫೋರ್ಬ್ಸ್ ರಿಯಲ್ ಟೈಂ ಲೀಸ್ಟ್ :

Forbes : The World’s Billionaires List

richest-person-of-india

-ಕೀರ್ತಿ ಶಂಕರಘಟ್ಟ

ಯೂಟ್ಯೂಬ್ ಮೂಲಕ ನೀವೂ ಹಣ ಗಳಿಸಿ…! Click Here

 

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : [email protected]

 

 

LEAVE A REPLY

Please enter your comment!
Please enter your name here