ಕನ್ನಡ ಚಿತ್ರರಂಗದಲ್ಲಿ ಇತ್ತೀಚಿಗೆ ಭಾರಿ ಪಾಸಿಟಿವ್ ಬೆಳವಣಿಗೆಗಳಾಗುತ್ತಿವೆ. ಇಷ್ಟು ದಿನ ಸ್ಯಾಂಡಲ್ ವುಡ್ ನಲ್ಲಿ ಗುಂಪುಗಾರಿಕೆ ಇದೆ.ಆ ಗುಂಪಿನವರನ್ನು ಕಂಡ್ರೆ, ಈ ಗುಂಪಿಗೆ ಆಗಲ್ಲ. ಈ ಗುಂಪಿನವರನ್ನು ಕಂಡ್ರೆ, ಆ ಗುಂಪಿಗೆ ಆಗಲ್ಲ ಅನ್ನೋ ಅಂತೆಕಂತೆಯ ಸಂತೆಯೇ ನಿರ್ಮಾಣವಾಗಿತ್ತು. ಇದಕ್ಕೆ ತಕ್ಕಂತೆ ಬೆಂಕಿ ಇಲ್ಲದೆ ಹೊಗೆ ಆಡಿಸುವ ಅದೆಷ್ಟೋ ಮಂದಿ ನಮ್ಮ ನಿಮ್ಮ ನಡುವೆ ಇದ್ದಾರೆ.
ಇನ್ನೂ ಹೈಟೆಕ್ ಅಭಿಮಾನಿಗಳಂತೂ ಕಾಲು ಕೆರೆದುಕೊಂಡು ಕಿಚ್ಚ ಸುದೀಪ್ ಹಾಗೂ ಶಿವಣ್ಣ ಹೆಸರಲ್ಲಿ ಫೇಸ್ ಬುಕ್ ನಲ್ಲಿ ಕೆಸರೆರಚಾಟ ನಡೆಸಿದ್ದು ಹಳೆ ಸುದ್ದಿ. ಆದರೆ ಈಗ ಇದೆಲ್ಲ ಬೆಳವಣಿಗೆಗಳಿಂದ ಎಚ್ಚೆತ್ತುಕೊಂಡಿರುವ ಸ್ಟಾರ್ ನಟರು ಅಭಿಮಾನಿಗಳನಡುವಿನಈ ಮುಸಿಕಿನ ಗುದ್ದಾಟಕ್ಕೆ ತೆರೆ ಎಳೆಯೋ ನಿರ್ಧಾರ ಮಾಡಿದಂತಿದೆ.
ಹಾಗಾಗೆ ಕನ್ನಡ ಚಿತ್ರರಂಗ ‘ಒಂದು’. ನಾವೆಲ್ಲ ಇಲ್ಲಿ ಅಣ್ಣ ತಮ್ಮಂದಿರ ಹಾಗೆ ಅಂತ ಅಭಿಮಾನಿಗಳಿಗೆ ಬುದ್ದಿ ಹೇಳೋ ಕೆಲಸವನ್ನ ಸ್ಟಾರ್ ನಟರೂ ಮಾಡುತ್ತಲೇ ಇದ್ದಾರೆ. ಇನ್ನು ನಾವೆಲ್ಲರೂ ಒಂದೇ ನಮ್ಮ ನಡುವೆ ಯಾವುದೇ ತಾರತಮ್ಯಗಳಿಲ್ಲ ಅನ್ನೋದನ್ನ ಖುದ್ದು ತೋರಿಸುವ ಸಲುವಾಗಿ ಕರುನಾಡ ಚಕ್ರವರ್ತಿ ಡಾ.ಶಿವರಾಜ್ ಕುಮಾರ್ ಒಂದು ನಿರ್ಧಾರ ಕೈಗೊಂಡಿದ್ದಾರೆ.
ಹೌದು, ಕನ್ನಡ ಚಲನಚಿತ್ರ ನಿರ್ದೇಶಕರ ಸಂಘ ಆಯೋಜಿಸುತ್ತಿರುವ ‘ಕರ್ನಾಟಕ ಸೂಪರ್ ಸ್ಟಾರ್ ಕ್ರಿಕೆಟ್ ಲೀಗ್’ ಕುರಿತಾಗಿ ಶಿವಣ್ಣ ತೆಗೆದುಕೊಂಡಿರೋ ನಿರ್ಣಯ ಚಿತ್ರರಂಗದ ಒಗ್ಗಟ್ಟಿಗೆ ಹಿಡಿದಿರೋ ಕೈಗನ್ನಡಿಯಂತಿದೆ. ಶಿವಣ್ಣ ”ಅಪ್ಪಾಜಿ ಹೆಸರಿನ ತಂಡಕ್ಕೆ ನಾನು ಕ್ಯಾಪ್ಟನ್ ಆದ್ರೆ, ಅದರಲ್ಲಿ ವಿಶೇಷ ಏನಿದೆ. ನಾನು ವಿಷ್ಣುವರ್ಧನ್ ತಂಡದ ಉಸ್ತುವಾರಿ ವಹಿಸಿಕೊಳ್ಳುತ್ತೇನೆ. ಚಿತ್ರರಂಗದಲ್ಲಿ ಎಲ್ಲರೂ ಒಂದೇ. ಪರಸ್ಪರ ಸೌಹಾರ್ದ ಇದೆ ಅನ್ನೋದು ಎಲ್ಲರಿಗೂ ಗೊತ್ತಾಗಲಿ” ಅಂತ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹೇಳಿದ್ದಾರೆ.
‘ಕರ್ನಾಟಕ ಸೂಪರ್ ಸ್ಟಾರ್ ಕ್ರಿಕೆಟ್ ಲೀಗ್’ ಪಂದ್ಯದ ತಂಡಗಳ ಕುರಿತಾಗಿ ಮಾತನಾಡಲು ನಿರ್ದೇಶಕ ಶೇಷಾದ್ರಿ ಹಾಗೂ ಎಂ.ಎಸ್.ರಮೇಶ್, ಶಿವರಾಜ್ ಕುಮಾರ್ ಮನೆಗೆ ಹೋಗಿದ್ದ ವೇಳೆ ಶಿವಣ್ಣ ಈ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ. ಇನ್ನು
”ನನ್ನನ್ನ ವಿಷ್ಣುವರ್ಧನ್ ತಂಡಕ್ಕೆ ಕ್ಯಾಪ್ಟನ್ ಮಾಡಿ” ಅಂತ ಖುದ್ದು ಶಿವಣ್ಣ ಹೇಳಿರೋದು ನಿರ್ದೇಶಕ ಶೇಷಾದ್ರಿ ಹಾಗೂ ಎಂ.ಎಸ್.ರಮೇಶ್ ಖುಷಿ ತಂದಿದೆಯಂತೆ. ಶಿವಣ್ಣ ತೆಗೆದುಕೊಂಡಿರುವ ಈ ನಿರ್ಣಯ, ಡಾ.ರಾಜ್ ಹಾಗೂ ವಿಷ್ಣುವರ್ಧನ್ ಅಭಿಮಾನಿಗಳಿಗೆ ಖುಷಿ ನೀಡುವುದರಲ್ಲಿ ಸಂದೇಹವೇ ಇಲ್ಲ.
- ಶ್ರೀ
POPULAR STORIES :
ಐಪಿಎಲ್ ಮ್ಯಾಚ್ನಿಂದ ಕೊಹ್ಲಿ ಸಸ್ಪೆಂಡ್..!!? ಕೊಹ್ಲಿ ನಸೀಬು ಹೀಗ್ಯಾಕೆ ಆಯ್ತು..!!?
`ಕಾಡಿಗೆ ಬೆಂಕಿ’ 50000 ಜನರು ಸುಟ್ಟು ಕರಕಲಾದರು..!?
ಪ್ರಿಯಾಂಕ ಲಡ್ಡು, ರಾಹುಲ್ ಫುಡ್ಡು, ಶೀಲಾ ಉಪ್ಪಿನಕಾಯಿ..! ಉತ್ತರ ಪ್ರದೇಶದಲ್ಲಿ ಪ್ರಶಾಂತ್ `ಕೈ’ ಚಳಕ..!?
ಕ್ರಿಸ್ ಗೇಲ್ ಗೆ ಡೇಟಿಂಗ್ ಆಫರ್ ಕೊಟ್ಟವಳ ಕಂಡಿಷನ್ ಏನ್ ಗೊತ್ತಾ..?
ದಿಲ್ಶಾನ್ ಹೆಂಡ್ತೀನಾ ಉಪುಲ್ ತರಂಗ ಮದ್ವೆಯಾದ..!? ದಿನೇಶ್ ಹೆಂಡ್ತೀನಾ ಮುರಳಿ ವಿಜಯ್ ವರಿಸಿದ..!!