ನಿಜವಾದ ಭಾರತೀಯರು ಇಲ್ಲಿದ್ದಾರೆ ನೋಡಿ..! ದೇಶಕ್ಕಾಗಿ ಪ್ರಾಣದ ಹಂಗು ತೊರೆದ ವೀರರಿವರು..!

0
67

ನಮ್ಮ ದೇಶದಲ್ಲೀಗ ಗೂಢಾಚಾರರ ಬಗ್ಗೆ ದೊಡ್ಡ ಚರ್ಚೆಯೇ ನಡೆದಿದೆ. ಅದರಲ್ಲೂ ಪಾಕಿಸ್ತಾನದ ಗುಪ್ತಚರ ದಳ ಐ.ಎಸ್.ಐ ನ ಏಜೆಂಟರು ಭಾರತೀಯ ಸೇನೆಯ ರಹಸ್ಯ ಮಾಹಿತಿಗಳನ್ನು ಕದಿಯಲು ನಮ್ಮ ದೇಶದಲ್ಲೇ ಇದ್ದರು. ಅಲ್ಲದೇ ಕೆಲವೊಂದು ರಹಸ್ಯ ಮಾಹಿತಿಗಳನ್ನು ನಮ್ಮ ಶತ್ರುರಾಷ್ಟ್ರಗಳಿಗೆ ನೀಡಿದ್ದರು ಎಂಬ ಸುದ್ದಿ ಹೊರಬಿದ್ದಿದೆ. ಪಾಕಿಸ್ತಾನದ ಈ ಗುಪ್ತ ಕಾರ್ಯದಿಂದ ದೇಶದ ಆಂತರಿಕ ಭದ್ರತೆಗೆ ಧಕ್ಕೆ ಉಂಟಾಗುತ್ತದೆ ಎಂಬ ಕೂಗೂ ಎದ್ದಿದೆ. ಆದರೆ ನಮ್ಮ ದೇಶದಲ್ಲಿ ಅಂತಹ ಯಾವುದೇ ಗುಪ್ತಚಾರರು ಇಲ್ವಾ..? ಇದ್ದರೂ ಅವರೇನು ಮಾಡಿದ್ದರು, ಅವರ ಹೋರಾಟ ಹೇಗಿತ್ತು..? ಎಂಬ ಪ್ರಶ್ನೆಗೆ ಈ ಕೆಳಗಿನ ಆರು ಜನ ಹೆಮ್ಮೆಯ ಭಾರತೀಯರೇ ಸಾಕ್ಷಿ.

1. ಅಜಿತ್ ಧೋವಲ್

INDIAN-SPIES-5

ಭಾರತದ ಭದ್ರತಾ ಸಲಹೆಗಾರ ಅಜಿತ್ ಧೋವಲ್ ರವರು ಒಂದು ಕಾಲದಲ್ಲಿ ಭಾರತದ ಗುಪ್ತಚಾರ ಇಲಾಖೆಯಲ್ಲಿ ಕಾರ್ಯ ನಿರ್ವಹಿಸಿದ್ದರು. ಐಪಿಎಸ್ ಅಧಿಕಾರಿಯಾಗಿದ್ದ ಇವರು ತಮ್ಮ ಕಾರ್ಯಕ್ಕೆ ವ್ಯತಿರಿಕ್ತವೆಂಬಂತೆ ಪಾಕಿಸ್ತಾನದಲ್ಲಿ ಭಾರತದ ಗೂಢಾಚಾರರಾಗಿ ಕಾರ್ಯ ನಿರ್ವಹಿಸಿದರು. ಅದೂ ಕೂಡಾ ಬರೋಬ್ಬರಿ 7 ವರ್ಷ..!
ಕಾಶ್ಮೀರ ಕುರಿತಾದ ವಿವಾದ ಒಂದು ಬಾರಿ ಈಶಾನ್ಯ ರಾಜ್ಯ ಮಿಜೋರಾಂನಲ್ಲಿ ಸ್ಫೋಟಿಸಿತು. ಆದರೆ ಆ ಬಂಡಾಯವನ್ನು ಹತ್ತಿಕ್ಕುವ ಅಧಿಕಾರಿಯನ್ನು ಹುಡುಕುತ್ತಿದ್ದಾಗಲೇ ಕಂಡು ಬಂದಿದ್ದು ಇದೇ ಅಜಿತ್ ಧೋವಲ್ ರವರು. ವಿಶೇಷವೆಂದರೆ ಅವರ ಜೊತೆಗೆ ಅವರ ಪತ್ನಿಯೂ ಮಿಜೋರಾಂನತ್ತ ತೆರಳಿದ್ದರು. ಆಗ ಬರೋಬ್ಬರಿ 2 ವರ್ಷಗಳ ಕಾಲ ಧೋವಲ್ ಮತ್ತು ಅವರ ಪತ್ನಿ ಮಿಜೋರಾಂನಲ್ಲೇ ಇರಬೇಕಾಯಿತು. ಈ ಅವಧಿಯಲ್ಲೇ ಮಿಜೋ ಬಂಡುಕೋರರನ್ನು ಪರಿವರ್ತಿಸುವ ಕಾರ್ಯವನ್ನೂ ಮಾಡಲಾಯಿತು. ಆದ್ದರಿಂದ ಮಿಜೋ ಬಂಡುಕೋರರ ಗುಂಪಿಗೆ ಧೋವಲ್ ರ 7 ಜನ ಉನ್ನತ ಕಮಾಂಡರ್ ಗಳನ್ನು ಸೇರಿಸಲಾಯಿತು. ಬಂಡುಕೊರರ ದಾಳಿಗಳನ್ನು ಹತ್ತಿಕ್ಕಲು ಇದು ನೆರವಾಯಿತು. ಇದಕ್ಕೆಲ್ಲಾ ಕಾರಣ ಅಜಿತ್ ಧೋವಲ್ ಎಂಬ ದಕ್ಷ ಗುಪ್ತಚರ ಅಧಿಕಾರಿ.

2. ರಾಮೇಶ್ವರನಾಥ್ ರಾವ್

INDIAN-SPIES-3

ಆರ್ ಎನ್ ರಾವ್ ಎಂದೇ ಪ್ರಸಿದ್ಧಿ ಪಡೆದಿದ್ದ ಇವರು ಭಾರತದ ಗುಪ್ತಚರ ದಳ ರಾ ಮತ್ತು ಎನ್ ಎಸ್ಜಿಗೆ ಸೂಕ್ಷ್ಮ ಮಾಹಿತಿಗಳನ್ನು ರವಾನಿಸುತ್ತಿದ್ದರು. ಅಲ್ಲದೇ ಅಂದಿನ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರುರವರ ಆಪ್ತ ಕಾರ್ಯದರ್ಶಿಯೂ ಆಗಿದ್ದರು. ಆದರೆ ಇವರ ಜೀವನದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲವಾದರೂ ಇವರನ್ನು ಅತ್ಯುತ್ತಮ ಗೂಢಾಚಾರರ ಪೈಕಿ ಒಬ್ಬರೆಂದು ಪರಿಗಣಿಸಲಾಗಿದೆ.
1971ರ ಇಂಡೋ-ಪಾಕ್ ಯುದ್ಧದಲ್ಲಿ ಭಾರತ ಗೆಲುವು ಸಾಧಿಸುವಲ್ಲಿ ಇವರ ಪಾತ್ರ ಮಹತ್ವದ್ದಾಗಿತ್ತು. ಆ ಸಮಯದಲ್ಲಿ ಆರ್ ಎನ್ ರಾವ್ ರವರೇ ಐಬಿ(ಇಂಟೆಲಿಜೆನ್ಸ್ ಬ್ಯೂರೋ)ಯ ಮುಖ್ಯಸ್ಥರಾಗಿದ್ದರು. ಅಲ್ಲದೇ 1980ರಲ್ಲಿ ಮಿಜೋರಾಂನಲ್ಲಿ ಹತ್ತಾರು ಗೂಢಾಚಾರಿಕೆಯನ್ನು ಮಾಡಿದ್ದರು.
ವಿಶೇಷವೆಂದರೆ ಆರ್ ಎನ್ ರಾವ್ ರವರು ಅಜಿತ್ ಧೋವಲ್ ರ ಗುರುವಾಗಿದ್ದರು.

3. ರವಿಂದ್ರ ಕೌಶಿಕ್

INDIAN-SPIES-1

ಇವರು ಭಾರತ ಕಂಡ ಅತ್ಯುತ್ತಮ ಗೂಢಾಚಾರ. ಏಕೆಂದರೆ ತಮ್ಮ ಜೀವನದ ಹೆಚ್ಚಿನ ಸಮಯವನ್ನು ಪಾಕಿಸ್ತಾನದಲ್ಲೇ ಗೂಢಾಚಾರಿಕೆ ಮಾಡುತ್ತಾ ಕಳೆದಿದ್ದರು.
ಪಾಕಿಸ್ತಾನದಲ್ಲಿ ಗೂಢಾಚಾರಿಕೆ ಮಾಡುವ ಸಲುವಾಗಿ ಇವರು ಪಾಕಿಸ್ತಾನಿ ಉರ್ದು ಕಲಿತು, ಸುನ್ನತಿಯನ್ನೂ ಮಾಡಿಸಿಕೊಂಡಿದ್ದರು..! 1975 ರಲ್ಲಿ ಕೌಶಿಕ್ನನ್ನು ‘ನಬೀ ಅಹಮ್ಮದ್ ಶಕೀರ್’ ಎಂದು ಮರುನಾಮಕರಣ ಮಾಡಿ ಭಾರತದ ಅಂಡರ್ಕವರ್ ಏಜೆಂಟ್ ಆಗಿ ಇವರನ್ನು ಪಾಕಿಸ್ತಾನಕ್ಕೆ ಕಳುಹಿಸಲಾಯಿತು. ಪಾಕಿಸ್ತಾನದ ಕರಾಚಿ ವಿಶ್ವವಿದ್ಯಾನಿಲಯದಲ್ಲಿ ಎಸ್ಎಲ್ಬಿಯನ್ನೂ ಮುಗಿಸಿದರು. ಬಳಿಕ ಪಾಕಿಸ್ತಾನೀ ಸೈನ್ಯಕ್ಕೆ ಸಾಮಾನ್ಯ ಅಧಿಕಾರಿಯಾಗಿ ಸೇರಿ ಕೆಲವೇ ವರ್ಷಗಳಲ್ಲಿ ತನ್ನ ಚಾಕಚಕ್ಯತೆಯಿಂದ ಪ್ರತಿಷ್ಠಿತ ಮೇಜರ್ ಹುದ್ದೆಯನ್ನು ಅಲಂಕರಿಸಿದ. ಅಲ್ಲಿನ ಸೇನೆಯಲ್ಲಿ 1979ರಿಂದ 1983ರವರೆಗೆ ಇದ್ದು ಪಾಕಿಸ್ತಾನದ ಕುತಂತ್ರಗಳನ್ನೆಲ್ಲಾ ಅರಿಯುತ್ತಾ ಭಾರತದ ರಕ್ಷಣಾ ಇಲಾಖೆಗೆ ಅಮೃತವೆನಿಸುವ ಅತಿ ಮುಖ್ಯವಾದ ವಿಷಯಗಳನ್ನೆಲ್ಲಾ ರಹಸ್ಯವಾಗಿ ರವಾನಿಸುತ್ತಿದ್ದ. ಈ ಅತ್ಯುನ್ನತ ಸಾಧನೆಗಾಗಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ಕೌಶಿಕ್ನ ಅನುಪಸ್ಥಿತಿಯಲ್ಲಿ ಆತನಿಗೆ ಬ್ಲ್ಯಾಕ್ ಟೈಗರ್ ಎಂಬ ಬಿರುದನ್ನೂ ನೀಡಿದರು. ಕೌಶಿಕ್ ಭಾರತ ಮತ್ತು ತನ್ನ ಕುಟುಂಬವನ್ನು ಬಿಟ್ಟಿದ್ದದ್ದು ಬರೋಬ್ಬರಿ 26 ವರ್ಷಗಳು. ಯುದ್ಧದ ಸಮಯದಲ್ಲಿ ಕೌಶಿಕ್ನ ಸೇವೆ ನಿಜಕ್ಕೂ ಅತ್ಯಮೋಘವಾದದ್ದು. ಯುದ್ಧದ ಸಮಯದಲ್ಲಿ ಕೌಶಿಕ್ ಮಾಡಿದಂತಹ ಕೆಲಸವನ್ನು ಇಂದಿಗೂ ಎಷ್ಟೋ ಏಜೆಂಟ್ಗಳು ಮಾಡಲು ಹಿಂಜರಿಯುತ್ತಾರೆ. ಕೌಶಿಕ್ ಕೊಟ್ಟ ಅತ್ಯುಪಯುಕ್ತ ಮಾಹಿತಿಯಿಂದ ಭಾರತದ ನಡಿಗೆ ಪಾಕಿಸ್ತಾನಕ್ಕಿಂತ ಒಂದು ಹೆಜ್ಜೆ ಮೇಲಕ್ಕೇರಿತು.
ಆದರೆ ಅವರು ಒಂದು ಬಾರಿ ಓರ್ವ ಭಾರತೀಯ ಅಧಿಕಾರಿ ಮಾಡಿದ ತಪ್ಪಿನಿಂದಾಗಿ ಪಾಕಿಸ್ತಾನಿ ಸೈನ್ಯಕ್ಕೆ ಸಿಕ್ಕಿಬಿದ್ದರು. ನವೆಂಬರ್ 21, 2001ರಂದು ಶ್ವಾಸಕೋಶ ಮತ್ತು ಹೃದಯ ಸಂಬಂಧಿ ಕಾಯಿಲೆಯಿಂದ ಕೊನೆಯುಸಿರೆಳೆದರು. ಸಾಯುವ ಕೊನೆ ಘಳಿಗೆಯವರೆಗೂ ಭಾರತ ಮಾತೆಯನ್ನು ನೆನೆಯುತ್ತಲೇ ಇದ್ದರು. ಆದ್ದರಿಂದ ರವೀಂದ್ರ ಕೌಶಿಕ್ ರನ್ನು ಭಾರತದ ಅತ್ಯುತ್ತಮ ಗೂಢಾಚಾರ ಎನ್ನಲಾಗುತ್ತದೆ.

4. ರಬಿಂದರ್ ಸಿಂಗ್

INDIAN-SPIES-2

ಈ ಮಹಾನ್ ಭಾರತೀಯ ಗುಪ್ತಚರ ದಳ `ರಾ’ ದ ಕಾರ್ಯದರ್ಶಿಯಾಗಿದ್ದರು. ಯಾವುದೇ ಗುಪ್ತಚರ ದಳದಲ್ಲೂ ಕಂಡು ಬಾರದಂತ ಅಧಿಕಾರಿ ಎಂಬ ಹೆಗ್ಗಳಿಕೆ ಇವರದ್ದು.
ಇವರು ಅಮೆರಿಕಾದಿಂದ ಅತ್ಯಂತ ರಹಸ್ಯವಾದ ಮಾಹಿತಿಗಳನ್ನು ಕಳುಹಿಸುತ್ತಿದ್ದರು. ಸಿರಿಯಾ ಮತ್ತು ಡಮಾಸ್ಕಸ್ ಕಾರ್ಯಾಚರಣೆಯಲ್ಲೂ ಇವರು ಪ್ರಮುಖ ಪಾತ್ರವಹಿಸಿದ್ರು. ಆದರೆ ಪತ್ರಕರ್ತ ಹರೀಶ್ ಚಂಡೀಲಾ ಎಂಬುವವರು ಮಾಡಿದ ತಪ್ಪಿನಿಂದಾಗಿ ರಬಿಂದರ್ ಸಿಂಗ್ ರವರು ಸಿಕ್ಕಿ ಹಾಕಿಕೊಳ್ಳಬೇಕಾಯಿತು. ಬಳಿಕ ಅವರು ಏನಾದರು ಎಂಬುದೇ ತಿಳಿಯದಾಗಿದೆ.

5. ಸರಸ್ವತಿ ರಾಜಮಣಿ

INDIAN-SPIES-4

ಅತ್ಯಂತ ಶ್ರೀಮಂತ ಕುಟುಂಬದಿಂದ ಬಂದಿದ್ದರೂ ಕೂಡಾ ಇವರು ಸುಭಾಶ್ಚಂದ್ರ ಬೋಸ್ ರವರ ಐಎನ್ ಎ ಸೇರಿದರು. ಅದೂ ಕೂಡಾ ಕೇವಲ 16ನೇ ವಯಸ್ಸಿನಲ್ಲಿ..! ಆದ್ದರಿಂದ ತಮ್ಮ ಬಳಿ ಇದ್ದ ಆಭರಣಗಳನ್ನು ಐಎನ್ ಎಗೆ ನೀಡಿದ್ದರು.
ಸರಸ್ವತಿ ರಾಜಮಣಿಯವರು ಸೇರಿದಂತೆ ಇನ್ನೂ ಐದು ಹುಡುಗಿಯರು ಹುಡುಗರ ಮಾದರಿಯಲ್ಲಿ ವೇಷ ಧರಿಸಿ, ಬ್ರಿಟೀಷರಿಗೆ ಮಂಕು ಬೂದಿ ಎರಚಿ, ಐಎನ್ ಎ ಪ್ರಮುಖ ಕಚೇರಿಗೆ ಕಳುಹಿಸುತ್ತಿದ್ದರು. ಇದು ಆಂಗ್ಲರ ವಿರುದ್ದ ಹೋರಾಡಲು ನೆರವಾಗುತ್ತಿತ್ತು.
ಐಎನ್ ಎಯ ಯಾವುದೇ ಕಾರ್ಯಕರ್ತ ಆಂಗ್ಲರ ಕೈಗೆ ಸಿಕ್ಕಿಹಾಕಿಕೊಂಡರೆ ತಮ್ಮನ್ನು ತಾವೇ ಶೂಟ್ ಮಾಡಿಕೊಂಡು ಸಾಯುವ ನಿಯಮವಿತ್ತು. ಆದರೆ ಓರ್ವ ಕಾರ್ಯಕರ್ತೆ ಆಂಗ್ಲರ ಕೈಗೆ ಸಿಕ್ಕಿ ಹಾಕಿಕೊಂಡಿದ್ದರೂ ಕೂಡಾ ಶೂಟ್ ಮಾಡಿಕೊಂಡಿರಲಿಲ್ಲ. ಆದ್ದರಿಂದ ರಾಜಮಣಿಯವರು ಆಂಗ್ಲ ಅಧಿಕಾರಿಗೆ ಶೂಟ್ ಮಾಡಿದರು. ಕೂಡಾಲೇ ಸಿಕ್ಕಿ ಹಾಕಿಕೊಂಡ ಕಾರ್ಯಕರ್ತೆಯ ಜೊತೆ ತಪ್ಪಿಸಿಕೊಂಡು ಒಂದು ಜೀವ ಉಳಿಸಿದರು.

6. ಕಾಶ್ಮೀರ್ ಸಿಂಗ್

INDIAN-SPIES-6

ಎಲ್ಲಾ ಗೂಢಾಚಾರರು ಯಶಸ್ವಿಯಾಗುವುದಿಲ್ಲ. ಅವರ ಜೀವನ ರೋಚಕವೂ ಆಗಿರುವುದಿಲ್ಲ. ಕೆಲವರ ಸ್ಟೋರಿ ಇದೇ ಕಾರಣಕ್ಕೆ ಸಿನಿಮಾಗಳೂ ಆಗಿವೆ. ಇನ್ನೂ ಕೆಲವರ ಸ್ಟೋರಿ ಸ್ಫೂರ್ತಿಯನ್ನೂ ತುಂಬಿವೆ. ಈ ಎಲ್ಲಾ ವಿಷಯಗಳು ಕಾಶ್ಮೀರ್ ಸಿಂಗ್ ಎಂಬ ಕೆಚ್ಚೆದೆಯ ಭಾರತೀಯನ ಜೀವನದಲ್ಲಿ ನಡೆದಿದೆ.
ಕಾಶ್ಮೀರ್ ಸಿಂಗ್ ರವರು ಪಾಕಿಸ್ತಾನದಲ್ಲಿ ಗೂಢಾಚಾರಿಕೆ ಮಾಡಲು ಹೋದ ಕೆಲವೇ ದಿನಗಳಲ್ಲಿ ಅಲ್ಲಿನ ಅಧಿಕಾರಿಗಳ ಕೈಗೆ ಸಿಕ್ಕಿಹಾಕಿಕೊಂಡರು. ಅಲ್ಲಿಂದ ಬರೋಬ್ಬರಿ 35 ವರ್ಷಗಳ ಕಾಲ ಪಾಕಿಸ್ತಾನದ ಜೈಲಿನಲ್ಲಿ ಜೀವನ ದೂಡಿದರು. ಅದೂ ಕೂಡಾ ಕತ್ತಲ ಗೂಡಿನಲ್ಲಿ. ಯಾರೂ ಮಾತಾಡದ, ಯಾರೂ ಬಾರದ ಕೋಣೆಯಲ್ಲಿ. ಆದರೆ 2008ರಲ್ಲಿ ಕಾಶ್ಮೀರ್ ಸಿಂಗ್ ರವರ ಮಾನವೀಯ ಗುಣವನ್ನು ಗಮನಿಸಿ ಅಂದಿನ ಅಧ್ಯಕ್ಷ ಪರ್ವೇಜ್ ಮುಷರಫ್, ಕಾಶ್ಮೀರ್ ಸಿಂಗ್ ರನ್ನು ಭಾರತಕ್ಕೆ ಕಳುಹಿಸಲು ಆದೇಶ ನೀಡಿದರು. ಇಲ್ಲದೇ ಹೋದಲ್ಲಿ ಇಡೀ ಜೀವನವನ್ನು ಕಾಶ್ಮೀರ್ ಸಿಂಗ್ ರವರು ಪಾಕಿಸ್ತಾನದ ಕತ್ತಲ ಕೋಣೆಯಲ್ಲೇ ಕಳೆಯಬೇಕಾಗುತ್ತಿತ್ತು.

ನಮ್ಮ ಸೇನೆಯ ಕಾರ್ಯಕ್ಕೆ ಇಡೀ ದೇಶವೇ ಹೊಗಳುತ್ತದೆ. ಆದರೆ ಒಂದು ಮೂಲದ ಪ್ರಕಾರ ಓರ್ವ ಗೂಢಾಚಾರ ಸುಮಾರು 20,000 ಜನ ಯೋಧರ ಜೀವವನ್ನು ಉಳಿಸುವ ಕಾರ್ಯ ಮಾಡುತ್ತಾನಂತೆ. ಏನೇ ಆಗಲಿ ನಮ್ಮ ಯೋಧರು ಹಾಗೂ ಗೂಢಾಚಾರರು ಮಾಡುವ ಕಾರ್ಯ ಇಡೀ ದೇಶವೇ ಮೆಚ್ಚುವಂತದ್ದು.

ರಾಜಶೇಖರ ಜೆ

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : [email protected]

POPULAR  STORIES :

`ಟೀ’ ಮಾರುತ್ತಿರುವ ಪದವೀಧರ ಸೋದರರ ಕಥೆ..!

ಟೀಕಿಸುವವರಿಗೆ ಟ್ಟೀಟರ್ ಲ್ಲಿ ಉತ್ತರ ಕೊಟ್ಟಿದ್ದಾರೆ ಮೋದಿ..! ತಮ್ಮನ್ನು ಟೀಕಿಸುವವರಿಗೆ ಪ್ರಧಾನಿಯ ಪ್ರತ್ಯುತ್ತರವೇನು..?!

ಪ್ರವಾಹದ ಮಧ್ಯೆಯೂ ರಾಜಕೀಯ ಬೇಕಿತ್ತಾ..? ಆಹಾರ ಪೊಟ್ಟಣಗಳ ಮೇಲೆ ಅಮ್ಮ ಸ್ಟಿಕ್ಕರ್ಸ್..!

ರಾಹುಲ್ ದ್ರಾವಿಡ್ ಒಳ್ಳೆಯ ಕ್ರಿಕೆಟಿಗ ಮಾತ್ರವಲ್ಲ. ಅವರೊಬ್ಬ ಆದರ್ಶ ವ್ಯಕ್ತಿ..!

`ಗ್ರಾಮೀಣ ಜನರಿಗಾಗಿ’ ಕೆಲಸ ಬಿಟ್ಟುಬಂದ ಇಂಜಿನಿಯರ್ಸ್..!

`ಕೊಹಿನೂರು ವಜ್ರ’ ಪಾಕಿಸ್ತಾನದ್ದಂತೆ..! `ಕೊಹಿನೂರು ವಜ್ರ’ದ ಮೇಲೂ ಬಿತ್ತು ಪಾಕ್ ಕಣ್ಣು..!

ಇವರು ನಮ್ಮ ಬೆಂಗಳೂರಿನ ತ್ಯಾಜ್ಯೋಧ್ಯಮಿ..! ಕಸ ಆಯುವಾತನಿಗೆ ವಿಶ್ವಸಂಸ್ಥೆಯಿಂದ ಕರೆ..!

LEAVE A REPLY

Please enter your comment!
Please enter your name here