ಇಂದಿನ ಟಾಪ್ 10 ಸುದ್ದಿಗಳು..! 09.01.2016

0
56

ಜಮ್ಮು-ಕಾಶ್ಮೀರದಲ್ಲಿ ರಾಷ್ಟ್ರಪತಿ ಅಳವಡಿಕೆ ಸಾಧ್ಯತೆ

ಜಮ್ಮು ಮತ್ತು ಕಾಶ್ಮೀರದಲ್ಲಿ ಕೆಲ ದಿನಗಳ ಕಾಲ ಅತಂತ್ರ ಸ್ಥಿತಿ ನಿರ್ಮಾಣವಾಗಿದ್ದು, ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವವರೆಗೆ ಕಣಿವೆ ರಾಜ್ಯದಲ್ಲಿ ರಾಜ್ಯಪಾಲರ ಆಡಳಿತ ಜಾರಿಗೆ ಬರುವ ಸಾಧ್ಯತೆ ಇದೆ. ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ, ತಮ್ಮ ತಂದೆ ಮುಫ್ತಿ ಮೊಹಮ್ಮದ್ ಸಯೀದ್ ರ ಸಾವಿನ ಆಘಾತದಿಂದ ಮೆಹಬೂಬಾ ಮುಫ್ತಿ ಇನ್ನೂ ಹೊರ ಬಂದಿಲ್ಲ. ಹೀಗಾಗಿ ಅವರು ತಕ್ಷಣಕ್ಕೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ನಿರಾಕರಿಸುತ್ತಿದ್ದಾರೆ ಎನ್ನಲಾಗಿದೆ.

ಪಠಾಣ್ ಕೋಟ್ ದಾಳಿ: ಪಾಕ್ ಗೆ ಅಮೆರಿಕಾ ಚಾಟಿ

ಪಠಾಣ್ ಕೋಟ್ ವಾಯುನೆಲೆ ಮೇಲಿನ ದಾಳಿಕೋರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಮೆರಿಕ ಪಾಕಿಸ್ತಾನವನ್ನು ಒತ್ತಾಯಿಸಿದೆ. ಪಠಾಣ್ ಕೋಟ್ ವಾಯುನೆಲೆ ಮೇಲೆ ಪಾಕ್ ಮೂಲದ ಉಗ್ರಗಾಮಿಗಳು ಪೂರ್ವ ಯೋಜನೆ ನಡೆಸಿ ದಾಳಿ ಮಾಡಿದ್ದಾರೆ. ಉಗ್ರರ ಈ ದಾಳಿಯು ಮುಂಬೈ ಮೇಲೆ ಉಗ್ರರು ನಡೆಸಿದ ದಾಳಿಗೆ ಸಮವಾಗಿದೆ. ಹಾಗಾಗಿ ಉಗ್ರಗಾಮಿಗಳ ಮೇಲೆ ಈ ಸಲ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಅಮೆರಿಕ ಒತ್ತಾಯಿಸಿದೆ. ಈ ಮೂಲಕ ಉಗ್ರರು ಪಾಕ್ ಮೂಲದವರಾಗಿದ್ದು, ಅವರನ್ನು ಪ್ರೋತ್ಸಾಹಿಸಬಾರದು ಎಂಬ ನೇರ ಸಂದೇಶವನ್ನು ಅಮೆರಿಕ ಪಾಕಿಸ್ತಾನಕ್ಕೆ ನೀಡಿದಂತಾಗಿದೆ.

ಪಠಾಣ್ ಕೋಟ್ ವಾಯು ನೆಲೆಗೆ ಪ್ರಧಾನಿ ಭೇಟಿ

ಜನವರಿ 2 ರಂದು ಭಯೋತ್ಪಾದಕರು ಪಂಜಾಬ್ ನ ಪಠಾಣ್ ಕೋಟ್ ವಾಯುನೆಲೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಿದ್ದು, ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ವಾಯು ಸೇನಾ ನೆಲೆಗೆ ಭೇಟಿ ನೀಡಿದ್ದ ವೇಳೆ ನರೇಂದ್ರ ಮೋದಿಯವರು ಉಗ್ರರ ದಾಳಿ ಕುರಿತಾಗಿ ಅಧಿಕಾರಿಗಳಿಂದ ವಿಸ್ತೃತ ಮಾಹಿತಿ ಪಡೆದಿದ್ದು, ಬಳಿಕ ಗಡಿ ಭಾಗ ಸೇರಿದಂತೆ ಹಲವೆಡೆ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ.

ಜೈಲಿಗೆ ಹೋಗಲು ಸಿದ್ಧರಾಗಿ: ಕೇಜ್ರಿವಾಲ್ ಗೆ ಬಿಜೆಪಿ

ಅರುಣ್ ಜೇಟ್ಲಿ ವಿರುದ್ಧ ಇಲ್ಲ ಸಲ್ಲದ ಆರೋಪ ಹೊರಿಸಿರುವ ಅರವಿಂದ್ ಕೇಜ್ರಿವಾಲ್ ಅವರೇ ಜೈಲಿಗೆ ಹೋಗಲು ಸಿದ್ಧರಾಗಿ ಎಂದು ಬಿಜೆಪಿ ಹೇಳಿದೆ. ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ ಒಂದರ ಮೇಲೊಂದು ಅಸವಿಂಧಾನಿಕ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಆಡಳಿತ ನಿಯಂತ್ರಣದಲ್ಲಿ ಕೇಜ್ರಿವಾಲ್ ಸಂಪೂರ್ಣ ವಿಫಲರಾಗಿದ್ದಾರೆ. ಇನ್ನು ಕೇಂದ್ರ ಸಚಿವ ಮತ್ತು ಬಿಜೆಪಿ ಮುಖಂಡ ಅರುಣ್ ಜೇಟ್ಲಿ ವಿರುದ್ಧ ಭ್ರಷ್ಟಾಚಾರ ಪ್ರಕರಣದಲ್ಲಿ ಹೆಸರಿಸಿದ್ದ ಕೇಜ್ರಿವಾಲ್ ಅದನ್ನು ಸಾಬೀತು ಪಡಿಸುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಖಂಡಿತ ಕೇಜ್ರಿವಾಲ್ ಅವರು ಜೈಲಿಗೆ ಹೋಗಲಿದ್ದಾರೆ ಎಂದು ಬಿಜೆಪಿ ಕಿಡಿಕಾರಿದೆ.

ಅಮೀರ್ ಖಾನ್ ರನ್ನು ದೇಶದ್ರೋಹಿ ಎಂದಿಲ್ಲ: ತಿವಾರಿ

ಖ್ಯಾತ ಬಾಲಿವುಡ್ ನಟ ಅಮೀರ್ ಖಾನ್ ರನ್ನು ದೇಶದ್ರೋಹಿ ಎಂದು ಕರೆದಿಲ್ಲ ಎಂದು ಬಿಜೆಪಿ ಮುಖಂಡ ಹಾಗೂ ಸಂಸದ ಮನೋಜ್ ತಿವಾರಿ ಹೇಳಿದ್ದಾರೆ. ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಬಿಜೆಪಿ ಸಂಸದ ಮನೋಜ್ ತಿವಾರಿಯವರು, ಕೆಲ ರಾಷ್ಟ್ರೀಯ ದಿನಪತ್ರಿಕೆಗಳಲ್ಲಿ ಪ್ರಕಟವಾಗಿರುವಂತೆ ತಾವು ಅಮಿರ್ ಖಾನ್ ರನ್ನು ದೇಶದ್ರೋಹಿ ಎಂದಿಲ್ಲ. ನನ್ನ ಹೇಳಿಕೆಯನ್ನು ತಿರುಚಲಾಗಿದ್ದು, ನನ್ನ ಘನತೆಗೆ ಕಳಂಕ ಹಚ್ಚುವ ಪ್ರಯತ್ನ ಇದಾಗಿದೆ ಎಂದು ಕಿಡಿಕಾರಿದ್ದಾರೆ.

ರಾಮ ದೇಗುಲ ವಿಚಾರ ಚುನಾವಣಾ ಅಸ್ತ್ರವಲ್ಲ: ಸ್ವಾಮಿ

ವಿವಾದಿತ ಆಯೋಧ್ಯೆ ರಾಮ ದೇಗುಲ ವಿಚಾರವನ್ನು ಚುನಾವಣಾ ಅಸ್ತ್ರವಾಗಿ ನೋಡಬಾರದು ಎಂದು ಬಿಜೆಪಿ ನಾಯಕ ಸುಬ್ರಹ್ಮಣ್ಯನ್ ಸ್ವಾಮಿ ಹೇಳಿದ್ದಾರೆ. ದೆಹಲಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ರಾಮ ಮಂದಿರ ನಿಮರ್ಾಣ ವಿಚಾರಣ ಸಂಕಿರಣದಲ್ಲಿ ಪಾಲ್ಗೊಂಡು ಮಾತನಾಡಿರುವ ಅವರು, ಆಯೋಧ್ಯೆ ರಾಮ ದೇಗುಲ ವಿಚಾರವನ್ನು ಚುನಾವಣಾ ಅಸ್ತ್ರವೆಂಬ ದೃಷ್ಟಿಯಲ್ಲಿ ನೋಡಬಾರದು. ರಾಮ ಮಂದಿರ ಈ ವರ್ಷದಲ್ಲಿ ನಿರ್ಮಾಣವಾಗದಿದ್ದರೆ, ಮುಂದಿನ ದಿನಗಳಲ್ಲಿ ನಿರ್ಮಾಣ ಮಾಡಲಾಗುತ್ತದೆ. ಆಗಲೂ ಚುನಾವಣೆ ಬರುತ್ತದೆ. ಚುನಾವಣೆ ಉದ್ದೇಶದಿಂದಲೇ ದೇಗುಲ ನಿರ್ಮಾಣವಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತದೆ. ಚುನಾವಣಾ ಪ್ರಕ್ರಿಯೆಗಳು ಅದರ ಪಾಡಿಗೆ ಹೋಗುತ್ತಿರುತ್ತದೆ. ನಾನು ನಮ್ಮ ಕೆಲಸಗಳನ್ನು ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ.

7.5 ಲಕ್ಷ ಕ್ರೈಸ್ತ, ಮುಸ್ಲಿಂರ ಘರ್ ವಾಪಸಿ: ತೊಗಾಡಿಯ

ಘರ್ ವಾಪಸಿ ಕುರಿತಂತೆ ಹಲವು ವಿರೋಧದ ನಡುವೆಯು ಕಳೆದ ಹತ್ತು ವರ್ಷಗಳಲ್ಲಿ 5 ಲಕ್ಷ ಕ್ರೈಸ್ತರು ಹಾಗೂ 2.5 ಲಕ್ಷ ಮುಸ್ಲಿಂರನ್ನು ಹಿಂದೂ ಧರ್ಮಕ್ಕೆ ಮತಾಂತರಿಸಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ನಾಯಕ ಪ್ರವೀಣ್ ತೊಗಾಡಿಯಾ ಹೇಳಿದ್ದಾರೆ. ದೇಣಿಗೆ ಸಂಗ್ರಹ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಹಿಂದೂ ಧರ್ಮ ಉಳಿಸಲು ಇದನ್ನು ಬೃಹತ್ ಪ್ರಮಾಣದಲ್ಲಿ ಮುಂದುವರಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. 10 ವರ್ಷಗಳಲ್ಲಿ 5 ಲಕ್ಷ ಕ್ರೈಸ್ತರು ಮತ್ತು 2.5 ಲಕ್ಷ ಮುಸ್ಲಿಂರನ್ನು ಘರ್ ವಾಪಸಿ ಮಾಡಿದ್ದೇವೆ. ಪ್ರತಿ ವರ್ಷ 15,000 ಜನರಂತೆ ನಾವು ಘರ್ ವಾಪಸಿ ಮಾಡಿದ್ದೇವೆ. ಆದರೆ ಕಳೆದ ವರ್ಷ ಇದು 40,000ದ ಗಡಿ ದಾಟಿದೆ ಎಂದು ತೊಗಾಡಿಯ ಹೇಳಿದ್ದಾರೆ.

ಕಾರು ಪಲ್ಟಿ: ಬೆಂಗಳೂರಿನ 7 ಯುವಕರು ದುರ್ಮರಣ

ಪ್ರವಾಸಕ್ಕೆಂದು ತೆರಳಿದ್ದ ಯುವಕರ ಗುಂಪಿನ ಕಾರೊಂದು ಕೆರೆಗೆ ಪಲ್ಟಿ ಹೊಡೆದ ಪರಿಣಾಮ 7 ಯುವಕರು ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ನಡೆದಿದೆ. ಸಾವನ್ನಪ್ಪಿದ್ದ ಯುವಕರು ಬೆಂಗಳೂರಿನ ಹೊರವಲಯದ ಬಿಡದಿಯಲ್ಲಿರುವ ಟೊಯೊಟಾ ಕಿರ್ಲೋಸ್ಕರ್ ಕಂಪನಿಗೆ ಸೇರಿದ ಉದ್ಯೋಗಿಗಳಾಗಿದ್ದು, ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಕಾರಿನಲ್ಲಿ ಪ್ರವಾಸಕ್ಕೆಂದು ತೆರಳಿದ್ದರು. ನಿನ್ನೆ ತಡರಾತ್ರಿ ಯುವಕರಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಇದ್ದಕ್ಕಿದ್ದಂತೆ ಜನಿವಾರ ಗ್ರಾಮದ ಕೆರೆಗೆ ಪಲ್ಟಿ ಹೊಡೆದಿದೆ. ಬಳಿಕ ಕಾರಿನಲ್ಲಿದ್ದ 7 ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ದಾದ್ರಿ ಹತ್ಯೆ ಪ್ರಕರಣ: ಅಖ್ಲಾಕ್ ಪುತ್ರನಿಗೆ ನಾಲ್ಕು ಫ್ಲಾಟ್

ಗೋಮಾಂಸ ಸಂಗ್ರಹ ಆರೋಪದ ಮೇಲೆ ದಾದ್ರಿಯಲ್ಲಿ ಹತ್ಯೆಯಾಗಿದ್ದ ಅಖ್ಲಾಕ್ ಪುತ್ರನಿಗೆ ಉತ್ತರ ಪ್ರದೇಶ ಸರ್ಕಾರ ಗ್ರೇಟರ್ ನೋಯ್ಡಾದಲ್ಲಿ ನಾಲ್ಕು ಫ್ಲಾಟ್ ನೀಡಿದೆ. ಉತ್ತರ ಪ್ರದೇಶ ಸರ್ಕಾರ ಕಳೆದ 5 ತಿಂಗಳ ಹಿಂದೆ ನೀಡಿದ್ದ ಭರವಸೆಯಂತೆ ನಾಲ್ಕು ಫ್ಲಾಟ್ ಗಳನ್ನು ಮೃತ ಅಖ್ಲಾಕ್ ಪತ್ನಿ ಇಕ್ರಮಾನ್ ಮತ್ತು ಪುತ್ರರಾದ ಜಾನಾ ಮೊಹಮದ್, ಅಫ್ಜಲ್ ಅಹ್ಮದ್ ಮತ್ತು ಜಮೀಲ್ ಅಹ್ಮದ್ ರ ಹೆಸರಿಗೆ ಗ್ರೇಟರ್ ನೋಯ್ಡಾ ಪ್ರಾಧಿಕಾರದಲ್ಲಿ ನೋಂದಣಿ ಮಾಡಿಸಿದೆ.

ಸರ್ಕಾರದ ಜೊತೆ ರಾಜನ್ ವಿಶೇಷ ಸಂಬಂಧ ಹೊಂದಿದ್ದ

ಬಾಲಿ ಪೊಲೀಸರಿಂದ ಬಂಧಿತನಾಗಿ ಭಾರತಕ್ಕೆ ಗಡಿಪಾರಾಗಿ ತಿಹಾರ ಜೈಲಿನಲ್ಲಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹಚರ ಛೋಟಾ ರಾಜನ್ ಭಾರತ ಸಕರ್ಾರದ ಜೊತೆ ವಿಶೇಷ ಸಂಬಂಧ ಹೊಂದಿದ್ದ ಎಂದು ನಿವೃತ್ತ ದೆಹಲಿ ಪೊಲೀಸ್ ಕಮಿಷನರ್ ನೀರಜ್ ಕುಮಾರ್ ಹೇಳಿದ್ದಾರೆ. 1993 ರ ಮುಂಬೈ ಸ್ಫೋಟದ ನಂತರ ಛೋಟಾ ರಾಜನ್ ಮೂರು ಬಾರಿ ತಾವು ದೂರವಾಣಿಯಲ್ಲಿ ಸಂಭಾಷಣೆ ನಡೆಸಿರುವುದಾಗಿ ನೀರಜ್ ಕುಮಾರ್ ಹೇಳಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here