ಕಾಂಗ್ರೆಸ್‍ನ ಹಿರಿಯ ಮುಖಂಡರಾದ ಎಸ್.ಎಂ ಕೃಷ್ಣ ಅವರು ಪಕ್ಷದಿಂದ ಹೊರ ಬಂದ ಬೆನ್ನಲ್ಲೆ ಅವರು ಜೆಡಿಎಸ್ ಅಥವಾ ಬಿಜೆಪಿ ಕಡೆ ಮುಖ ಮಾಡ್ತಾರೆ ಅನ್ನೋ ಗಾಸಿಪ್‍ನ ಮಧ್ಯೆಯೇ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಇವಕ್ಕೆಲ್ಲಾ ತಿಲಾಂಜಲಿ ಇಟ್ಟಿದ್ದಾರೆ. ಕಾಂಗ್ರೆಸ್ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ ಬಳಿಕ ಎಸ್.ಎಂ ಕೃಷ್ಣ ಅವರು ಬಿಜೆಪಿ ರಾಜ್ಯಾಧ್ಯಕ್ಷ ಅಮೀತ್ ಶಾ ಅವರನ್ನು ಭೇಟಿ ಮಾಡಿದ್ದು ಅವರು ಬಿಜೆಪಿ ಸೇರೋದು ಸಂಪೂರ್ಣ ಖಚಿತ ಎಂದು ಯಡಿಯೂರಪ್ಪ ಹೇಳಿದ್ದಾರೆ. ಎಡಿಯೂರು ಸಿದ್ದಲಿಂಗೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಮಾತನಾಡಿದ ಅವರು ನಾನು ಈ ಹಿಂದೆಯೆ ಕೃಷ್ಣ ಅವರು ಬಿಜೆಪಿ ಸೇರೋದಾದ್ರೆ ಅವರಿಗಾಗಿಯೆ ನಮ್ಮ ಪಕ್ಷ ಬಾಗಿಲು ತೆರೆದಿರುತ್ತೆ ಎಂದು ಹೇಳಿದ್ದೆ. ಈಗಲೂ ಹೇಳುತ್ತೇನೆ ಎಸ್.ಎಂ.ಕೃಷ್ಣ ಬಿಜೆಪಿ ಸೇರೋದು ಸಂಪೂರ್ಣ ಖಚಿತ ಎಂದು ಅವರು ಹೇಳಿದ್ದಾರೆ. ಈಗಾಗ್ಲೆ ಪಕ್ಷದ ಮುಖಂಡರಾದ ಆರ್.ಅಶೋಕ್ ಎಸ್.ಎಂ.ಕೃಷ್ಣ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದು ಶೀಘ್ರವೇ ಒಂದೊಳ್ಳೆ ಸುದ್ದಿ ಬರಲಿದೆ ಎಂದು ಬಿಎಸ್‍ವೈ ಭರವಸೆಯ ಮಾತನಾಡಿದ್ದಾರೆ.
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಸತ್ರೂ ಲವ್ ಮ್ಯಾರೇಜ್ ಆಗಲ್ವಂತೆ ಈ ನಟಿ.
ಶುಭ ಶುಕ್ರವಾರದಂದು ತೆರೆಗೆ ಬರಲಿದೆ ಕುಳ್ಳನ ಚೌಕ
ಬಜೆಟ್-2017: ಯಾವುದು ತುಟ್ಟಿ, ಯಾವುದು ಅಗ್ಗ..?
ಮ್ಯಾಟ್ರಿಮೋನಿ ವೆಬ್‍ಸೈಟ್‍ಗಳಲ್ಲಿ ನಂಬರ್ ಕೊಡೋಕು ಮುನ್ನ ಈ ಸ್ಟೋರಿನ ಮಿಸ್ ಮಾಡ್ದೆ ಓದಿ
ವರದಕ್ಷಿಣೆ ಕಿರುಕುಳದಿಂದ ಬೇಸತ್ತ ಯುವತಿ ಮಾಡಿದ್ದಾದ್ರೂ ಏನು..?
ಬಿಗ್‍ಬಾಸ್‍ನಲ್ಲಿ ಗೆದ್ದ ಹಣವನ್ನ ಏನ್ಮಾಡ್ತಾರಂತೆ ಗೊತ್ತಾ ಪ್ರಥಮ್..?
ಬಾಗಲಕೋಟೆ ಹುಡುಗರ ಮಾಸ್ತಿಗುಡಿ ಕ್ಲೈಮ್ಯಾಕ್ಸ್ ಗೆ ಸಿಕ್ತು ಸಖತ್ ರೆಸ್ಪಾನ್ಸ್..!