ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿಗಳಾದರೆ ಸಂತೋಷ ಎಂದು ಸಚಿವ ಎಂ.ಟಿ.ಬಿ.ನಾಗರಾಜ್ ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಸಿದ್ದರಾಮಯ್ಯೋತ್ಸವದ ಬಗ್ಗೆ ಮಾತನಾಡಿದ ಸಚಿವರು, ಸಿದ್ದರಾಮಯ್ಯೋತ್ಸವದಿಂದ ನಮಗೇನೂ ಆತಂಕ ಇಲ್ಲ. ಅವರು ಮಾಡುವುದು ಅವರ ಉತ್ಸವ. ನಾವು ಮಾಡೋದು ಜನರ ಉತ್ಸವ ಎಂದರು. ಇನ್ನೂ ಇದೇ ವೇಳೆ ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಆಗ್ತಾರಂತೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ನಾಗರಾಜ್, ‘ಆಗಲಿ, ಸಂತೋಷ. ಸಿದ್ದರಾಮಯ್ಯ ಸಿಎಂ ಆದರೆ ಸಂತೋಷವೇ.
ಯಾರ ಹಣೆಬರಹದಲ್ಲಿ ಏನ್ ಬರೆದಿದೆ ಅನ್ನೋದು ಯಾರಿಗೆ ಗೊತ್ತು. ಆಗೋದನ್ನ ಯಾರಿಗೆ ತಡೆಯೋಕೆ ಆಗುತ್ತೆ? ಅದನ್ನ ತೀರ್ಮಾನ ಮಾಡಬೇಕಾಗಿರೋದು ರಾಜ್ಯದ ಜನ. ಅದು ನಾವು-ನೀವು ತೀರ್ಮಾನ ಮಾಡೋಕೆ ಆಗಲ್ಲ’ ಎಂದು ಹೇಳಿದರು.