No menu items!
17.7 C
Munich
Thursday, September 10, 2026

ವರಮಹಾಲಕ್ಷ್ಮೀ ಹಬ್ಬ: ಹೂವು-ಹಣ್ಣಿನ ದರ ಗಗನಕ್ಕೆ, ಗ್ರಾಹಕರು ಕಂಗಾಲು

Must read

ವರಮಹಾಲಕ್ಷ್ಮೀ ಹಬ್ಬ: ಹೂವು-ಹಣ್ಣಿನ ದರ ಗಗನಕ್ಕೆ, ಗ್ರಾಹಕರು ಕಂಗಾಲು

ಬೆಂಗಳೂರು: ನಾಡಿನೆಲ್ಲೆಡೆ ವರಮಹಾಲಕ್ಷ್ಮೀ ಹಬ್ಬಕ್ಕೆ ತಯಾರಿ ಜೋರಾಗಿದ್ದು, ರಾಜಧಾನಿ ಬೆಂಗಳೂರಿನ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ರಂಗೇರಿದೆ. ಹಬ್ಬಕ್ಕೆ ಕೇವಲ ಒಂದು ದಿನಗಳಷ್ಟೇ ಬಾಕಿ ಇರುವ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿ ಮಂದಿ ಕೆಆರ್ ಮಾರ್ಕೆಟ್ (ಕೃಷ್ಣರಾಜೇಂದ್ರ ಮಾರುಕಟ್ಟೆ) ಸೇರಿದಂತೆ ನಗರದ ಪ್ರಮುಖ ಮಾರುಕಟ್ಟೆಗಳಿಗೆ ಮುಗಿಬಿದ್ದಿದ್ದಾರೆ. ಆದರೆ, ಹಬ್ಬದ ಪ್ರಯುಕ್ತ ಹೂವು ಮತ್ತು ಹಣ್ಣುಗಳ ದರ ಗಗನಕ್ಕೇರಿದ್ದು, ಸಾರ್ವಜನಿಕರ ಜೇಬಿಗೆ ಕತ್ತರಿ ಬೀಳುತ್ತಿದೆ.
ವರಮಹಾಲಕ್ಷ್ಮೀ ಪೂಜೆ ಹಾಗೂ ಅಲಂಕಾರಕ್ಕಾಗಿ ಹೂವು-ಹಣ್ಣುಗಳಿಗೆ ಭಾರಿ ಬೇಡಿಕೆ ಬಂದಿದ್ದು, ಇದನ್ನು ಬಂಡವಾಳ ಮಾಡಿಕೊಂಡಿರುವ ವ್ಯಾಪಾರಿಗಳು ದರವನ್ನು ದುಪ್ಪಟ್ಟು, ಮುಮ್ಮಡಿಗೆ ಹೆಚ್ಚಿಸಿದ್ದಾರೆ. ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಬೆಲೆಗಳಲ್ಲಿ ಭಾರಿ ಏರಿಕೆ ಕಂಡುಬಂದಿದೆ.
ಹೂವುಗಳ ದರ ವಿವರ (ಕೆಜಿಗೆ):
• ಸೇವಂತಿಗೆ: ₹150 ರಿಂದ ₹450
• ಮಲ್ಲಿಗೆ: ₹500 ರಿಂದ ₹1,200
• ಕನಕಾಂಬರ: ₹2,000 ರಿಂದ ₹5,000-6,000
• ತಾವರೆ ಹಾರ: ₹500 ರಿಂದ ₹2,500
• ಗುಲಾಬಿ ಹಾರ: ₹200 ರಿಂದ ₹500
• ಸಂಪಿಗೆ ಹಾರ: ₹500 ರಿಂದ ₹3,500
• ಮಲ್ಲಿಗೆ ಹಾರ: ₹500 ರಿಂದ ₹1,500
• ದುಂಡು ಮಲ್ಲಿಗೆ ಹಾರ: ₹2,000 ರಿಂದ ₹5,000
ಹಣ್ಣುಗಳ ದರ ವಿವರ (ಕೆಜಿಗೆ):
• ಸೇಬು: ₹110 ರಿಂದ ₹270
• ದಾಳಿಂಬೆ: ₹120 ರಿಂದ ₹260
• ಕಿತ್ತಳೆ: ₹80 ರಿಂದ ₹180
• ಏಲಕ್ಕಿ ಬಾಳೆಹಣ್ಣು: ₹50 ರಿಂದ ₹100
• ಮೂಸಂಬಿ: ₹100 ರಿಂದ ₹150
• ಬಾಳೆಹಣ್ಣು: ₹50 ರಿಂದ ₹100
• ದ್ರಾಕ್ಷಿ: ₹70 ರಿಂದ ₹170
• ಅನಾನಸ್: ₹60 ರಿಂದ ₹150

- Advertisement -spot_img

More articles

- Advertisement -spot_img

Latest article