ಕೆಲವು ದಿನಗಳ ಹಿಂದೆ ನಾನು ಮತ್ತು ನನ್ನ ಗೆಳೆಯ ರಾಂಚಿಯಿಂದ ಜಮ್ ಶೆಡ್ ಪುರಕ್ಕೆ ವಾಪಾಸ್ಸಾಗುತ್ತಿರುವಾಗ ಎನ್ಎಚ್33 ಬದಿಯಲ್ಲಿನ ಡಾಬವೊಂದರ ಬಳಿ ನಮ್ಮ ಗಾಡಿಯನ್ನು ನಿಲ್ಲಿಸಿದ್ವಿ..! ನಮಗೆ ಬೇಕಾದ ಆಹಾರವನ್ನು ಆರ್ಡರ್ ಮಾಡಿ ಮಾತನಾಡುತ್ತಾ ಕುಳಿತ್ವಿ..! ಆಗ ನನ್ನ ಕಣ್ಣಿಗೆ ಅಲ್ಲೇ ಆಡ್ತಾ ಇದ್ದ ಎರಡು ಮುದ್ದಾದ ನಾಯಿಮರಿಗಳು ಕಂಡವು. ನಾನೂ ಅವುಗಳ ಜೊತೆ ಆಟ ಆಡೋಕೆ ಹೋದೆ..!
ನಾನು ಅವುಗಳೊಡನೆ ಆಡೋಕೆ ಹೋದ ಕೂಡಲೇ ಡಾಬಾದ ಮಾಲಿಕ ನನ್ನ ಬಳಿ ಬಂದು ಒಂದು ಬಾಟಲಿ ಹಾಲನ್ನು ಕೊಟ್ಟು, ” ದಯವಿಟ್ಟು ಅವುಗಳಿಗೆ (ನಾಯಿಮರಿಗಳಿಗೆ) ಹಾಲನ್ನು ಕುಡಿಸಿ, ಅವುಗಳ ತಾಯಿ ಸತ್ತು ಹೋಗಿದೆ” ಎಂದು ಹೇಳಿದರು..!
ಆಗ ನನಗೆ ತುಂಬಾನೇ ಖಷಿ ಆಯ್ತು. ನಾನು ದುರ್ಬಲವಾದ ನಾಯಿಮರಿಗೆ ಸ್ವಲ್ಪ ಜಾಸ್ತಿಯೇ ಹಾಲು ಹಾಕಿದೆ. ನನ್ನ ಕೆಲಸ ಮುಗಿದ ಮೇಲೆ, ಡಾಬಾದ ಮಾಲಿಕ ಸೋಪು ಮತ್ತು ನೀರನ್ನು ಕೊಟ್ಟು, ಅಣ್ಣಾ..! ಕೈ ತೊಳೆದುಕೊಳ್ಳಿ, “ನೀವು ಇವತ್ತೊಂದು ಒಳ್ಳೆಯ ಪೂಜಿನೀಯ ಕೆಲಸ ಮಾಡಿದ್ದೀರಿ” ಅಂತ ಹೇಳಿದರು..!
ಅವರ ಮಾತಿನಿಂದ ನನಗೆ ಏನು ಹೇಳ ಬೇಕು ಅಂತ ಗೊತ್ತೇ ಆಗಲಿಲ್ಲ..! ಅವರ ಒಂದೇ ವಾಕ್ಯದಲ್ಲಿ ಅಗಾಧವಾದ ಜ್ಞಾನವಿತ್ತು..! ನಾನು ಸುಮ್ಮನೇ ಕೈ ತೊಳೆದುಕೊಂಡು ಆರ್ಡರ್ ಮಾಡಿದ್ದ ತಿನಿಸನ್ನು ತಿಂದೆ..!
ಇಲ್ಲಿ ನಾವೆಲ್ಲಾ ಅರ್ಥಮಾಡಿಕೊಳ್ಳಲೇ ಬೇಕಾದ ಸಾಮಾನ್ಯ ಅಂಶವೊಂದಿದೆ. ಎಲ್ಲಾ ಧರ್ಮದಲ್ಲೂ ಮಾನವೀಯತೆಯಿದೆ. ಈ ಮಾನವೀಯತೆಯ ಆಚರಣೆ ಎಲ್ಲಾ ಧರ್ಮಿಯರೂ ಆಚರಿಸಿದರೆ ಅಸಹಿಷ್ಣುತೆಯ ಪ್ರಶ್ನೆಯೇ ಬರುವುದಿಲ್ಲವಲ್ಲವೇ..?!
ಮೂಲ : ವೀರೇಂದ್ರ ಕುಮಾರ್
ಭಾವಾನುವಾದ : ಶಶಿಧರ ಡಿ. ಎಸ್ ದೋಣಿಹಕ್ಲು
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
POPULAR STORIES :
ರಾಷ್ಟ್ರಗೀತೆಗೆ ಗೌರವ ಕೊಡಬೇಕ ಅಂತ ಕೇಳೋರು ದಯವಿಟ್ಟು ಈ ವೀಡಿಯೋ ನೋಡಬೇಡಿ..!
ಶಿಕ್ಷಣವೇ ಜೀವನದಲ್ಲಿ ಎಲ್ಲವೂ ಅಲ್ಲ..!
ವಿಶ್ವಕಪ್ ಗೆದ್ದ ತಂಡದ ಸದಸ್ಯ ಕಚೋರಿ ಮಾರುತ್ತಿದ್ದಾನೆ..! ಮುಂಬರುವ ಏಷ್ಯಾ ಕಪ್ ಗೂ ಆತನೇ ನಾಯಕ..!
ವೈ-ಫೈ ಗಿಂತ ೧೦೦ ಪಟ್ಟು ವೇಗವಾಗಿ ಅಂತರ್ಜಾಲವನ್ನು ಒದಗಿಸೋ ಲಿ-ಫೈ
ಭಿಕ್ಷೆ ಬೇಡ್ತಾ ಇದ್ದ ಅಜ್ಜಿಗೆ ತಿನ್ನಲು ಕೊಡುವಾಗ, ವ್ಯಾಪಾರಿ ಕೊಡಬೇಡಿ ಅಂದಿದ್ದೇಕೆ..?!
ಹಣ ಇದ್ರೆ ಮಾತ್ರ ಜನ..! ಅಂದು ಅನ್ನದಾನ ಮಾಡಿದ್ದ ಕುಟಂಬ ಇವತ್ತು..?!