12,000 ಹುಡುಗಿಯರನ್ನು ಲೈಂಗಿಕ ಗುಲಾಮಗಿರಿಯಿಂದ ಕಾಪಾಡಿದ ತಾಯಿ..! ಇವರು ಕಟ್ಟಿದ `ತಾಯಿಮನೆ' ಸಂತ್ರಸ್ತರ ತವರು ಮನೆ..!

0
81

 

ವಿಶ್ವಸಂಸ್ಥೆ 2012ರಲ್ಲಿ ನೀಡಿರೋ ವರದಿ ಪ್ರಕಾರ ಇಡೀ ವಿಶ್ವದಾದ್ಯಂತ ಸರಿ ಸುಮಾರು 2.4 ಮಿಲಿಯನ್ ಜನರ ಕಳ್ಳಸಾಗಣಿಕೆ (ಮಾನವ ಕಳ್ಳ ಸಾಗಾಣಿಕೆ) ಆಗ್ತಾ ಇದೆಯಂತೆ..! ಏನ್ ಗುರೂ ಇದು..?! ಅಷ್ಟೇ ಅಲ್ಲ ಅಂತರಾಷ್ಟ್ರೀಯ ಕಾರ್ಮಿಕ ಸಂಸ್ಥೆ ಹೇಳೋ ಪ್ರಕಾರ ಶೇ22ರಷ್ಟು ಕಾರ್ಮಿಕರ ಮೇಲೆ ಲೈಂಗಿಕ ಶೋಷಣೆ ನಡೆಯುತ್ತಂತೆ..! ಈ ಶೋಷಿತರಲ್ಲಿ ಶೇ. 98ಜನ ಮಹಿಳೆಯರು ಮತ್ತು ಮಕ್ಕಳಾಗಿದ್ದಾರಂತೆ..! ಭಾರತ ಮತ್ತು ನೇಪಾಳಗಡಿಯಲ್ಲಿ ವರ್ಷಕ್ಕೆ ಏನೂ ಇಲ್ಲ ಅಂದ್ರು 5000-10,000 ಮಹಿಳೆಯರು ಲೈಂಗಿಕ ಗುಲಾಮಗಿರಿಗೆ ತಳ್ಳಲ್ಪಡುತ್ತಿದ್ದಾರೆ..! ಹೀಗೆ ಬೇಜಾನ್ ಅಂಕಿ ಅಂಶಗಳ ದಾಖಲೆ ಇದೆ..! ಇಷ್ಟೆಲ್ಲಾ ಮಾಹಿತಿ ಇದ್ರೂ ಕಳ್ಳ ಮಾನವ ಸಾಗಾಣಿಕೆಯನ್ನು ತಡೆಗಟ್ಟೋಕೆ ಆಗ್ತಾ ಇಲ್ಲ ಅಂದ್ರೆ ಅರ್ಥವಿದೆಯೇ..?! ವಿಶ್ವ ಸಂಸ್ಥೆ, ಆಯಾ ದೇಶಗಳ ಸರ್ಕಾರಕ್ಕೂ ಆಗದ ಕೆಲಸವನ್ನು ಮಹಿಳೆಯೊಬ್ಬರು ಮಾಡಿದ್ದಾರೆ..! ಸಾವಿರಾರು ಜನರನ್ನು ಗುಲಾಮಗಿರಿಯಿಂದ ಪಾರು ಮಾಡಿದ್ದಾರೆ..! ಅವರ್ಯಾರು..? ಏನು ಮಾಡಿದ್ದಾರೆನ್ನುವುದನ್ನು ತಿಳಿಬೇಕು ಅಂದ್ರೆ ಈ ಸ್ಟೋರಿ ಓದ್ಲೇ ಬೇಕು..!
`ಅನುರಾಧಾ ಕೊಯಿರಾಲ..,’ ಇವರು, ತುಂಬಾ ಜನರಿಗೆ ಗೊತ್ತಿಲ್ಲ..! ಇವರೇ ಸಾವಿರಾರು ಜನರನ್ನು ಉಳಿಸಿದ ಮಹಾತಾಯಿ..! ಈಗ ನಾನು ಹೇಳ ಹೊರಟಿರುವ ರಿಯಲ್ ಸ್ಟೋರಿಯ ನಿಜವಾದ ನಾಯಕಿ..!
ಅನರಾಧಾ ಕೊಯಿರಾಲ ತನ್ನ ಗಂಡನಿಂದ ಶೋಷಣೆಗೆ ಒಳಗಾದ ಮಹಿಳೆ..! ಇವರಿಗೆ ಮೂರುಭಾರಿ ಗರ್ಭಪಾತವೂ ಆಗಿತ್ತು..! ಇದರಿಂದಾಗಿ ಗಂಡ ಅನಿಸಿಕೊಂಡ ಮಹಾಪುರುಷ ಆಕೆಯನ್ನು ಮತ್ತಷ್ಟೂ ಶೋಷಣೆ ಮಾಡೋಕೆ ಶುರು ಮಾಡ್ತಾನೆ..! ಇದರಿಂದಾಗಿ ಬೇಸತ್ತ ಅವರು ಕೊನೆಗೂ ಗಂಡನನ್ನು ಬಿಟ್ಟು ಬಿಡ್ತಾರೆ..! ಗಂಡನನ್ನು ಬಿಟ್ಟು ಸ್ವಾವಲಂಭಿ ಬದುಕನ್ನು ಕಂಡುಕೊಳ್ಳಲು ಮುಂದಾಗ್ತಾರೆ..! ಅಷ್ಟೇ ಅಲ್ಲ, ಇವರು ಅವತ್ತೇ ಡಿಸೈಡ್ ಮಾಡಿ ಬಿಟ್ರು ನಾನು ಬದುಕಿ ತೋರಿಸ್ತೀನಿ ಅಂತ..! ನಾನು ಬದುಕುವ ಜೊತೆಗೆ, ಮಾನವೀಯತೆ ದೃಷ್ಟಿಯಿಂದ ಜನ ಸೇವೆ ಮಾಡಿ ಎಷ್ಟೋ ಜನರ ಕಣ್ಣೀರ ಒರೆಸುತ್ತೇನೆಂದು ಸಂಕಲ್ಪವನ್ನೂ ಮಾಡಿಬಿಡ್ತಾರೆ..! ತಿಂಗಳಿಗೆ 6497.99 ರೂಪಾಯಿಗಳಿಗೆ (ನೂರು ಡಾಲರ್) ನೇಪಾಳದ ಶಾಲೆಗಳಲ್ಲಿ ಇಂಗ್ಲೀಷ್ ಪಾಠ ಮಾಡ್ತಾರೆ..! ಅವರ ಆದಾಯದಲ್ಲಿ ಸ್ವಲ್ಪ ಭಾಗವನ್ನು ತನ್ನ ಖರ್ಚಿಗಾಗಿ ಇಟ್ಟುಕೊಂಡು ಉಳಿದುದರಲ್ಲಿ ಹಿಂಸಾಚಾರ ಮತ್ತು ಲೈಂಗಿಕ ಶೋಷಣೆಗೆ ಒಳಗಾದ ಸಂತ್ರಸ್ತರಿಗೆ ಸಣ್ಣದಾದ ಚಿಲ್ಲರೆ ಅಂಗಡಿಗಳನ್ನು ಮಾಡಿಕೊಡ್ತಾರೆ..! ಆ ಮೂಲಕ ನಿರಾಶ್ರಿತರಿಗೆ ಉದ್ಯೋಗ ಭಾಗ್ಯವನ್ನು ಕಲ್ಪಸಿಕೊಡ್ತಾರೆ..!
ಇಷ್ಟೆಲ್ಲಾ ಮಾಡಿದ್ರೂ ಅವರಿಗೆ ನಾನು ನಿರಾಶ್ರಿತ ಮಹಿಳೆಯರಿಗೆ ಏನೂ ಮಾಡ್ತಾ ಇಲ್ಲ ಅಂತ ಅನಿಸೋಕೆ ಶುರುವಾಗುತ್ತೆ..! ಇನ್ನೂ ಏನಾದ್ರು ಮಾಡ್ಬೇಕು ಅಂತ ಯೋಚನೆ ಮಾಡಿದ ಅನುರಾಧರವರು ಬೇರೆ ಶಿಕ್ಷಕರು, ಪತ್ರಕರ್ತರು, ಸೋಶಿಯಲ್ ವರ್ಕರ್ಸ್ ಮೊದಲಾದವರ ಸಹಾಯದಿಂದಾಗಿ 1993ರಲ್ಲಿ ನಿರಾಶ್ರಿತರ ಸೇವೆಗಾಗಿ ಸಂಸ್ಥೆಯೊಂದರ ನಿರ್ಮಾಣಕ್ಕೆ ಬುನಾದಿ ಹಾಕ್ತಾರೆ..! ಅಂದು ಅವರು ಕಟ್ಟಿದ ಆ ಎನ್.ಜಿ.ಒ ಹೆಸರು `ಮೈತಿ’..! ನೇಪಾಳಿ ಭಾಷೆಯ ಆ ಪದದ ಅರ್ಥ `ಮದರ್ಸ್ ಹೋಮ್’ ಅಥವಾ `ತಾಯಿಮನೆ’ ಎಂದಾಗುತ್ತದೆ..!
ಈ `ತಾಯಿ ಮನೆ’ ಶೋಷಿತ ಮಹಿಳೆಯರ, ಮಕ್ಕಳ ತವರು ಮನೆ ಆಗಿ ಬಿಡುತ್ತೆ..! ಭಾರತ ಮತ್ತು ನೇಪಾಳ ಗಡಿ ಭಾಗದಲ್ಲಿ ಶೋಷಣೆಗೆ ಒಳಗಾಗುತ್ತಿರುವ ಹೆಣ್ಣು ಮಕ್ಕಳನ್ನು ಕಾಪಾಡ್ತಾರೆ..! ಆಶ್ರಯ ಕಲ್ಪಿಸ್ತಾರೆ..! ಈಗ ತಾಯಿ ಮನೆಯಲ್ಲಿ 1000 ಮಹಿಳೆಯರು, ಹುಡುಗಿಯರಿದ್ದಾರೆ..! ಈ ಸಂಸ್ಥೆಯ ಅಡಿಯಲ್ಲಿ ಆಶ್ರಯ ಮನೆಗಳು, ಧರ್ಮಶಾಲೆ ಮತ್ತು ಫ್ರೌಡಶಾಲೆಗಳೂ ಇವೆ..! ಹೀಗೆ ನೇಪಾಳ-ಭಾರತದ ಗಡಿಯಲ್ಲಿ ಶೋಷಣೆಗೆ ಒಳಗಾಗುವ ಹೆಣ್ಣು ಮಕ್ಕಳಿಗೆ, ಬಾಲಕಾರ್ಮಿಕರಿಗೆ ಆಶ್ರಯ ನೀಡ್ತಾ ಇರೋ ಈ ತಾಯಿಗೆ ಈಗ 66 ವರ್ಷವಾಗಿದೆ..! ಗಂಡನಿಂದ ಶೋಷಿತಳಾಗಿದ್ದ ಮಹಿಳೆ ಇಂದು ಸಾವಿರಾರು ಶೋಷಿತ ಮಹಿಳೆಯರಿಗೆ ಜೀವನ ಕೊಟ್ಟಿದ್ದಾರೆ..!
ಇಲ್ಲಿತನಕ ಭಾರತ ನೇಪಾಳ ಗಡಿಯಲ್ಲಿ 12,000ಕ್ಕೂ ಹೆಚ್ಚು ಹುಡುಗಿಯರನ್ನು ನೇಪಾಳಿ ಗಡಿಯಲ್ಲಿ ಲೈಂಗಿಕ ಗುಲಾಮಗಿರಿಯಿಂದ ಉಳಿಸಿದ್ದಾರೆ..! 45,000ಕ್ಕೂ ಹೆಚ್ಚು ಮಕ್ಕಳು ಹಾಗೂ ಮಹಿಳೆಯರ ಕಳ್ಳ ಸಾಗಾಣಿಕೆ ತಡೆದಿದ್ದಾರೆ..! ಮಕ್ಕಳಿಗೆ ಚುಚ್ಚು ಮದ್ದು ನೀಡಿ ಪ್ರತಿನಿತ್ಯ 20 ಬಾರಿ ಅತ್ಯಾಚಾರ ನಡೆಸುತ್ತಿದ್ದರಂತೆ..! ಆ ಶೋಷಣೆಯಿಂದ ಮಕ್ಕಳನ್ನು ಪಾರು ಮಾಡಿದ್ದಾರೆ..! ಇವರು ಕಣ್ರೀ ನಿಜವಾದ ನಾಯಕಿ..! ಸಾವಿನ ಬೆದರಿಕೆ ಕರೆಗಳು ಬಂದರೂ ಬಗ್ಗದೇ ಅಳುಕದೇ ಶೋಷಿತರ ರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ಇವರಿಗೆ ಆ ದೇವರು ಮತ್ತಷ್ಟು ಶಕ್ತಿಕೊಡಲಿ..! ಅಮ್ಮಾ.. ನೀವು ತುಂಬಾ ಅಂದ್ರೆ ತುಂಬಾ ಗ್ರೇಟ್..! ನಿಜವಾದ ನಾಯಕಿ ಅಂದ್ರೆ ನೀವು…!

  • ಶಶಿಧರ ಡಿ ಎಸ್ ದೋಣಿಹಕ್ಲು

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : [email protected]

POPULAR  STORIES :

ನಿಮ್ಮ ಪ್ರಕಾರ ಬಿಗ್ ಬಾಸ್ ಗೆಲ್ಲೋರು ಯಾರು..? ಈಗಲೇ ಕಮೆಂಟ್ ಮಾಡಿ, ಓಟ್ ಮಾಡಿ..!

ಇಡೀ ಹಳ್ಳಿಗೆ ವಿದ್ಯುತ್ ಭಾಗ್ಯ ಕರುಣಿಸಿದ ವಿದ್ಯಾರ್ಥಿ..!

ಆತನ ಆಸ್ತಿ ಬಗ್ಗೆ ಕೇಳಿದ್ರೆ ಬೆಚ್ಚಿಬೀಳ್ತೀರಿ..! ಲಕ್ಷ್ಮೀ ಇದ್ದರೂ ದುರಾದೃಷ್ಟ ಬೆನ್ನಿಗೇರಿಸಿಕೊಂಡವನೀತ..!

ಕಜಕಿಸ್ತಾನದಲ್ಲಿದೆ ಕುಂಭಕರ್ಣನೂರು..! ಇಲ್ಲಿನ ಜನರಿಗೆ ನಿದ್ರೆ ಮಾಡುವುದೇ ದೊಡ್ಡ ಕೆಲಸ

ಅಂಗವೈಕಲ್ಯತೆಯನ್ನು ಮೆಟ್ಟಿನಿಂತ ಆಟೋಡ್ರೈವರ್..! ಮನಮುಟ್ಟುವ ಈ ವೀಡಿಯೊವನ್ನು ತಪ್ಪದೇ ನೋಡಿ.

ಬಸ್ ಸ್ಟ್ಯಾಂಡ್ ನಲ್ಲಿ ನಿಂತಾಗ ಈಕೆಗೆ ಬಸ್ ಸಿಗದಿದ್ದರೆ ಏನ್ಮಾಡ್ತಾಳೆ ಗೊತ್ತಾ..?

45 ದಿನದಲ್ಲಿ ಬಹುಮಹಡಿ ಕಟ್ಟಡ ನಿರ್ಮಾಣ..!

ಈ ಬಿಲ್ಡಿಂಗ್ ಕಟ್ಟಿರೋದೆ ಲವ್ ಲೆಟರ್ ನಲ್ಲಿ…! ಇದನ್ನು ಕಟ್ಟೋಕೆ ಎಷ್ಟು ಲವ್ ಲೆಟರ್ ಬಳಸಿದ್ದಾರೆ ಗೊತ್ತಾ..?

ಸೈಬರ್ ವಂಚನೆಯಿಂದ ಮಹಿಳೆಯನ್ನು ಕಾಪಾಡಿದ ಬ್ಯಾಂಕ್ ಉದ್ಯೋಗಿ..!

ಅಕ್ಕನ ನೆನಪು ಈ ಪುಟ್ಟ ತಮ್ಮನಿಗೆ ಎಷ್ಟೊಂದು ಕಾಡ್ತಾ ಇದೆ ಗೊತ್ತಾ..? ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ಬಲಿ..!

ಇಲ್ನೋಡ್ರೀ ಕೆಲಸ ಕಮ್ಮಿ, ಸಂಬಳ ಜಾಸ್ತಿ…!

ಭಾರತದ 50% ಆಸ್ತಿ 1% ಟಾಪ್ ಶ್ರೀಮಂತರ ಬಳಿಯೇ ಇದೆ..!

ತಾಳಿ ಕಟ್ಟಿದ ಐದೇ ನಿಮಿಷಕ್ಕೆ ತಾಳಿ ಕಿತ್ತು ವಾಪಸ್ ಕೊಟ್ಟ ವಧು..! ಅಷ್ಟಕ್ಕೂ ಅವಳು ಆ ನಿರ್ಧಾರ ಮಾಡಿದ್ದು ಯಾಕೆ ಗೊತ್ತಾ..?

ಬಡವರಿಗಾಗಿ ವಿಮಾನ ಖರೀದಿಸಿದ ನಿವೃತ್ತ ಇಂಜಿನಿಯರ್..! ವಿಮಾನ ಕೊಳ್ಳಲು ಭೂಮಿಯನ್ನೇ ಮಾರಿದರು..!

ಭಾರತೀಯ ನಟಿಯರನ್ನು ಕಂಡ ಕೋರಿಯನ್ನರಿಗೇಕೆ ಅಚ್ಚರಿ ಆಯಿತು..!

ಟಿ ಎಸ್ ಯು – ಸೋಷಿಯಲ್ ಮೀಡಿಯಾ ನೀವೂ ಉಪಯೋಗಿಸುವುದಕ್ಕೆ ಪ್ರೋತ್ಸಾಹ ಧನದ ರೂಪದಲ್ಲಿ ನಿಮಗೆ ದುಡ್ಡನ್ನೂ ಕೊಡ್ತಾರೆ..!

ನಾಲ್ಕನೇ ತರಗತಿಯಲ್ಲೇ ಪ್ರೀತಿಸಿದ್ದ ಜೋಡಿಹಕ್ಕಿಗಳು..! ಇಂಥಾ ಲವ್ ಸ್ಟೋರಿಯನ್ನು ನೀವೆಲ್ಲೂ ಕೇಳಿಲ್ಲ..ನೋಡಿಲ್ಲ.. ಓದಿಲ್ಲ..!

LEAVE A REPLY

Please enter your comment!
Please enter your name here