ಬಾರ್ ಸಪ್ಲೇಯರ್ ಈಗ ಐಪಿಎಸ್ ಆಫೀಸರ್.!

0
269

ಅವರು ಚಿಕ್ಕಂದಿನಲ್ಲಿಯೇ ಐಪಿಎಸ್ ಆಫೀಸರ್ ಆಗೋ ಕನಸು ಕಂಡವರು! ಕನಸು ಕಂಡರೇನು ಬಂತು! ಆ ಕನಸು ನನಸಾಗಲು ಪೂರಕ ವಾತಾವರಣವೂ ಬೇಕಲ್ವಾ? ದುಡ್ಡಿನ ಜಮಾನದಲ್ಲಿ ಕನಸುಗಳ ಸಾಕಾರಕ್ಕೆ ದುಡ್ಡು ಬೇಕೇ ಬೇಕು! ಅದೇ ದುಡ್ಡು ದೊಡ್ಡ ಕನಸಿನ ಮೂಟೆಯನ್ನು ಹೊತ್ತಿದ್ದ ಆ ಹುಡುಗನ ಗುರಿಗೂ ಅಡ್ಡಿ ಆಗುತ್ತೆ! ಆದ್ರೂ ಛಲ ಬಿಡದೆ ಕಷ್ಟಪಟ್ಟು ಓದ್ತಾರೆ! ಕೊನೆಗೂ ಅಂದು ಕೊಂಡಿದ್ದನ್ನಾ ಸಾಧಿಸೇ ಬಿಡ್ತಾರೆ!
ಆ ಸಾಧಕ ಇವತ್ತು ದುಷ್ಟರ ಪಾಲಿಗೆ ಸಿಂಹಸ್ವಪ್ನ! ಆತ ಎದುರು ನಿಂತ ಅಂದ್ರೆ ಒಂದಷ್ಟು ಜನ ಗಡಗಡ ನಡಗ್ತಾರೆ! ಸಜ್ಜನರು, ನೀನು ನೂರುಕಾಲ ಚೆನ್ನಾಗಿ ಬಾಳಪ್ಪ ಅಂತ ಮನತುಂಬಿ ಹರಸುತ್ತಾರೆ!

This website and its content is copyright of – © Thenewindiantimes.com 2015. All rights reserved.
Any redistribution or reproduction of part or all of the contents Without Permission or Courtesy in any form is prohibited.

ಈ “ಗ್ರೇಟ್ ಮ್ಯಾನ್ ಆಫ್ ಇಂಡಿಯಾ ಫ್ರಮ್ ಉತ್ತರ ಕರ್ನಾಟಕ”, ಬೆಳೆದು ಬಂದ ಹಾದಿ ಇದೆಯಲ್ಲಾ ಅದು ಪ್ರತಿಯೊಬ್ಬ ಯುವಕನಿಗೂ ಸ್ಪೂರ್ತಿ! ಅವರ್ಯಾರು ಅನ್ನೋ ಮೊದಲು ಅವರ ಸ್ಟೋರಿ ಹೇಳ್ತೀನಿ, ಆಮೇಲೆ ಅವರ್ಯಾರು ಅಂಥ ನಾನು ಹೇಳೋ ಮೊದಲೇ ನಿಮ್ಗೇ ಗೊತ್ತಾಗಿರುತ್ತೆ! ಆದ್ರೆ, ಈ ಸೂಪರ್ ಮ್ಯಾನ್ ನಡೆದು ಬಂದ ದಾರಿ ಮಾತ್ರ ಹೂವಿನ ಹಾಸಿಗೆ ಅಲ್ಲ, ಅದು ಮುಳ್ಳಿನ ಹಾದಿ!
ಇವರು ಗದಗ ಜಿಲ್ಲೆಯ ನೀಲಗುಂದ ಎಂಬ ಹಳ್ಳಿಯಲ್ಲಿ ಹುಟ್ಟಿದ್ರು. ಬಡತನವೂ ಹುಟ್ಟಿನೊಂದಿಗೇ ಬಂದಿತ್ತು! ತಂದೆ ದ್ಯಾಮಪ್ಪ, ತಾಯಿ ರತ್ನಮ್ಮ, ಸೋದರ ರಾಘವೇಂದ್ರ! ಕೃಷಿಯೇ ಜೀವನಾಧಾರ! ಅದರಲ್ಲಿಯೇ ಬದುಕು ಸವೆಸ ಬೇಕಿತ್ತು! ಹಿಂಗಿರುವಾಗ ಆ ಹುಡಗನ ಐಪಿಎಸ್ ಕನಸು ಈಡೇರಿಕೆಗೆ ಹಣ ಹೊಂದಿಸೋದು ಅಪ್ಪ ಅಮ್ಮನಿಗೆ ತುಂಬಾನೇ ಕಷ್ಟ ಆಗುತ್ತೆ! ಹಂಗಂತ, ತನ್ನ ಕನಸಿಗೆ ಎಳ್ಳು ನೀರು ಬಿಟ್ಟು ಕುಳಿತುಕೊಳ್ಳಲು ಇವರು ರೆಡಿ ಇರ್ಲಿಲ್ಲ! ಕಷ್ಟ ಪಟ್ಟು ದುಡಿದು ಓದಿದ್ರು! ಪ್ರಾಥಮಿಕ ಶಿಕ್ಷಣ, ಫ್ರೌಡ ಶಿಕ್ಷಣವನ್ನೂ ಹಂಗೋ ಹಿಂಗೋ ಮುಗಿಸಿದ್ರು! ವಿದ್ಯಾಕಾಶಿ ಧಾರವಾಡದಲ್ಲಿ ಡಿಗ್ರಿಯನ್ನೂ ಮುಗಿಸಿದ್ರು! www.tnit.in
ಮನೆಯಲ್ಲಿ ಅಪ್ಪ ಕೊಟ್ಟ ದುಡ್ಡಿನಲ್ಲಿ ಡಿಗ್ರಿ ಮುಗಿಸಿದವರಂಥೂ ಇವರಲ್ಲ! ಬಾರ್ ಸಪ್ಲೇಯರ್ ಆಗಿ ಕೆಲಸ ಮಾಡಿದ್ರು! ಧಾರವಾಡದಲ್ಲಿ ಹಮಾಲಿಯಾಗಿ ಮೂಟೇನೂ ಹೊತ್ರು! ಹಿಂಗೆಲ್ಲಾ ಕಷ್ಟಪಟ್ಟು ಪದವಿ ಪಡೆದ ಮಾತ್ರಕ್ಕೆ ಇವ್ರ ಕನಸು ನನಸಾಗುತ್ತಾ? ನೋ, ಚಾನ್ಸೇ ಇಲ್ಲ! ಆ ಗುರಿ ಮುಟ್ಟೋದು ಅಷ್ಟು ಸುಲಭವಾಗಿರಲ್ಲ! ಅದನ್ನ ತಲುಪಬೇಕು ಅಂದ್ರೆ ಹಗಲು ರಾತ್ರಿ ಅಂತ ನೋಡ್ದೆ ಕಣ್ಣಿಗೆ ಎಣ್ಣೆ ಬಿಟ್ಕೊಂಡು ಓದ್ಬೇಕು! ಸರಿ, ಮನೇ ಕಡೆ ಏನೂ ಪ್ರಾಬ್ಲಂ ಇಲ್ದೇ ಇದ್ರೆ ಹಂಗೆ ಓದಬಹುದು! ಆದ್ರೆ ಈ ರಿಯಲ್ ಸ್ಟೋರಿ ಹೀರೊಗೆ ಮನೆಕಡೆ ಸಿಕ್ಕಾಪಟ್ಟೆ ಪ್ರಾಬ್ಲಂ! ಕಾಂಪಿಟೇಟಿವ್ ಎಕ್ಸಾಮ್ ಗೆ ಬೇಕಾದ ಕೋಚಿಂಗ್ ತಗೋಳದಕ್ಕೂ ದುಡ್ಡಿರಲ್ಲ! ಆದ್ರೂ ಹೈದರಾಬಾದ್ ಕಡೆ ಹೆಜ್ಜೆ ಹಾಕ್ತಾರೆ ಈ ರಿಯಲ್ ಸ್ಟಾರ್! ಹೈದರಾಬಾದಿನ “ಟಾರ್ಗೆಟ್” ಎಂಬ ಕೋಚಿಂಗ್ ಸೆಂಟ್ರಿಗೆ ಎಂಟ್ರೀ ನೂ ಕೊಟ್ಟೇ ಬಿಡ್ತಾರೆ! ಆದ್ರೆ ಅವರು ನೀಡೋ ಕೋಚಿಂಗ್ ಗೆ ನೀಡೋ ಅಷ್ಟು ಹಣ ಇರಲ್ಲ! ಹಣ ಇಲ್ದೇ ಹೋದ್ರೆ ಏನ್ ಅಂತೆ ಸಾರ್, ಸಾಧಿಸ್ತೀನಿ ಅನ್ನೋ ಛಲ ಒಂದಿತ್ತಲ್ಲಾ! ಅಷ್ಟು ಸಾಕಿತ್ತು! ಆ ಹಠ, ಛಲ, ಕಣ್ಣೆದರುರಿಗೇ ಇದ್ದ ಸ್ಪಷ್ಟ ಗುರಿ ಅವರನ್ನ ಆ ಕೋಚಿಂಗ್ ಸೆಂಟರ್ ನ ಕಸ ಗುಡಿಸುವಂತೆ ಮಾಡ್ತು! ಹೌದು, ಸಾರ್ ಅವ್ರು ಹೇಗಾದ್ರು ಮಾಡಿ ಯು.ಪಿ.ಎಸ್.ಸಿ ಎಕ್ಸಾಮ್ ನಲ್ಲಿ ಕ್ಲಿಕ್ ಆಗ್ಲೇ ಬೇಕು ಅಂತ ಅಲ್ಲಿ ಕಸ ಗುಡಿಸಿದ್ರು, ನೆಲವರೆಸಿದ್ರು! ಅಲ್ಲೇ ಹಾಗೇ ಕೆಲಸ ಮಾಡ್ತಾ ಮಾಡ್ತಾ ಕೋಚಿಂಗ್ ಕೂಡ ತಗೊಂಡ್ರು! ಹಾಗೇ ಪಟ್ಟ ಕಷ್ಟ ಕೊನೆಗೂ ಫಲ ಕೊಟ್ಟೇ ಬಿಟ್ಟಿತು!
ಅವರು 2008ರಲ್ಲಿ ಯು.ಪಿ.ಎಸ್.ಸಿ ನಡೆಸಿದ ಪರೀಕ್ಷೆ ತೆಗೆದುಕೊಂಡ್ರು, 2009ರಲ್ಲಿ ಅದರ ರಿಸೆಲ್ಟ್ ಕೂಡ ಬಂತು. 703ನೇ ರ್ಯಾಂಕ್ ಪಡೆಯುವುದರೊಂದಿಗೆ ಆ ವ್ಯಕ್ತಿಯ ಕನಸು ನನಸಾಗಿತ್ತು! ಅವರು ಕಲಬುರ್ಗಿಯಲ್ಲಿ ಪ್ರೊಬೇಷನರಿ ಪಿರಿಯಡ್ ಮುಗಿಸಿ ಹೆಚ್ಚುವರಿ ಎಸ್ಪಿ ಆಗಿ ಬೆಳಗಾವಿಯಲ್ಲಿ ಕೆಲಸ ಶುರುಮಾಡಿದ್ರು! ನಂತರ ದಾವಣಗೆರೆ ಎಸ್ಪಿಯಾಗಿ, ತದನಂತರ ಬೆಂಗಳೂರಿನಲ್ಲಿ ಸಿಐಡಿ ಎಸ್ಪಿಯಾಗಿ, ಅದಾದ ನಂತರ ಹಾಸನ ಜಿಲ್ಲೆಯಲ್ಲಿ ಸೇವೆಸಲ್ಲಿಸಿ ಶಿವಮೊಗ್ಗ ಎಸ್ಪಿಯಾಗಿದ್ದಾರೆ!
ಇವರು ಶಿವಮೊಗ್ಗಕ್ಕೆ ಬರುವಾಗ ಶಿವಮೊಗ್ಗ ಕೋಮುದಳ್ಳುರಿಯಲ್ಲಿ ಬೇಯುತ್ತಿತ್ತು! ಶಿವಮೊಗ್ಗಾದಲ್ಲಿ ಪುಡಿರೌಡಿಗಳು, ಮೀಟರ್ ಬಡ್ಡಿದಂಧೇಕೋರರಿಂದಾಗಿ ಶಿವಮೊಗ್ಗದ ಜನರ ನಿದ್ರೆಗೆಟ್ಟಿತ್ತು! ಯಾವಾಗ ಏನ್ ಆಗ್ತದೋ ಎಂಬ ಭಯದಲ್ಲೇ ಶಿವಮೊಗ್ಗದ ಜನ ದಿನ ದಬ್ಬುತ್ತಿದ್ದರು! www.tnit.in
ಅದು ಫೆಬ್ರವರಿ 19, 2015 ಶಿವಮೊಗ್ಗದ ಶಾಂತಿ ಕದಡಿ ಹೋಗಿದ್ದ ದಿನ! ಅದಾದ ಹದಿನೈದು ದಿನದೊಳಗೆ ಅಂದ್ರೆ ಮಾರ್ಚ್ 03ರಂದು ಶಿವಮೊಗ್ಗ ಎಸ್ಪಿ ಆಗಿ ಇವರು ಬಂದ್ರು! ಇವರು ಶಿವಮೊಗ್ಗಕ್ಕೆ ಎಂಟ್ರೀ ಕೊಟ್ಟಿದ್ದೇ ತಡ, ಶಿವಮೊಗ್ಗದಲ್ಲಿ ಬಾಲಬಿಚ್ಚಿದ ಪುಡಾರಿ, ಪಂಟ್ರು, ರೌಡಿಗಳೆಲ್ಲಾ ಬಾಲ ಮುದ್ರಿಕೊಂಡ್ರು! ಇಂದು ಶಿವಮೊಗ್ಗದಲ್ಲಿ ಶಾಂತಿ ಮನೆ ಮಾಡಿದೆ!
ಹ್ಞೂಂ! ಈಗ ನಿಮ್ಮ ತಲೆಯಲ್ಲಿ ಬಂದಿರೋ ಯೋಚ್ನೆ ಸರಿ! ಅವ್ರು ಬೇರೆ ಯಾರೂ ಅಲ್ಲ ಒನ್ ಅಂಡ್ ಓನ್ಲಿ “ರವಿ ಡಿ ಚೆನ್ನಣ್ಣನವರ್” ಐಪಿಎಸ್ ಆಫೀಸರ್! ಅಂದು ಬಾರ್ ಸಪ್ಲೇಯರ್ ಆಗಿ, ಹಮಾಲಿಯಾಗಿ, ಕಸ ಗುಡಿಸುವವನಾಗಿ ಕಷ್ಟ ಪಟ್ಟಿದ್ದ ರವಿ ದ್ಯಾಮಪ್ಪ ಚೆನ್ನಣ್ಣನವರ್ ಇಂದು ರೌಡಿಗಳ, ದಂಧೆಕೋರರ ಪುಡಾರಿಗಳ ಪಾಲಿಗೆ ದುಸ್ವಪ್ನ..! ಒಳ್ಳೆಯವರಿಗೆ ಒಳ್ಳೇದನ್ನ ಮಾಡ್ಬೇಕು, ಕೆಟ್ ಅವ್ರನ್ನಾ ತಿದ್ಕೊಳ್ಳಕ್ಕೆ ಅವಕಾಶ ಮಾಡಿಕೊಟ್ರೂ ಮೇಲಿಂದ ಮೇಲೆ ತಪ್ಪು ಮಾಡ್ತಾ ಇದ್ರೆ ಪೊಲೀಸ್ ಪವರ್ ತೋರಿಸಬೇಕು ಅನ್ನೋ ಈ ಸೂಪರ್ ಪೊಲೀಸ್ ಐಎಎಸ್, ಐಪಿಎಸ್ ನಂತಹ ದೊಡ್ಡದೊಡ್ಡ ಕನಸುಗಳಿಗೆ ಪ್ರೇರಣೆ ಅಲ್ವೇ?! ಈ ರಿಯಲ್ ಹೀರೋಗೊಂದು ಸಲಾಂ! ನಿಮ್ ಕಡೆಯಿಂದಲೂ ಹೇಳಿ ನಿಮ್ಗೆ ಶುಭವಾಗಲಿ ಸಾರ್ ಅಂತ!

Ravi D Channannavar IPS Motivational Speech

  • ಶಶಿಧರ ಡಿ ಎಸ್ ದೋಣಿಹಕ್ಲು

If you Like this Story , Like us on Facebook  The New India Times

POPULAR  STORIES :

ಸೇಲ್ಸ್ ಮ್ಯಾನ್ ಆಗಿದ್ದವರ ಆಸ್ತಿ ರೂ.121819104000.!

16-21 ವಯಸ್ಸಿನವರಲ್ಲಿ ಮಿತಿಮೀರಿದೆ `ಕಾಮನೆ..!’ ಹದಿವಯಸ್ಸಿನ ಹುಡುಗ-ಹುಡುಗಿಯರು ಹಾಳಾಗುತ್ತಿದ್ದಾರೆ..!?

ಬ್ಲೂಫಿಲಂ ವೀಕ್ಷಿಸುವಾಗ ಅವಳ ವಯಸ್ಸು ಕೇವಲ ಒಂಬತ್ತು..! ಇದು ಹದಿನಾರರಲ್ಲಿ ಕನ್ಯತ್ವ ಕಳೆದುಕೊಂಡ ಸನ್ನಿಯ ಜೀವನಗಾಥೆ

ಉಗ್ರರಿಗೆ ಇಸ್ರೇಲ್, ಅಮೆರಿಕಾದಿಂದ ವೆಪನ್ಸ್ ಪೂರೈಕೆ..!? ಪುಟಿನ್ ಹೇಳಿದ ಬೆಚ್ಚಿಬೀಳಿಸುವ ಸತ್ಯ..!?

 

LEAVE A REPLY

Please enter your comment!
Please enter your name here