ICSE 10 ಹಾಗೂ ISC 12ನೇ ತರಗತಿ ರಿಸಲ್ಟ್ಸ್ ಔಟ್

0
228

ದಿ ಕೌನ್ಸಿಲ್ ಫಾರ್‌ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ (ಸಿಐಎಸ್‌ಸಿಇ)ಯು ಐಸಿಎಸ್‌ಇ 10 ಹಾಗೂ ಐಎಸ್‌ಸಿ 12ನೇ ತರಗತಿ ಫಲಿತಾಂಶವನ್ನು ಪ್ರಕಟಿಸಿದೆ.

ಜುಲೈ 24ರಂದು ಸಂಜೆ 3 ಗಂಟೆಗೆ ಫಲಿತಾಂಶ ಪ್ರಕಟವಾಗಿದೆ. ಈ ವರ್ಷ ಒಟ್ಟಾರೆ ಐಸಿಎಸ್‌ಇಗೆ ಶೇ.99.98ರಷ್ಟು ಫಲಿತಾಂಶ ಬಂದಿದೆ. ಹಾಗೂ ಐಎಸ್‌ಸಿಗೆ ಶೇ.99.76ರಷ್ಟು ಫಲಿತಾಂಶ ಬಂದಿದೆ. ವಿದ್ಯಾರ್ಥಿಗಳು 10 ಹಾಗೂ 12ನೇ ತರಗತಿ ಫಲಿತಾಂಶವನ್ನು ವೆಬ್‌ಸೈಟ್‌ನಲ್ಲಿ ನೋಡಬಹುದಾಗಿದೆ. cisce.org ಹಾಗೂ results.cisce.orgನಲ್ಲಿ ಫಲಿತಾಂಶ ವೀಕ್ಷಿಸಬಹುದು.

ಫಲಿತಾಂಶ ವೆಬ್‌ಸೈಟ್‌ನಲ್ಲಿ ಲಭ್ಯವಾಗಲಿದೆ ಹಾಗೂ ಎಸ್‌ಎಂಎಸ್‌ ಮೂಲಕ ಫಲಿತಾಂಶ ಬರಲಿದೆ. ಒಂದೊಮ್ಮೆ ಅಂಕಗಳಲ್ಲಿ ತಪ್ಪಿದ್ದರೆ ಶಾಲೆಗಳಿಗೆ ಅರ್ಜಿ ಸಲ್ಲಿಸಬೇಕಾಗಿದೆ.

* ವಿದ್ಯಾರ್ಥಿಗಳು csice.org ವೆಬ್‌ಸೈಟ್ ತೆರೆಯಬೇಕು.
*ಹೋಂಪೇಜ್‌ನಲ್ಲಿ ರಿಸಲ್ಟ್‌ 2021 ಕ್ಲಿಕ್ ಮಾಡಬೇಕು
* ಅಲ್ಲಿ ಸ್ಕೋರ್ ಆಪ್ಷನ್‌ನಲ್ಲಿ ಐಸಿಎಸ್‌ಇ ಹಾಗೂ ಐಎಸ್‌ಸಿ ಆಯ್ಕೆ ಮಾಡಬೇಕು
*ಬಳಿಕ ಅವರ ನೋಂದಣಿ ಸಂಖ್ಯೆಯನ್ನು ನಮೂದಿಸಬೇಕು
*ಸಬ್‌ಮಿಟ್ ಕ್ಲಿಕ್ ಮಾಡಬೇಕು
* ಫಲಿತಾಂಶ ನಿಮ್ಮ ಸ್ಕ್ರೀನ್‌ ಮೇಲೆ ಡಿಸ್‌ಪ್ಲೇ ಆಗಲಿದೆ