ಚಡ್ಡಿ ಹೊಲೆದು ಗಿನ್ನಿಸ್ ದಾಖಲೆಗೆ ಗುರಿಯಿಟ್ಟ ಸಹೋದರರು..! ಕೇವಲ ಎಂಟೇ ತಾಸಿನಲ್ಲಿ ನಿರ್ಮಾಣವಾಯಿತು ಬೃಹತ್ ಚಡ್ಡಿ..!

0
63

ದಾಖಲೆ ನಿರ್ಮಿಸುವುದು ಗಿನ್ನಿಸ್ ದಾಖಲೆಯ ಪುಟ ಸೇರುವುದು ಲಕ್ಷಾಂತರ ಜನರ ಆಸೆ. ಅದರಲ್ಲಿ ಕೆಲವರ ಕನಸ್ಸು ಕನಸ್ಸಾಗೇ ಉಳಿಯುತ್ತದೆ. ಆದರೆ ಇನ್ನೂ ಕೆಲವರು ಹಳೆಯ ದಾಖಲೆಗಳನ್ನು ಹಿಂದಿಕ್ಕಿ ಹೊಸ ದಾಖಲೆ ಸೃಷ್ಟಿಸುತ್ತಾರೆ. ಇಲ್ಲಿರುವ ಇಬ್ಬರು ಸಹೋದರರು ಮಾತ್ರ ಚಡ್ಡಿ ಹೊಲೆದು ಗಿನ್ನಿಸ್ ದಾಖಲೆ ಪುಟ ಸೇರುವ ಹಂತಕ್ಕೆ ತಲುಪಿದ್ದಾರೆ..!
ಹೇಗಾದರೂ ಮಾಡಿ ಹೆಸರು ಮಾಡಬೇಕು. ಗೂಗಲ್ ಸರ್ಚ್ ನಲ್ಲಿ ಜನ ತಮ್ಮನ್ನು ಹುಡಕಾಡಬೇಕು ಎಂದು ಪಣತೊಟ್ಟಿದ್ದ ಫೈಜಾಲ್ ಖಾನ್, ಅನಿಸ್ ಎಂಬ ಸಹೋದರರು ವಿಶ್ವದ ಅತಿ ದೊಡ್ಡ ಚೆಡ್ಡಿ ಹೊಲೆದಿದ್ದಾರೆ. 18 ಅಡಿ ಉದ್ದ 2 ಕೆಜಿ ತೂಕದ ಚೆಡ್ಡಿ ತಯಾರಿಸಿದ್ದಾರೆ. ಈ ಚೆಡ್ಡಿ ಹೊಲಿದು ನಂತರ ಅದರ ವಿಡಿಯೋ ಮಾಡಿ ಗಿನ್ನಿಸ್ ಬುಕ್ ಅಧಿಕಾರಿಗಳಿಗೆ ಕಳುಹಿಸಿಕೊಟ್ಟಿದ್ದಾರೆ.
ಇಷ್ಟು ದೊಡ್ಡ ಚೆಡ್ಡಿ ಹೊಲಿಯಲು ಕಾರಣವೇನೆಂದರೆ, ಫೈಜಾಲ್ ಖಾನ್, ಅನಿಸ್ ಗೆ ಏನಾದರೂ ವಿಭಿನ್ನ ಸಾಧನೆ ಮಾಡಬೇಕು ಎಂಬ ಆಸೆ ಇತ್ತು. `ಗೂಗಲ್ ಸರ್ಚ್ ಎಂಜಿನ್ನಲ್ಲಿ ಜನ ನಮ್ಮನ್ನು ಹುಡುಕುವಂತಾಗಬೇಕು ಎನ್ನೋದು ಇವರ ಕನಸಾಗಿತ್ತು. ಈ ಚೆಡ್ಡಿ ಮೂಲಕ ಅದು ಸಾಧ್ಯವಾಗಬಹುದು ಎನಿಸಿತು. ಆದ್ದರಿಂದ ಚೆಡ್ಡಿ ಹೊಲಿದೆವು’ ಎನ್ನುತ್ತಾನೆ ಫೈಜಾಲ್ ಖಾನ್. `ಫೇಸ್ ಬುಕ್ ನಲ್ಲಿ ಒಂದು ಪೋಸ್ಟ್ ನೋಡಿದ್ದೆ. ಅದರಲ್ಲಿ ಸುಮಾರು 2,270 ಜನ ಧರಿಸಬಹುದಾದ ಚೆಡ್ಡಿ ಹೊಲೆದಿದ್ದರ ಬಗ್ಗೆ ಸುದ್ದಿ ಇತ್ತು. ಅದರಿಂದಲೇ ಪ್ರೇರೇಪಿತರಾಗಿ ಈ ನಾವು ಇಷ್ಟು ದೊಡ್ಡದಾದ ಚೆಡ್ಡಿ ರೂಪಿಸಿದೆವು’ ಅಂತಾ ಫೈಜಾಲ್ಖಾನ್ ಸಹೋದರ ಅನಿಸ್ ಹೇಳುತ್ತಾನೆ.
ಈ ಚೆಡ್ಡಿಯ ವಿಡಿಯೋವನ್ನು ಗಿನ್ನಿಸ್ ಬುಕ್ ಅಧಿಕಾರಿಗಳಿಗೆ ಕಳುಹಿಸಿದ್ದೇವೆ. ಅವರು ಇಂಗ್ಲಿಷ್, ರಷ್ಯನ್, ಫ್ರೆಂಚ್ ಭಾಷೆಗಳಲ್ಲಿ ಯಾವುದಾದ್ರೂ ಒಂದು ಭಾಷೆಯಲ್ಲಿ ನಿರೂಪಣೆ ಇರೋ ವಿಡಿಯೋ ಕಳುಹಿಸುವಂತೆ ಹೇಳಿದ್ದಾರೆ. ನಾವು ಈಗ ಅದೇ ಕೆಲಸದಲ್ಲಿ ಫೈಜಾಲ್ ಖಾನ್, ಅನಿಸ್ ಖಾನ್ ಸಹೋದರರು ನಿರತರಾಗಿದ್ದಾರೆ.
ಅಂದಹಾಗೆ 18 ಅಡಿ ಉದ್ದ, 2ಕೆಜಿ ತೂಕದ ಈ ಚೆಡ್ಡಿ ಹೊಲಿಯಲು 5 ಸಾವಿರ ರೂ ಖರ್ಚಾಗಿದೆಯಂತೆ. ಚೆಡ್ಡಿ ಹೊಲಿಯಲು 8 ತಾಸು ಬೇಕಾಗಿದೆ..!

  • ರಾಜಶೇಖರ ಜೆ

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : [email protected]

POPULAR  STORIES :

1 ಗಂಡು + 4 ಹೆಣ್ಣು = ಒಟ್ಟು ಐದು ಮಕ್ಕಳಿಗೆ ಒಮ್ಮೆಲೇ ಜನ್ಮ ನೀಡಿದ ಮಹಾತಾಯಿ..!

ಅಣ್ಣಂಗೇ ಲವ್ ಆಗಿದೆ ಅಲ್ಲಲ್ಲ, ಹೆಲ್ಮೆಟ್ ಗೆ ಡಿಮ್ಯಾಂಡ್ ಬಂದಿದೆ…! ಇದು ಹೊಸಪೇಟೆ ಹುಡುಗರ ಹೊಸ ಹಾಡು..!

ವಿದೇಶಿಯರ ಬಾಯಲ್ಲೂ ಕನ್ನಡ ಕನ್ನಡ ಕನ್ನಡ..! ವಿದೇಶಿ ಮಹಿಳೆಯೊಬ್ಬರು ಹಚ್ಚೇವು ಕನ್ನಡದ ದೀಪ.. ಅಂತ ಹಾಡ್ತಾ ಇದ್ದಾರೆ..!

ಕಟ್ಟಿಗೆಯಾಗಿ ಪರಿವರ್ತನೆ ಹೊಂದುತ್ತಿದ್ದಾನೆ ಈ ಮಾನವ..! ವೈದ್ಯಕೀಯ ಲೋಕಕ್ಕೇ ಸವಾಲಾದ ಬಾಂಗ್ಲಾ ನಾಗರಿಕ..!

LEAVE A REPLY

Please enter your comment!
Please enter your name here