No menu items!
11.1 C
Munich
Wednesday, April 29, 2026

ಸಹಪಾಠಿಗಳಿಂದಲೇ ಬಾಲಕನ ಕೊಲೆ…!

Must read

ತನ್ನ ತರಗತಿಯ ಹುಡುಗಿಯೊಬ್ಬಳನ್ನು ಗುರಾಯಿಸಿದ ಎಂಬ ಕಾರಣಕ್ಕೆ ಸಹಪಾಠಿಗಳೇ ಬಾಲಕನನ್ನು ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯಲ್ಲಿ ನಡೆದಿದೆ. ಆರೋಪಿಗಳು ಮತ್ತು ಮೃತ ಬಾಲಕ 10ನೇ ತರಗತಿ ವಿದ್ಯಾರ್ಥಿಗಳು.


ಬಾಲಕ ತನ್ನ ತರಗತಿಯ ಹುಡುಗಿಯನ್ನು ಗುರಾಯಿಸಿದನೆಂದು‌ ಇಬ್ಬರು‌ ಸಹಪಾಠಿಗಳು ಆತನನ್ನು ಕುಡುಗೋಲಿನಿಂದ ಹೊಡೆದು‌ ಕೊಂದಿದ್ದಾರೆ. ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಓರ್ವನಿಗೆ‌ 20 ವರ್ಷ, ಇನ್ನೋರ್ವ ಅಪ್ರಾಪ್ತ ಎನ್ನಲಾಗಿದೆ.
ಘಟನೆ ಬಳಿಕ ಇಬ್ಬರು ಬಾಲಕರು ನಾಪತ್ತೆಯಾಗಿದ್ದರು. ಪ್ರಾಕ್ಟಿಕಲ್ ಪರೀಕ್ಷೆಗೂ ಹಾಜರಾಗಿರಲಿಲ್ಲ . ಆದ್ದರಿಂದ ಇವರೇ ಕೊಲೆಗಾರರು ಎಂದು ಶಂಕಿಸಲಾಗಿತ್ತು ಎಂದು ನಾಟೆಪುಟೆ ‌ಪೊಲೀಸರು‌ ತಿಳಿಸಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article