ಹಣ ಇದ್ರೆ ಮಾತ್ರ ಜನ..! ಅಂದು ಅನ್ನದಾನ ಮಾಡಿದ್ದ ಕುಟಂಬ ಇವತ್ತು..?!

1
85

ಅವತ್ತು ಅವರ ಬಳಿ ಹಣವಿತ್ತು ಜನರೂ ಇದ್ದರು..! ಇವತ್ತು ಇದ್ದ ಆಸ್ತಿಯನ್ನೆಲ್ಲಾ ಮಾರಿ ಅಲೆಮಾರಿ ಜೀವನ ನಡೆಸ್ತಾ ಇದ್ದಾರೆ ಬಳಿಯಲ್ಲಿ ಜನರಿಲ್ಲ..! ಅಪ್ಪ ದಾನ ಶೂರ ಕರ್ಣರು..! ಊರಾಚೆಯವರಿಗೂ ಹೊಟ್ಟೆ ತುಂಬ ಊಟ ನೀಡಿದವರು..! ಆದ್ರೆ ಯಾವತ್ತೂ ಬೀದಿಗೆ ಬಂದಿರ್ಲಿಲ್ಲ..! ಆದರೆ ಮಕ್ಕಳ ಹುಚ್ಚಾಟ, ಅವಿವೇಕಿತನ, ಬೇಕಾಬಿಟ್ಟಿ ಬದುಕಿನಿಂದಾಗಿ ಎಲ್ಲವನ್ನೂ ಕಳೆದುಕೊಂಡು ಬಡವರಾಗಿ ವಿಧಿವಶರಾದರು..! ಅಪ್ಪ ಮಾಡಿಟ್ಟ ಆಸ್ತಿಯನ್ನು ಮಾರಿದ ಆ ಮಕ್ಕಳು ಇವತ್ತು ಎಲ್ಲರ ತಾತ್ಸಾರಕ್ಕೆ ಒಳಪಟ್ಟಿದ್ದಾರೆ..! ಇದು ಶ್ರೀಮಂತ ಕುಟುಂಬವೊಂದರ ಕರುಣಾಜನಕ ಕತೆ..! ತಪ್ಪದೇ ಓದಿ.
ಅದು ಮಲೆನಾಡಿನ ಒಂದು ಕೊಂಪೆ..! ಅಲ್ಲೊಂದು ಶ್ರೀಮಂತ ಕುಟುಂಬ. ವಂಶಪಾರಂಪರ್ಯವಾಗಿ ಬಂದಿದ್ದ ಜಮೀನು, ದೊಡ್ಡಮನೆ ಎಲ್ಲವೂ ಇತ್ತು..! ಆ ಕುಟುಂಬದ ಯಜಮಾನ ಗಣಪತಿ ಭಟ್ಟರು. ಸುತ್ತಮುತ್ತ ಆರೇಳು ಹಳ್ಳಿಗಳಿಗೂ ಚಿರಪರಿಚಿತರು. ಯಾರದ್ದೇ ಮನೆಯಲ್ಲಿ ಮದುವೆ ಅಥವಾ ಇನ್ಯಾವುದೇ ಸಮಾರಂಭಗಳಾಗಲಿ ಗಣಪತಿಭಟ್ಟರು ಬೇಕೇ ಬೇಕಿತ್ತು..! ಏಕೆಂದರೆ ಆ ಸಮಾರಂಭಗಳಲೆಲ್ಲಾ ಗಣಪತಿಭಟ್ಟರದ್ದೇ ನಳಪಾಕ..! ಅಡುಗೆ ಅಂದ್ರೆ ಗಣಪತಿ ಭಟ್ಟರದ್ದು ಅಂತ ಎಲ್ಲರೂ ಮಾತನಾಡಿಕೊಳ್ತಾ ಇದ್ರು..! ಇವರ ಕೈ ರುಚಿಯನ್ನು ನೋಡದ ಸುತ್ತಮುತ್ತಲ ಊರಿನವರೇ ಇಲ್ಲ..! ಗಣಪತಿಭಟ್ಟರು ಅಡುಗೆಗೆ ಯಾರು ಕರೆದರೂ ಹೋಗುತ್ತಿದ್ದರು..! ಆದರೆ ಅವರಿಂದ ನಯಾಪೈಸೆ ಅಪೇಕ್ಷೆ ಮಾಡ್ತಾ ಇರ್ಲಿಲ್ಲ..! ನಿನ್ನ ಮಗ/ನಿನ್ನ ಮಗಳ ಮದುವೆಗೆ ನನ್ನದೊಂದು ಸಣ್ಣ ಕೆಲಸ ಇರಲಿ ಅಂತ ಅಡುಗೆ ಮಾಡಿ ಬರುತ್ತಿದ್ದ ಅನ್ನದಾತ ಅವರು..! ಅಡುಗೆ ಮಾಡಿಕೊಡುತ್ತಿದ್ದರೆಂಬ ಮಾತ್ರಕ್ಕೆ ಅವರನ್ನು ಅನ್ನದಾತ ಎನ್ನುತ್ತಿಲ್ಲ..! ಅವರ ಮನೆಯಲ್ಲಿ ಯಾವಾಗಲೂ ಊರಮನೆಯವರು `ಊಟಕ್ಕೆ’ ಇರ್ತಾ ಇದ್ರು..! ಆರಾಮಾಗಿ ಇಸ್ಪೀಟ್ ಆಡ್ತಾ.. ಬೀಡಿ ಸೇದ್ತಾ, ಕೆಲಸಕ್ಕೆ ಬಾರದ ಮಾತನ್ನೆಲ್ಲಾ ಆಡ್ತಾ.. ಅವರ ಮನೆಯಲ್ಲೇ ಕಾಲಕಳೀತಾ ಇದ್ದ ಕೆಲವರಿಗೆ ಮನೆಯೇ ಮರೆತು ಹೋಗಿಬಿಟ್ಟಿತ್ತು..! ಅವರಿಗೆಲ್ಲಾ ಗಣಪತಿಭಟ್ಟರ ಮನೆಯಲ್ಲೇ ದಿನನಿತ್ಯ ಊಟ..! ಮಳೆಗಾಲದಲ್ಲಂತೂ ಅಕ್ಕಪಕ್ಕದ ಮನೆಯವರು, ಸುತ್ತಮುತ್ತಲಿನ ಊರವರೆಲ್ಲಾ ಸಂಜೆ ಇವರ ಮನೆಯಲ್ಲಿ ಜಮಾಯಿಸಿ ಬಿಡ್ತಾ ಇದ್ರು..! ಆ ಮಲೆನಾಡ ಹಳ್ಳಿಯಲ್ಲಂತೂ ಮಳೆ ಮಳೆ ಮಳೆ. ಆಗ ಅಲ್ಲಿನ ಜನಪ್ರೀಯ ತಿನಿಸು ಕೆಸುವಿನ ಎಲೆಯ ಪತ್ರೊಡೆ, ಹಲಸಿನ ಕಾಯಿ ಹಪ್ಪಳ ಗಣಪತಿ ಭಟ್ಟರ ಮನೆಯಲ್ಲಿ ಖಾಯಂ..! ಗಣಪತಿಭಟ್ಟರು ಪತ್ರೊಡೆ ಮಾಡಿದರೆಂದರೆ ಎಲ್ಲರನ್ನೂ ಬನ್ನಿ ಬನ್ನಿ ಅಂತ ಕರೆದು ಕರೆದು ಹಾಕ್ತಾ ಇದ್ರು..! ಅದೂ ಅಲ್ಪ ಸ್ವಲ್ಪ ಅಲ್ಲ. ಹೊಟ್ಟೆ ತುಂಬುವಷ್ಟು..! ನನಗೆ ಗೊತ್ತಿರುವಂತೆ ಗಣಪತಿಭಟ್ಟರ ಪತ್ರೊಡೆ ತಿನ್ನದೇ ಇರುವ ಆ ಮಲೆನಾಡಿಗರೇ ಇಲ್ಲ..! ಇಂಥಾ ಗಣಪತಿ ಭಟ್ಟರು ತುಂಬುಗೈ ದಾನಿ..! ಇವರೆಂದರೆ ಎಲ್ಲರಿಗೂ ಇಷ್ಟ. ಇವರೂ ಎಲ್ಲರನ್ನೂ ಇಷ್ಟಪಡ್ತ ಇದ್ರು..!
ಎಷ್ಟೇ ದಾನ ಮಾಡಿದ್ರೂ ಗಣಪತಿ ಭಟ್ಟರು ಬಡವರಾಗಿರಲಿಲ್ಲ..! ಅನ್ನಪೂರ್ಣೇಶ್ವರಿ ಸದಾ ಅವರನ್ನು ಕಾಪಾಡಿದ್ದಳು..! ಆದರೆ ಯಾವತ್ತು ಮಕ್ಕಳ ವ್ಯವಹಾರ ಜೋರಾದಾಗ ಮುಗಿಯಿತು ನೋಡಿ ಇವರ ಕತೆ..! ಒಬ್ಬನಿಗೆ ಕುಡಿತದ ಚಟ..! ಇನ್ನೊಬ್ಬನಿಗೆ ಇಸ್ಪಿಟ್ ಹುಚ್ಚು. ಅದುವೇ ಇವರ ಕುಟುಂಬಕ್ಕೆ ದೊಡ್ಡ ಹೊಡೆತ ಕೊಟ್ಟು ಬಿಟ್ಟಿತ್ತು..! ಕುಡಿತದ ಚಟ ಇದ್ದವನಂತೂ ತನ್ನ ಕುಡಿತಕ್ಕೂ ತನ್ನ ಜೊತೆಯ ಕುಡುಕರಿಗೂ ಹೆಂಡದಾನ ಮಾಡ್ತಾ ಇದ್ದ..! ಹಣವೆಲ್ಲಾ ಖಾಲಿ ಆದಂಗೂ ಮನೆಯಲ್ಲಿನ ಒಂದೊಂದೇ ಪಾತ್ರೆಗಳನ್ನೂ ಮಾರಾಟ ಮಾಡಿದ..! ಹಳೆಕಾಲದ ದೊಡ್ಡ ದೊಡ್ಡ ಕಡಾಯಿಗಳು, ಹಂಡೆಗಳು, ಅನ್ನದ ಬಟ್ಟಲು, ದಬರಿ, ಕೊನೆಗೆ ತೋಟ ಎಲ್ಲವನ್ನೂ ಮಾರಿದರು..! ಹೀಗಿರುವಾಗಲೇ ಗಣಪತಿಭಟ್ಟರೂ ಹುಷಾರು ಇಲ್ಲದೆ ಹಾಸಿಗೆ ಹಿಡಿದರು..! ಅವರಿವರು ಸೇರಿ ಆಸ್ಪತ್ರೆಗೆ ಸೇರಿಸಿದ್ರೂ ಗಣಪತಿಭಟ್ಟರನ್ನು ಉಳಿಸಿಕೊಳ್ಳೋಕೆ ಆಗಲಿಲ್ಲ..! ಗಣಪತಿಭಟ್ಟರು ಎಲ್ಲರನ್ನೂ ಬಿಟ್ಟು ಹೋದರು..! ಅವರು ತಯಾರಿಸಿದ ಊಟ, ರುಚಿ ರುಚಿ ಪತ್ರೊಡೆಯನ್ನು ತಿಂದವರು.. ಮಳೆಗಾಲದಲ್ಲಂತೂ ಪತ್ರೊಡೆ ಅಂದ್ರೆ ಗಣಪತಿಭಟ್ಟರ ಪತ್ರೊಡೆ ಅಂತ ಇವತ್ತಿಗೂ ನೆನೆಸಿಕೊಳ್ತಾ ಇದ್ದಾರೆ..! ಅವರ ಮಕ್ಕಳಲ್ಲಿ ಕುಡಿತದ ಚಟ ಅಂಟಿಸಿಕೊಂಡವರಿದ್ದಾರಲ್ಲಾ.. ಅವರು ಅವರಿವರ ಮನೆ ತೋಟದ ಕೆಲಸಕ್ಕೆ ಹೋಗಿ ತನ್ನ ಹೆಂಡದ ದಿನದ ಖರ್ಚನ್ನು ಮಾಡಿಕೊಳ್ತಾ ಇದ್ದಾರೆ..! ಎರಡನೇ ಮಗ ಇಸ್ಪೀಟ್ ಆಡಿದ್ರೂ ಪರವಾಗಿಲ್ಲ..,ಸಣ್ಣಪುಟ್ಟ ಅಡುಗೆ ಕೆಲಸ ಮಾಡಿ ಅಷ್ಟೋ ಇಷ್ಟೋ ಹಣ ಉಳಿಸಿ ಬಾಡಿಗೆ ಮನೆಯೊಂದರಲ್ಲಿ ತಾಯಿಯನ್ನು ಚೆನ್ನಾಗಿ ನೋಡಿಕೊಳ್ತಾ ಇದ್ದಾರೆ..!
ಚಟಗಳಿದ್ದರೂ ಇಬ್ಬರೂ ಒಳ್ಳೆಯವರೇ, ಕುಡಿಯುವುದನ್ನು ಬಿಟ್ಟರೆ ಆ ಕುಡಿತಗಾರ ಒಳ್ಳೆಯ ವ್ಯಕ್ತಿ, ಕಷ್ಟದ ದುಡಿಮೆಗಾರ,ಕೃಷಿ ಚಟುವಟಿಕೆಯ ನಿಪುಣ..! ಆದರೆ ಗ್ರಹಚಾರವೋ ಏನೋ ಲೈಫೇ ಹಾಳುಮಾಡಿಕೊಂಡಿದ್ದಾರೆ..!
ಫ್ರೆಂಡ್ಸ್ ಈ ಕುಟುಂಬದ ಸ್ಟೋರಿ ಹೇಳಿದ್ದೇಕೆ ಗೊತ್ತಾ..?! ಅವತ್ತು ಗಣಪತಿಭಟ್ಟರ ಹತ್ತಿರ ಕೆಲಸ ಮಾಡಿಸಿಕೊಂಡವರು, ಅವರ ಮನೆಯಲ್ಲೇ ಕಾಲ ಕಳೀತಾ ಬಿಸಿಬಿಸಿ ಊಟ ಮಾಡಿದವರು..! ಮಳೆಗಾಲದಲ್ಲಿಬಾಯಲ್ಲಿ ನೀರು ಸುರಿಸಿಕೊಂಡು ಪತ್ರೊಡೆ ತಿಂದ ಜನ ಇದ್ದಾರಲ್ಲಾ…? ಅವರೆಲ್ಲಾ ಇವತ್ತು ಗಣಪತಿಭಟ್ಟರ ಮಕ್ಕಳ ಹತ್ತಿರ ಕೆಲಸವೇನೋ ಮಾಡಿಸಿಕೊಳ್ತಾರೆ..! ಎದುರುಗಡೆ ಚಂದ ಮಾತೂ ಆಡ್ತಾರೆ..! ಆದರೆ ಹಿಂದಿಂದ ಅವರನ್ನ ತೂ ಛೀ ಅನ್ನುತ್ತಾರೆ..! ನಯಾಪೈಸೆ ಸಹಾಯವನ್ನೂ ಮಾಡಲ್ಲ..! ಅವತ್ತು ಅವರ ಮನೆಯಲ್ಲಿ ಹಣವಿತ್ತು.. ಒಮ್ಮೆಲೇ ಹೇಳದೇ ಕೇಳದೆ ಸಾವಿರಾರು ಜನ ಬಂದರೂ ಕೂರಿಸಿ ಊಟ ಹಾಕೋ ತಾಕತ್ತಿತ್ತು..! ಆಗ ಎಲ್ಲರೂ ಗಣಪತಿಭಟ್ಟರ ಮನೆ, ಗಣಪತಿಭಟ್ಟರ ಮನೆ ಅಂತಬಂದು ತಿಂದು ತೇಗ್ತಾ ಇದ್ದರು..! ಆದ್ರೆ ಅದೇ ಜನ ಇವತ್ತು ಅದೇ ಗಣಪತಿಭಟ್ಟರ ಮಕ್ಕಳನ್ನು ತಾತ್ಸಾರ ಮಾಡ್ತಾರೆ..! ನೋಡಿ, ಜನ ನಮ್ಮ ಜೊತೆ ಇರೋದು ಗುಣ ನೋಡಿಯಲ್ಲ.. ಹಣ ನೋಡಿ..! ಆ ದೇವರು ಗಣಪತಿಭಟ್ಟರ ಮಕ್ಕಳಿಗೆ ಒಳ್ಳೆಯದನ್ನು ಮಾಡಲಿ ಅಂತ ಹರಸುತ್ತಾ..

  • ಶಶಿಧರ ಡಿ ಎಸ್ ದೋಣಿಹಕ್ಲು

Like us on Facebook  The New India Times

 

POPULAR  STORIES :

ಆಕ್ರಮಣಶೀಲ ಆಟಗಾರ ಕೋಹ್ಲಿ `ಪೇಂಟಿಂಗ್’ ಮೂಲಕ ಎಲ್ಲರನ್ನೂ ನಗಿಸಬಲ್ಲ!

ಅಜರ್ ಯಾಕೆ ತನ್ನ ಕಾಲರ್ ನ ಮೇಲಕ್ಕೆತ್ತಿ ಆಟವಾಡ್ತಿದ್ರು ಗೊತ್ತಾ..?

2012 ಕಟ್ಟುಕಥೆ..! 2050 ಅಸಲಿ ಕಥೆ..! ನಡುಗಿಸುತ್ತದೆ ಈ ವರದಿ..!

ಹುಲಿದೈವ ಸ್ಪರ್ಶಿಸಿದ್ರೆ ಸಾವು ಖಚಿತ….!

400 ವರ್ಷಗಳ ಹಿಂದಿನ ಶವಗಳು ಕೊಳೆತಿಲ್ಲ..! ಈ ಗುಹೆ ಪ್ರವೇಶಿಸುವುದಕ್ಕೆ ಎಂಟೆದೆ ಬೇಕು..!?

 

1 COMMENT

LEAVE A REPLY

Please enter your comment!
Please enter your name here