ಚುನಾವಣಾ ಆಯೋಗ ಜನಪ್ರತಿ‌ನಿಧಿಗಳಿಗೆ ನೀಡಿದೆ ಬಿಗ್ ಶಾಕ್…!

0
111

ಕೇಂದ್ರ ಚುನಾವಣಾ ಆಯೋಗದಿಂದ ಜನಪ್ರತಿನಿಧಿಗಳು ಆಘಾತಕ್ಕೆ ಒಳಗಾಗಿದ್ದಾರೆ.‌ ಆಯೋಗದ ಉದ್ದೇಶಿತ ಕ್ರಮವೊಂದು ಕಳಂಕಿತ ಜ‌ನಪ್ರತಿನಿಧಿಗಳ ರಾಜಕೀಯ ಭವಿಷ್ಯವನ್ನು ಬಹುತೇಕ ಕೊನೆಗಾಣಿಸಲಿದೆ…! ಆಯೋಗ ತೆಗೆದುಕೊಳ್ಳಲು ಉದ್ದೇಶಿಸಿರುವ ಕ್ರಮದಿಂದ 5ವರ್ಷಗಳ ಕಾಲ ಶಿಕ್ಷೆ ಹೊಂದುವ ಆರೋಪ ಹೊತ್ತ ಕಳಂಕಿತ ಶಾಸಕ, ಸಂಸದರು ಚುನಾವಣಾ ಕಣದಿಂದ ಹಿಂದೆ ಸರಿಯ ಬೇಕಾಗುತ್ತದೆ…!


ಈ ಹಿಂದೆ ಸುಪ್ರೀಂಕೋರ್ಟ್, ಯಾವುದೇ ಶಾಸಕ ಅಥವಾ ಸಂಸದ ಎರಡು ವರ್ಷ ಜೈಲು ಶಿಕ್ಷೆ ಅನುಭವಿಸಿದ್ರೆ ಅವರ ಸ್ಥಾನವನ್ನು ರದ್ದುಗೊಳಿಸಬಹದು ಎಂದು ಆದೇಶ ನೀಡಿತ್ತು. ಈ ಆದೇಶದನುಗುಣವಾಗಿ 1951ರ ಜನಪ್ರತಿನಿಧಿ ಕಾಯ್ದೆಗೆ ಭಾರಿ ಬದಲಾವಣೆ ತರಲು ಪ್ರಯತ್ನಿಸಲಾಗುತ್ತಿದೆ ಎಂದು ತಿಳಿದುಬಂದಿದೆ. ‌


ಆಯೋಗ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ಹೊಸ ಪ್ರಸ್ತಾವನೆಯಲ್ಲಿ 2ವರ್ಷ ಜೈಲು ಶಿಕ್ಷೆ ಬದಲಿಗೆ ಪ್ರಮುಖ‌ ಅಪರಾಧ ಪ್ರಕರಣಗಳಲ್ಲಿ 5 ಅಥವಾ ಅದಕ್ಕಿಂತ ಹೆಚ್ಚು ವರ್ಷ ಜೈಲು ಶಿಕ್ಷೆ ವಿಧಿಸಬಹುದಾದ ಆರೋಪ‌ ಹೊತ್ತ ಶಾಸಕ, ಸಂಸದರು ಚುನಾವಣೆಗೆ ಸ್ಪರ್ಧಿಸಲು ಅನರ್ಹರು ಎಂದು‌ ತಿಳಿಸಿದೆ.

LEAVE A REPLY

Please enter your comment!
Please enter your name here