No menu items!
11.1 C
Munich
Wednesday, April 29, 2026

ಆಕೆಗೂ ತಾನು ಗರ್ಭಿಣಿ ಅಂತ ಗೊತ್ತೇ ಇರ್ಲಿಲ್ಲ..! ಇದ್ದಕ್ಕಿದ್ದಂತೆ ಮಗು ಹುಟ್ಟಿ ಬಿಡುತ್ತೆ..!

Must read

ಮಹಿಳೆಯೊಬ್ಬಳು ಗರ್ಭಿಣಿ ಆದಾಗ ಆರಂಭದಲ್ಲೇ ಆ ಬಗ್ಗೆ ಸೂಚನೆಗಳು ಗೊತ್ತಾಗ್ತಾ ಹೋಗುತ್ತವೆ ಅಲ್ಲವೇ..?! ಗರ್ಭಿಣಿ ಆದ ನಂತರ ಮಗುವನ್ನು ಹೆರುವ ಹೊರೆಗೂ ಆಕೆಯ ದೇಹ ಪ್ರಕೃತಿಯಲ್ಲಿ ಸಹಜವಾಗಿ ಬದಲಾವಣೆಗಳು ಆಗ್ತಾ ಹೋಗುತ್ತವೆ..! ಆಕೆಯನ್ನು ನೋಡಿದರೇ ಗೊತ್ತಾಗಿ ಬಿಡುತ್ತೆ ಗರ್ಭಿಣಿ ಅಂತ..! ಗರ್ಭಧರಿಸಿದ ಒಂಬತ್ತು ತಿಂಗಳು ಅಥವಾ ಅದರ ಆಸುಪಾಸಿನಲ್ಲಿ ಹೊಟ್ಟೆನೋವು ಶುರುವಾಗುತ್ತೆ..! ಪ್ರಸವವೇದನೆಯನ್ನು ಅನುಭವಿಸಿ ಮಗುವಿಗೆ ಜನ್ಮಕೊಡುವುದುರ ಮೂಲಕ ಆಕೆ ತಾಯಿಯಾಗಿ ಬಿಡುತ್ತಾಳೆ..! ಇದು ಸಹಜ. ಆದರೆ ವಿಚಿತ್ರ ಅಂದ್ರೆ ಇಲ್ಲೊಬ್ಬಳು ಮಹಿಳೆಗೆ ತಾನು ಗರ್ಭಿಣಿ ಅಂತ ಗೊತ್ತೇ ಇರ್ಲಿಲ್ಲ..! ಅವಳ ದೇಹ ಪ್ರಕೃತಿಯಲ್ಲೂ ಅಂತದ್ದೇನು ಬದಲಾವಣೆ ಕೂಡ ಕಂಡುಬರ್ಲಿಲ್ವಂತೆ..! ಇದ್ದಕ್ಕಿದ್ದಹಾಗೆ ಹೆಣ್ಣು ಮಗುವಿಗೆ ಜನ್ಮ ನೀಡಿ ಬಿಟ್ಟಿದ್ದಾಳೆ..! ಹೀಗೂ ಉಂಟು..
ಆಕೆ `ಜೂಡಿ ಬ್ರೌನ್’. ಯುಕೆಯ ಬೆವರ್ಲಿಯವರು. ಇವರು ತನ್ನ ಗಂಡ ಜಾನ್ಸನ್ ಜೊತೆ ಅನ್ಯೂನ್ಯ ದಾಂಪತ್ಯ ಜೀವನವನ್ನು ನಡೆಸ್ತಾ 22 ವರ್ಷಗಳಾಗಿವೆ..! ಮಗುವನ್ನು ಪಡೆಯಬೇಕೆಂಬ ಆಸೆ ಇತ್ತಾದರೂ.. ಆ ಆಸೆ ಇಲ್ಲಿತನಕ ನೆರವೇರಿರಲಿಲ್ಲ..! ಈಗ ಜೂಡಿ ಬ್ರೌನ್ ಗೆ ನಲವತ್ತೇಳು ವರ್ಷ ವಯಸ್ಸು..! ಈಕೆಯ ಗಂಡ ಕೂಡ ತನ್ನ ಹೆಂಡತಿ ಗರ್ಭಿಣಿ ಆಗ್ತಾಳೆ, ನಮ್ಮ ಮನೆಯಲ್ಲೂ ಪುಟ್ಟಮಗು ಕಿಲಕಿಲ ಅಂತಿರುತ್ತೇ ಎಂಬ ಕನಸಿನಲ್ಲೇ 22 ವರ್ಷವನ್ನು ಕಳೆದು ಬಿಟ್ಟಿದ್ರು..! ಈಕೆ ಕೂಡ ಅಷ್ಟೇ ತಾಯಿಯಾಗೋ ಕನಸನ್ನು ಕಾಣ್ತಾನೇ ಇದ್ರು..! ಆದರೆ ಗರ್ಭಿಣಿ ಯಾಗೇ ಇರಲಿಲ್ಲ..! ಮೊನ್ನೆ ಮೊನ್ನೆ (ಬುಧವಾರ) ಇದ್ದಕ್ಕಿದ್ದಂತೆ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತೆ..! ಆಗ ಬೆವರ್ಲಿ ಆಸ್ಪತ್ರೆಗೆ ಹೋಗ್ತಾರೆ..! ಪರೀಕ್ಷಿಸಿದ ವೈಧ್ಯರು ಸಂತಸದ ವಿಚಾರವನ್ನು ಹೇಳ್ತಾರೆ..! ಮೇಡಂ ನೀವು ಮಗುವನ್ನು ಪಡೆಯುತ್ತಿದ್ದೀರಿ ಅಂತ..! ಈಕೆ ಗರ್ಭಿಣಿಯಾಗಿದ್ದು ಗೊತ್ತೇ ಇರ್ಲಿಲ್ಲ..! ದೇಹದ ತೂಕವಾದರೂ ಹೆಚ್ಚಾಗ ಬೇಕಿತ್ತಲ್ಲಾ..? ತೂಕವೂ ಜಾಸ್ತಿಯಾಗಿರಲಿಲ್ಲ..! ಹೊಟ್ಟೆಯೂ ಬಂದಿರಲಿಲ್ಲ…! ಆದರೂ ಹೊಟ್ಟೆಯಲ್ಲಿ ಮಗುವಿರುವ ವಿಷಯ ಕೇಳಿ ದಂಪತಿಗಳು ಸಂಭ್ರಮಿಸಿದ್ರು..! ಈ ಸಿಹಿ ಸುದ್ದಿ ತಿಳಿದ ಒಂದೇ ಗಂಟೆಯೊಳಗೆ ಹೆಣ್ಣು ಮಗುವಿನ ಜನನವೂ ಆಯಿತು..! ಏನೇ ಆಗಲಿ.. ಆ ಮಹಿಳೆ ಕೊನೆಗೂ ಅಮ್ಮಾ ಆದಳಲ್ಲ..! ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ..! ಇವರ ಚಿಕ್ಕ ಸಂಸಾರದಲ್ಲಿ ಸದಾ ಸಂತಸ ತುಂಬಿರಲಿ ಅಂತ ಹರಸೋಣ.

  • ಶಶಿಧರ ಡಿ ಎಸ್ ದೋಣಿಹಕ್ಲು

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

ಸಚಿನ್ Vs ವಾರ್ನ್, ಇಂದು ಆಲ್ ಸ್ಟಾರ್ಸ್ ಟಿ20 ಸರಣಿ, ಕ್ರಿಕೆಟ್ ಲೋಕದ ದಿಗ್ಗಜರ ಸಮಾಗಮ..!

ಇದು ನಮ್ಮ ಕನ್ನಡ…ಇವರು ನಮ್ಮ ಕನ್ನಡಿಗರು..! ಬೆಂಗಳೂರಿನ ಜನರಿಗೆ ಕಿರಿಕ್ ಕೀರ್ತಿ ಪ್ರಶ್ನೆಗಳು..!

ಅವಳು ಸುಶ್ರಾವ್ಯ, ಇವನು ಸುಶಾಂತ್..! ಅವರ ಪ್ರೀತಿ ಕುರುಡಲ್ಲ…! ಅವನು ನೂರು ಸಲ ಐ ಲವ್ ಯೂ ಅಂದ್ರೂ ಅವಳು ಏನೂ ಹೇಳಲಿಲ್ಲ..

ನಿಮಗೆ ಸ್ಟೇಜ್ ಫಿಯರ್ ಇದ್ಯಾ..? ಡೋಂಟ್ ವರಿ ಭಯದ ಮುಂದೆ ಜಯವಿದೆ..! ಈ ಸ್ಟೋರಿ ಓದಿ..!

ಬರಲಿದೆ `ಬಲೂನ್ ಇಂಟರ್ನೆಟ್..’! ಹೊಸ ಯೋಜನೆಯಲ್ಲಿ ಭಾರತ ಸರ್ಕಾರದ ಜೊತೆ ಕೈ ಜೋಡಿಸಿದ ಗೂಗಲ್..!

ದೇಶದ ಮೊದಲ `ಅಂಧರ ಸ್ನೇಹಿ’ ರೈಲ್ವೇ ನಿಲ್ದಾಣ..! ಮೈಸೂರು ರೈಲ್ವೇ ನಿಲ್ದಾಣದಲ್ಲೀಗ ಬ್ರೈಲ್ ಲಿಪಿಯಲ್ಲಿ ರೈಲ್ವೇ ವೇಳಾಪಟ್ಟಿ..!

ನಮ್ ಟೈಮು ಸರಿಇಲ್ಲ ಅಂತಾದ್ರೆ ಏನೆಲ್ಲಾ ಆಗುತ್ತೆ ಗೊತ್ತಾ…?! ಕನ್ನಡದ ಹುಡುಗರು ಮಾಡಿದ ಈ ಕಿರುಚಿತ್ರ ನೋಡಿ ಗೊತ್ತಾಗುತ್ತೆ..!

ಸ್ಮೋಕಿಂಗ್ ಈಸ್ ಇಂಜ್ಯೂರಿಯಸ್ ಟು ಹೆಲ್ತ್, ಹಾರ್ಟ್ ಅಂಡ್ ಫ್ಯಾಮಿಲಿ..! ಧೂಮಪಾನ ತ್ಯಜಿಸಿದ 20 ನಿಮಿಷದಿಂದಲೇ ಹಂತಹಂತವಾಗಿ ಮೊದಲಿನಂತೆಯೇ ಆಗ್ತೀರಿ..!

ಚೋಟಾ ಟೀಚರ್ ಬಂದ್ರು ದಾರಿ ಬಿಡಿ..! 11ರ ಪೋರ 125 ಗ್ರಾಮಕ್ಕೆ ಅಕ್ಷರದಾನ ಮಾಡುತ್ತಿದ್ದಾನೆ..!

`ವಾಸ್ತುಪ್ರಕಾರ’ ಮನೆಮುಂದೆ ಮರಗಳು ಇರಬಾರದಂತೆ..! ವಾಸ್ತುಪ್ರಕಾರ ಮರಗಳನ್ನು ಸಾಯಿಸುತ್ತಿರೊ ಇವರೆಂಥಾ ಅವಿವೇಕಿಗಳು..!

ಬ್ರಿಟಿಷ್ ಏರ್ ವೇಸ್ ವಿಮಾನದಲ್ಲಿ ಕನ್ನಡ ಕಲರವ..! ರಾಜ್ಯೋತ್ಸವದ ದಿನ ಕನ್ನಡಿಗರಿಗೆ ಕನ್ನಡದಲ್ಲೇ ಸ್ವಾಗತ..!

ನಮ್ಮ ಕನ್ನಡ ಹುಡುಗರ ಕನ್ನಡ ಹಾಡು..! ಕನ್ನಡ ಕನ್ನಡ ಕನ್ನಡ ಅಂತ ಹೆಮ್ಮೆಯಿಂದ ಹಾಡಿದ್ದಾರೆ ನಮ್ಮ ಹೊಸಪೇಟೆ ಹುಡುಗರು

17ರ ಪೋರ ಈಗ `ನಾಸ’ ಉದ್ಯೋಗಿ..! ಕ್ಯಾವೆಲಿನ್ ಗೆ ಇನ್ನೂ 17ವರ್ಷ ಈಗಲೇ ವಿಮಾನ ಹಾರಿಸಬಲ್ಲ..!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article