Health Care: ಬಾದಾಮಿ ಒಳ್ಳೇದು ಅಂತ ಅತಿಯಾಗಿ ತಿನ್ನಬೇಡಿ..! ಯಾಕೆ ಗೊತ್ತಾ..?

Date:

Health Care: ಬಾದಾಮಿ ಒಳ್ಳೇದು ಅಂತ ಅತಿಯಾಗಿ ತಿನ್ನಬೇಡಿ..! ಯಾಕೆ ಗೊತ್ತಾ..?

 

ಬಾದಾಮಿ ದುಬಾರಿ ಡ್ರೈ ಫ್ರೂಟ್ಸ್ ಅನ್ನೋದು ಬಿಟ್ಟರೆ, ಇದರಲ್ಲಿ ಸಾಕಷ್ಟು ಆರೋಗ್ಯ ಲಾಭಗಳಿವೆ. ಬಾದಾಮಿಯನ್ನು ಪೌಷ್ಟಿಕಸತ್ವಗಳ ಭಂಡಾರ ಎಂದೇ ಹೇಳಬಹುದು. ಪ್ರಮುಖವಾಗಿ ಅಧಿಕ ಪ್ರಮಾಣದಲ್ಲಿ ಪ್ರೋಟೀನ್, ಕರಗುವ ನಾರಿನಾಂಶ, ವಿಟಮಿನ್ ಇ, ಮೆಗ್ನೀಶಿಯಂ, ಪೊಟ್ಯಾಶಿಯಮ್, ಕ್ಯಾಲ್ಸಿಯಂ ಇನ್ನೂ ಹಲವಾರು ಬಗೆಯ ಪೋಷಕಾಂಶಗಳು, ಈ ಪುಟ್ಟ ಬೀಜಗಳಲ್ಲಿ ಕಂಡು ಬರುತ್ತದೆ. ಆದರೆ, ಅದಕ್ಕಿಂತ ಹೆಚ್ಚು ಸೇವಿಸಿದರೆ ಕೆಟ್ಟ ಪರಿಣಾಮಗಳು ಕೂಡ ಉಂಟಾಗುತ್ತದೆ.

ಬಾದಾಮಿಯು ಬಹಳಷ್ಟು ವಿಟಮಿನ್ ‘ಇ’ ಹೊಂದಿರುತ್ತದೆ. ನೀವು ಈಗಾಗಲೇ ವಿಟಮಿನ್ ‘ಇ’ ಪೂರಕಗಳನ್ನು ತೆಗೆದುಕೊಳ್ಳುತ್ತಿದ್ದರೆ ಅಥವಾ ವಿಟಮಿನ್ ‘ಇ’ ಸಮೃದ್ಧವಾಗಿರುವ ಆಹಾರ ಸೇವಿಸುತ್ತಿದ್ದರೆ ಇದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.
ಬಾದಾಮಿಯಲ್ಲಿರುವ ನಾರಿನಂಶವನ್ನು ಅತಿಯಾಗಿ ತಿಂದರೆ ಗ್ಯಾಸ್ ಉಂಟಾಗಬಹುದು. ಇದಲ್ಲದೆ ನಿಮಗೆ ಕಿಡ್ನಿ ಸ್ಟೋನ್ ಸಮಸ್ಯೆ ಕಾಡಬಹುದು.
ಅತಿಯಾಗಿ ಬಾದಾಮಿ ತಿನ್ನುವುದರಿಂದ ನಿಮಗೆ ವಾಕರಿಕೆ, ಹೊಟ್ಟೆ ನೋವು, ಅತಿಸಾರ ಮತ್ತು ಮಲಬದ್ಧತೆಯಂತಹ ಜಠರಗರುಳಿನ ಸಮಸ್ಯೆ ಕಾಡುತ್ತವೆ.
ಹೆಚ್ಚಿನ ಪ್ರಮಾಣದ ಬಾದಾಮಿ ಸೇವನೆಯಿಂದ ನಿಮ್ಮ ತೂಕ ಹೆಚ್ಚಾಗಬಹುದು ಮತ್ತು ಬೊಜ್ಜು ಸಹ ಉಂಟಾಗುತ್ತದೆ. ಬಾದಾಮಿಯು ಹಲ್ಲಿನ ಸಮಸ್ಯೆಗಳಿಗೆ ಒಳ್ಳೆಯದು. ಆದರೆ ಮಿತಿಮೀರಿದ ಬಾದಾಮಿ ಸೇವನೆಯು ಅಲರ್ಜಿಗೆ  ಕಾರಣವಾಗಬಹುದು.
ಅತಿಯಾಗಿ ಬಾದಾಮಿ ಸೇವನೆಯಿಂದ ಮಲಬದ್ಧತೆ, ತೂಕ ಹೆಚ್ಚಾಗುವುದು, ಅತಿಸಾರ, ಆಹಾರ ನುಂಗಲು ತೊಂದರೆ, ವಾಂತಿ, ತೀವ್ರ ತುರಿಕೆ ಸಹ ಉಂಟಾಗಬಹುದು.

Share post:

Subscribe

spot_imgspot_img

Popular

More like this
Related

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ ಇತ್ತೀಚಿನ ದಿನಗಳಲ್ಲಿ ಮೌತ್‌ವಾಶ್...

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...