No menu items!
7.9 C
Munich
Wednesday, April 15, 2026

ಓಣಂ ಹಬ್ಬಕ್ಕೆ ರಾಜ್ಯ ಸಾರಿಗೆ ಸಂಸ್ಥೆ ಕೊಡ್ತು ಗುಡ್ ನ್ಯೂಸ್

Must read

ಓಣಂ ಹಬ್ಬಕ್ಕೆ ರಾಜ್ಯ ಸಾರಿಗೆ ಸಂಸ್ಥೆ ಕೆಎಸ್​ಆರ್​ಟಿಸಿಯಿಂದ ಕೇರಳಕ್ಕೆ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿದೆ. ಸೆಪ್ಟೆಂಬರ್ 6 ಹಾಗೂ ಸೆಪ್ಟೆಂಬರ್ 7ರಂದು ಬೆಂಗಳೂರಿನಿಂದ ಹೆಚ್ಚುವರಿ ಬಸ್​ ವ್ಯವಸ್ಥೆ ಮಾಡಲಾಗಿದೆ. ಸೆಪ್ಟೆಂಬರ್ 8ರಂದು ಓಣಂ ಹಬ್ಬವಿದೆ. ಮೈಸೂರು ರಸ್ತೆ ಬಸ್ ನಿಲ್ದಾಣ ಮತ್ತು ಶಾಂತಿ ನಗರದಿಂದ ಈ ವಿಶೇಷ ಬಸ್‌ಗಳು ಸಂಚರಿಸಲಿವೆ. ಕೇರಳದ ಕಣ್ಣೂರು, ಕೋಯಿಕೋಡ್, ಎರ್ನಾಕುಲಂ, ಪಾಲಕ್ಕಾಡ್, ಶಿರೂರ್​, ಕೊಟ್ಟಾಯಂ ಮತ್ತು ತಿರುವಂತಪುರಂಗೆ ಈ ವಿಶೇಷ ಬಸ್​​ಗಳು ತೆರಳಲಿವೆ. ಪ್ರಯಾಣಿಕರ ಅನುಕೂಲಕ್ಕಾಗಿ ಮುಂಗಡವಾಗಿ ಬುಕ್ಕಿಂಗ್ ಸೌಲಭ್ಯವನ್ನು ಕಲ್ಪಿಸಲಾಗಿದ್ದು, ವೆಬ್​​ಸೈಟ್​ನಲ್ಲಿ ಬುಕ್ಕಿಂಗ್​ಗೆ ಅವಕಾಶವಿದೆ. 4 ಕ್ಕಿಂತ ಹೆಚ್ಚು ಟಿಕೆಟ್ ಬುಕ್ಕಿಂಗ್ ಮಾಡಿದರೆ ಶೇ. 5ರಷ್ಟು ರಿಯಾಯಿತಿ ಮತ್ತು ಎರಡೂ ಕಡೆ ಸಂಚರಿಸುವ ಟಿಕೆಟ್​ ಕಾಯ್ದಿರಿಸಿದರೆ ಶೇ. 10ರಷ್ಟು ರಿಯಾಯಿತಿ ನಿಗದಿಪಡಿಸಲಾಗಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article