ಹೇರ್ ಕಟಿಂಗೆ ಎರಡು ತಿಂಗಳಿಗೊಮ್ಮೆ 644 ಕಿಲೋಮೀಟರ್ ಪ್ರಯಾಣಿಸುವ ಮಹಿಳೆ..! ದುಡ್ಡು ಇದ್ರೆ ಹಿಂಗೂ ಖರ್ಚುಮಾಡ್ತಾರೆ..!

1
49

ನಾವು ಆಗಾಗ ಫ್ರೆಂಡ್ಸ್ ಜೊತೆ ದೂರದ ಪ್ರವಾಸಿ ತಾಣಗಳಿ ಹೋಗ್ತಾ ಇರ್ತೀವಿ..! ಎಂಜಾಯ್ ಮಾಡ್ತೀವಿ. ಫ್ರೆಂಡ್ಸ್ ಜೊತೆ ಖುಷಿಯಲ್ಲಿ ಕಾಲ ಕಳೀತಾ ಪ್ರವಾಸದ ದಿನಗಳಲ್ಲಿ ನಮ್ಮೆಲ್ಲಾ ನೋವುಗಳನ್ನು ಮರೆತು ಖುಷಿ ಖುಷಿಯಲ್ಲಿ ಇರ್ತೀವಿ..! ಇಂಥಾ ಪ್ರವಾಸ ಮಾಡುವಾಗ ನೂರಾರು ಕಿ,ಮೀ ಪ್ರಯಾಣ ಮಾಡ್ತೀವಿ..! ಇಲ್ಲೋ ಫ್ರೆಂಡ್ಸ್ ಮದುವೆಗೋ, ಹತ್ತಿರದ ಸಂಬಂಧಿಕರ ಮದ್ವೆಗೋ ಅಥವಾ ಇನ್ಯಾವುದೋ ಕಾರ್ಯಕ್ರಮಕ್ಕೋ, ಅಥವಾ ಯಾವುದೋ ಅತ್ಯಗತ್ಯ ಕೆಲಸ ಆಗಲೇ ಬೇಕಾದಾಗ ನೂರಾರು ಕಿ.ಮಿ ಪ್ರಯಾಣಿಸೇ ಪ್ರಯಾಣಿಸ್ತೀವಿ..! ಪ್ರಯಾಣಿಸಲೇ ಬೇಕು..! ಆದ್ರೆ ಯಾವತ್ತಾದ್ರೂ ಹೇರ್ ಕಟಿಂಗ್ ಮಾಡ್ಸೋಕ್ಕೆ ಅಂತಾನೇ ನೂರಾರು ಕಿಲೋಮೀಟರ್ ಪ್ರಯಾಣಿಸಿದ್ದೀವಾ..?! ನಾವು ಪ್ರಯಾಣಿಸದೇ ಇರ್ಬುದು ಆದ್ರೆ ಇಂಗ್ಲೇಂಡಿನ ಶ್ರೀಮಂತ ಮಹಿಳೆಯೊಬ್ಬರು ನೂರಾರು ಹೇರ್ ಕಟಿಂಗೆ ಅಂತಲೇ ನೂರಾರು ಕಿಲೋಮೀಟರ್ ಪ್ರಯಾಣಿಸ್ತಾರೆ..! ಆ ಬಗ್ಗೆ, ಇಲ್ಲಿದೆ ಒಂದು ಪುಟ್ಟ ಸ್ಟೋರಿ..
ಅವರು ಬ್ರಿಟನ್ನಿನ ಶ್ರೇಸ್ಬುರಿ ಎಂಬ ನಗರದ ಪಾರ್ಕರ್ ಜೊನ್ಸ್ ಅನ್ನೊ ಶ್ರೀಮಂತ ಮಹಿಳೆ. ಅವರು ವರ್ಷದಲ್ಲಿ ಆರುಬಾರಿ 644 ಕಿ.ಮೀ ದೂರ ಹೇರ್ ಕಟಿಂಗೆ ಅಂತಲೇ ಪ್ರಯಾಣಿಸ್ತಾರೆ..! ಇವರು ಕಳೆದು 20 ವರ್ಷಗಳಿಂದಲೂ ಶ್ರೇಸ್ ಬುರಿ ಯಿಂದ ನಾರ್ಥಂಪ್ಕನೈರ್ ರಾಜ್ಯದ ಕೆಟ್ಟಿರಿಂಗ್ ಜಿಲ್ಲೆಗೆ ಹೋಗಿ ತನ್ನಿಷ್ಟದ ಹೇರ್ ಸ್ಟೈಲಿಸ್ಟ್ ಜೋ ಸ್ಟಾರ್ಕ್ ಹತ್ರ ಹೇರ್ ಕಟ್ಟಿಂಗ್ ಮಾಡಿಸಿಕೊಳ್ತಾ ಇದ್ದಾರೆ..! ಇಷ್ಟೊಂದು ದೂರ ಹೋಗಿ, ಹೇರ್ ಕಟಿಂಗ್ ಗಾಗಿಯೇ ಸಾವಿರಾರು ಡಾಲರ್ ಖರ್ಚು ಮಾಡಿ ಪ್ರಯಾಣ ಮಾಡುವ ಇವರು ಹೇರ್ ಸ್ಟೈಲಿಸ್ಟ್ಗೆ ಕೊಡೋದು ಮಾತ್ರ 12.99 ಡಾಲರ್..!
ತನ್ನ 37 ವರ್ಷಗಳಲ್ಲಿ 200 ರೀತಿಯ ಹೇರ್ಸ್ಟೈಲ್ ಗೆ ಮೊರೆ ಹೋಗಿರುವ ಇವರು ಹೇರ್ ಕಟಿಂಗ್ ಗೆ ಅಂತಲೇ ಪ್ರಯಾಣಿಸಿದ್ದು ಬರೊಬ್ಬರಿ 38624 ಕಿಲೋಮೀಟರ್..! ಇಂಥವರೂ ಇದ್ದಾರ..? ದುಡ್ಡು ಇದ್ರೆ ಹಿಂಗೂ ಖರ್ಚು ಮಾಡ್ತಾರೆ ಸ್ವಾಮಿ…!

  • ಶಶಿಧರ ಡಿ ಎಸ್ ದೋಣಿಹಕ್ಲು

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : [email protected]

POPULAR  STORIES :

ಇವರು ಬೆಂಗಳೂರಿನ ಉಕ್ಕಿನ ಮನುಷ್ಯ..! ಇಂಥಾ ಕೆಲಸ ಮಾಡೋರು ತುಂಬಾ ಅಪರೂಪ..!

ಈತನೇ ನೋಡಿ ವಿಶ್ವದ ಅತಿ ಶ್ರೀಮಂತ ಕ್ಷೌರಿಕ..! ಈತನ ಬಳಿ ಇವೆ 250ಕ್ಕೂ ಹೆಚ್ಚು ಐಶಾರಾಮಿ ಕಾರುಗಳು..!

ಅಹಂಕರಾರ, ಹಠಮಾರಿತನ ಕೊಂದ ಪ್ರೀತಿ ಇದು..! ಈ ಸ್ಟೋರಿ ಓದಿದ್ರೆ, ಖಂಡಿತಾ ನೀವು ನಿಮ್ಮ ಪ್ರೀತಿಯನ್ನು, ಸ್ನೇಹವನ್ನೂ ಉಳಿಸಿಕೊಳ್ತೀರ..!

ವಿದೇಶಿಯರ ಬಾಯಲ್ಲೂ ಕನ್ನಡ ಕನ್ನಡ ಕನ್ನಡ..! ವಿದೇಶಿ ಮಹಿಳೆಯೊಬ್ಬರು ಹಚ್ಚೇವು ಕನ್ನಡದ ದೀಪ.. ಅಂತ ಹಾಡ್ತಾ ಇದ್ದಾರೆ..!

ಲಾಭದಾಯಕ ಕೆಲಸವನ್ನು ಬಿಟ್ಟು ಬಂದವರು..! ಅಷ್ಟಕ್ಕೂ ಇವರೆಲ್ಲಾ ಕೆಲಸ ಬಿಟ್ಟಿದ್ದೇಕೆ ಗೊತ್ತಾ..?!

ಅಲ್ಲಿ ಏನೆಲ್ಲಾ ಬಾಡಿಗೆ ಸಿಗುತ್ತೆ ಗೊತ್ತಾ..? ಜಪಾನಿಗರ ಬಾಡಿಗೆ ಪ್ರೀತಿ..!

ನಮ್ಮ ಶಂಕ್ರಣ್ಣ ಇನ್ನೂ ಇರಬೇಕಾಗಿತ್ತು..! ಹುಟ್ಟು ಹಬ್ಬದ ಶುಭಾಶಯಗಳು ಶಂಕ್ರಣ್ಣ..! ಶಂಕರ್ ನಾಗ್ ಮತ್ತೆ ಹುಟ್ಟಿಬನ್ನಿ…

ಆಕೆಗೂ ತಾನು ಗರ್ಭಿಣಿ ಅಂತ ಗೊತ್ತೇ ಇರ್ಲಿಲ್ಲ..! ಇದ್ದಕ್ಕಿದ್ದಂತೆ ಮಗು ಹುಟ್ಟಿ ಬಿಡುತ್ತೆ..!

ಒಂಬತ್ತು ವರ್ಷದ ಪೋರ ಕಂಪನಿಯೊಂದರ ಸಿಇಒ..! ಈ ಪೋರ ಆ್ಯಪ್ ಡೆವಲಪರ್, ಸೈಬರ್ ಸೆಕ್ಯುರಿಟಿ ಎಕ್ಸ್ ಪರ್ಟ್..!

1 COMMENT

LEAVE A REPLY

Please enter your comment!
Please enter your name here