ಪ್ರೇಮ್ ಎರಡು ಕೋಟಿ‌ ಕೊಡ್ತೀನಿ ಅಂದ್ರು ಅವರ ಸಿನಿಮಾಗೆ ದುಡ್ಡು ಹಾಕಲ್ಲ..! ಹೀಗೆಂದು ಹೇಳಿದ್ಯಾಕೆ ಗೊತ್ತಾ ನಿರ್ಮಾಪಕ

0
483

ಪ್ರೇಮ್ ನನಗೆ ಎರಡು ಕೋಟಿ‌ ಕೊಡ್ತೀನಿ ಅಂದ್ರು ಅವರ ಸಿನಿಮಾಗೆ ನಾನು ಮಾತ್ರ ದುಡ್ಡು ಹಾಕಲ್ಲ..!! ಹೀಗೆ ಹೇಳಿದ ಖ್ಯಾತ ನಿರ್ಮಾಪಕ..??

ಪ್ರೇಮ್ ನಿರ್ದೇಶನದ ದಿ ವಿಲನ್ ಸಿನಿಮಾ‌ ತೆರೆಗೆ ಬಂದಾಯ್ತು, ಪಾಸಿಟಿವ್ ನೆಗಿಟಿವ್ ಎರಡು ಬಗೆಯ ಕಾಮೆಂಟ್ ಗಳನ್ನ ಪಡೆದುಕೊಂಡಿದ್ದು ಆಯ್ತು.. ಸಿನಿಮಾ ಕೋಟಿ ಕೋಟಿ ಗಳಿಕೆಯನ್ನ ಕಂಡಿದೆ ಅಂತ ಸ್ವತಃ ಪ್ರೇಮ್ ಹೇಳಿದ್ದಾರೆ.. ಈ ನಡುವೆ ಪ್ರೇಮ್ ಸಿನಿಮಾ ಮಾಡೋದಾದ್ರೆ ನಾವ್ ದುಡ್ಡು ಹಾಕೋಕೆ ರೆಡಿ ಅನ್ನೋ ಪ್ರೊಡ್ಯುಸರ್ ಗಳ ನಡುವೆ, ಈ ನಿರ್ಮಾಪಕ‌ ಮಾತ್ರ ಪ್ರೇಮ್ ಸಹವಾಸ ನಮಗೆ ಬೇಡ್ವೆ ಬೇಡ ಅಂತಿದ್ದಾರೆ…ಹೌದು, ಹೀಗೆ ಹೇಳಿದ್ದು ಕನ್ನಡದ ಹೆಸರಾಂತ ನಿರ್ಮಾಪಕರಾದ ಕನಕಪುರ ಶ್ರೀನಿವಾಸ್ ಅವರು.. ಹೀಗೆ ಹೇಳೋಕೆ ಕಾರಣವಿದೆ.. ಅದೇನಂದ್ರೆ ಪ್ರೇಮ್ ಗೆ ಸುಮಾರು ಹತ್ತು ವರ್ಷಗಳ ಹಿಂದೆಯೇ ಕನಕಪುರ ಶ್ರೀನಿವಾಸ್ ತನ್ನ ಮುಂದಿನ ಸಿನಿಮಾ ನಿರ್ದೇಶನಕ್ಕೆ ಅಡ್ವಾನ್ಸ್ ಆಗಿ 10 ಲಕ್ಷ ಹಣ ನೀಡಿದ್ರಂತೆ.. ಆದರೆ ಆನಂತರ ಪ್ರೇಮ್ ರವರು ಇವರ ಬ್ಯಾನರ್ ನಲ್ಲಿ ಚಿತ್ರವನ್ನೆ ಮಾಡಿಲ್ವಂತೆ..
ಜೊತೆಗೆ ನೀಡಿದ್ದ ಅಡ್ವಾನ್ಸ್ ದುಡ್ಡನ್ನ ವಾಪಸ್ ಕೇಳಲು ನೂರಾರು ಬಾರಿ ಅವರ ಮನೆ ಬಾಗಿಲಿಗೆ ಹೋಗಿದ್ದೇನೆ.. ಎರಡುವರೆ ಲಕ್ಷದ ಹಾಗೆ ಎರಡು ಬಾರಿ ಹಣ ನೀಡಿದ್ದು ಇನ್ನು 5 ಲಕ್ಷ ನೀಡಿಲ್ಲ ಅಂತ ಆರೋಪಿಸಿದ್ದಾರೆ.. ಅವರು ದೊಡ್ಡ ಡೈರೆಕ್ಟರ್ ದೊಡ್ಡ ದೊಡ್ಡ ಬಜೆಟ್ ಸಿನಿಮಾ ಮಾಡ್ತಾರೆ, ಆದರೆ ನಮ್ಮ ದುಡ್ಡು ಮಾತ್ರ ನಮಗೆ ವಾಪಸ್ ನೀಡಿಲ್ಲ ಎಂದಿದ್ದಾರೆ..
ಮುಂದೆ ಒಂದು‌ ದಿನ ಪ್ರೇಮ್ ಜೊತೆಗೆ ಚಿತ್ರ ಮಾಡ್ತೀರ ಅಂದ್ರೆ, ಅವರೇ ಎರಡು ಕೋಟಿ ಕೊಡ್ತೀನಿ ಅಂದ್ರು ನಾನ್ ಮಾಡಲ್ಲ ಎಂದಿದ್ದಾರೆ..