ಕೃಷಿಯಲ್ಲಿ ಖುಷಿ ಕಂಡ 27ರ ಬೆಡಗಿ..

1
1037

 

27 ವರ್ಷದ ಗೀತಾಂಜಲಿ ರಾಜಾಮಣಿ. ಮೂಲತಃ ಕೇರಳದವರು. ಕೆಲಸ ಆರಿಸಿಕೊಂಡು ಬೆಂಗಳೂರಿಗೆ ಬಂದು ಈಗ ಇಲ್ಲವರೇ ಆಗಿದ್ದಾರೆ. ಇವರೀಗ ಕೃಷಿಯನ್ನೇ ಆಧಾರವಾಗಿಟ್ಟುಕೊಂಡು ದೊಡ್ಡ ಕಂಪನಿಯನ್ನು ತೆರೆದು ಭರ್ಜರಿಯಾಗಿ ಹಣ ಗಳಿಸುತ್ತಿದ್ದಾರೆ. ಅನೇಕರಿಗೆ ಸಾವಯವ ಹಣ್ಣು, ತರಕಾರಿಗಳನ್ನು ಮನೆ ಬಾಗಿಲಿಗಳಿಗೆ ತಲುಪಿಸುತ್ತಿದ್ದಾರೆ. ಹಲವರಿಗೆ ಉದ್ಯೋಗವನ್ನು ಕೂಡ ನೀಡಿದ್ದಾರೆ.
ಗೀತಾಂಜಲಿ ರಾಜಾಮಣಿ ಅವರು ಕೃಷಿಯಲ್ಲಿ ವಿಭಿನ್ನವಾದ ಟೆಕ್ನಿಕ್ ಅಳವಡಿಸಿ ಇದರ ಜೊತೆ ಜೊತೆಗೆ ರೈತರ ಆದಾಯವನ್ನು ಹೆಚ್ಚಿಸುತ್ತಿದ್ದಾರೆ. ರೈತರೊಬ್ಬರ ಜಮೀನನ್ನು ಬಾಡಿಗೆಗೆ ಪಡೆದುಕೊಂಡು ಅದರಲ್ಲಿ ಜನರಿಗೆ ಬೇಕಾದ ತರಕಾರಿಗಳನ್ನು ಬೆಳೆಯುತ್ತಿದ್ದಾರೆ. 2017ರಲ್ಲಿ ಇವರು ತಮ್ಮ ಇಬ್ಬರು ಸ್ನೇಹಿತರೊಂದಿಗೆ ಸ್ಟಾರ್ಟಪ್ ಕಂಪನಿಯಾದ ಫಾರ್ಮಿಜನ್ ಶುರು ಮಾಡಿದ್ದಾರೆ. ಈಗ ಇವರ ಕಂಪನಿಯ ಬ್ರ್ಯಾಂಚ್ ಗಳು ಬೆಂಗಳೂರು, ಹೈದ್ರಾಬಾದ್ ಹಾಗೂ ಸೂರತ್ ನಲ್ಲೂ ಕಾರ್ಯನಿರ್ವಹಿಸುತ್ತಿವೆ.
ಗೀತಾಂಜಲಿಯವರ ಕಂಪನಿ ಒಂದು ಕಡೆ ರೈತರಿಗೆ ಸಮನಾದ ಪಾಟ್ರ್ನ್ ಶೀಪ್ ಮಾಡಿಕೊಂಡು ಅವರಿಂದ ಜೈವಿಕ ಕೃಷಿ ಮಾಡಿಸುತ್ತಾರಾದರೆ ಮತ್ತೊಂದೆಡೆ ಕಡೆ ರೈತರ ಜಮೀನನ್ನು 600-600 ಸ್ಕ್ವಾಯರ್ ಫೀಟ್ ನ ಆಕಾರದಲ್ಲಿ ಡಿವೈಡ್ ಮಾಡಿ ಗ್ರಾಹಕರಿಗೆ ಬಾಡಿಗೆಗೆ ನೀಡುತ್ತಾರೆ. ಇದಕ್ಕೆ ಪ್ರತಿ ತಿಂಗಳು 2500 ರೂಪಾಯಿ ಆಗಿರುತ್ತದೆ. ಮೊಬೈಲ್ ಆ್ಯಫ್ ಮೂಲಕ ಗ್ರಾಹಕರು ತಾವು ಸೆಲೆಕ್ಟ್ ಮಾಡಿದ ಹೊಲದಲ್ಲಿ ತಮಗಿಷ್ಟವಾದ ತರಕಾರಿ ಬೆಳೆಗಳನ್ನ ಬೆಳೆಯುತ್ತಾರೆ, ಮತ್ತೆ, ಬೆಳೆ ಬೆಳೆದ ಬಳಿಕ ಕಂಪನಿಯ ವಾಹನವೇ ಅವುಗಳನ್ನು ತೆಗೆದುಕೊಂಡು ಗ್ರಾಹಕರ ಮನೆಗೆ ತಲುಪಿಸುತ್ತದೆ.


ಗೀತಾಂಜಲಿ ರಾಜಾಮಣಿಯವರು ವಿನೂತನವಾಗಿ ತಂದಿರುವ ಈ ಪಾಟ್ನಶೀಪ್ ಕೃಷಿ ತುಂಬಾ ಹೆಸರುವಾಸಿಯಾಗುತ್ತಿದೆ. ಅಷ್ಟೇ ಅಲ್ಲ ಒಳ್ಳೆಯ ಆದಾಯ ಕೂಡ ತಂದುಕೊಡುತ್ತಿದೆ. ನೋಡಿ, ಇದರಿಂದ ಎರಡು ರೀತಿಯ ಲಾಭವಾಗುತ್ತಿವೆ. ಒಂದು ಗ್ರಾಹಕರಿಗೆ 100 ಪ್ರತಿಶತ ಸಾವಯವ ತರಕಾರಿ ಮನೆಯಲ್ಲಿ ಕೂತಲ್ಲೇ ಸಿಗುತ್ತದೆ ಹಾಗೂ ಎರಡನೇಯ ಲಾಭವೇನೆಂದರೆ ರೈತರ ಆದಾಯ ಮೂರು ಪಟ್ಟು ಹೆಚ್ಚಾಗಿದೆ. ಕಂಪನಿಯ ಗ್ರಾಹಕರ ಸಂಖ್ಯೆ 3 ಸಾವಿರಕ್ಕೂ ಅಧಿಕವಾಗಿ ಬಿಟ್ಟಿದೆ. ಈಗ ಕಂಪನಿಯ ಟರ್ನ್ ಓವರ್ ವರ್ಷಕ್ಕೆ 8.40 ಕೋಟಿಯಾಗಿ ಬಿಟ್ಟಿದೆ.
ಇನ್ನು ಗೀತಾಂಜಲಿ ರಾಜಾಮಣಿಯವರ ಈ ಕೃಷಿಯ ಸಾಧನೆಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಸಂದಿವೆ. ಗೋಲ್ಡ್ ಮ್ಯಾನ್ ಸಾಕ್ಸ್ ಹಾಗೂ ಫಾರ್ಚೂನ್ ಕಂಪನಿ ಕಳೆದ ವರ್ಷ ಅಕ್ಟೋಬರ್ ನಲ್ಲಿಯೇ ಗೀತಾಂಜಲಿ ರಾಜಾಮಣಿ ಅವರಿಗೆ ಗ್ಲೋಬಲ್ ವುಮೆನ್ ಲೀಡರ್ ಪ್ರಶಸ್ತಿ ಸಂದಿದೆ.
ಕೃಷಿ ಕ್ಷೇತ್ರದಲ್ಲಿ ವಿನೂತನ ಪ್ರಯತ್ನಕ್ಕೆ ಕೈ ಹಾಕಿ ಅದರಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿರುವ ಗೀತಾಂಜಲಿ ರಾಜಾಮಣಿಯವರು ಸಾಧನೆ ಇತರರಿಗೆ ಸ್ಫೂರ್ತಿಯಾಗಿದೆ.

1 COMMENT

LEAVE A REPLY

Please enter your comment!
Please enter your name here