ಅದ್ದೂರಿಯಾಗಿ ನಡೆದ TNIT ಸೌಥ್ ಇಂಡಿಯಾ ಮೀಡಿಯಾ ಅವಾರ್ಡ್

TNIT ಕರ್ನಾಟಕದ ಮೊದಲ ವೆಬ್ ಪೂರ್ಟಲ್ ಆಗಿ ಬಂದು ಈಗ TNIT ಸೌಥ್ ಇಂಡಿಯಾ ಮೀಡಿಯಾ ಅವಾರ್ಡ್ ಹಂತದ ವರೆಗೆ ಹೆಮ್ಮರವಾಗಿ ಬೆಳೆದಿದೆ. ಕಳೆದ 8 ವರ್ಷಗಳಿಂದ ಮಾಧ್ಯಮದ ದಿಗ್ಗಜರಿಗೆ ಹಾಗೂ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿತ್ತು. ಈ ಬಾರಿಯೂ ಸೌಥ್ ಇಂಡಿಯಾದ ಮೀಡಿಯಾ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯ್ತು. ಶೃಂಗಾರ ಪ್ಯಾಲೇಸ್ ನಲ್ಲಿ ನಡೆದ ಈ ಕಾರ್ಯಕ್ರಮ ನೋಡುಗರಿಂದ ಸೈ ಎನಿಸಿಕೊಂಡಿತು.

ಎತ್ತ ನೋಡಿದರೂ ವೈಭವ, ಅದ್ದೂರಿ ಕಾರ್ಯಕ್ರಮ, ತಾರೆಯರ ಕಲರವ, ಅವಾರ್ಡಿಗಳ ಉತ್ಸಾಹ ಕಾರ್ಯಕ್ರಮಕ್ಕೆ ಬೇರೆಯದ್ದೆ ವ್ಯಾಖ್ಯಾನ ನೀಡಿತು. ಈ ಬಾರಿ 80 ಕ್ಕೂ ಅಧಿಕ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯ್ತು.

ಕಳೆದ 6 ತಿಂಗಳುಗಳಿಂದ ಸತತವಾಗಿ ಶ್ರಮವಹಿಸಲಾಗಿದೆ. TNIT ಮೀಡಿಯಾ ಎಂ ಡಿ ಸುಗುಣಾ ರಘು, ಸಿಇಓ ರಘು ಭಟ್, ಮಾರ್ಕೆಟಿಂಗ್ ಹೆಡ್ ಖುಷಿ, ಪ್ರಾಜೆಕ್ಟ್ ಹೆಡ್ ಡಾ. ಮಧುಕಾಂತಿ, ವೀಡಿಯೋ ಎಡಿಟರ್ ದೊರೆ ಅರಸ್ ಸೇರಿದಂತೆ TNIT ಮೀಡಿಯಾ ಈ ಬಾರಿ ಹೆಚ್ಚಿನ ಜವಾಬ್ದಾರಿ ತೆಗೆದುಕೊಂಡಿತ್ತು.

ಅರ್ಥಪೂರ್ಣವಾದ ಕಾನ್ ಕ್ಲೈವ್ ವನ್ನು ಚಂದನ್ ಶರ್ಮಾ ನಡೆಸಿಕೊಟ್ಟರು. ಹಾಗೂ ರವಿ ಮುದ್ದಿಯವರ ಪುಸ್ತಕ ಬಿಡುಗಡೆ ಸೇರಿದಂತೆ ಸಾಕಷ್ಟು ವಿಶೇಷತೆಗಳಿಗೆ ಈ ಬಾರಿಯ TNIT ಸೌಥ್ ಇಂಡಿಯಾ ಮೀಡಿಯಾ ಅವಾರ್ಡ್ ಸಾಕ್ಷಿಯಾಗಿತ್ತು.




