ಇಂದಿನ ಟಾಪ್ 10 ಸುದ್ದಿಗಳು..! 30.12.2015

0
64

1. ಅರವಿಂದ್ ಜಾದವ್ ನೂತನ ಮುಖ್ಯ ಕಾರ್ಯದರ್ಶಿಯಾಗಿ ನೇಮಕ

ಕೌಶಿಕ್ ಮುಖರ್ಜಿ ಅವರಿಂದ ತೆರವಾಗುವ ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿಯಾಗಿ ಅರಿವಿಂದ್ ಜಾದವ್ ಅವರನ್ನು ಕರ್ನಾಟಕ ರಾಜ್ಯ ಸರ್ಕಾರ ನೇಮಿಸಿದೆ.
ಕೆಎಎಟಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಅರವಿಂದ್ ಜಾದವ್ 1978ನೇ ಬ್ಯಾಚ್ನ ಐಎಎಸ್ ಅಧಿಕಾರಿ, ನಾಳೆ (ಡಿ.31) ರಂದು ಹಾಲಿ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ನಿವೃತ್ತರಾಗಲಿದ್ದು ಆ ಸ್ಥಾನವನ್ನು ಜಾದವ್ ತುಂಬಲಿದ್ದಾರೆ.

2. ಜನವರಿ 1 ರಂದು ತಿರುಪತಿಯಲ್ಲಿ ವಿಐಪಿ ದರ್ಶನವಿಲ್ಲ..!

ಜನವರಿ 1ರಂದು ತಿರುಪತಿ ತಿಮ್ಮಪ್ಪನ ದರ್ಶನಕ್ಕಾಗಿ ವಿಐಪಿ ಪಾಸ್ ಮೂಲಕ ಆಗಮಿಸುವ ಭಕ್ತಾದಿಗಳಿಗೆ ಅವಕಾಶವಿಲ್ಲ. ವಿಐಪಿಗಳೂ ಇತರರಂತೇ ಸರದಿಯಲ್ಲಿ ನಿಂತು ದೇವರ ದರ್ಶನ ಮಾಡಬೇಕಿದೆ.
ಹೊಸ ವರ್ಷದಂದು ತಿಮ್ಮಪ್ಪನ ದರ್ಶನಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಬರುವುದರಿಂದ ನೂಕು ನುಗ್ಗಲು ಹೆಚ್ಚಾಗುವ ಹಿನ್ನೆಲೆಯಲ್ಲಿ ವಿಐಪಿ ಸೌಲಭ್ಯವನ್ನು ಕಡಿತಗೊಳಿಸಲು ಟಿಟಿಪಿ (ತಿರುಮಲ ತಿರುಪತಿ ದೇವಸ್ಥಾನಂ) ನಿರ್ಧರಿಸಿದೆ.

3. ಖಾಸಗಿ ಸಂಸ್ಥೆಗಳಲ್ಲಿ ಹೆರಿಗೆ ರಜೆ ವಿಸ್ತರಣೆ
ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಹೆರಿಗೆ ರಜೆಯನ್ನು ವಿಸ್ತರಿಸಲು ಸರ್ಕಾರ ಮುಂದಾಗಿದ್ದು, 12 ವಾರಗಳಿಂದ 26 ವಾರಗಳಿಗೆ ರಜೆಯನ್ನು ವಿಸ್ತರಿಸಲಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೇನಕಾ ಗಾಂಧಿ ಸೂಚ್ಯವಾಗಿ ಹೇಳಿದ್ದು, ಕಾರ್ಮಿಕ ಸಚಿವಾಲಯ ಕೂಡ ಇದಕ್ಕೆ ಒಪ್ಪಿಗೆ ನೀಡಿದೆ ಎಂದು ತಿಳಿದು ಬಂದಿದೆ.

4. ಪುರಸಭೆಗೆ ಸ್ಪರ್ಧಿಸುವುದಕ್ಕೂ ವಿದ್ಯಾರ್ಹತೆ
ಪಂಚಾಯತ್ ಚುನಾವಣೆಗೆ ಸ್ಪರ್ಧಿಸಲು ಕನಿಷ್ಠ ವಿದ್ಯಾರ್ಹತೆ ನಿಗದಿಪಡಿಸಿದ್ದ ಹರ್ಯಾಣ ಸರ್ಕಾರ, ಈಗ ಪುರಸಭೆಯ ಕಾಯಿದೆಗೂ ತಿದ್ದುಪಡಿ ತಂದು ಕನಿಷ್ಠ ವಿದ್ಯಾರ್ಹತೆ ನಿಗದಿಪಡಿಸಲು ಮುಂದಾಗಿದೆ. 1994ರ ಹರಿಯಾಣ ಪುರಸಭೆ ಕಾಯ್ದೆಗೆ ತಿದ್ದುಪಡಿ ತಂದು ಪುರಸಭೆ ಚುನಾವಣೆಗೆ ಸ್ಪರ್ಧಿಸುವವರಿಗೆ ಕನಿಷ್ಠ ವಿದ್ಯಾರ್ಹತೆಯನ್ನು 10ನೇ ತರಗತಿ ಪಾಸಾಗಿರಬೇಕು ಹಾಗೂ ಎಸ್.ಸಿ, ಎಸ್.ಟಿ ಸಮುದಾಯದವರಿಗೆ ವಿದ್ಯಾರ್ಹತೆಯನ್ನು ಮಾಧ್ಯಮಿಕ ಶಾಲೆ ತೇರ್ಗಡೆಗೆ ನಿಗದಿ ಮಾಡಲಾಗುತ್ತದೆ ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟರ್ ಹೇಳಿದ್ದಾರೆ

5. ಸಮ-ಬೆಸ ನಿಯಮದಲ್ಲಿ ದ್ವಿಚಕ್ರ, ಮಹಿಳೆಯರಿಗೆ ವಿನಾಯಿತಿ ಏಕೆ..? ಕೇಜ್ರೀವಾಲ್ಗೆ ಹೈಕೋರ್ಟ್ ಪ್ರಶ್ನೆ..!
ವಾಯು ಮಾಲಿನ್ಯ ನಿಯಂತ್ರಣದ ದೃಷ್ಟಿಯಿಂದ ಆಪ್ ಸರ್ಕಾರ ದೆಹಲಿಯಲ್ಲಿ ಕೈಗೊಂಡಿರೋ ಸಮ-ಬೆಸ ಸಂಖ್ಯೆಯ ವಾಹನ ಸಂಚಾರ ನಿಯಮದಲ್ಲಿ ದ್ವಿ ಚಕ್ರ ವಾಹನ ಮತ್ತು ಮಹಿಳೆಯರಿಗೆ ನೀಡಿರುವ ವಿನಾಯಿತಿ ನೀಡಿರುವ ಬಗ್ಗೆ ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ರನ್ನು ಹೈಕೋರ್ಟ್ ಪ್ರಶ್ನಿಸಿದೆ.

6. ಲಂಚ ಪಡೆಯುತ್ತಿದ್ದಾಗ ಸಿಕ್ಕಿಬಿದ್ದ ಪೊಲೀಸ್

ಮೂರು ಲಕ್ಷ ಲಂಚ ರೂಪಾಯಿ ಪಡೆಯುತ್ತಿದ್ದ ಹಿರಿಯ ಪೊಲೀಸ್ ಇನ್ಸ್ ಪೆಕ್ಟರ್ ರನ್ನು ಭ್ರಷ್ಟಚಾರ ನಿಗ್ರಹ ದಳ ಬಂಧಿಸಿದೆ. ಮುಂಬೈನ ಸುಬರ್ಬನ್ ನಲ್ಲಿರುವ ಎಂಎಚ್ ಬಿ ಕಾಲೋನಿ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಸುಭಾಷ್ ಚಹ್ವಾಣ್ ಎಂಬಾತನೇ ಲಂಚ ಪಡೆಯುವಾಗ ಬಂಧನಕ್ಕೊಳಗಾಗಿದ್ದಾನೆ. ಅಕ್ರಮವಾಗಿ ಕಟ್ಟಡ ನಿರ್ಮಾಣ ಮತ್ತು ಅಲ್ಲಿನ ಕಾರ್ಮಿಕರ ವಿರುದ್ಧ ಕ್ರಮಕೈಗೊಳ್ಳದಿರುವುದಕ್ಕೆ ನಾಲ್ಕು ಲಕ್ಷ ನೀಡುವಂತೆ ಸುಭಾಷ್ ದೂರುದಾರರ ಬಳಿ ಬೇಡಿಕೆ ಇಟ್ಟಿದ್ದರು.

7. ಪೊಲೀಸರ ಮೇಲೆಯೇ ದಾಳಿ ಮಾಡಿದ ಯುವಕರು

ಯುವಕರ ತಂಡವೊಂದು ಸಂಚಾರ ನಿಯಮ ಉಲ್ಲಂಘಿಸಿದ್ದಲ್ಲದೇ ಪೊಲೀಸರ ಮೇಲೆಯೇ ಹಲ್ಲೆ ಮಾಡಿ, ಬೈಕ್ ಬೆಂಕಿ ಹಚ್ಚಿದ ಘಟನೆ ವಡೋದರಾದಲ್ಲಿ ನಡೆದಿದೆ. ಶಾಂತಿಲಾಲ್ ಪಮರ್ಾರ್ ಎಂಬ ಪೇದೆ ತೀವ್ರವಾಗಿ ಹಲ್ಲೆಗೊಳಗಾಗಿದ್ದಾರೆ. ನಿನ್ನೆ ಮಧ್ಯಾಹ್ನ ಸಂಚಾರ ನಿಯಮ ಉಲ್ಲಂಘಿಸಿ ಒಂದೇ ಬೈಕ್ ನಲ್ಲಿ ಮೂವರು ಯುವಕರನ್ನು ಚಲಿಸುತ್ತಿದ್ದನ್ನು ಪೇದೆ ನೋಡಿದ್ದಾರೆ. ಈ ವೇಳೆ ಯುವಕರು ಹೋಗುತ್ತಿದ್ದ ಬೈಕ್ ನ್ನು ಪೇದೆ ನಿಲ್ಲಿಸಿ ಪ್ರಶ್ನಿಸಿದ್ದಾರೆ. ಸ್ಥಳದಲ್ಲಿ ಸಾಕಷ್ಟು ಜನರು ನೆರೆದಿದ್ದಾರೆ. ಈ ವೇಳೆ ಯುವಕರು ಹಾಗೂ ಪೇದೆ ಮಧ್ಯೆ ಸಾಕಷ್ಟು ಮಾತಿನ ಚಕಮಕಿ ನಡೆದಿದೆ. ನಂತರ ಯುವಕರು ಮೇಲೆ ಹಲ್ಲೆ ಮಾಡಿದ್ದಾರೆ. ಅಲ್ಲದೆ, ಪೇದೆಯ ಬೈಕ್ ಗೆ ಬೆಂಕಿ ಹಚ್ಚಿದ್ದಾರೆ.

8. ರಾಮ ಮಂದಿರ ನೀಲನಕ್ಷೆ ಶೀಘ್ರ ಬಿಡುಗಡೆ

ರಾಮ ಮಂದಿರದ ನಿರ್ಮಾಣದ ನೀಲನಕ್ಷೆಯನ್ನು ಜನವರಿಯಲ್ಲಿ ಬಿಡುಗಡೆಯಾಗಲಿದೆ ಎಂಬ ಸುದ್ದಿಯೊಂದು ಲಭ್ಯವಾಗಿದೆ. ಈಗಾಗಲೇ ಬಿಜೆಪಿ ಮತ್ತು ಕೇಂದ್ರ ಸರ್ಕಾರ ಶೀಘ್ರದಲ್ಲೇ ರಾಮ ಮಂದಿರವನ್ನು ನಿರ್ಮಾಣ ಮಾಡುವ ಬಗ್ಗೆ ಆಶ್ವಾಸನೆ ಕೊಟ್ಟಿದ್ದೇವೆ. ಆದರೆ ಸುಪ್ರೀಂ ಕೋರ್ಟ್ ನ ಆದೇಶಕ್ಕೆ ಮನ್ನಣೆ ನೀಡಲಾಗುವುದು ಎಂದು ಸಾಂಸ್ಕೃತಿಕ ಮತ್ತು ಪ್ರವಾಸೋದ್ಯಮ ರಾಜ್ಯ ಸಚಿವ ಮಹೇಶ್ ಶರ್ಮಾ ಹೇಳಿದ್ದಾರೆ.

9. ಪಾಕಿಸ್ತಾನದಲ್ಲಿ ಉಗ್ರರ ಅಟ್ಟಹಾಸ: 26 ಸಾವು

ಪೇಶಾವರದ ಮರ್ದಾನ್ ನಲ್ಲಿ ಆತ್ಮಾಹುತಿ ಬಾಂಬ್ ಸ್ಪೋಟಗೊಂಡಿದ್ದು, 26ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಪೇಶಾವರದ ವಾಯುವ್ಯ ಪ್ರಾಂತ್ಯವಾದ ಮರ್ದಾನ್ ನಲ್ಲಿರುವ ರಾಷ್ಟ್ರೀಯ ಅಂಕಿಅಂಶಗಳು ಮತ್ತು ನೋಂದಣಿ ಪ್ರಾಧಿಕಾರ ಕಚೇರಿಯಲ್ಲಿ ಸ್ಫೋಟ ಸಂಭವಿಸಿದೆ. ಮೋಟಾರ್ ಬೈಕ್ ನಲ್ಲಿ ಬಂದ ಉಗ್ರರು ಕಚೇರಿ ಒಳಹೋಗಲು ಯತ್ನಿಸಿದ್ದಾರೆ. ಈ ವೇಳೆ ಭದ್ರತಾ ಸಿಬ್ಬಂದಿಗಳು ದ್ವಾರದ ಹತ್ತಿರ ತಡೆದಿದ್ದಾರೆ. ಈ ವೇಳೆ ದಾಳಿಕೋರರು ನಿಂತಿದ್ದ ಸ್ಥಳದಲ್ಲಿಯೇ ಆತ್ಮಾಹುತಿ ಬಾಂಬ್ ಸ್ಪೋಟಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

10. 102 ಅಡಿ ಎತ್ತರದ ವಿಷ್ಣುವರ್ಧನ್ ಪೋಸ್ಟರ್..ಇದು ದೇಶದಲ್ಲಿ ಅತೀ ಎತ್ತರದ ಪೋಸ್ಟರ್..!
ಸಾಹಸ ಸಿಂಹ ವಿಷ್ಣುವರ್ಧನ್ ನಮ್ಮನ್ನೆಲ್ಲ ಅಗಲಿ ಇವತ್ತಿಗೆ ಆರು ವರ್ಷಗಳಾಗಿವೆ. ಅವರ ಆರನೇ ಪುಣ್ಯ ತಿಥಿಯ ಸಂಬಂಧ ಅಭಿಮಾನ್ ಸ್ಟೂಡಿಯೋದಲ್ಲಿ ಅದ್ಧೂರಿ ಕಾರ್ಯಕ್ರಮ ನಡೆಯುತ್ತಿದೆ. ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಮಾಜಿ ಡಿಸಿಎಂ ಆರ್ ಅಶೋಕ್ ಪಾಲ್ಗೊಂಡಿದ್ದಾರೆ. ಇಲ್ಲಿ 102 ಅಡಿ ಎತ್ತರದ ವಿಷ್ಣು ಸರ್ ಫೋಸ್ಟ್ ಹಾಕಲಾಗಿದೆ..! ಇದು ಭಾರತದಲ್ಲೇ ಅತ್ಯಂತ ಎತ್ತರದ ಫೋಸ್ಟರ್ ಆಗಿದೆ..!

Dr. Vishnuvardhans 102 Feet Poster Video :

LEAVE A REPLY

Please enter your comment!
Please enter your name here