ಎಲ್ಲ ಮಾದರಿಯ ಕ್ರಿಕೆಟ್ ಗೆ ಗುಡ್ ಬಾಯ್ ಹೇಳಿದ ವರ್ಲ್ಡ್ ಕಪ್ ಹೀರೊ..
ಗೌತಮ್ ಗಂಭೀರ್ ಹೆಸರಿಗೆ ತಕ್ಕಹಾಗೆ ತುಂಬಾ ಗಂಭೀರ ಸ್ವಭಾವದ ಆಟಗಾರ.. ಆಡೋಕೆ ನಿಂತ್ರೆ ಎದುರಾಳಿ ಬೌಲರ್ ಯಾರೇ ಇರಲಿ, ಬೌಂಡರಿಗಳನ್ನ ಬಾರಿಸುತ್ತಿದ ಎಡಗೈ ಬ್ಯಾಟ್ಸಮನ್ ಗೌತಿ ಈಗ ಅಂತರರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ ಬಾಯ್ ಹೇಳಿದ್ದಾರೆ.. ಈ ಮೂಲಕ ಟೀಮ್ ಇಂಡಿಯಾ ಕಂಡ ಶ್ರೇಷ್ಠ ಎಡಗೈ ಓಪನರ್ ಬ್ಯಾಟ್ಸಮನ್ ನಿವೃತ್ತಿಯಾದಂತಾಗಿದೆ…
ಸದ್ಯ ರಣಜಿ ಟ್ರೋಫಿಯಲ್ಲಿ ಪಾಲ್ಗೊಂಡಿರುವ ಗೌತಮ್ ಗಂಭೀರ್ ದೆಹಲಿ ತಂಡವನ್ನ ಪ್ರತಿನಿಧಿಸುತ್ತಿದ್ದಾರೆ.. ಈ ಮೂಲಕ ಇನ್ನೆರಡು ದಿನಗಳಲ್ಲಿ ಆಂಧ್ರದ ವಿರುದ್ದ ನಡೆಯಲಿರುವ ಪಂದ್ಯ ಅವರ ಕೊನೆ ಮ್ಯಾಚ್ ಆಗಲಿದೆ.. ಈ ಮೂಲಕ ಟೀಮ್ ಇಂಡಿಯಾದಲ್ಲಿನ ತನ್ನ ಸ್ಥಾನಕ್ಕೆ ವಿದಾಯ ಹೇಳಿದ್ದಾರೆ..
ಕಳೆದ ಬಾರಿ ಐಪಿಎಲ್ ನಲ್ಲಿ ಕಳಪೆ ಫಾರ್ಮ್ ನಿಂದ, ತಂಡದ ಸೋಲಿಗೆ ತಾವೇ ಜವಬ್ದಾರಿಯನ್ನ ಹೊತ್ತು, ಕ್ಯಾಪ್ಟನ್ ಸ್ಥಾನದಿಂದ ಕಳೆಗೆ ಇಳಿದಿದ್ರು.. ಸದ್ಯ ಮುಂಬರುವ ಐಪಿಎಲ್ ನಲ್ಲಿ ಗೌತಮ್ ಗಂಭೀರ್ ಆಡಲಿರುವ ಸಾಧ್ಯತೆಗಳಿದ್ದು, ಅವರ ಆಟ ಕೇವಲ ಐಪಿಎಲ್ ನಲ್ಲಿ ಮಾತ್ರ ನೋಡೋಕೆ ಸಿಗಲಿದೆ