ಎರಡು ಮುಖವುಳ್ಳ ಮಾನವನನ್ನು ಕಂಡಿದ್ದೀರಾ..?

1
861

ಹಾವುಗಳಿಗೆ ಎರಡು ತಲೆ ಇರುವುದನ್ನು ಕಂಡಿದ್ದೇವೆ. ಕರುಗಳಿಗೂ ಎರಡು ತಲೆ ಇರುವುದನ್ನು ಕಂಡಿದ್ದೇವೆ. ಕೆಲವೊಮ್ಮೆ ಸಯಾಮಿ ಮಾನವರಿಗೂ ಎರಡು ದೇಹ, ಎರಡು ತಲೆ, 2 ಮುಖ ಇರುವುದನ್ನು ಕಂಡಿದ್ದೇವೆ. ಆದರೆ ಸಾಮಾನ್ಯ ಮಾನವನಿಗೆ ಎರಡು ಮುಖ ಇರುವುದು, ಇದ್ದಿದ್ದನ್ನು ಕಂಡಿದ್ದೀರಾ..? ಬಹುಶಃ ಇಲ್ಲ ಅನ್ನಿಸುತ್ತದೆ. ಆದರೆ ಅಮೆರಿಕಾದಲ್ಲೋರ್ವ ಮನುಷ್ಯನಿದ್ದ. ಆತನಿಗೆ ಎರಡು ಮುಖಗಳಿದ್ದವು..!

ಇಂಗ್ಲೇಂಡಿನ ಎಡ್ವರ್ಡ್ ಮಾರ್ಡೇಕ್ ಎಂಬಾತನಿಗೆ ಎರಡು ಮುಖಗಳಿದ್ದವು. ನಾಲ್ಕು ಕಣ್ಣು, ಎರಡು ಮೂಗು, ಎರಡು ಬಾಯಿಗಳಿದ್ದವು. ಆದರೆ ಆತ ಹೊರಗೆ ಹೆಚ್ಚಾಗಿ ತಿರುಗಾಡುವಂತಿರಲಿಲ್ಲ. ಏಕೆಂದರೆ ಮಾರ್ಡೇಕ್ ನನ್ನು ಜನರು ಬೆರಗುಗಣ್ಣಿನಿಂದ ನೋಡುತ್ತಿದ್ದರು. ಕೆಲವೊಮ್ಮೆ ಮುಖದ ಎರಡು ಭಾಗದ ಅಂಗಾಂಗಳು ಸರಿಯಾಗಿ ಕೆಲಸ ಮಾಡುತ್ತವೆಯೇನು ಎಂದು ಪರೀಕ್ಷಿಸುತ್ತಿದ್ದರು. ಇದರಿಂದ ಮಾರ್ಡೇಕ್ ಬೇಸರಗೊಂಡಿದ್ದನು.
ರಾತ್ರಿ ವೇಳೆ ಮಲಗಿದಾಗ ಈತನ ಒಂದು ತಲೆ ಎದ್ದಿರುತ್ತಿತ್ತು. ಇನ್ನೊಂದು ತಲೆ ಮಲಗಿರುತ್ತಿತ್ತು. ಇನ್ನೂ ಕೆಲ ವೇಳೆ ಒಂದು ಮೂಗು ಸೀನಿದರೆ ಇನ್ನೊಂದು ಮುಖ ನಗುವುದನ್ನು ಮಾಡುತ್ತಿತ್ತು. ಇದನ್ನು ಕಂಡ ಜನರು ಮಾರ್ಡೇಕ್ ಓರ್ವ ದೆವ್ವ ಅನ್ನುತ್ತಿದ್ದರು.
ಒಂದು ಬಾರಿ ಮಾರ್ಡೇಕ್ ಒಂದು ಮುಖವನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆಸುವ ನಿರ್ಧಾರಕ್ಕೆ ಬಂದಿದ್ದ. ಆದರೆ ಯಾವುದೇ ವೈದ್ಯರೂ ಇದಕ್ಕೆ ಸಿದ್ಧರಾಗಲಿಲ್ಲ. ಇದರಿಂದ ಮನನೊಂದ ಮಾರ್ಡೇಕ್ ಕೇವಲ 23ನೇ ವಯಸ್ಸಿನಲ್ಲೇ ಆತ್ಮಹತ್ಯೆ ಮಾಡಿಕೊಂಡ.

 

1 COMMENT

LEAVE A REPLY

Please enter your comment!
Please enter your name here