IAS, IPS ಅಧಿಕಾರಿಗಳ ಸ್ಯಾಲರಿ ಗೊತ್ತಾ?

0
38

ಭಾರತದಲ್ಲಿ ಅಖಿಲ ಭಾರತ ಸೇವೆಗಳಾದ ಇಂಡಿಯನ್ ಅಡ್ಮಿನಿಸ್ಟ್ರೇಟಿವ್ ಸರ್ವೀಸ್ (ಐಎಎಸ್) ಮತ್ತು ಇಂಡಿಯನ್‌ ಪೊಲೀಸ್ ಸರ್ವೀಸ್‌(ಐಪಿಎಸ್) ದೇಶದ ದೊಡ್ಡ ಮತ್ತು ಗೌರವಾನ್ವಿತ ಹುದ್ದೆಗಳಾಗಿವೆ. ಈ ಹುದ್ದೆಗಳಿಗೆ ಕೇಂದ್ರ ಲೋಕಸೇವಾ ಆಯೋಗ ಪರೀಕ್ಷೆ ನಡೆಸಿ ನೇಮಕಾತಿ ಮಾಡುತ್ತದೆ. ಪ್ರತಿವರ್ಷವು ಯುಪಿಎಸ್‌ಸಿ ಐಎಎಸ್‌, ಐಪಿಎಸ್‌, ಐಎಫ್‌ಎಸ್ ಹುದ್ದೆಗಳಿಗೆ ನೋಟಿಫಿಕೇಶನ್ ಪ್ರಕಟಿಸುತ್ತದೆ.

ದೇಶದಾದ್ಯಂತ ಲಕ್ಷಾಂತರ ಐಎಎಸ್, ಐಪಿಎಸ್‌ ಆಕಾಂಕ್ಷಿಗಳು ವರ್ಷಾನುಗಟ್ಟಲೇ ಈ ಪರೀಕ್ಷೆಗಳಿಗೆ ತಯಾರಿ ನಡೆಸಿ, ಕೋಚಿಂಗ್ ಸೆಂಟರ್‌ಗಳಲ್ಲಿ ತರಬೇತಿ ಪಡೆದು ಸನ್ನದ್ಧರಾಗುತ್ತಾರೆ. ಅಂದಹಾಗೆ ಈ ಹುದ್ದೆಗಳಿಗೆ ಮಾಸಿಕ ಸಂಭಾವನೆ ಎಷ್ಟು ಎಂಬುದನ್ನು ತಿಳಿಯುವುದು ಬಹುಸಂಖ್ಯಾತರ ಕುತೂಹಲವಾಗಿದೆ. ಆದ್ದರಿಂದ ಈ ಹುದ್ದೆಗಳಿಗೆ ವೇತನ ಎಷ್ಟು, ಏನೆಲ್ಲಾ ಸೌಲಭ್ಯಗಳು ಸಿಗಲಿವೆ ಎಂದು ಈ ಕೆಳಗಿನಂತೆ ತಿಳಿಸಲಾಗಿದೆ.

ಐಎಎಸ್ ಆಫೀಸರ್ ಗೆ ಎಂಟ್ರಿ ಲೆವೆಲ್‌ನಲ್ಲಿ ಬೇಸಿಕ್ ಸ್ಯಾಲರಿ ರೂ.56,100 ನೀಡಲಾಗುತ್ತದೆ. ರೂ.16,500 ಗ್ರೇಡ್‌ ಪೇ ನೀಡಲಾಗುತ್ತದೆ. ಒಬ್ಬ ಸೀನಿಯರ್ ಐಎಎಸ್‌ ಆಫೀಸರ್ ಗರಿಷ್ಠ ರೂ.2,70,000 ಮಾಸಿಕ ವೇತನವನ್ನು ಪಡೆಯಬಹುದು. ಇದಲ್ಲದೆ ಈ ಕೆಳಗಿನ ವಿಶೇಷ ಭತ್ಯೆಗಳನ್ನು ಬೇಸಿಕ್ ಸ್ಯಾಲರಿಯೊಂದಿಗೆ ನೀಡಲಾಗುತ್ತದೆ.

– ತುಟ್ಟಿ ಭತ್ಯೆ (Dearness Allowance)

– ಮನೆ ಬಾಡಿಗೆ ಭತ್ಯೆ (House Rent Allowance)

– ಪ್ರಯಾಣ ಭತ್ಯೆ (Travel Allowance)

– ಸಾರಿಗೆ ಭತ್ಯೆ (Transport Allowance)

– ವೈದ್ಯಕೀಯ ಭತ್ಯೆ (Medical Allowance)

ಐಎಎಸ್ ಆಫೀಸರ್ ಹುದ್ದೆಗೆ ಹಲವು ಭತ್ಯೆಗಳಲ್ಲಿ ಕೆಲವೊಂದನ್ನು ಬಿಟ್ಟು ಇನ್ನೆಲ್ಲಾ ಭತ್ಯೆಗಳನ್ನು ನೀಡಲಾಗುತ್ತದೆ. ಒಟ್ಟಾರೆ ಐಎಎಸ್‌ ಆಫೀಸರ್‌ಗೆ Gross Salary = Basic Pay + Grade Pay + DA + HRA + CA + other Allowance ನೀಡಲಾಗುತ್ತದೆ.

ಐಪಿಎಸ್ ಹುದ್ದೆಗೆ ಹೊಸ ವೇತನ ಮಾದರಿ ಇದೆ. ನಾಗರಿಕ ಸೇವೆಗಳಿಗೆ ವೇತನ ಶ್ರೇಣಿಗಳ ವ್ಯವಸ್ಥೆಯನ್ನು ತೆಗೆದುಹಾಕಲಾಗಿದ್ದು, ಏಕೀಕೃತ ವೇತನ ಪರಿಚಯಿಸಲಾಗಿದೆ. ಈಗ ಐಪಿಎಸ್ ವೇತನ ಪ್ರಮಾಣವನ್ನು ಟಿಎ, ಡಿಎ ಮತ್ತು ಹೆಚ್‌ಆರ್‌ಎ ಜತೆಗೆ ಮೂಲ ವೇತನದ ಆಧಾರದಲ್ಲಿ ಮಾತ್ರ ನಿರ್ಧರಿಸಲಾಗಿದೆ.

ಐಪಿಎಸ್‌ ಹುದ್ದೆಗಳಿಗೆ ಅವರು ತೆಗೆದ ರ್ಯಾಂಕ್‌ ಆಧಾರಿತವಾಗಿ ವಿವಿಧ ಮಟ್ಟದ ಹುದ್ದೆಗಳಾದ ಡೈರೆಕ್ಟರ್ ಜೆನೆರಲ್ ಆಫ್‌ ಪೊಲೀಸ್, ಡೈರೆಕ್ಟರ್ ಆಫ್‌ ಐಬಿ ಅಥವಾ ಸಿಬಿಐ, ಇನ್ಸ್‌ಪೆಕ್ಟರ್ ಜೆನೆರಲ್ ಆಫ್‌ ಪೊಲೀಸ್‌, ಡೆಪ್ಯೂಟಿ ಇನ್ಸ್‌ಪೆಕ್ಟರ್ ಜೆನೆರಲ್ ಆಫ್‌ ಪೊಲೀಸ್, ಸೀನಿಯರ್ ಸೂಪರಿಂಟೆಂಡಂಟ್ ಆಫ್‌ ಪೊಲೀಸ್, ಅಡಿಷನಲ್ ಸೂಪರಿಂಟೆಂಡಂಟ್ ಆಫ್‌ ಪೊಲೀಸ್, ಡೆಪ್ಯೂಟಿ ಸೂಪರಿಂಟೆಂಡಂಟ್ ಆಫ್‌ ಪೊಲೀಸ್ ಆಗಿ ನೇಮಕ ಮಾಡಲಾಗುತ್ತದೆ. ಈ ಹುದ್ದೆಗಳಿಗೆ 7ನೇ ಪೇ ಕಮಿಷನ್ ಸ್ಕೇಲ್‌ ಪ್ರಕಾರ ಕೆಳಗಿನಂತೆ ವೇತನ ನೀಡಲಾಗುತ್ತದೆ.

ಐಪಿಎಸ್ ಆಫೀಸರ್ ಗಳನ್ನು ರ್ಯಾಂಕ್‌ ಆಧಾರಿತವಾಗಿ ಈ ಕೆಳಗಿನ ಪೋಸ್ಟ್‌ಗಳಿಗೆ ನೇಮಕ ಮಾಡಲಿದ್ದು, ಹುದ್ದೆಗಳಿಗೆ ವೇತನ ಹೇಗಿರುತ್ತದೆ ಎಂದು ಇಲ್ಲಿ ತಿಳಿಸಲಾಗಿದೆ.

ಡೈರೆಕ್ಟರ್ ಜೆನೆರಲ್ ಆಫ್‌ ಪೊಲೀಸ್ /ಡೈರೆಕ್ಟರ್ ಆಫ್‌ ಐಬಿ ಅಥವಾ ಸಿಬಿಐರೂ. 2,25,000ಡೈರೆಕ್ಟರ್ ಜೆನೆರಲ್ ಆಫ್‌ ಪೊಲೀಸ್ರೂ. 2,05,400ಇನ್ಸ್‌ಪೆಕ್ಟರ್ ಜೆನೆರಲ್ ಆಫ್‌ ಪೊಲೀಸ್‌ರೂ. 1,44,200ಡೆಪ್ಯೂಟಿ ಇನ್ಸ್‌ಪೆಕ್ಟರ್ ಜೆನೆರಲ್ ಆಫ್‌ ಪೊಲೀಸ್1,31,100ಸೀನಿಯರ್ ಸೂಪರಿಂಟೆಂಡಂಟ್ ಆಫ್‌ ಪೊಲೀಸ್78,800ಅಡಿಷನಲ್ ಸೂಪರಿಂಟೆಂಡಂಟ್ ಆಫ್‌ ಪೊಲೀಸ್67,700ಡೆಪ್ಯೂಟಿ ಸೂಪರಿಂಟೆಂಡಂಟ್ ಆಫ್‌ ಪೊಲೀಸ್56,100

 

ಡೈರೆಕ್ಟರ್ ಜೆನೆರಲ್ ಆಫ್‌ ಪೊಲೀಸ್ /ಡೈರೆಕ್ಟರ್ ಆಫ್‌ ಐಬಿ ಅಥವಾ ಸಿಬಿಐ ರೂ. 2,25,000
ಡೈರೆಕ್ಟರ್ ಜೆನೆರಲ್ ಆಫ್‌ ಪೊಲೀಸ್ ರೂ. 2,05,400
ಇನ್ಸ್‌ಪೆಕ್ಟರ್ ಜೆನೆರಲ್ ಆಫ್‌ ಪೊಲೀಸ್‌ ರೂ. 1,44,200
ಡೆಪ್ಯೂಟಿ ಇನ್ಸ್‌ಪೆಕ್ಟರ್ ಜೆನೆರಲ್ ಆಫ್‌ ಪೊಲೀಸ್ 1,31,100
ಸೀನಿಯರ್ ಸೂಪರಿಂಟೆಂಡಂಟ್ ಆಫ್‌ ಪೊಲೀಸ್ 78,800
ಅಡಿಷನಲ್ ಸೂಪರಿಂಟೆಂಡಂಟ್ ಆಫ್‌ ಪೊಲೀಸ್ 67,700
ಡೆಪ್ಯೂಟಿ ಸೂಪರಿಂಟೆಂಡಂಟ್ ಆಫ್‌ ಪೊಲೀಸ್ 56,1

LEAVE A REPLY

Please enter your comment!
Please enter your name here