ಹೌದು 2005ರಲ್ಲಿ ಮತ್ತೊಮ್ಮೆ ಶಿವಣ್ಣ ಲಾಂಗ್ ಹಿಡಿದು ರಾರಾಜಿಸಿದ್ದ ಸಿನಿಮಾವಾದು. ಇಂತದೊಂದು ಚಿತ್ರವನ್ನ ನೀಡಿದ್ದು ನಿರ್ದೇಶಕ ಪ್ರೇಮ್.. ಈಗ ಅಂತಹದ್ದೆ ಸಿನಿಮಾವನ್ನ ರೆಡಿ ಮಾಡಲಿದ್ಧಾರೆ ಈ ಡೈರೆಕ್ಟರ್. ಈ ಹಿಂದೆ ದೊಡ್ಡ ಮಟ್ಟಿಗೆ ಸುದ್ದಿಯಾದ ಕಲಿ ಸಿನಿಮಾ ಈಗ ನಿಂತು ಹೋಗಿದೆ. ಹಂಗಂತ ನೀವು ಈ ಕರುನಾಡ ಚಕ್ರವರ್ತಿಯನ್ನ ಹಾಗೆ ಅಭಿನಯನ ಚಕ್ರವರ್ತಿಯನ್ನ ಒಟ್ಟಿಗೆ ನೋಡೊ ಚಾನ್ಸ್ ತಪ್ಪಿತಲ್ಲ ಅಂತಾ ಬೇಸರಗೊಳ್ಳುವ ಅವಶ್ಯಕತೆಯಿಲ್ಲ. ಯಾಕಂದ್ರೆ ಕಲಿಯೊಂದು ಐತಿಹಾಸಿಕ ಚಿತ್ರವಾಗಿದ್ದು ಈ ಇಬ್ಬರನ್ನ ಈ ಗೆಟಪ್‍ನಲ್ಲಿ ನೋಡೊ ಅಭಿಮಾನಿಗೆ ಸಮಾಧಾನವಾಗದೆ ಇರಬಹುದು ಅನ್ನೋ ಕಾರಣಕ್ಕೆ ಇಡೀ ಕಲಿ ಚಿತ್ರದ ಪ್ಲಾನ್ ಈಗ ಉಲ್ಟಾ ಆಗಿದೆ. ಈಗ ಈ ಇಬ್ಬರ ಕಾಂಬಿನೇಷನ್‍ನಲ್ಲೆ ಪ್ರೇಮ್ ನಿರ್ದೇಶನದಲ್ಲೆ ಪಕ್ಕ ಮಾಸ್ ಹಾಗೆ ಕ್ಲಾಸ್ ಆಡಿಯನ್ಸ್ ಗೆ ಇಷ್ಟವಾಗುವ ಸಿನಿಮಾ ಸಿದ್ದವಾಗಲಿದೆ. ಇದನ್ನ ನಿರ್ಮಾಣ ಮಾಡಲಿದ್ಧಾರೆ ನಿರ್ಮಾಪಕರಾದ ಸಿ.ಆರ್.ಮನೋಹರ್ ಅಂದಹಾಗೆ ಈ ಚಿತ್ರ ಜೋಗಿಯ ಹಾಗೆ ಇರಲಿದೆಯಂತೆ. ಇನ್ನೂ ಈ ಸಿನಿಮಾ ಕೂಡ ಕನ್ನಡ ಮಾತ್ರವಲ್ಲದೆ ತಮಿಳು ಹಾಗೆ ತೆಲುಗಿನಲ್ಲೂ ನಿರ್ಮಾಣವಾಗಲಿದೆ. ಅಂದಹಾಗೆ ತೆಲುಗಿನಲ್ಲಿ ಅಕ್ಕಿನೇನಿ ನಾಗಾರ್ಜುನ್ ಡಾ.ಶಿವರಾಜ್ ಕುಮಾರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಇನ್ನೂ ಈ ಹೊಸ ಸಿನಿಮಾ ಮುಹೂರ್ತ ವರಮಹಾಲಕ್ಷ್ಮೀ ಹಬ್ಬಕ್ಕೆ ಮುಹೂರ್ತ ಕಾರ್ಯ ನೆರವೇರಲಿದೆ. ಸದ್ಯಕ್ಕೆ ಎಲ್ಲವೂ ಮಾತುಕತೆಯ ಹಂತದಲ್ಲಿದ್ದು, ಈ ಬಿಗ್ ಸ್ಟಾರ್‍ಗಳ ಕಾಂಬಿನೇಷನ್‍ನ ಮೆಗಾ ಮೂವೀಗೆ ಮತ್ತೆ ಜೀವ ಬಂದಂತಾಗಿದೆ.
- ಅಶೋಕ್ ರಾಜ್
POPULAR STORIES :
ಸೈನಾ ಸಾಧನೆಗೆ ಕಾರಣ ಕೊಹ್ಲಿಯಂತೆ.. ಅದ್ಹೇಗೆ…?
ಮಗು ಕಳೆದುಕೊಂಡರೂ ಅವರು ಅಪ್ಪ ಅಮ್ಮ ಆದ್ರು..!
ಬಡವರಿಗೆ ಉಚಿತ ಚಿಕಿತ್ಸೆ ನೀಡದ 5 ಖಾಸಗಿ ಆಸ್ಪತ್ರೆಗಳಿಗೆ 700 ಕೋಟಿ ದಂಡ!
ಹ್ಯಾಟ್ರಿಕ್ ಹೀರೊನ `ಖದರ್’ ಸಿನಿಮಾಗೆ ಸಿಕ್ಕಳು ನಾಯಕಿ..!
ಜಗ್ಗುದಾದ ಮೂರು ದಿನದಲ್ಲಿ ಕೊಳ್ಳೆ ಹೊಡೆದ ಹಣವೆಷ್ಟು ಗೊತ್ತಾ..?
ದುಡ್ಡಿಲ್ಲ ಕಾಸಿಲ್ಲ ನೀವೆ ಒಂದು ಏರ್ ಕೂಲರ್‍ನ ಸಿದ್ದ ಮಾಡಬಹುದು..!!
ಕಿಸ್ಸಿಂಗ್ ಹಿಂದಿರೋ ಆರೋಗ್ಯ ರಹಸ್ಯವೇನು..????
ಕನ್ನಡದ ಖ್ಯಾತ ನಟ ಭಿಕ್ಷುಕನ ಗೆಟಪ್‍ನಲ್ಲಿ ಸಂಪಾದಿಸಿದ್ದು ಎಷ್ಟು ಗೊತ್ತಾ..?