No menu items!
3.7 C
Munich
Wednesday, May 13, 2026

ತಮಿಳುನಾಡಿನಲ್ಲಿ ವಿಜಯ್ ಸರ್ಕಾರಕ್ಕೆ ವಿಶ್ವಾಸಮತ; 144 ಶಾಸಕರ ಬೆಂಬಲದೊಂದಿಗೆ ಬಹುಮತ ಸಾಬೀತು

Must read

ತಮಿಳುನಾಡಿನಲ್ಲಿ ವಿಜಯ್ ಸರ್ಕಾರಕ್ಕೆ ವಿಶ್ವಾಸಮತ; 144 ಶಾಸಕರ ಬೆಂಬಲದೊಂದಿಗೆ ಬಹುಮತ ಸಾಬೀತು

ತಮಿಳುನಾಡು: ತಮಿಳಗ ವೆಟ್ರಿ ಕಳಗಂ (ಟಿವಿಕೆ) ನೇತೃತ್ವದ ಸರ್ಕಾರ ತಮಿಳುನಾಡು ವಿಧಾನಸಭೆಯಲ್ಲಿ ವಿಶ್ವಾಸಮತ ಗೆದ್ದು ಬಹುಮತ ಸಾಬೀತುಪಡಿಸಿದೆ. ವಿಧಾನಸಭೆಯ ಮೂರನೇ ದಿನದ ಅಧಿವೇಶನದಲ್ಲಿ ಮುಖ್ಯಮಂತ್ರಿ ವಿಜಯ್ ವಿಶ್ವಾಸಮತ ಯಾಚನೆ ಮಂಡಿಸಿದ್ದು, ಸದನದಲ್ಲಿ ನಿರ್ಣಯಕ್ಕೆ ಬಹುಮತದ ಬೆಂಬಲ ದೊರೆಯಿತು.
ಮುಖ್ಯಮಂತ್ರಿ ವಿಜಯ್ ಮಂಡಿಸಿದ ವಿಶ್ವಾಸಮತ ನಿರ್ಣಯಕ್ಕೆ ಕಾಂಗ್ರೆಸ್, ಸಿಪಿಐ, ಸಿಪಿಐಎಂ, ವಿಸಿಕೆ ಸೇರಿದಂತೆ ಹಲವು ಪಕ್ಷಗಳು ಬೆಂಬಲ ಸೂಚಿಸಿವೆ.
ಇದೇ ವೇಳೆ, ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ನೇತೃತ್ವದ ಡಿಎಂಕೆ ಸದಸ್ಯರು ಸದನದಿಂದ ವಾಕ್ಔಟ್ ನಡೆಸಿ ಮತದಾನ ಪ್ರಕ್ರಿಯೆಯಿಂದ ದೂರ ಉಳಿದರು.
233 ಸದಸ್ಯ ಬಲದ ವಿಧಾನಸಭೆಯಲ್ಲಿ ನಡೆದ ಮತದಾನದಲ್ಲಿ 144 ಸದಸ್ಯರು ವಿಶ್ವಾಸ ನಿರ್ಣಯದ ಪರವಾಗಿ ಮತ ಚಲಾಯಿಸಿದರೆ, 22 ಮಂದಿ ವಿರೋಧ ವ್ಯಕ್ತಪಡಿಸಿದರು. ಐದು ಸದಸ್ಯರು ತಟಸ್ಥವಾಗಿ ಉಳಿದರು.
ವಿಶೇಷವೆಂದರೆ, ಸರ್ಕಾರದ ಪರವಾಗಿ ಮತ ಚಲಾಯಿಸಿದವರಲ್ಲಿ ಎಐಎಡಿಎಂಕೆಯ 25 ಶಾಸಕರು ಕೂಡ ಸೇರಿದ್ದರು. ಇದರಿಂದ ವಿಶ್ವಾಸಮತ ಪ್ರಕ್ರಿಯೆ ತಮಿಳುನಾಡು ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಗೆ ಕಾರಣವಾಗಿದೆ.

- Advertisement -spot_img

More articles

- Advertisement -spot_img

Latest article