No menu items!
5.4 C
Munich
Thursday, April 30, 2026

ಕಲುಷಿತ ನೀರು ಸೇವನೆಯಿಂದ ತಂದೆ-ಮಗ ಸಾವು; 20ಕ್ಕೂ ಅಧಿಕ ಮಂದಿ ಅಸ್ವಸ್ಥ….!‌ ಇದು ಶಿವಮೊಗ್ಗದಲ್ಲಿ ನಡೆದ ಘಟನೆ…!

Must read

ಕಲುಷಿತ ನೀರು ಸೇವನೆಯಿಂದ ಅಪ್ಪ -ಮಗ ಮೃತಪಟ್ಟು, 20ಕ್ಕೂ ಹೆಚ್ಚಿನ ಮಂದಿ‌ ಅಸ್ವಸ್ಥಗೊಂಡಿರುವ ಘಟನೆ‌ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಮೈದೂಳಿನಲ್ಲಿ ನಡೆದಿದೆ.


ಗ್ರಾಮದ ಶಿವಪ್ಪ ಮತ್ತು ಅವರ ಮಗ ಹನುಮಂತ ಮೃತರು. ಶಿವಪ್ಪ ಅವರ ಕುಟುಂಬದ ಸಿದ್ಧಮ್ಮ ಮತ್ತು ಶೋಭಾ ಎಂಬುವವರ ಸ್ಥಿತಿ ಗಂಭೀರವಾಗಿದ್ದು, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.


ಗ್ರಾಮ ಪಂಚಾಯತಿ ಪೂರೈಸುತ್ತಿರುವ ನೀರಿನಿಂದ ಈ ಅವಾಂತರ ಘಟಿಸಿದೆ. ನೀರಿನ ಟ್ಯಾಂಕ್ ಸ್ವಚ್ಛ ಮಾಡದೆ ಇದ್ದುದೇ ಘಟನೆಗೆ ಕಾರಣ ಎನ್ನಲಾಗಿದ್ದು , ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗ್ರಾಮಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಹನುಮಂತಪ್ಪ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ನೀರಿನ ಸ್ಯಾಂಪಲ್ ಅನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article