ತನ್ನ ಜೀವಕೊಟ್ಟು ಇನ್ನೊಬ್ಬಳ ಜೀವ ಉಳಿಸಿದ ಬಾಲಕಿ..! ನೀರಿನಲ್ಲಿ ಮುಳುಗುತ್ತಿದ್ದ ಬಾಲಕಿಯನ್ನು ರಕ್ಷಿಸಿದ ಆಕೆಯೇ ನೀರಿನಲ್ಲಿ ಮುಳುಗಿದಳು..!

Date:

ಇವಳಂಥಾ ತ್ಯಾಗಮಹಿ ಇನ್ನೊಬ್ಬರಿಲ್ಲ..! ತನ್ನ ಪ್ರಾಣವನ್ನೇ ಕಳೆದುಕೊಂಡು ಇನ್ನೊಬ್ಬ ಬಾಲಕಿಯನ್ನು ಕಾಪಾಡಿದ ದೇವತೆ ಈಕೆ..! ನೀರಿನಲ್ಲಿ ಮುಳುಗಿ ಸಾಯುತ್ತಿದ್ದ ಬಾಲಕಿಗೆ ದೇವರ ರೂಪದಲ್ಲಿ ಬಂದು ಜೀವ ಕೊಟ್ಟ ಬಾಲಕಿಯೇ ಹೂಳಿನಲ್ಲಿ ಸಿಲುಕಿ ಸ್ವರ್ಗ ಸೇರಿದ ಕರುಣಾಜನಕ ಕತೆಯಿದು..!
ಆ ದೇವತೆ ಹೆಸರು ಕೆ. ಎಸ್ ಸುಕನ್ಯಾ. ಚೇಳೂರು ತಾಲ್ಲೂಕಿನ ಪಾಳ್ಯಕೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ 10 ನೇ ತರಗತಿ ಓದುತ್ತಿದ್ದ ಬಾಲಕಿ. ಇವಳೇ ಜೀವಕೊಟ್ಟು ಇನ್ನೊಂದು ಜೀವ ಉಳಿಸಿದ ಸಾಹಸಿ..! ಮೊನ್ನೆ ಶನಿವಾರ ಕನಕ ಜಯಂತಿ ಕಾರ್ಯಕ್ರಮವನ್ನು ಮುಗಿಸಿ ಖುಷಿಖುಷಿಯಿಂದ ತನ್ನ ಗೆಳತಿಯರಾದ ರಮ್ಯಾ, ಸನೀತಾರ ಜೊತೆಯಲ್ಲಿ ಮನೆಗೆ ಹೋಗುತ್ತಿದ್ದಳು..! ಕೊತ್ತೂರುಪಲ್ಲಿ ಎಸ್ಸಿ ಕಾಲೋನಿ ಮಾರ್ಗದಿ ನಡೆದುಕೊಂಡು ಹೋಗುತ್ತಿರುವಾಗ, ಅಲ್ಲೇ ಹತ್ತಿರದಲ್ಲಿ ಕೋಡಿ ಹರಿಯುತ್ತಿದ್ದ ಕೆರೆ ದಂಡೆಯಲ್ಲಿ ಬಟ್ಟೆ ತೊಳೆಯುತ್ತಿದ್ದ ತನ್ನದೇ ಹೆಸರಿನ (ಸುಕನ್ಯಾ)(ಕೆ.ಬಿ ಸುಕನ್ಯಾ) 8 ನೇ ತರಗತಿ ಬಾಲಕಿ ನೀರಿನಲ್ಲಿ ಮುಳುಗುತ್ತಿರೋದನ್ನು ಕಾಣುತ್ತಾಳೆ..! ತಡಮಾಡದೇ ನೀರಿಗೆ ಜಿಗಿದೇ ಬಿಡುತ್ತಾಳೆ..! ಈಜು ಕಲಿತಿದ್ದ ಹತ್ತನೇ ತರಗತಿ ಸುಕನ್ಯಾ.. ನೀರಿನಲ್ಲಿ ಮುಳಗುತ್ತಿದ್ದ 8ನೇ ತರಗತಿ ಸುಕನ್ಯಾಳನ್ನು ರಕ್ಷಿಸಿಯೇ ಬಿಡ್ತಾಳೆ..! ಆಕೆಯನ್ನು ಬದುಕಿಸಿ ತಾನು ದಡ ಸೇರ ಬೇಕೆನ್ನುವಷ್ಟರಲ್ಲಿ ಕಾಲು ಕೆರೆಯ ಹೂಳಿನಲ್ಲಿ ಸಿಕ್ಕಾಕಿಕೊಂಡು ಬಿಡುತ್ತೆ..! ಆಗ ಆಕೆಯನ್ನು ರಕ್ಷಿಸಲು ಇತರೆ ವಿದ್ಯಾರ್ಥಿನಿಯರು ಮುಂದಾಗ್ತಾರೆ..! ಆ ವಿದ್ಯಾರ್ಥಿಯರು ನೀರಿಗೆ ಬರುವಾಗ, ಬೇಡ ನೀವು ನೀರಿಗೆ ಇಳಿಯಬೇಡಿ ಅಂತ ಎಚ್ಚರಿಸುತ್ತಾಳೆ..! “ನೀವು ನೀರಿಗೆ ಬಂದರೆ ಹೂಳಿನಲ್ಲಿ ಸಿಲುಕಿ ಸಾಯುತ್ತೀರಿ. ನಾನಂತೂ ಬದುಕುವುದು ಕಷ್ಟಸಾಧ್ಯ, ನೀವು ಚೆನ್ನಾಗಿ ಓದಿ, ಊರಿಗೆ ಒಳ್ಳೆಯ ಹೆಸರನ್ನು ತನ್ನಿ” ಅಂತ ಹೇಳ್ತಾ ಹೇಳ್ತಾನೇ ನೀರಿನಲ್ಲಿ ಮುಳುಗಿ ಪ್ರಾಣಬಿಟ್ಟಳು..! ಅವಳ ಕೊನೆಯ ಮಾತನ್ನು ನೆನೆದು ನೆನೆದು ಸಹಪಾಠಿಗಳು ಕಣ್ಣೀರು ಹಾಕುತ್ತಿದ್ದಾರೆ..! ಇಡೀ ಊರಿಗೆ ಊರೇ ದುಃಖದಲ್ಲಿದೆ. ಪ್ರಿಯ ವಿದ್ಯಾರ್ಥಿಯನ್ನು ಕಳೆದುಕೊಂಡ ನೋವಿನಲ್ಲಿ ಅಲ್ಲಿನ ಶಿಕ್ಷಕರಿದ್ದಾರೆ..!
ತನ್ನ ಜೀವಕೊಟ್ಟು ಇನ್ನೊಬ್ಬಳ ಜೀವ ಉಳಿಸಿದ ಬಾಲಕಿಯ ಆತ್ಮಕ್ಕೆ ಶಾಂತಿ ಸಿಗಲಿ. ಆ ತಾಯಿ ಮತ್ತೆ ಹುಟ್ಟಿ ಬರಲಿ ಅಂತ ನಾವೆಲ್ಲಾ ಹಾರೈಸೋಣ..

 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

ಶಿಕ್ಷಣವೇ ಜೀವನದಲ್ಲಿ ಎಲ್ಲವೂ ಅಲ್ಲ..!

ವಿಶ್ವಕಪ್ ಗೆದ್ದ ತಂಡದ ಸದಸ್ಯ ಕಚೋರಿ ಮಾರುತ್ತಿದ್ದಾನೆ..! ಮುಂಬರುವ ಏಷ್ಯಾ ಕಪ್ ಗೂ ಆತನೇ ನಾಯಕ..!

ವೈ-ಫೈ ಗಿಂತ ೧೦೦ ಪಟ್ಟು ವೇಗವಾಗಿ ಅಂತರ್ಜಾಲವನ್ನು ಒದಗಿಸೋ ಲಿ-ಫೈ

ಭಿಕ್ಷೆ ಬೇಡ್ತಾ ಇದ್ದ ಅಜ್ಜಿಗೆ ತಿನ್ನಲು ಕೊಡುವಾಗ, ವ್ಯಾಪಾರಿ ಕೊಡಬೇಡಿ ಅಂದಿದ್ದೇಕೆ..?!

ಹಣ ಇದ್ರೆ ಮಾತ್ರ ಜನ..! ಅಂದು ಅನ್ನದಾನ ಮಾಡಿದ್ದ ಕುಟಂಬ ಇವತ್ತು..?!

44 ವರ್ಷದ ನಂತರ ಜೈಲಿನಿಂದ ಹೊರಬಂದ ವ್ಯಕ್ತಿಯ ಪ್ರತಿಕ್ರಿಯೆ..!

ಇಡೀ ಜೀವನವನ್ನೇ ತಮ್ಮಂದಿರಿಗಾಗಿ ಮುಡಿಪಾಗಿಟ್ಟ ಅಣ್ಣ..!

Share post:

Subscribe

spot_imgspot_img

Popular

More like this
Related

ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವೈಯಕ್ತಿಕ ಅಭಿಪ್ರಾಯ: ಸಚಿವ ಆರ್.ಬಿ. ತಿಮ್ಮಾಪುರ್

ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವೈಯಕ್ತಿಕ ಅಭಿಪ್ರಾಯ: ಸಚಿವ ಆರ್.ಬಿ. ತಿಮ್ಮಾಪುರ್ ಬಾಗಲಕೋಟೆ: ಮುಖ್ಯಮಂತ್ರಿ...

ಸಾಲುಸಾಲು ರಜೆ ಮುಗಿಸಿ ಬೆಂಗಳೂರಿಗೆ ಸಿಟಿ ಮಂದಿ ವಾಪಸ್: ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ದಟ್ಟಣೆ

ಸಾಲುಸಾಲು ರಜೆ ಮುಗಿಸಿ ಬೆಂಗಳೂರಿಗೆ ಸಿಟಿ ಮಂದಿ ವಾಪಸ್: ಮೆಜೆಸ್ಟಿಕ್ ಮೆಟ್ರೋ...

ಸಿದ್ದರಾಮಯ್ಯ ಪುತ್ರ ಯತೀಂದ್ರ ಹೇಳಿಕೆ ವಿಚಾರ: ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೇ ಏನು..?

ಸಿದ್ದರಾಮಯ್ಯ ಪುತ್ರ ಯತೀಂದ್ರ ಹೇಳಿಕೆ ವಿಚಾರ: ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೇ...

ಸೈಕ್ಲೋನ್ ಪ್ರಭಾವ: IMD ಯಿಂದ ಆರೆಂಜ್ ಅಲರ್ಟ್: ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯ ಮುನ್ಸೂಚನೆ

ಸೈಕ್ಲೋನ್ ಪ್ರಭಾವ: IMD ಯಿಂದ ಆರೆಂಜ್ ಅಲರ್ಟ್: ಹಲವು ಜಿಲ್ಲೆಗಳಲ್ಲಿ ಭಾರೀ...