No menu items!
10.2 C
Munich
Wednesday, October 7, 2026

ನಿರ್ದೇಶಕ ಕರ್ವ ನವನೀತ್ʼಗೆ ಬೆಸ್ಟ್ ಡೈರೆಕ್ಟರ್ ಕ್ರಿಟಿಕ್ಸ್ ಅವಾರ್ಡ್; ಸ್ಯಾಂಡಲ್ ವುಡ್ʼನಲ್ಲಿ ಹೆಚ್ಚಿದ ಸಂಭ್ರಮ!

Must read

ನಿರ್ದೇಶಕ ಕರ್ವ ನವನೀತ್ʼಗೆ ಬೆಸ್ಟ್ ಡೈರೆಕ್ಟರ್ ಕ್ರಿಟಿಕ್ಸ್ ಅವಾರ್ಡ್; ಸ್ಯಾಂಡಲ್ ವುಡ್ʼನಲ್ಲಿ ಹೆಚ್ಚಿದ ಸಂಭ್ರಮ!

ಸ್ಯಾಂಡಲ್ವುಡ್ಗೆ ಮತ್ತೊಂದು ಹೆಮ್ಮೆಯ ಕ್ಷಣ ಸಿಕ್ಕಿದೆ. ಬೆಂಗಳೂರಿನಲ್ಲಿ ನಡೆದ SIIMA 2026 ಪ್ರಶಸ್ತಿ ಸಮಾರಂಭದಲ್ಲಿ ‘ಛೂ ಮಂತರ್’ ಸಿನಿಮಾದ ನಿರ್ದೇಶಕ ಕರ್ವ ನವನೀತ್ ಅವರಿಗೆ ಬೆಸ್ಟ್ ಡೈರೆಕ್ಟರ್ – ಕ್ರಿಟಿಕ್ಸ್ ಅವಾರ್ಡ್ ಒಲಿದಿದೆ.


ವಿಭಿನ್ನ ಕಥಾಹಂದರ, ಮನರಂಜನೆಯ ಅಂಶಗಳು ಹಾಗೂ ತಮ್ಮದೇ ಶೈಲಿಯ ನಿರೂಪಣೆಯ ಮೂಲಕ ಗಮನ ಸೆಳೆದಿದ್ದ ‘ಛೂ ಮಂತರ್’ ಸಿನಿಮಾದ ನಿರ್ದೇಶನಕ್ಕೆ ಇದೀಗ ಪ್ರತಿಷ್ಠಿತ SIIMA ವೇದಿಕೆಯಲ್ಲಿ ಮನ್ನಣೆ ದೊರೆತಿದೆ.


ಚಿತ್ರದ ನಿರ್ದೇಶನಕ್ಕಾಗಿ ಕರ್ವ ನವನೀತ್ ಅವರಿಗೆ ಈ ಪ್ರಶಸ್ತಿ ಸಿಕ್ಕಿದ್ದು, ‘ಛೂ ಮಂತರ್’ ತಂಡದ ಸಂಭ್ರಮ ಮತ್ತಷ್ಟು ಹೆಚ್ಚಾಗಿದೆ. ಸಿನಿಮಾ ಬಿಡುಗಡೆಯಾದಾಗ ಪ್ರೇಕ್ಷಕರ ಗಮನ ಸೆಳೆದಿದ್ದ ಚಿತ್ರಕ್ಕೆ ಇದೀಗ ಪ್ರಶಸ್ತಿಯ ಗರಿ ಕೂಡ ಸೇರ್ಪಡೆಯಾಗಿದೆ.
ಒಟ್ಟಿನಲ್ಲಿ, ‘ಛೂ ಮಂತರ್’ ಮೂಲಕ ತಮ್ಮ ನಿರ್ದೇಶನದ ಸಾಮರ್ಥ್ಯ ತೋರಿಸಿದ್ದ ನವನೀತ್, SIIMA 2026ರಲ್ಲಿ Best Director – Critics ಪ್ರಶಸ್ತಿ ಗೆದ್ದು ಸ್ಯಾಂಡಲ್ವುಡ್ನಲ್ಲಿ ಮತ್ತೊಮ್ಮೆ ಸದ್ದು ಮಾಡಿದ್ದಾರೆ.

- Advertisement -spot_img

More articles

- Advertisement -spot_img

Latest article