No menu items!
12.4 C
Munich
Wednesday, April 29, 2026

ವಿಶ್ವದ ಮೋಸ್ಟ್ ವಾಂಟೆಡ್ ಡ್ರಗ್ ದೊರೆ ಸಿಕ್ಕಿಬಿದ್ದ..! ಈತನೇ ನೋಡಿ ಆಧುನಿಕ ರಾಬಿನ್ ಹುಡ್..!

Must read

ಆತನ ಹೆಸರು ಜಾಕ್ವಿನ್ ಚಾಪೋ. ಆತನಿಗೆ ವಿಶ್ವದ ಮೋಸ್ಟ್ ವಾಂಟೆಡ್ ಮಾದಕ ವಸ್ತುಗಳ ಕಳ್ಳಸಾಗಾಣಿಕೆದಾರ ಎಂಬ ಹಣೆಪಟ್ಟಿ ಇದೆ. ಆತ ಒಂದು ರೀತಿಯಲ್ಲಿ ರೀಲ್ ಸ್ಟಾರ್ ಗಳ ತರಹ. ಎಂಥದ್ದೇ ಜೈಲಿನಲ್ಲಿದ್ದರೂ ಕೂಡಾ ತಪ್ಪಿಸಿಕೊಂಡುಬಿಡುತ್ತಾನೆ. ಆದ್ದರಿಂದ ಆತನನ್ನು ಬಂಧಿಸುವುದಕ್ಕಿಂತ, ಬಂಧನದಲ್ಲಿಡುವುದೇ ದೊಡ್ಡ ಕೆಲಸ. ಕಳೆದ ಬಾರಿ ಬಂಧನಕ್ಕೊಳಗಾದಾಗಲೂ ಕೂಡಾ ಆತ ತಪ್ಪಿಸಿಕೊಂಡಿದ್ದ. ಆದರೆ ಈಗ ಮತ್ತೇ ಆತ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡಿದ್ದಾನೆ.
ಯೆಸ್.. ಮೆಕ್ಸಿಕೊದ ಜಾಕ್ವಿನ್ ಎಲ್ ಚಾಪೊ ಗುಜ್ಮನ್ನನ್ನು ತೀವ್ರತರ ಸೇನಾ ಕಾರ್ಯಾಚರಣೆಯಲ್ಲಿ ಮೆಕ್ಸಿಕೊ ನೌಕಾ ಪಡೆಯು ಬಂಧಿಸುವಲ್ಲಿ ಯಶ್ವಸಿಯಾಗಿದೆ. ಗುಜ್ಮನ್ ಕಳೆದ ಆರು ತಿಂಗಳ ಹಿಂದೆ ದೊಡ್ಡಮಟ್ಟದ ಸುರಂಗದ ಮೂಲಕ ಜೈಲಿನಿಂದ ಪರಾರಿಯಾಗಿದ್ದ. ಅದರಿಂದ ಮುಜುಗರ ಅನುಭವಿಸಿದ್ದ ಮೆಕ್ಸಿಕೊದ ಹಾಲಿ ಸರ್ಕಾರವು ಈಗ ಆತನನ್ನು ಮತ್ತೇ ಬಂಧಿಸಿದೆ. ಜೈಲಿನಿಂದ ಪರಾರಿಯಾಗಿ ತಲೆಮರಿಸಿಕೊಂಡಿದ್ದ ಗುಜ್ಮನ್ ನನ್ನು ಮೆಕ್ಸಿಕೊದ ಸಿನಾಲೊ ರಾಜ್ಯದ ಲಾಸ್ ಮೊಚಿಸ್ ನಗರದ ಮನೆಯಲ್ಲಿ ಬಂಧಿಸಿಲಾಗಿದೆ. ಅದಕ್ಕೂ ಮುನ್ನ ಆತನ ಗ್ಯಾಂಗ್ ಜೊತೆಗೆ ಭಾರೀ ಗುಂಡಿನ ಕಾಳಗವೇ ನಡೆದಿದೆ ಎನ್ನಲಾಗಿದೆ.
`ಕಾರ್ಯಾಚರಣೆ ಸಫಲಗೊಂಡಿದೆ. ನಾವು ಅವನನ್ನು ಹಿಡಿದ್ದೇವೆ. ಜಾಕ್ವಿನ್ ಗುಜ್ಮನ್ ಲೊಯೆರಾನನ್ನು ಬಂಧಿಸಿಲಾಗಿದೆ ಎಂಬುದನ್ನು ಮೆಕ್ಸಿಕೊ ಪ್ರಜೆಗಳಿಗೆ ತಿಳಿಸಬಯಸುತ್ತೇನೆ’ ಎಂದು ಮೆಕ್ಸಿಕೊ ಅಧ್ಯಕ್ಷರಾದ ಎನ್ರಿಕ್ ಪೆನಾ ನಿಟೆಯೊ ಅವರು ಟ್ವೀಟ್ ಮಾಡಿದ್ದಾರೆ.
ವಿಶ್ವದ ಮೋಸ್ಟ್ ವಾಂಟೆಡ್ ಅಪರಾಧಿಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಗುಜ್ಮನ್, 2015ರ ಜುಲೈ 11ರಂದು ಜೈಲು ಕೋಣೆಯಿಂದ ಸುಮಾರು ಒಂದೂವರೆ ಕಿಲೋ ಮೀಟರ್ ಸುರಂಗ ಕೊರೆದು ಪರಾರಿಯಾಗಿದ್ದ. ಗುಜ್ಮನ್ ಪರಾರಿಯಿಂದ ಮೆಕ್ಸಿಕೊ ಸರ್ಕಾರ ತೀವ್ರ ಮುಜುಗರಕ್ಕೀಡಾಗಿತ್ತು. 58 ವರ್ಷದ ಗುಜ್ಮನ್ನನ್ನು ಆಗಿನಿಂದಲೂ ಮೆಕ್ಸಿಕೊ ಭದ್ರತಾ ಪಡೆಗಳು ಸಿನಾಲೊ ಹಾಗೂ ದುರಾಂಗೊ ರಾಜ್ಯಗಳಲ್ಲಿ ತೀವ್ರವಾಗಿ ಶೋಧ ನಡೆಸುತ್ತಿದ್ದವು. ಇದೀಗ ಸಿಕ್ಕಿಬಿದ್ದಿದಾನೆ.
ಆಧುನಿಕ ರಾಬಿನ್ ಹುಡ್ ಎಂದೇ ಕುಖ್ಯಾತಿ ಪಡೆದಿರುವ ಗುಜ್ಮನ್ನನ್ನು ಹಲವು ಬಾರಿ ಬಂಧಿಸಲಾಗಿತ್ತು. ಆದರೂ ಮತ್ತೆ ಮತ್ತೆ ಆತ ತಪ್ಪಿಸಿಕೊಳ್ಳುತ್ತಲೇ ಇದ್ದ. ಇತ್ತೀಚೆಗೆ 2014 ಫೆಬ್ರುವರಿ 22ರಂದು ಆತ ಬಂಧನಕ್ಕೊಳಗಾಗಿ 17 ತಿಂಗಳ ಕಾರಾಗೃಹ ವಾಸದ ಬಳಿಕ 2015ರ ಜುಲೈ 11ರಂದು ಪರಾರಿಯಾಗಿದ್ದ. ಈಗ ಸಿಕ್ಕಿಹಾಕಿಕೊಂಡಿದ್ದಾನೆ. ಮುಂದೆ ಆತನ ರಣತಂತ್ರಗಳು ಏನಿವೆಯೋ ಯಾರಿಗೆ ಗೊತ್ತು..?

  • ರಾಜಶೇಖರ ಜೆ

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

ಇಂತಹ ತಾಯಿ ಎಲ್ಲಾದರೂ ಸಿಗುತ್ತಾಳೆಯೇ..?

ಬೆಂಗಳೂರಿನಲ್ಲಿ ಅಲ್ ಖೈದಾ ಶಂಕಿತ ಉಗ್ರನ ಬಂಧನ..! ವಿವಾದಾತ್ಮಕ ಹೇಳಿಕೆ ನೀಡುವುದೇ ಈತನ ಕೆಲಸವಾಗಿತ್ತು..!

6 ಗುಂಡು ತಿಂದರೂ ನೆಲಕ್ಕೆ ಬೀಳದ ಭಾರತದ ಹೀರೋ..! ನಿಜ ಜೀವನದ ಸೂಪರ್ ಸ್ಟಾರ್ ಗೆ ಸೆಲ್ಯೂಟ್ ಹೊಡೆಯಿರಿ..!

ನೋಡ್ರಪ್ಪೋ ನೋಡ್ರೀ ಇದು ದುಡ್ಡಿನ ಮರ..! ಈ ಮರದಲ್ಲಿವೆ ಅಸಂಖ್ಯಾತ ಚಿಲ್ಲರೆ ಹಣ..!

ಕನ್ನಡ ಸಿನಿಮಾಗಳಿಗೇಕೆ ಥಿಯೇಟರ್ ಗಳಸಮಸ್ಯೆ..?! -ಕಿರಿಕ್ ಕೀರ್ತಿ

`ಹಾವು ಕಚ್ಚಿತಲ್ಲೋ ತಮ್ಮಾ ಹೋಗುತೈತೆ ಜೀವಾ..’ Kannada Folk Song

ಗನ್ ಕಲ್ಚರ್ ಎಫೆಕ್ಟ್, ದೊಡ್ಡಣ್ಣನ್ ಕಣ್ಣಲ್ಲಿ ಕಣ್ಣೀರು..!

ಪ್ರೀತಿ ಎಂಥವರನ್ನೂ ಬದಲಾಯಿಸುತ್ತೆ..! ಯಾರಿಂದಲೂ ಬದಲಾಗದ ಹುಡುಗರು ಹುಡುಗಿಯಿಂದ ಬದಲಾಗ್ತಾರೆ..!

ಒಂಟಿಕಾಲಲ್ಲೇ `ಮೌಂಟ್ ಎವರೆಸ್ಟ್’ ಏರಿದ ಸಾಹಸಿ..!

ಒಂದೇ ಇನ್ನಿಂಗ್ಸ್ ನಲ್ಲಿ 1009 ರನ್ ಬಾರಿಸದ ಪೋರ..! ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಆಟೋ ಚಾಲಕನ ಮಗ..!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article