ಮಾರುಕಟ್ಟೆಯಲ್ಲಿ ಸಿಗುತ್ತೆ ಚೀನಿ ನಕಲಿ ಮೊಟ್ಟೆ..!

0
47

ಚೀನಾ ವಸ್ತುಗಳೆಂದ್ರನೇ ಅದನ್ನು ಕೊಂಡುಕೊಳ್ಳಲು ಹಿಂದೆ ಮುಂದೆ ನೋಡೋ ಭಾರತೀಯರಿಗೆ ಈಗ ಮತ್ತೊಂದು ಶಾಕ್ ನ್ಯೂಸ್ ಬಂದಿದೆ ಮಿಸ್ ಮಾಡದೇ ಓದಿ.. ಚೀನಾದಿಂದ ಪ್ಲಾಸ್ಟಿಕ್ ಅಕ್ಕಿಗಳು ಬರ್ತಾ ಇದೆ ಎಂಬ ಸುದ್ದಿಗಳು ಹರಡುತ್ತಿದ್ದಂತೆಯೇ ಇದೀಗ ಮತ್ತೊಂದು ಅಘಾತಕಾರಿ ಅಂಶವೊಂದು ಬೆಳಕಿಗೆ ಬಂದಿದೆ. ಕೇರಳ ರಾಜ್ಯದ ಮಾರುಕಟ್ಟೆಗಳಲ್ಲಿ ಈಗ ನಕಲಿ ಕೋಳಿ ಮೊಟ್ಟೆನೂ ಸಿಗುತ್ತೆ ನೋಡಿ.. ಇದನ್ನ ಮೊಟ್ಟೆ ಎಂದು ತಿಳಿದು ಸೇವನೆ ಮಾಡಿದರೆ ಶೀಘ್ರವೇ ಶಿವನ ಪಾದ ಸೇರೋದಂತೂ ಖಂಡಿತ.. ಹೌದು.. ಇದೀಗ ದಕ್ಷಿಣ ಭಾರತದ ರಾಜ್ಯಗಳಲ್ಲಿ ಚೀನಾದ ನಕಲಿ ಮೊಟ್ಟೆಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗ್ತಾ ಇದ್ದು ಈ ಮೊಟ್ಟೆ ಅಸಲಿಯೋ ನಕಲಿಯೋ ಎಂದು ತಿಳಿಯಲು ಆರೋಗ್ಯ ಇಲಾಖೆ ಅವರಿಗೆ ಸಾಧ್ಯವಾಗ್ತಾ ಇಲ್ವಂತೆ..! ರಾಸಾಯನಿಕ ವಸ್ತುಗಳಿಂದ ಮಾಡಲ್ಪಟ್ಟ ಚೈನೀಸ್ ಮೊಟ್ಟೆ ಎಂದೆಸೆರಿನ ಇವುಗಳು ಹೊರ ರಾಜ್ಯಗಳಲ್ಲಿ ತಯಾರಿಸಲಾಗ್ತಾ ಇದೆ ಎಂಬ ಅಂಶ ಬೆಳಕಿಗೆ ಬಂದಿದೆ. ಕಳೆದ ವಾರ ಕಣ್ಣೂರು ಕರಿವೆಳ್ಳೂರು ನಿವಾಸಿಯಾದ ರಾಮಚಂದ್ರನ್ ಅವರಿಗೆ ಅವರಿಗೆ ಸಿಕ್ಕಿದ್ದ ಎಲ್ಲಾ ಮೊಟ್ಟೆಗಳು ನಕಲಿ ಮೊಟ್ಟೆಗಳು ಎಂದು ಗಮನಕ್ಕೆ ಬಂದ ಮೇಲೆಯೇ ಇಂತಹದೊಂದು ಘಟನೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ. ಇನ್ನು ತಮ್ಮ ರಾಜ್ಯಕ್ಕೆ ಅತೀ ಹೆಚ್ಚಾಗಿ ತಮಿಳುನಾಡಿನಿಂದ ಮೊಟ್ಟೆಗಳು ಆಮದಾಗುತ್ತಿರುವುದರಿಂದ ತಮಿಳುನಾಡಿನಲ್ಲಿ ಈ ನಕಲಿ ಮೊಟ್ಟೆಗಳನ್ನು ಹೆಚ್ಚಾಗಿ ತಯಾರು ಮಾಡಲಾಗ್ತಾ ಇದೆ ಎಂಬ ಸಂಶಯ ವ್ಯಕ್ತವಾಗಿದೆ. ಇನ್ನು ರಾಜ್ಯಕ್ಕೆ ಬರುವ ಮೊಟ್ಟೆಗಳಲ್ಲಿ ನಕಲಿ ಯಾವುದು ಅಸಲಿ ಯಾವುದು ಎಂದು ತಿಳಿಯದೇ ವ್ಯಾಪಾರಿಗಳು ಕೊಂಡು ಮಾರಾಟ ನಡೆಸುತ್ತಾರೆ ಎಂಬುದು ಸ್ಥಳಿಯರ ವಾದ.
ನಕಲಿ ಮೊಟ್ಟೆಗಳ ಹಾವಳಿ ದೇಶದಾದ್ಯಂತ ಹೆಚ್ಚಾಗುವ ಭೀತಿಯಲ್ಲಿ ಮುನ್ನೆಚ್ಚರಿಕೆಯ ಕ್ರಮವಾಗಿ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಮೊಟ್ಟೆಗಳ ಕುರಿತು ಅರಿವು ಮೂಡಿಸುವ ಕಾರ್ಯವೂ ಕೂಡ ತೀವ್ರಗತಿಯಲ್ಲಿ ನಡೆಯುತ್ತಿದೆ. ಕೃತಕ ಮೊಟ್ಟೆಗಳಿಗೆ ಬಿಳಿ ಲೋಳೆ ರಸವನ್ನು ಮಾಡಲು ಸ್ಟಾರ್ಚ್, ರೆಸಿನ್, ಸೋಡಿಯಂ ಆಲಗ್ನಿನೇಟ್ ಮುಂತಾದ ರಾಸಾಯನಿಕಗಳನ್ನು ಬಳಸಿಕೊಳ್ಳಲಾಗುತ್ತಿದೆ. ಮೊಟ್ಟೆಯಲ್ಲಿ ಹಳದಿ ಭಾಗವನ್ನು ನಿರ್ಮಿಸಲು ಆರ್ಗನಿಕ್ ಆಸಿಡ್, ಪೊಟ್ಯಾಷಿಯಂ ಆಲಂ, ಜೆಲಾಟಿನ್, ಕ್ಯಾಲ್ಸಿಯಂ ಕ್ಲೋರೈಡ್, ಬೆನ್ಸೋನಿಕ್ ಆಸಿಡ್‍ಗಳನ್ನು ಬಳಸಿಕೊಳ್ಳಲಾಗ್ತಾ ಇದೆ. ಮೊಟ್ಟೆಯ ಹೊರ ಕವಚಕ್ಕೆ ಕ್ಯಾಲ್ಸಿಯಂ ಕಾರ್ಬೋನೇಟ್, ಜಿಪ್ಸಂ ಮೊದಲಾದ ರಾಸಾಯನಿಕಗಳನ್ನು ಸೇರಿಸಲಾಗ್ತಾ ಇದೆ. ಅಸಲೀ ಮೊಟ್ಟೆಯಂತೆ ಕಾಣಿಸಿಕೊಳ್ಳೋ ಸಲುವಾಗಿ ಮೊಟ್ಟೆಯ ಮೇಲೆ ವಿಸರ್ಜನಾ ತ್ಯಾಜ್ಯವನ್ನು ಅಲ್ಲಲ್ಲಿ ಅಂಟಿಸಲಾಗುತ್ತಿದೆ. ಒಟ್ಟಾರೆ ಇಡೀ ಮೊಟ್ಟೆಯನ್ನು ಹಾನಿಕಾರಕ ರಾಸಾಯನಿಕಗಳಿಂದ ಮಾಡಿರುತ್ತಾರೆ ಎಂದು ಹೇಳಲಾಗುತ್ತಿದೆ.
ಇನ್ನು ಥೇಟ್ ಮೊಟ್ಟೆ ಆಕಾರಕ್ಕಾಗಿ ಅಚ್ಚುಗಳನ್ನು ಬಳಸಿಕೊಳ್ಳುತ್ತಾರೆ. ನೀವು ಹೇಗೆ ನೋಡಿದರೂ ಅದು ಅಸಲಿ ಮೊಟ್ಟೆಯ ರೀತಿಯಲ್ಲೇ ಗೋಚರವಾಗುತ್ತೆ. 1990ರಲ್ಲಿ ಚೀನಾ ದೇಶದಲ್ಲಿ ಆರಂಭವಾದ ಈ ನಕಲಿ ಮೊಟ್ಟೆ ತಯಾರಿಕಾ ವಿಧಾನವು ಇಂದು ಅದು ದೊಡ್ಡ ವ್ಯಾಪಾರವಾಗಿ ಮಾರ್ಪಟ್ಟಿದೆ. ರಾಸಾಯನಿಕಗಳಿಂದ ಒಬ್ಬರು ದಿನಕ್ಕೆ ಇಲ್ಲ ಅಂದ್ರೂ 1000 ದಿಂದ 2000 ಮೊಟ್ಟೆಗಳನ್ನು ತಯಾರಿಸಬಹುದು ಎಂದು ಚೈನೀಸ್ ಏಜನ್ಸಿ ವರದಿ ಮಾಡಿದೆ.
ನಕಲಿ ಮೊಟ್ಟೆಯ ಲಕ್ಷಣಗಳು:

  • ಒಡೆದಿಟ್ಟ ಮೊಟ್ಟೆ ಮೂರು ನಾಲ್ಕು ದಿನವಾದರೂ ವಾಸನೆ ಬರೋದಿಲ್ಲ.
  • ಇರುವೆ, ಸೊಳ್ಳೆಗಳು ನಕಲಿ ಮೊಟ್ಟೆಯ ಕಡೆ ಸುಳಿಯೊಲ್ಲ.
  • ಮೊಟ್ಟೆಯೊಳಗಿರುವ ಹಳದಿ ಬಣ್ಣವು ರಬ್ಬರ್ ಸ್ವಾದ ಹೊಂದಿರುತ್ತದೆ.
  • ಮೊಟ್ಟೆ ಆವರಣ ಒಡೆದರೂ ಅದರೊಳಗೆ ಇನ್ನೊಂದು ತೆಳುವಾದ ಪ್ಲಾಸ್ಟಿಕ್ ಆವರಣ ಗೋಚರಿಸುತ್ತದೆ.
  • ಇನ್ನು ಈ ಮೊಟ್ಟೆಯನ್ನು ಹೋಟೇಲ್, ಬಾರ್, ರೆಸ್ಟೋರೆಂಟ್‍ಗಳಲ್ಲಿ ಬಳಸಿದರಂತೂ ಅಸಲಿ ಯಾವುದು ನಕಲಿ ಯಾವುದೆಂಬುದು ಗೊತ್ತಾಗುವುದೇ ಇಲ್ಲ.
  • ನಕಲಿ ಮೊಟ್ಟೆ ಸೇವನೆಯಿಂದ ಕಿಡ್ನಿ ವೈಫಲ್ಯ, ಹೊಟ್ಟೆ ನೋವಿನಿಂದ ಗಂಭೀರ ಪರಿಣಾಮ ಬೀರುತ್ತದೆ ಎಂದು ತಿಳಿದು ಬಂದಿದೆ.

Like us on Facebook  The New India Times

POPULAR  STORIES :

ಮತ್ತೊಂದು ಮದುವೆ ವದಂತಿ ಸುಳ್ಳು: ರಾಧಿಕಾ ಕುಮಾರ ಸ್ವಾಮಿ.

24ರ ಹರೆಯದ ಯುವತಿ 68ರ ತಾತನ ಅಚ್ಚರಿಯ ಜುಗಲ್‍ಬಂಧಿ…!

ಲೋಧಾ ಶಿಫಾರಸ್ಸು ಉಲ್ಲಂಘನೆ: 3ನೇ ಟೆಸ್ಟ್ ಪಂದ್ಯ ನಡೆಯೋದು ಬಹುತೇಕ ಡೌಟ್..?

ಪಾಕ್ ವಿರುದ್ದದ ಆನ್ಲೈನ್ ಅರ್ಜಿಯನ್ನು ಆರ್ಕೈವ್ ಪಟ್ಟಿಗೆ ಹಾಕಿ ತನ್ನ ದ್ವಂದ್ವ ನಿಲುವು ಪ್ರದರ್ಶಿದ ಅಮೇರಿಕಾ..!

ಚೆನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿರೋ ಜಯಲಲಿತಾ ಈಗ ಹೇಗಿದ್ದಾರೆ?

ಸಲ್ಮಾನ್, ಶಾರುಖ್, ಅಮೀರ್ ಖಾನ್ ಪಾಕಿಸ್ತಾನಕ್ಕೆ ಹೋಗಲಿ : ಸಾದ್ವಿ ಪ್ರಾಚಿ

ಮಹಾಜನಗಳೇ.. ದಸರಾಗೆ ಹೋಗಿ ‘ಆಕಾಶ ಅಂಬಾರಿ’ಯಲ್ಲಿ..!

LEAVE A REPLY

Please enter your comment!
Please enter your name here