‘ಜವಾನ್’, ‘ಕಲ್ಕಿ 2898 ಎಡಿ’ ದಾಖಲೆ ಉಡೀಸ್ ಮಾಡಿದ ಯಶ್‌ ನಟನೆಯ ‘ರಾಮಾಯಣ’! 10 ದಿನಕ್ಕೆ 685 ಕೋಟಿ ಗಳಿಕೆ

Must read

‘ಜವಾನ್’, ‘ಕಲ್ಕಿ 2898 ಎಡಿ’ ದಾಖಲೆ ಉಡೀಸ್ ಮಾಡಿದ ಯಶ್‌ ನಟನೆಯ ‘ರಾಮಾಯಣ’! 10 ದಿನಕ್ಕೆ 685 ಕೋಟಿ ಗಳಿಕೆ

 

ಕನ್ನಡದ ರಾಕಿಂಗ್ ಸ್ಟಾರ್ ಯಶ್‌, ಬಾಲಿವುಡ್ ನಟ ರಣಬೀರ್ ಕಪೂರ್ ಹಾಗೂ ಸಾಯಿ ಪಲ್ಲವಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಬಹುನಿರೀಕ್ಷಿತ ‘ರಾಮಾಯಣ ಪಾರ್ಟ್ 1’ (Ramayana Part 1) ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ಬಿಡುಗಡೆಯಾಗಿ ಕೇವಲ 10 ದಿನಗಳನ್ನು ಪೂರೈಸಿರುವ ಚಿತ್ರ, ದೇಶೀಯ ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 685.60 ಕೋಟಿ ರೂಪಾಯಿ ನಿವ್ವಳ ಗಳಿಕೆ ಮಾಡುವ ಮೂಲಕ ಹಲವು ಬಿಗ್‌ಬಜೆಟ್ ಸಿನಿಮಾಗಳ ದಾಖಲೆಗಳನ್ನು ಹಿಂದಿಕ್ಕಿದೆ.

ನವೆಂಬರ್ 5ರಂದು ಅದ್ಧೂರಿಯಾಗಿ ತೆರೆಕಂಡಿದ್ದ ಈ ಸಿನಿಮಾ ಮೊದಲ ದಿನದಿಂದಲೇ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಆರಂಭಿಕ ದಿನವೇ 64.85 ಕೋಟಿ ರೂಪಾಯಿ ಗಳಿಸಿದ್ದ ಚಿತ್ರ, ದಿನದಿಂದ ದಿನಕ್ಕೆ ತನ್ನ ಗಳಿಕೆಯನ್ನು ಹೆಚ್ಚಿಸಿಕೊಂಡಿದೆ. ಬಿಡುಗಡೆಯ ಐದನೇ ದಿನ ಗರಿಷ್ಠ 107.50 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಹೊಸ ದಾಖಲೆ ಬರೆದಿತ್ತು.

ಎರಡನೇ ವಾರದ ಶುಕ್ರವಾರ ಗಳಿಕೆಯಲ್ಲಿ ಕೊಂಚ ಇಳಿಕೆ ಕಂಡಿದ್ದರೂ, ವಾರಾಂತ್ಯದಲ್ಲಿ ಮತ್ತೆ ಭರ್ಜರಿ ಕಮ್‌ಬ್ಯಾಕ್ ಮಾಡಿದೆ. ನವೆಂಬರ್ 13ರಂದು 9ನೇ ದಿನ 48.10 ಕೋಟಿ ರೂಪಾಯಿ ಗಳಿಸಿದ್ದ ಸಿನಿಮಾ, ನವೆಂಬರ್ 14ರಂದು 10ನೇ ದಿನ ಬರೋಬ್ಬರಿ 72.90 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಮೂಲಕ ಭಾರತದ ಒಟ್ಟು ನಿವ್ವಳ ಗಳಿಕೆ 685.60 ಕೋಟಿ ರೂಪಾಯಿಗೆ ತಲುಪಿದೆ. ಇನ್ನು ಚಿತ್ರದ ಭಾರತದಲ್ಲಿನ ಒಟ್ಟು ಗ್ರಾಸ್ ಕಲೆಕ್ಷನ್ 819.50 ಕೋಟಿ ರೂಪಾಯಿಯಾಗಿದ್ದು, ವಿಶ್ವಾದ್ಯಂತ ಗಳಿಕೆ 1,228 ಕೋಟಿ ರೂಪಾಯಿ ದಾಟಿದೆ ಎಂದು ವರದಿಗಳು ತಿಳಿಸಿವೆ.

‘ಜವಾನ್’, ‘ಕಲ್ಕಿ 2898 ಎಡಿ’, ‘ಕಾಂತಾರ’ ದಾಖಲೆ ಹಿಂದಿಕ್ಕಿದ ರಾಮಾಯಣ!

‘ರಾಮಾಯಣ ಪಾರ್ಟ್ 1’ ಸಿನಿಮಾ ಕೇವಲ 10 ದಿನಗಳಲ್ಲೇ ಭಾರತೀಯ ಚಿತ್ರರಂಗದ ಮೂರು ಬೃಹತ್ ಸಿನಿಮಾಗಳ ಜೀವಿತಾವಧಿಯ ದೇಶೀಯ ನಿವ್ವಳ ಗಳಿಕೆಯನ್ನು ಮೀರಿಸಿದೆ. ಈ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ತನ್ನ ಪ್ರಾಬಲ್ಯವನ್ನು ಸಾಬೀತುಪಡಿಸಿದೆ.

ಜವಾನ್: ಶಾರುಖ್ ಖಾನ್ ಅಭಿನಯದ 2023ರ ಈ ಸಿನಿಮಾ ಭಾರತದಲ್ಲಿ25 ಕೋಟಿ ರೂಪಾಯಿ ನಿವ್ವಳ ಗಳಿಕೆ ಮಾಡಿತ್ತು.
ಕಲ್ಕಿ 2898 ಎಡಿ: 2024ರಲ್ಲಿ ಬಿಡುಗಡೆಯಾದ ಈ ಚಿತ್ರ31 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು.
ಕಾಂತಾರ: ಎ ಲೆಜೆಂಡ್ ಚಾಪ್ಟರ್ 1: 2025ರಲ್ಲಿ ತೆರೆಕಂಡಿದ್ದ ಈ ಸಿನಿಮಾ48 ಕೋಟಿ ರೂಪಾಯಿ ಗಳಿಸಿತ್ತು.

ಈ ಮೂರೂ ಚಿತ್ರಗಳ ದಾಖಲೆಗಳನ್ನು ಯಶ್ ನಟನೆಯ ‘ರಾಮಾಯಣ’ ಹಿಂದಿಕ್ಕಿದೆ. ಕೇವಲ 10 ದಿನಗಳಲ್ಲಿ 685.60 ಕೋಟಿ ರೂಪಾಯಿ ಗಳಿಸಿರುವ ಈ ಸಿನಿಮಾ, ಮುಂದಿನ ದಿನಗಳಲ್ಲಿ ಇನ್ನಷ್ಟು ದಾಖಲೆಗಳನ್ನು ತನ್ನದಾಗಿಸಿಕೊಳ್ಳುವ ನಿರೀಕ್ಷೆಯಿದೆ. ಭಾರತೀಯ ಚಿತ್ರರಂಗದಲ್ಲಿ ಯಶ್ ಅವರ ಜನಪ್ರಿಯತೆ ಹಾಗೂ ಚಿತ್ರದ ಮೇಲಿನ ಪ್ರೇಕ್ಷಕರ ನಿರೀಕ್ಷೆ ಮತ್ತೊಮ್ಮೆ ಸಾಬೀತಾಗಿದೆ.

- Advertisement -spot_img

More articles

- Advertisement -spot_img

Latest article