ಪತ್ರಕರ್ತರಿಗೆ ಗಿಫ್ಟ್ ವಿಚಾರ ಎಚ್ ವಿಶ್ವನಾಥ್ ಕಿಡಿ

Date:

ಪತ್ರಕರ್ತರಿಗೆ ಮುಖ್ಯಮಂತ್ರಿ ಕಚೇರಿಯಿಂದ ದೀಪಾವಳಿ ಗಿಫ್ಟ್ ನೀಡಿರುವ ವಿಚಾರ , ಸ್ವಪಕ್ಷದ ಸರ್ಕಾರದ ವಿರುದ್ಧವೇ ಅಡಗೂರು ಎಚ್.ವಿಶ್ವನಾಥ್ ಕಿಡಿಕಾರಿದ್ದಾರೆ . ಸಿಎಂ ಕಚೇರಿಯಿಂದಲೇ ಗಿಫ್ಟ್ ಬಾಕ್ಸ್ ಕೊಟ್ಟಿರುವುದು ಅಪಮಾನ ವಿಚಾರದ ಬಗ್ಗೆ ಮಾತನಾಡಿದ ಅವರು “ನಾನು 40-50 ವರ್ಷಗಳಿಂದ ಪತ್ರಕರ್ತರ ನಡುವೆ ಇದ್ದೇನೆ . K.R.ನಗರ, ಮೈಸೂರು, ಬೆಂಗಳೂರು, ಡೆಲ್ಲಿವರೆಗೆ ಪತ್ರಕರ್ತರ ಸಂಪರ್ಕವಿದೆ .ಯಾವತ್ತೂ ನಾನು ಪತ್ರಕರ್ತರನ್ನು ಭ್ರಷ್ಟರನ್ನಾಗಿ ಮಾಡಿಲ್ಲ . ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ MLC ಹೆಚ್.ವಿಶ್ವನಾಥ್ ಹೇಳಿಕೆ . ಇಡೀ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಭ್ರಷ್ಟ ಮಾಡಲು ಹೊರಟಿದ್ದೀರಿ . ಈ ಬಗ್ಗೆ ಮುಖ್ಯಮಂತ್ರಿ ಬೊಮ್ಮಾಯಿಯವರೇ ಮಾತ್ನಾಡಬೇಕು . ನಿಮ್ಮ ಮಾಧ್ಯಮ ಕಾರ್ಯದರ್ಶಿ ಮಾಡಿದ್ರೆ ಮೊದಲು ಹೊರಗೆ ಕಳುಹಿಸಿ‌
ಒಂದು ವೇಳೆ ಮಿನಿಸ್ಟರ್ ತಪ್ಪು ಮಾಡಿದ್ದರೆ ಕಿತ್ತು ಬಿಸಾಕಿ
ನಾನು ಯಾವುದೇ ಪಕ್ಷದಲ್ಲಿ ಇದ್ದರೂ ತಪ್ಪು ಮಾಡಿದಾಗ ದನಿ ಎತ್ತಿದ್ದೇನೆ . ಸಂವಿಧಾನದ 4ನೇ ಅಂಗವನ್ನು ನಾವು ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದೇವೆ.?
ಸತ್ಯದ ಸುದ್ದಿಯನ್ನ ಕತ್ತು ಹಿಸುಕಲು ಹೊರಟಿದ್ದೀವಾ..? ವಿಪಕ್ಷದವರು ಯಾಕೆ ಸುಮ್ಮನಿದ್ದಾರೆ ? ಎಂದು ಪ್ರಶ್ನಿಸಿದ್ದಾರೆ .

Share post:

Subscribe

spot_imgspot_img

Popular

More like this
Related

ಮೈಸೂರು: ದಾಸವಾಳದ ದಿಂಡು ನುಂಗಿ 6 ತಿಂಗಳ ಮಗು ದುರ್ಮರಣ!

ಮೈಸೂರು: ದಾಸವಾಳದ ದಿಂಡು ನುಂಗಿ 6 ತಿಂಗಳ ಮಗು ದುರ್ಮರಣ! ಮೈಸೂರು: ದಾಸವಾಳ...

ಪೆಟ್ರೋಲ್-ಡೀಸೆಲ್ ದರ ಏರಿಕೆ: ಶೆಲ್ ಬಂಕ್ʼಗಳಿಂದ ಗ್ರಾಹಕರಿಗೆ ಶಾಕ್

ಪೆಟ್ರೋಲ್-ಡೀಸೆಲ್ ದರ ಏರಿಕೆ: ಶೆಲ್ ಬಂಕ್ʼಗಳಿಂದ ಗ್ರಾಹಕರಿಗೆ ಶಾಕ್ ಬೆಂಗಳೂರು: ನಗರದಲ್ಲಿ ಪೆಟ್ರೋಲ್...

ಹಾಲು ಕಲಬೆರಕೆಯೇ? ಮನೆಯಲ್ಲಿ ಈ 4 ಟೆಸ್ಟ್ ಮಾಡಿ ಚೆಕ್ ಮಾಡಿ

ಹಾಲು ಕಲಬೆರಕೆಯೇ? ಮನೆಯಲ್ಲಿ ಈ 4 ಟೆಸ್ಟ್ ಮಾಡಿ ಚೆಕ್ ಮಾಡಿ ಇತ್ತೀಚಿನ...

ಅಣ್ಣಮ್ಮ ಹಾಡಿಗೆ ಮಚ್ಚು ಹಿಡಿದು ನೃತ್ಯ ಮಾಡಿದ್ದ ರೌಡಿಶೀಟರ್‌ ಗಳು ಜೈಲುಪಾಲು

ಅಣ್ಣಮ್ಮ ಹಾಡಿಗೆ ಮಚ್ಚು ಹಿಡಿದು ನೃತ್ಯ ಮಾಡಿದ್ದ ರೌಡಿಶೀಟರ್‌ ಗಳು ಜೈಲುಪಾಲು ಬೆಂಗಳೂರು:...