ಬೇಸಿಗೆ ರ(ಸ) ಜೆ – ಮಕ್ಕಳಿಗೊ? ಪೋಷಕರಿಗೋ ?

1
90

ಓ ಬಾಲ್ಯವೇ ! ನೀ ಮತ್ತೊಮ್ಮೆ ಬರಲಾರೆಯಾ? ನನಗೆ ಪದೇ ಪದೇ ನಿನ್ನ ನೆನಪಾಗುತ್ತಿದೆ.”ಬಾರ್ ಬಾರ್ ಆತೀ ಹೈ ಮುಜ್ಕೋ ಮಧುರ್ ಯಾದ್ ಬಚ್ ಪನ್ ತೇರೀ, ಗಯಾ ಲೇಗಯಾ ತೂ ಜೀವನ್ ಕೀ ಸಬ್ ಸೇ ಮಸ್ತ್ ಖುಶೀ ಮೇರೀ” ಅನ್ನೋ ಶ್ರೀಮತಿ ಸುಭದ್ರ ಕುಮಾರೀ ಚೌಹಾನ್ ರ ಕವಿತೆಯ ಸಾಲುಗಳು ನಮಗೆ ನಮ್ಮ ಮಲಗಿದ್ದ ಬಾಲ್ಯದ ನೆನಪನ್ನು ಮತ್ತೆ ಮತ್ತೆ ಬಡಿದೆಬ್ಬಿಸುತ್ತವೆ.

ನಿಜ! ಈ ಬಾಲ್ಯ ಅತ್ಯಂತ ಸುಂದರ ಹಾಗೂ ಸುಮಧುರ ನೆನಪುಗಳ ಬುತ್ತಿ ; ಬಿಚ್ಚಿ ನೋಡಿದಾಗ ಸಿಗುವ ಆನಂದ ಅವರ್ಣನಾತೀತ.ಆದರೆ… ಈ ಸೂಪರ್ ಫ಼ಾಸ್ಟ್ ಸಮಯವೆಂಬುದು ನಿನ್ನನ್ನು ಅದೆಷ್ಟು ಬೇಗನೆ ತನ್ನ ತೆಕ್ಕೆಯೊಳಗೆ ಸೇರಿಸಿಕೊಂಡು ಹೊರಟೇ ಹೋಯಿತಲ್ಲ??? ಇಂದಿನ ಬಾಲ್ಯದ ದಿನಗಳು ಅಂದಿನ ದಿನಗಳಾಗೋಯ್ತು. ಅಂದಿನ ಎಂಬ ಪದ ಪ್ರಯೊಗ ಮಾಡಿದಲ್ಲಿ ಅತಿಶಯೋಕ್ತಿ ಎನಿಸಲಾರದು ಯಾಕಂದ್ರೆ ಅಂದಿನ ನಮ್ಮ ಬಾಲ್ಯಕ್ಕೂ ಇಂದಿನ ಮಕ್ಕಳ ಬಾಲ್ಯಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಇದು ಕಂಪ್ಯೂಟರ್ ಯುಗ ಕಣ್ರಿ… ಈಗಿನ ಪುಟಾಣಿಗಳಿಗೆ ಟೀವಿ, ಮೊಬೈಲ್, ಕಂಪ್ಯೂಟರ್ ಅನ್ನೊ ಯಂತ್ರಗಳ ಭಾಷೆ ಬಿಟ್ರೆ ಬೇರೇನೂ ಗೊತ್ತೇ ಇಲ್ಲ. ಟಿ.ವಿ ಕಾರ್ಟೂನ್ ನ ಅದ್ಭುತ ಪ್ರಪಂಚ ದಲ್ಲಿ ತಮ್ಮ ಮಕ್ಕಳು ವಿಹರಿಸುತ್ತಾರೆ. ಹೋಮ್ ವರ್ಕ್ ಮಾಡದಿರುವ ಮಗ, ಜೊತೆಗೆ ಅಮ್ಮನ ಬೈಗುಳ, ಸ್ನೇಹಿತರ ಧಮ್ಕಿಯ ಮಾತುಗಳು ಇಂಥ ಸಂದೇಶ ಗಳನ್ನು ಕೊಡೋ ಕಾರ್ಟೂನ್ ಧಾರಾವಾಹಿ ಗಳಿಂದ ಮಕ್ಕಳು ಎನನ್ನು ತಾನೆ ಕಲಿಯಲು ಸಾಧ್ಯ ನೀವೆ ಹೇಳಿ ? ನಾವು ವಾರ ಇಡೀ ಕಾದು ದೂರದರ್ಶನದಲ್ಲಿ ಬರೊ ರಾಮಾಯಣ,ಮಹಾಭಾರತ ವನ್ನು ಅಜ್ಜ, ಅಜ್ಜಿ, ಅಪ್ಪ, ಅಮ್ಮ ಹಾಗು ಅಕ್ಕ ಪಕ್ಕದಮನೆಯವರ ಜೊತೆ ಕೂತು ಅಗೊಮ್ಮೆ ಈಗೊಮ್ಮೆ ಇಣುಕಿ ನೋಡಬೇಕಿತ್ತಷ್ಟೆ. ಕಾಲಾಯ ತಸ್ಮೈ ನಮಃ ಅನ್ನೊ ಹಾಗೆ ಈಗ ಎಲ್ಲ ಅಪ್ ಗ್ರೇಡೆಡ್ ವರ್ಷನ್ ಗಳೆ..

ಇನ್ನು ಬೇಸಿಗೆ ರಜೆ ವಿಷಯಕ್ಕೆ ಬಂದ್ರೆ ಮುಗೀತು.. ಆಕಾಶಕ್ಕೆ ಹಾರೋಷ್ಟು ಸಂಭ್ರಮ. ಹಿಂದಿನ ದಿನ ಅಮ್ಮ ನಮ್ಮ ಬಟ್ಟೆ ಬರೆಗಳ ಬ್ಯಾಗ್ ಅನ್ನು ಸಿದ್ದಪಡಿಸುತ್ತಿದ್ದಂತೆ ಅಜ್ಜಿ ಮನೆಗೆ ಹೋಗುವ ಕನಸು ಕಾಣುತ್ತ, ಮಾಮ ಬರುವ ಹಾದಿಯನ್ನೇ ಕಾಯುತ್ತಿದ್ದೆವು. ಮಾಮನ ಕೈಹಿಡಿದುಕೊಂಡು ನನ್ನ ತಮ್ಮನೊಂದಿಗೆ ಅಮ್ಮನಿಗೆ ಕೈ ಬೀಸಿ ಬಸ್ಸೇರಿ ಹೊರಟಾಗ ಅಮ್ಮನ ಕಣ್ಣಂಚಿನಲ್ಲಿ ಕಂಡ ಆ ಕಂಬನಿಯನ್ನು ಮರೆಯುವುದುಂಟೆ? ಆದರೆ ಇದ್ಯಾವುದರ ಪರಿವೆ ಇಲ್ಲದ ನಾವು ರಜೆಯ ಮಜವನ್ನು ಸವಿಯಲು ಅಜ್ಜಿಮನೆಗೆ ಹೋಗಿಯೆ ಬಿಟ್ಟೆವು. ಅಲ್ಲಿ ನಾವು ಮಾಮನ, ಚಿಕ್ಕಮ್ಮನ ಮಕ್ಕಳೊಡಗೂಡಿ ಆಡಿದ ಆಟಗಳೆಷ್ಟೋ ಹತ್ತಿದ ಗುಡ್ಡ ಬೆಟ್ಟಗಳೆಷ್ಟೋ, ಮರ ಹತ್ತಿ ಕೊಯ್ದ ಮಾವಿನ ಹಣ್ಣುಗಳೆಷ್ಟೋ, ಅತ್ತೆ ಮಾಡಿ ತುಂಬಿಟ್ಟ ಡಬ್ಬ ದಿಂದ ಕದ್ದು ತಿಂದ ಹಲಸಿನ ಹಣ್ಣು ಹಪ್ಪಳ, ಕುರು ಮುರು ತಿಂಡಿಗಳೆಷ್ಟೋ ನಿಜಕ್ಕೂ ರೋಮಾಂಚಕ. ಗೇರು ಹಣ್ಣು ತಿಂದು ಅದರ ಬೀಜವನ್ನು (ಗೋಡಂಬಿ) ಮೆಲ್ಲಗೆ ನನ್ನ ತಮ್ಮ ಸಂಗ್ರಹ ಮಾಡಿಟ್ಟ ಬುಟ್ಟಿಯಿಂದ ತೆಗೆದು ನನ್ನ ಬುಟ್ಟಿಯೊಳಗೆ ಸೇರಿಸಿಕೊಂಡಾಗ ಅತೀ ಹೆಚ್ಚು ಸಂಗ್ರಹ ಮಾಡಿದ್ದೆನೆಂಬುದಕ್ಕೆ ಮಾಮನ ಬಳಿ ಶಬ್ಬಾಸ್ ಗಿರಿ ಪಡೆದುಕೊಂಡ ಕ್ಶಣದಲ್ಲಂತೂ ಎನೋ ಸಾಧಿಸಿದ ಸಂಭ್ರಮ. ಆಗ ನನ್ನ ತಮ್ಮ ಪಿಳಿ ಪಿಳಿ ನೊಡಿದ ಅ ನೋಟನ ಮರೆಯಲಸಾಧ್ಯ. ಇನ್ನು ಎಲ್ಲರೊಡಗೂಡಿ ವರ್ಷಕ್ಕೊಮ್ಮೆ ಬರುವ ಬಯಲಾಟವನ್ನು ನೋಡಲು ತುದಿಗಾಲಲ್ಲಿ ನಿಲ್ಲುತ್ತಿದ್ದೆವು. 3 ಕಿ.ಮೀ ನಡೆದುಕೊಂಡು ಹೋಗಿ ದೇವಿ ಮಹಾತ್ಮೆ ಬಯಲಾಟ ನೊಡುತ್ತಿದ್ದಂತೆ ಬರುತ್ತಿದ್ದ ನಿದ್ದೆಯನ್ನು ತಡೆಯಲು ಭಟ್ಟರ ಹೋಟೆಲಿಂದ ಮಾಮ ಕೊಡಿಸಿದ್ದ ಆ ಜಿಲೇಬಿಯ ಸವಿಯು ಇನ್ನು ಬಾಯಿಚಪ್ಪರಿಸುವಂತೆ ಮಾಡುತ್ತಿದೆ. ನಿಜಕ್ಕೂ ಎಂಥ ಅಧ್ಬುತ ಅಮೂಲ್ಯವಾದ ಬಾಲ್ಯದ ಕ್ಷಣಗಳವು. ಸಂಪೂರ್ಣ ರಜೆಯ ಮಜವನ್ನು ಸವಿದೆ ನಾವು ಅಜ್ಜಿ ಮನೆಯಿಂದ ನಮ್ಮ ಮನೆಗೆ ಹೊರಡುತ್ತಿದ್ದೆವು.

ಆದರೆ ಈಗ ಬೇಸಿಗೆ ರಜೆಗೆ ಒಂದು ತಿಂಗಳ ಮೊದಲೇ ಅಪ್ಪ ಅಮ್ಮಂದಿರು ಸಮ್ಮರ್ ಕ್ಯಾಂಪ್ ಎಂಬ ಅಜ್ಜಿ ಮನೆಗೆ ಮಕ್ಕಳನ್ನು ಕಳುಹಿಸಲು ಅರ್ಜಿ ತುಂಬುತ್ತಾರೆ. ಯಾಕೆ? ಅನ್ನೊ ಪ್ರಶ್ನೆಗೆ ಬಹುಶಃ ಉತ್ತರ ಅವರ ಬಳಿಯೆ ಇದೆ… ಮಕ್ಕಳು ಇವರಿಗೆ ಮನೆಯಲ್ಲಿ ಬೇಡವೇ? ಅವರ ರಜೆ ಇವರಿಗೆ ಸಜೆಯೆ? ಇಂದಿನ ವಿದ್ಯಾಭ್ಯಾಸ ಪದ್ದತಿಗಳಿಂದ ವರ್ಷ ಪೂರ್ತಿ ಬಹಳಷ್ಟು ಒತ್ತಡಕ್ಕೆ ಸಿಲುಕುತ್ತಿರುವ ಮಕ್ಕಳನ್ನು ಡೇರೆ ಹಾಕಿಕೊಂಡು ಕಾಯುತ್ತಿರುವ ಸಮ್ಮರ್ ಕ್ಯಾಂಪ್ ಗಳೆಂಬ ಕೋಟೆಯೊಳಗೆ ತಳ್ಳಿ ಅವರ ಭಾವನೆಗಳನ್ನು ಬಲಿ ಪಶು ಮಾಡುತ್ತೀರ? ನಿಮ್ಮ ಸಜೆಯನ್ನು ಅವರ ಮೇಲೆ ಹೇರುತ್ತೀರ? ಯಾಕೆ? ಇವೆಲ್ಲವುಗಳಿಂದ ಅವರಿಗೆ 2ಡೇ 2 ತಿಂಗಳಿನ ಬ್ರೇಕ್ ಯಾಕೆ ಕೊಡಬಾರದು? ಇವೆಲ್ಲ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ಎಂದಾದರು ಮಾಡಿದ್ದೀರ? ಬಹುಶಃ ಇರಲಾರದು. ಸಮ್ಮರ್ ಕ್ಯಾಂಪನ್ನು ಟಿಪ್ಪು ಸುಲ್ತಾನನ ಕೋಟೆಯೊಳಗೆ ಮರಿ ಸೈನಿಕರಂತೆ ಇರುವ ಮಕ್ಕಳು ಜೈಲುವಾಸದ ಶಿಕ್ಶೆಯನ್ನು ಅನುಭವಿಸಬೇಕಾ?
ಈ ರಜೆಯಲ್ಲಾದರೂ ದಯವಿಟ್ಟು ಅವರನ್ನು ಅವರಾಗಿರಲು ಬಿಡಿ…ಅದಕ್ಕೆ ನೀವು ಮಾಡಬೇಕಾಗಿರುವುದಿಷ್ಟೆ.

1.ರಜೆಯಲ್ಲಿ ನಿಮ್ಮ ಊರಿಗೆ /ಸಂಬಂಧಿಕರ ಮನೆಗೆ ಕರೆದುಕೊಂಡು ಹೋಗಿರಿ. ವಿವಿಧ ಜನರೊಂದಿಗೆ ಮುಕ್ತ ವಾತಾವರಣದಲ್ಲಿ ಮಕ್ಕಳನ್ನು ಬೆರೆಯಲು ಬಿಡಿ. ಪ್ರತಿಯೊಬ್ಬ ಸಂಬಂಧಿಕರ ಪರಿಚಯ ಮಾಡಿಕೊಡಿ.
2.ಹಳ್ಳಿ,ಗುಡ್ಡ,ಬೆಟ್ಟ,ನದಿ,ಮರ,ಗಿಡ,ಪ್ರಾಣಿ,ಪಕ್ಶಿ ಇವೆಲ್ಲವುಗಳ ಪ್ರಾಮುಖ್ಯತೆ ತಿಳಿಸಿ ಸಂಕ್ಷೇಪ ಪರಿಚಯ ಮಾಡಿಕೊಡಿ. ನಿಸರ್ಗದ ಸವಿಯನ್ನು ಸವಿಯಲು ಬಿಡಿ.
3.ಯಾವುದೂ ಆಗದಿದ್ದ ಪಕ್ಶದಲ್ಲಿ ಪ್ಯಾಮಿಲಿ ಜೊತೆ ನಿಸರ್ಗ ಧಾಮಗಳಿಗೆ ಪ್ರವಾಸ ಹೊರಡಿ..ಒಬ್ಬಂಟಿಯಾಗಿರಲು ಬಿಡಬೇಡಿ.
4.ದಿನದಲ್ಲಿ ಕನಿಷ್ಟಪಕ್ಷ ೨ ಹೊತ್ತಿನ ಊಟ ವನ್ನಾದರೂ ಅವರ ಜೊತೆ ಮಾಡಿ ಅವರಿಗೆ ಬೆಳೆಗಳ ಉತ್ಪಾದನೆಯ ಬಗ್ಗೆ ಹಾಗೂ ಅದರ ಹಿಂದಿರುವ ಜನರ ಪರಿಶ್ರಮದ ಬಗ್ಗೆ ತಿಳಿ ಹೇಳಿ.
5.ತಾವು ತಿಂದ ತಟ್ಟೆಯನ್ನು ತಾವೆ ತೊಳಿಯಲು ಹೇಳಿ ಇದರಿಂದ ಪ್ರತಿ ಕೆಲಸದ ಮಹತ್ವವನ್ನು ಅವರು ತಿಳಿಯುವಂತಾಗುತ್ತದೆ.
6. ಪ್ರತಿ ದಿನ ಹೊಸ ಹೊಸ ವಿಷಯಗಳನ್ನು ಅವರು ತಿಳಿಯುವಂತೆ ಮಾಡಿ. ಒಳ್ಳೊಳ್ಳೆ ಪುಸ್ತಕಗಳನ್ನು ಓದುವಂತೆ ಪ್ರೇರೇಪಿಸಿ. ಅವರ ಮನಬಂದಂತೆ ಎನನ್ನಾದರು ಬರೆಯಲು ಹೇಳಿ, ಚಿತ್ರ ಬಿಡಿಸಲು ಹೇಳಿ, ಅವರ ಹವ್ಯಾಸ, ಆಸಕ್ತಿಗಳನ್ನು ಪ್ರೇರೇಪಿಸಿ
7..ನಿಮ್ಮ ಅಡುಗೆ ಕೋಣೆಯಲ್ಲಿ ಅವರನ್ನು ಸಹಾಯ ಮಾಡಲು ಹೇಳಿ. ಸಣ್ಣ ಪುಟ್ಟ ಜೂಸ್ ಹಾಗೂ ಸಲಾಡ್ ಗಳನ್ನು ಮಾಡಲು ಹೇಳಿಕೊಡಿ
8.ಎಲ್ಲ ಹಬ್ಬ ಹರಿದಿನಗಳನ್ನು ಅವರು ಮಿಸ್ಸ್ ಮಾಡದಂತೆ ನೋಡ್ಕೊಳ್ಳಿ.
9.ಹೊಸ ಕಥೆಗಳನ್ನು ಹಾಗೂ ನಿಮ್ಮ ಬಾಲ್ಯದ ಸವಿನೆನಪನ್ನು ಅವರೊಂದಿಗೆ ಹಂಚ್ಕೊಳ್ಳಿ.
10. ನಿಮಗೆ ಗೊತ್ತಿರುವ ಹಾಡುಗಳು, ನೃತ್ಯಗಳ ಬಗ್ಗೆ ಹೇಳ್ಕೊಡಿ.
11..ನೀವು ಉದ್ಯೋಗಕ್ಕೆ ಹೊರಗೆ ಹೋಗುವಿರಾದಲ್ಲಿ ನಿಮ್ಮ ಬಿಡುವಿನ ಸಮಯದಲ್ಲಿ ಇವುಗಳನ್ನೆಲ್ಲ ಮಾಡಬಹುದು.ಹಾಗೂ ವರ್ಕ್ ಪ್ಲೇಸ್ಗೆ ಅವರನ್ನು ಕರೆದುಕೊಂಡು ಹೋಗಿ ನಿಮ್ಮ ಕೆಲಸಮಾಡುವ ಹಿಂದಿರುವ ಪ್ರಾಮುಖ್ಯತೆಯನ್ನು ಅವರಿಗೆ ತಿಳಿ ಹೇಳಿ.
12.ಟಿ.ವಿ,ಕಂಪ್ಯುಟರ್,ಮೊಬೈಲ್ ಗಳಿಂದ ಅವರನ್ನು ದಯವಿಟ್ಟು ದೂರವಿಡಿ.

ಇದಕ್ಕಿಂಥ ಅದ್ಭುತವಾದ ಸಮ್ಮರ್ ಕ್ಯಾಂಪನ್ನು ನೀವು ಬೇರೆಲ್ಲು ನಿಮ್ಮ ಮಕ್ಕಳಿಗೆ ಕೊಡಿಸಲು ಅಸಾಧ್ಯ..ನಿಮ್ಮ ಕಂದಮ್ಮಗಳು ಬಾಲ್ಯದ ಸವಿಯನ್ನು ಸವಿಯುವಂತಾಗಬೇಕು. ಇದು ನಿಮ್ಮ ಕೈಯಲ್ಲೇ ಇದೆ. ನೆನಪಿಡಿ…ಮುಂದಿನ ಕೆಲವೇ ಕೆಲವು ದಿನಗಳಲ್ಲಿ ನಿಮ್ಮ ಮಕ್ಕಳು ತುಂಬ ಎತ್ತರಕ್ಕೆ ಹಾರುತ್ತಾರೆ…ನಿಮಗಾಗ ವಹಿಸೋಕೆ ಅಲ್ಲಿ ಯಾವ ಪಾತ್ರಗಳೂ ಇರಲಾರದು…ನೀವಾಗ ಅಲ್ಲಿನ ಮೂಕ ಪ್ರೇಕ್ಷಕರಷ್ಟೆ.

  • ಸ್ವರ್ಣ ಭಟ್

POPULAR  STORIES :

ನಾಗರಹಾವಿಗೆ ಎರಡು ಕಾಲು..! ಜನರು ದಂಗುಬಡಿದು ಹೋದರು..!

ನಿಮ್ಮ ಮಗು ಬಳಿ ಸ್ಮಾರ್ಟ್ ಫೋನ್ ಇದೆಯಾ ಹುಷಾರ್..!!

ಬ್ಲೂಫಿಲಂ ವೀಕ್ಷಿಸುವಾಗ ಅವಳ ವಯಸ್ಸು ಕೇವಲ ಒಂಬತ್ತು..! ಇದು ಹದಿನಾರರಲ್ಲಿ ಕನ್ಯತ್ವ ಕಳೆದುಕೊಂಡ ಸನ್ನಿಯ ಜೀವನಗಾಥೆ

ಅಫ್ರಿದಿ ಮಗಳಿಗೆ ಕ್ಯಾನ್ಸರ್..! ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ ಸಾವಿನ ಸುದ್ದಿ..!

ಈ ವ್ಯಕ್ತಿಯನ್ನ ಗರ್ಭಿಣಿ ಅನ್ನೋಕೆ ಕಾರಣವೇನು ಗೊತ್ತಾ..? ಹೊಟ್ಟೆಯಲ್ಲಿದ್ದದ್ದು ಮಗುವಲ್ಲದೆ ಮತ್ತೇನು..?

ಒಂದು ವಾರ ಉಚಿತ ಯೋಗ ವಿತ್ ಹಿರೋಯಿನ್ ಸಂಜನಾ..!!

ಸತ್ತಮೇಲೂ ಇವರು ಗ್ರೇಟ್..!! ಸೆಲೆಬ್ರಿಟಿಗಳೆಂದರೇ ಹೀಗಿರಬೇಕು..?

ಬ್ಲೂ ಫಿಲಂ ನಟಿ ಶಕೀಲಾಳನ್ನು ಅವಳಪ್ಪ ಹೊಡೆದು ಸಾಯಿಸಿಬಿಡುತ್ತಿದ್ದ..! ಶಕೀಲಾ ಲೈಫ್ ಸ್ಟೋರಿ.

1 COMMENT

LEAVE A REPLY

Please enter your comment!
Please enter your name here