ಸಾವಿಗೆ ಸವಾಲ್ ಎಸೆದು ಲೈಫ್ ಈಸ್ ಬ್ಯೂಟಿ ಫುಲ್ ಎಂದವನ ಸ್ಟೋರಿ!

1
77

ಸಾವು..! ಅನ್ನೋ ಪದವನ್ನು ಕೇಳಿದ್ರೆ ಎದೆ ಝಲ್ ಅನ್ನುತ್ತೆ ಅಲ್ವೇ? ಈ ಸಾವಿನ ಬಗ್ಗೆ ಮಾತಾಡೋದು ತುಂಬಾ ಅಂದ್ರೆ ತುಂಬಾನೇ ಈಸಿ! ಬಟ್ ಸಾವಿನ ದಿನ ಲೆಕ್ಕಾಹಾಕ್ತ ಇರೋ ವ್ಯಕ್ತಿಯೊಬ್ಬ ಸಾವಿನ ಬಗ್ಗೆ ಮಾತನಾಡಲು ಸಾಧ್ಯವೇ? ಇವತ್ತೋ ನಾಳೆಯೋ ಅಥವಾ ನಾಡಿದ್ದೋ ಸಾಯ್ತಿನಿ ಅಂತ ಇರೋ ಒಬ್ಬ ವ್ಯಕ್ತಿ “ಲೈಫ್ ಈಸ್ ಸೋ ಬ್ಯೂಟಿಫುಲ್” ಅಂತ ಮಾತನಾಡಿದ್ರೆ…!
ಅಬ್ಬಾ ಗುರು, ತುಂಬಾ ಹೆಲ್ತಿ ಆಗಿರೋ ನಾವುಗಳೇ.. ಒಂದ್ಸಲ ಕಣ್ಮಚ್ಚಿ ನಾವು ಸಾಯ್ತೀವಿ ಎಂಬ ಕಲ್ಪನೆ ಮಾಡಿಕೊಂಡ್ರೇನೇ ಎದೆ ಗಡಗಡ ಅನ್ನುತ್ತೆ! ಮಾತೇ ಬರಲ್ಲ! ಆರೋಗ್ಯವಾಗಿರೋರೆ “ನನ್ನ ಸಾವು” ನಾಳೆ ಎಂದು ಕಲ್ಪಿಸಿಕೊಂಡರೆ ಗಡಗಡ ಅನ್ತೀವಿ! ಆದ್ರೆ ಒಂದು ಮಾರಾಣಾಂತಿಕ ಕಾಯಿಲೆಯಲ್ಲಿ ನರಳಾಡುತ್ತಿರುವ ವ್ಯಕ್ತಿಯೊಬ್ಬ ತನ್ನ ಬದುಕು ಕೆಲವೇ ದಿನ ಅಥವಾ ಕೆಲವೇ ಕ್ಷಣ ಎಂದು ತಿಳಿದಿದ್ದರೂ ನಗುನಗುತ್ತಾ ಬದುಕು ಎಷ್ಟೊಂದು ಸುಂದರ..! ಅಂತ ಹೇಳಿದ್ರೆ..? ಈ ರಿಯಲ್ ಸ್ಟೋರಿ ನೋಡಿ. ನಿಮಗೇ ಗೊತ್ತಾಗುತ್ತೆ ಸಾವಿಗೆ ಸವಾಲೊಡ್ಡಿ ಲೈಫ್ ಈಸ್ ಬ್ಯೂಟಿಫುಲ್ ಅಂದವನ ಎದೆಗಾರಿಕೆ ಬಗ್ಗೆ!

This website and its content is copyright of – © Thenewindiantimes.com 2015. All rights reserved.
Any redistribution or reproduction of part or all of the contents Without Permission or Courtesy in any form is prohibited.

ಅವರು ಅಮೇರಿಕಾದ ಕಾರ್ನಿಗಿ ಮೆಲನ್ ಯೂನಿವರ್ಸಿಟಿಯ ಕಂಪ್ಯೂಟರ್ ಸೈನ್ಸ್ ಪ್ರೊಪೆಸರ್! ಆದ್ರೆ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಲೇ ಕಾಲ ಕಳೆದವರಲ್ಲ! ತನ್ನ ಆಸಕ್ತಿಯುತ ಕ್ಷೇತ್ರಗಳಲ್ಲೆಲ್ಲಾ ಹಾಗೇ ಸುಮ್ಮನೆ ಕಣ್ಣಾಡಿಸಿ ಯಶಸ್ವಿ ಆದವರೂ ಸಹ! ಅಡೋಬ್, ಗೂಗಲ್, ವಾಲ್ಟ್ ಡಿಸ್ನಿಯಂತಹ ದೊಡ್ಡ ದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡಿದವರು! ಅಷ್ಟಕ್ಕೆ ಇವರು ತೃಪ್ತರಾದರೇ? ಹ್ಞೂಂ ಹ್ಞೂಂ ಖಂಡಿತಾ ಇಲ್ಲ! ಪಿ.ಎಚ್.ಡಿ. ಮಾಡಿ ಡಾಕ್ಟರ್ ಎಂಬ ಪದನಾಮವನ್ನೂ ತನ್ನ ಹೆಸರಿನ ಹಿಂದೆ ಸೇರಿಸಿ ಕೊಂಡರು! ನಂತರ ಗಗನಯಾತ್ರಿಯೂ ಆದರು! ಇಷ್ಟಕ್ಕೆ ಸುಮ್ಮಾನಾದರೇ..? ನೋ, ಇವೆಲ್ಲಾ ಸಾಲದೆಂಬಂತೆ ಗ್ರೇಟ್ ಸೈನ್ಟಿಸ್ಟ್ ಕೂಡ ಆದ್ರು! ಈ ಎಲ್ಲಾ ರಂಗದಲ್ಲಿ ಹೆಜ್ಜೆ ಗುರುತು ಮೂಡಿಸಿದ ಮೇಲೆ ತನ್ನಿಷ್ಟದಂತೆ ಪೊಲೀಸ್ ಅಧಿಕಾರಿಯೂ ಆಗಿ ಕದರ್ ಕಾಪ್ ಆದ್ರು! ಹಿಂಗೆ ತನ್ನ ಕನಸಿನ ಬದುಕನ್ನೂ ನನಸಾಗಿಸಿಕೊಳ್ತಾ ಸಾಗಿದ ಅವರಿಗೆ ಹಣ, ಕೀರ್ತಿ, ಹೆಸರೂ ಸಹ ಅವಾಗಿಯೇ ಹುಡುಕಿಕೊಂಡು ಬಂದ್ವು! ಅತೀ ಚಿಕ್ಕವಯಸ್ಸಲ್ಲಿಯೇ ಅತ್ಯಂತ ಯಶಸ್ವಿಯಾದ ಇವರನ್ನ ಕಂಡ್ರೆ ಆ ದೇವರಿಗೂ ಹೊಟ್ಟೆ ಉರಿ ಶುರುವಾಯ್ತೋನೋ? ಪಾಪ, ಇವರಿಗೆ ಇದ್ದಕ್ಕಿದ್ದ ಹಾಗೆ ಹೊಟ್ಟೆಯ ಮೇಲ್ಬಾಗದಲ್ಲಿ ತಾಳಲಾರದ ನೋವು ಶುರುವಾಗುತ್ತೆ! ಅಲ್ಲಿಂದ ಟ್ರೀಟ್ಮೆಂಟ್ ತಗೋಳಕ್ಕೆ ಆರಂಭ ಮಾಡಿದ ಇವ್ರಿಗೆ ಜಾಂಡಿಸ್ ಶುರುವಾಯ್ತು! ನಂತರ ಡಾಕ್ಟರ್ ಹೆಪಟೈಟಿಸ್ ಅಂತ ಅನುಮಾನಿಸಿದ್ರು! ಆದ್ರೆ ತಜ್ಞ ವೈಧ್ಯರ ಕಲ್ಪನೇಯನ್ನೇ ತಪ್ಪೆಂದ ಸಿಟಿ ಸ್ಕ್ಯಾನ್ “ಜಠರ ಕ್ಯಾನ್ಸರ್” ಇರೋದನ್ನು ಸಾರಿತ್ತು! “ತನಗೆ ಕ್ಯಾನ್ಸರ್ ಅಂತ ಗೊತ್ತಾಗ ಆ ಗಳಿಗೆಯಲ್ಲಿ ಅವರು ಒಂದು ಕ್ಷಣ, ಒಂದೇ ಒಂದು ಕ್ಷಣ ತಳಮಳ ಗೊಂಡರು! ಇವರೊಳಗಿದ್ದ ಆತ್ಮವಿಶ್ವಾಸಕ್ಕೂ ತಣ್ಣೀರೆರೆಚಿದಂಗಾಯ್ತು! ಅದು ಆ ಒಂದೇ ಒಂದು ಕ್ಷಣ ಮಾತ್ರ! ಆತ ಮತ್ತೆಂದು ಸಾವಿನ ಬಗ್ಗೆ ಯೋಚ್ನೆ ಮಾಡಲಿಕ್ಕೇ ಹೋಗಲಿಲ್ಲ!
ಹೆಂಡತಿಗೆ ತಾನಿಲ್ಲದೆ ಬದುಕುವುದು ಹೇಗೆ ಎಂದು ಆತ ಹೇಳಿಕೊಟ್ಟ! ತನ್ನ ಮಕ್ಕಳಿಗೆ ಬದುಕಿನ ಬಗ್ಗೆ ಪ್ರೀತಿ ತುಂಬಿದರು! ಅಷ್ಟೇ ಅಲ್ಲ ಅಮೇರಿಕಾ ಮೊದಲಾದ ದೇಶಗಳಲ್ಲಿ ಅಲ್ಲಿನ ಉಪನ್ಯಾಸಕರಿಗೆ “ಕೊನೆಯ ಉಪನ್ಯಾಸ” ಮಾಡಲು ಅವಕಾಶ ಕಲ್ಪಿಸಿ ಕೊಡುತ್ತವೆ! ಆ ಅವಕಾಶ ಇವರಿಗೂ ಸಿಗುತ್ತೆ! ಆಗ ಇವರು ಅಲ್ಲಿ ಎಂಥಹಾ ಉಪನ್ಯಾಸ ಮಾಡಿದ್ರು ಗೊತ್ತಾ? ಅದು ಎಂಥವರ ಮನವೂ ಕರಗುವಂತಹ ಮಾತಿನ ಮುತ್ತುಗಳು! “ನಾನೊಬ್ಬ ಉಪನ್ಯಾಸಕ ಸಾವಿನ ಮುನ್ನ ಬದುಕಿನ ಬಗ್ಗೆ ಉಪನ್ಯಾಸ ಮಾಡಿ ಸಾಯಲು ಬಯಸುತ್ತೇನೆ” ಎಂದರು. ಕ್ಯಾನ್ಸರ್ ಗೆ ನಾನು ಋಣಿ, ಏಕೆಂದರೆ ಕ್ಯಾನ್ಸರ್ ಬಂದಿದ್ದರಿಂದಲೇ ನಾನು ಸಾಯುವ ಮೊದಲು ನಾನಿಲ್ಲದ ಬದುಕು ಬದುಕುವುದು ಹೇಗೆ ಎಂದು ಹೆಂಡತಿ ಮಕ್ಕಳಿಗೆ ಹೇಳಬಹುದು! ಕ್ಯಾನ್ಸರ್ ಬರದೇ ಇದ್ದಕ್ಕಿದ್ದ ಹಾಗೆ ಸತ್ತಿದ್ದರೆ ಅವರಿಗೆ “ನಾ ಇಲ್ಲದ ಬದುಕಿನ ಬಗ್ಗೆ” ಹೇಳಲಾಗುತ್ತಿರಲಿಲ್ಲ! ಅಂತ ತನ್ನ ಕೊನೆಯ ಉಪನ್ಯಾಸದಲ್ಲಿ ಹೇಳ್ತಾರೆ! ಅಷ್ಟೇ ಅಲ್ಲ, ತನ್ನ ಬಾಲ್ಯ, ತನ್ನ ಕನಸನ್ನು ಈಡೇರಿಸಿಕೊಂಡ ಬಗೆಯ ಬಗ್ಗೆಯೂ ಮನ ಬಿಚ್ಚಿ ಮಾತನಾಡ್ತಾರೆ! ಇವೆಲ್ಲಕ್ಕಿಂತ “ಬದುಕನ್ನು ಪ್ರೀತಿಸುವುದು ಹೇಗೆ”? ಎಂಬುದನ್ನು ಹೇಳಿಕೊಟ್ಟರು! ಸಾವಿನ ದವಡೆಯಲ್ಲಿದ್ದರೂ ಬದುಕನ್ನು ಪ್ರೀತಿಸಿದ ಇವರಿಗೇ ಸಾವೇ ಅಂಜಿತ್ತು! 2006ರಲ್ಲಿ ಕ್ಯಾನ್ಸರ್ ಅಟ್ಯಾಕ್ ಆಗಿರುವುದು ತಿಳಿಯಿತಾದರೂ ಮತ್ತೆ ಎರಡು ವರ್ಷ ಅಂದರೆ 2008ರವರೆಗೂ ಇವರು ಸಾವನ್ನೇ ಗೆದ್ದು ಬದುಕಿದರು!
ಅವರು ಬೇರೆ ಯಾರೂ ಅಲ್ಲ, ಹೆಸರಾಂತ ಕಂಪ್ಯೂಟರ್ ಸೈನ್ಸ್ ವಿಜ್ಞಾನಿ ರ್ಯಾಂಡಿ ಪಾಶ್! ರ್ಯಾಂಡಿಪಾಶ್ ರ ಕೊನೆಯ ಉಪನ್ಯಾಸ “ದಿ ಲಾಸ್ಟ್ ಲೆಕ್ಚರರ್” ಪುಸ್ತಕದ ರೂಪದಲ್ಲಿ ಪ್ರಕಟವಾಗಿದೆ! ಅದರ ಕನ್ನಡ ಅವತರಿಣಿಕೆಯೂ ಇದೆ! ತಪ್ಪದೇ ಓದಿ..! ನಾನು ಅಂದೆಂದೂ ಈ ಪುಸ್ತಕವನ್ನು ಓದಿದ್ದೆ… ಮತ್ತೆ ಓದಬೇಕೆಂದೆನಿಸಿತು.. ಮತ್ತೆ ಮೊನ್ನೆ ಓದಿದೆ.. ನಿಮಗೂ ಇವರ ಬಗ್ಗೆ ಹೇಳಲೇ ಬೇಕನಿಸಿತು! ಹೇಳಿದೆ!.. ಮಿಸ್ ಮಾಡಿಕೊಳ್ದೆ ಓದಲೇ ಬೇಕಾದ ಪುಸ್ತಕ “ದಿ ಲಾಸ್ಟ್ ಲೆಕ್ಚರರ್” ! ಸಾವು ನಿಶ್ಚಯವಾದರೂ ಲೈಫ್ ಈಸ್ ಬ್ಯೂಟಿ ಫುಲ್ ಅಂದ ರ್ಯಾಂಡಿ ಪಾಶ್, ಪ್ರತಿಯೊಬ್ಬ ಜೀವನೋತ್ಸಾಹಿಗೂ ಸ್ಫೂರ್ತಿ!

Randy Pausch Last Lecture Video :

  • ಶಶಿಧರ ಡಿ ಎಸ್ ದೋಣಿಹಕ್ಲು

—————

POPULAR  STORIES :

ಸಿಸಿಟಿವಿ ಬಯಲು ಮಾಡ್ತು ಹೆಂಡತಿಯ “ಅತ್ತೆಪ್ರೀತಿ”

ಇಡೀ ಊರನ್ನೇ ಶ್ರೀಮಂತ ಮಾಡಿದ ವ್ಯಕ್ತಿಯ ಕಥೆ..!

ಬಾರ್ ಸಪ್ಲೇಯರ್ ಈಗ ಐಪಿಎಸ್ ಆಫೀಸರ್.!

 ಅವನು ಐಎಎಸ್ ಆಫೀಸರ್…ಇವನು ಗ್ರೇಟ್ ಕ್ರಿಕೆಟರ್…!

ನಿಮ್ ಮನೇಲೂ ಕರೆಂಟಿಲ್ವಾ..? ಏನೂ ಮಾಡಕ್ಕಾಗಲ್ಲ… ಈ ವೀಡಿಯೋ ನೋಡಿ ನಕ್ಕುಬಿಡಿ..!

ಮಂಗ ಓಡಿಸೋದು ಹೇಗೆ..? ಅದ್ಭುತ ಟೆಕ್ನಾಲಜಿ..! ಈ ಕನ್ನಡದ ವೀಡಿಯೋ ಸೂಪರ್ರಪ್ಪ ಸೂಪರ್ರು..!

ಒಬ್ಬ ಶಿಕ್ಷಕನಾಗಿದ್ದವರ ಇವತ್ತಿನ ಆಸ್ತಿ ರೂ.1653686250000

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : [email protected]

1 COMMENT

LEAVE A REPLY

Please enter your comment!
Please enter your name here