No menu items!
11.1 C
Munich
Wednesday, April 29, 2026

ದಾನ ಮಾಡುವುದರಲ್ಲಿ ಅಜೀಂ ಪ್ರೇಮ್ ಜಿ ನಂ 1..! ಎರಡನೇ ಸ್ಥಾನದಲ್ಲಿದ್ದಾರೆ ಕರ್ನಾಟಕದ ಉದ್ಯಮಿ..!

Must read

ದಾನ ಮಾಡುವುದು ಉತ್ತಮ ಕಾರ್ಯ ಎನ್ನುತ್ತಿದ್ದರು ನಮ್ಮ ಹಿರಿಯರು. ಆದರೆ ಕೆಲವರು ಮಾತ್ರ ಅದೆಷ್ಟೇ ಹಣ ಇದ್ದರೂ ಕೂಡಾ ಬಿಡಿಗಾಸು ಬಿಚ್ಚದೇ ಇರುವ ಮಂದಿ ಅದೆಷ್ಟೋ ಜನ ಸಿಗುತ್ತಾರೆ. ಆದರೆ ಅಜೀಂ ಪ್ರೇಮ್ ಜಿಯವರು ಈ ಮಾತಿಗೆ ಅಪವಾದ. ಏಕೆಂದರೆ ದಾನದ ಪ್ರತಿರೂಪ. ಹೌದು ಬಡ ಜನರಿಗಾಗಿ, ದೇಶದ ಅಭಿವೃದ್ಧಿಗಾಗಿ ಅಜೀಂ ಪ್ರೇಮ್ ಜೀ ಮಾಡುತ್ತಿರುವ ಕೆಲಸ ಶ್ಲಾಘನೀಯವೇ. ಕಳೆದ ಬಾರಿಯಷ್ಟೇ ತಮಗೆ ಬಂದ ಲಾಭದ ಬಹುಕೋಟಿ ಹಣವನ್ನು ದಾನಮಾಡಿದ್ದ ಅಜೀಂ ಪ್ರೇಮ್ ಜೀ ಇದೀಗ ಮತ್ತೆ ದಾನದಲ್ಲಿ ದೇಶದಲ್ಲೇ ನಂಬರ್ 1 ಸ್ಥಾನ ಪಡೆದಿದ್ದಾರೆ
ಸಮಾಜಸೇವಾ ಕಾರ್ಯಗಳಿಗೆ ಅತಿ ಹೆಚ್ಚು ಹಣ ನೀಡುವ ದೇಶದ ಉದ್ಯಮಿಗಳಲ್ಲಿ ವಿಫ್ರೋ ಕಂಪನಿಯ ಸಂಸ್ಥಾಪಕ ಅಜೀಂ ಪ್ರೇಮ್ ಜಿ ಅಗ್ರ ಸ್ಥಾನದಲ್ಲಿದ್ದಾರೆ. ಹರುಣ್ ಇಂಡಿಯಾ ಸಂಸ್ಥೆ 2015ರ ಪಟ್ಟಿ ಬಿಡುಗಡೆ ಮಾಡಿದ್ದು ಪ್ರೇಮ್ ಜಿ 27,514 ಕೋಟಿ ರೂಪಾಯಿ ದಾನ ನೀಡಿದ್ದಾರೆ. ಅಲ್ಲದೇ ದೇಶದ ಎಂಟು ರಾಜ್ಯಗಳಲ್ಲಿ 3.50 ಲಕ್ಷ ಶಾಲೆಗಳನ್ನು ನಡೆಸುತ್ತಿದ್ದಾರೆ. ವಿಶೇಷವೆಂದರೆ ಅಜೀಂ ಪ್ರೇಮ್ ಜಿ ಕಳೆದ ಮೂರು ವರ್ಷಗಳಿಂದಲೂ ಮೊದಲ ಸ್ಥಾನದಲ್ಲೇ ಮುಂದುವರೆದಿದ್ದಾರೆ.
ಕನ್ನಡಿಗ ಹಾಗೂ ಇನ್ಫೋಸಿಸ್ ಸಂಸ್ಥಾಪಕರಲ್ಲಿ ಒಬ್ಬರಾದ ನಂದನ್ ನಿಲೇಕಣಿ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಕಳೆದ ವರ್ಷ ನಿಲೇಕಣಿ 2404 ಕೋಟಿ ರೂಪಾಯಿ ದಾನ ಮಾಡಿದ್ದಾರೆ. ಇನ್ಫೋಸಿಸ್ ನ ಮತ್ತೊಬ್ಬ ಸಂಸ್ಥಾಪಕ ಎನ್.ಆರ್ ನಾರಾಯಣ ಮೂರ್ತಿ 1,322 ಕೋಟಿ ದಾನ ಮಾಡಿ ಮೂರನೇ ಸ್ಥಾನದಲ್ಲಿದ್ದಾರೆ.
ಇನ್ಫೋಸಿಸ್ ನಿಂದ 2011 ರಲ್ಲಿ ನಿವೃತ್ತರಾದ ಕೆ.ದಿನೇಶ್ ರು. 1,238 ಕೋಟಿ ಕೊಡುಗೆ ನೀಡುವ ಮೂಲಕ ನಾಲ್ಕನೆ ಸ್ಥಾನದಲ್ಲಿದ್ದರೆ, ಎಚ್ ಸಿಎಲ್ ಕಂಪನಿಯ ಶಿವನಾದರ್ 525 ಕೋಟಿ ಮತ್ತು ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿರುವ ಮುಖೇಶ್ ಅಂಬಾನಿ 345 ಕೋಟಿ ರೂಪಾಯಿ ದಾನ ನೀಡುವ ಮೂಲಕ ಕ್ರಮವಾಗಿ ಐದು ಮತ್ತು ಆರನೇ ಸ್ಥಾನದಲ್ಲಿದ್ದಾರೆ.

 

  • ರಾಜಶೇಖರ ಜೆ

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

ಇಂತಹ ತಾಯಿ ಎಲ್ಲಾದರೂ ಸಿಗುತ್ತಾಳೆಯೇ..?

ಬೆಂಗಳೂರಿನಲ್ಲಿ ಅಲ್ ಖೈದಾ ಶಂಕಿತ ಉಗ್ರನ ಬಂಧನ..! ವಿವಾದಾತ್ಮಕ ಹೇಳಿಕೆ ನೀಡುವುದೇ ಈತನ ಕೆಲಸವಾಗಿತ್ತು..!

6 ಗುಂಡು ತಿಂದರೂ ನೆಲಕ್ಕೆ ಬೀಳದ ಭಾರತದ ಹೀರೋ..! ನಿಜ ಜೀವನದ ಸೂಪರ್ ಸ್ಟಾರ್ ಗೆ ಸೆಲ್ಯೂಟ್ ಹೊಡೆಯಿರಿ..!

ನೋಡ್ರಪ್ಪೋ ನೋಡ್ರೀ ಇದು ದುಡ್ಡಿನ ಮರ..! ಈ ಮರದಲ್ಲಿವೆ ಅಸಂಖ್ಯಾತ ಚಿಲ್ಲರೆ ಹಣ..!

ಕನ್ನಡ ಸಿನಿಮಾಗಳಿಗೇಕೆ ಥಿಯೇಟರ್ ಗಳಸಮಸ್ಯೆ..?! -ಕಿರಿಕ್ ಕೀರ್ತಿ

`ಹಾವು ಕಚ್ಚಿತಲ್ಲೋ ತಮ್ಮಾ ಹೋಗುತೈತೆ ಜೀವಾ..’ Kannada Folk Song

ಗನ್ ಕಲ್ಚರ್ ಎಫೆಕ್ಟ್, ದೊಡ್ಡಣ್ಣನ್ ಕಣ್ಣಲ್ಲಿ ಕಣ್ಣೀರು..!

ಪ್ರೀತಿ ಎಂಥವರನ್ನೂ ಬದಲಾಯಿಸುತ್ತೆ..! ಯಾರಿಂದಲೂ ಬದಲಾಗದ ಹುಡುಗರು ಹುಡುಗಿಯಿಂದ ಬದಲಾಗ್ತಾರೆ..!

ಒಂಟಿಕಾಲಲ್ಲೇ `ಮೌಂಟ್ ಎವರೆಸ್ಟ್’ ಏರಿದ ಸಾಹಸಿ..!

ಒಂದೇ ಇನ್ನಿಂಗ್ಸ್ ನಲ್ಲಿ 1009 ರನ್ ಬಾರಿಸದ ಪೋರ..! ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಆಟೋ ಚಾಲಕನ ಮಗ..!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article