No menu items!
12.4 C
Munich
Wednesday, April 29, 2026

ಅವನ ಕಿವಿಯೊಳಗೆ ಇದ್ದಿದ್ದು 26 ಜಿರಲೆಗಳು..!

Must read

ಅವನಿಗೆ ಸಿಕ್ಕಾಪಟ್ಟೆ ಕಿವಿ ನೋವಾಗ್ತಾ ಇತ್ತು. ಸ್ವಲ್ಪ ದಿನ ತಡ್ಕೊಂಡ, ಆದ್ರೆ ನೋವು ಜಾಸ್ತಿಯಾಗ್ತಾನೆ ಇತ್ತು..! ಇನ್ನು ಸುಮ್ಮನಿದ್ರೆ ಕಷ್ಟ ಅನಿಸಿ ಆಸ್ಪತ್ರೆಗೆ ಹೋದ. `ಸಿಕ್ಕಾಪಟ್ಟೆ ನೋವಾಗ್ತಾ ಇದೆ, ಕಿವಿ ನೋವಲ್ಲಿ ಸತ್ತೇ ಹೋಗ್ತೀನಿ’ ಅಂತ ಕಷ್ಟ ಹೇಳಿಕೊಂಡ..! ಡಾಕ್ಟರ್ ಅವನ ಕಷ್ಟ ನೋಡಿ ಆಯ್ತು ಕುತ್ಕಳಪ್ಪ ಅಂತ ಕಿವಿಗೆ ಬ್ಯಾಟರಿ ಬಿಟ್ಟರು. ಏನೂ ಕಾಣ್ತಿಲ್ವಲ್ಲೋ, ಸರಿ ಇರು ಅಂತ ಇನ್ನೂ ಸ್ವಲ್ಪ ಹತ್ತಿರ ಬ್ಯಾಟರಿ ಬಿಟ್ರೆ ಜಿರಲೆ ಮೀಸೆ ಕಾಣಿಸ್ತು..! ಡಾಕ್ಟರ್ ಗೆ ಗೊತ್ತಾಯ್ತು, ಕಿವಿಯೊಳಗೆ ಜಿರಲೆ ಇದೆ ಅಂತ..! ಆ ಪೇಶೆಂಟ್ ಗೆ ಹೇಳಿದ್ರು, ` ನೋಡಪ್ಪಾ, ನಿನ್ನ ಕಿವಿಯೊಳಗೆ ಜಿರಲೆ ಸೇರ್ಕೊಂಡಿದೆ, ಅದನ್ನು ತೆಗೆದ್ರೆ ನಿನ್ನ ಕಿವಿ ನೋವು ಕಮ್ಮಿ ಆಗುತ್ತೆ’ ಅಂತ..! ಅವನು ಜಿರಲೇನಾ ಅಂತ ಶಾಕ್ ಆದ. `ಮೊದಲು ತೆಗೀರಿ ಡಾಕ್ಟ್ರೆ, ಇಲ್ಲ ಅಂದ್ರೆ ನೋವಲ್ಲಿ ಸತ್ತೇ ಹೋಗ್ತೀನಿ’ ಅಂದ..! ಆಯ್ತು ಆಯ್ತು ಅಂತ ಡಾಕ್ಟರ್ ಜಿರಲೆ ತೆಗೆಯೋ ಕೆಲಸಕ್ಕೆ ಕೈ ಹಾಕಿದ್ರು..! ಅದಕ್ಕೆ ಮುಂಚೆ ಸ್ಕ್ಯಾನ್ ಮಾಡಿ ಎಷ್ಟ್ ದೊಡ್ಡ ಜಿರಲೆ ಅಂತ ನೋಡೋಣ ಅನ್ಕೊಂಡು ಸ್ಕ್ಯಾನ್ ಮಾಡಿದ್ರೆ ಅದರಲ್ಲಿದ್ದಿದ್ದು ಹೆಣ್ಣು ಜಿರಲೆ ಮತ್ತು ಅದರ 25 ಮಕ್ಕಳು..! ಟೋಟಲಿ 26 ಜಿರಲೆ..! ಹೆಣ್ಣು ಜಿರಲೆ ಇವನ ಕಿವಿಯೊಳಗೆ ಸೇರ್ಕೊಂಡು ಮೊಟ್ಟೆ ಇಟ್ಟು 25 ಮರಿ ಮಾಡಿತ್ತು..! ಕಿವಿ ನೋವದೇ ಇನ್ನೇನಾಗುತ್ತೆ..? ಡಾಕ್ಟರ್ ಸ್ಕ್ಯಾನಿಂಗ್ ರಿಪೋರ್ಟ್ ನೋಡಿ ಸುಸ್ತಾಗಿ ಹೋದ್ರು..! ಲೇ ಮೊದ್ಲು ಮಲ್ಕೊಳಪ್ಪ ಅಂತ ಹೇಳಿ ಕಿವಿಲಿರೋ ಜಿರಲೇ ಫ್ಯಾಮಿಲೀನಾ ತೆಗೆದು ಹೊರಗೆ ಹಾಕಿದ್ದಾರೆ..! ಅವನು ಆ ಜಿರಲೆ ಫ್ಯಾಮಿಲಿ ನೋಡಿ ಸುಸ್ತಾಗಿ ಎರಡು ಬಾಟಲಿ ನೀರು ಕುಡುದ್ನಂತೆ..!

This website and its content is copyright of – © Thenewindiantimes.com 2015. All rights reserved.
Any redistribution or reproduction of part or all of the contents Without Permission or Courtesy in any form is prohibited.

ಇದೆಲ್ಲಾ ನಡೆದಿರೋದು ಚೀನಾದಲ್ಲಿ. ಆ ಪೇಶೆಂಟ್ ವಯಸ್ಸು 19 ವರ್ಷ..! ಹೆಸರು ಮಿಸ್ಟರ್ ಲೀ.. ಜಿರಲೆ ತೆಗೆದ ಡಾಕ್ಟರ್ ಯಾಂಗ್ ಜಿಂಗ್. ಆಸ್ಪತ್ರೆ ಹೆಸರು ಕ್ಸಿಯೋಬಿಯಾನ್..! ನಿಮ್ಮ ಕಿವಿಗೂ ಜಿರಲೆ ಹೋದ್ರೆ ಅದಕ್ಕೆ ಆಶ್ರಯ ಕೊಟ್ಟು, ಮೊಟ್ಟೆ ಹಾಕಿಸಿ 25 ಮರಿ ಹಾಕೋ ತನಕ ಬಿಟ್ಕೋಬೇಡಿ..! ಕಿವಿಗೆ ಜಿರಲೆ ಹೋಗಬಾರ್ದು ಅಂತ ಕಿವಿಗೇ ಹಿಟ್ ಹೊಡ್ಕೊಂಡು ಮಲ್ಕೊಳೋದು, ಕಿವಿ ನೋವ್ತಾ ಇದೆ ಅಂತ ಕಿವಿಗೆ ಹಿಟ್ ಸ್ಪ್ರೇ ಮಾಡ್ಕೊಳೋದು ಮಾಡ್ಬೇಡಿ..! ಕಿವಿಗೆ ಹತ್ತಿ ಇಟ್ಕೊಂಡ್ ಮಲ್ಕೊಳಿ…! ಆದ್ರೂ 26 ಜಿರಲೆ ಅಂದ್ರೆ ಅದೇನ್ ತಮಾಷೇನಾ..! ಯಪ್ಪ ಯಪ್ಪ..!

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article