ಇಡೀ ಊರನ್ನೇ ಶ್ರೀಮಂತ ಮಾಡಿದ ವ್ಯಕ್ತಿಯ ಕಥೆ..!

1
254

ಆ ಹಳ್ಳಿ ಅಂದ್ರೆ ಜನ ದೂರದಿಂದಲೇ ಕೈ ಮುಗೀತಾ ಇದ್ರು! ಮದ್ಯಪಾನ, ಅಪರಾಧಗಳಿಗೆ ಅದು ಕುಖ್ಯಾತಿ ಆಗಿತ್ತು! “ಬರ” ಬೇರೆ ಅಲ್ಲಿ ತಾಂಡವ ಆಡ್ತಾ ಇತ್ತು! ಒಟ್ಟಿನಲ್ಲಿ ಈ ಹಳ್ಳಿ ಯಾವ್ದಕ್ಕೂ ಬೇಡವಾಗಿತ್ತು! ನರಕ ಯಾತನೆ! ಇಂತ ಹಳ್ಳಿಯನ್ನು ಬದಲಾಯಿಸೋದು ತುಂಬಾ ಕಷ್ಟ ಅಲ್ವೇನ್ರೀ?
ಅದು ಮಹರಾಷ್ಟ್ರದ ಅಹಮದನಗರ ಜಿಲ್ಲೆಯ ಹಿವರೆ ಬಾಜಾರ್ ಎಂಬ ಹಳ್ಳಿ! ಆ ಹಳ್ಳಿ ಕೆಟ್ಟು ಕೆರವಾಗಿತ್ತು! ಅಂಥಾ ಬಡ ಹಳ್ಳಿಯನ್ನ ನಾವ್ಯಾರೂ ನೋಡೇ ಇಲ್ವೇನೋ? ಅಷ್ಟು ಕೆಟ್ಟದಾಗಿತ್ತು! ಆ ಟೈಮ್ನಲ್ಲಿ ಹಳ್ಳಿಗೆ “ಪೋಪಟರಾವ ಪವಾರ” ಬರ್ತಾರೆ!  ಪದವಿ ಪಡೆದು ಹಳ್ಳಿಗೆ ಮರಳಿದ “ಪೋಪಟರಾವ ಪವಾರ”ರನ್ನು ಜನ ಪಂಚಾಯಿತಿ ಎಲಕ್ಷನ್ನಲ್ಲಿ ಕಂಟೆಸ್ಟ್ ಮಾಡಿ ಅಂತ ಹೇಳ್ತಾರೆ! ಆ ಹಳ್ಳಿಜನ ನೋಡಿದ ಹೈಲಿ ಎಜುಕೇಟೆಡ್ ಪರ್ಸನ್ ಅಂದ್ರೆ ಈ “ಪೋಪಟರಾವ ಪವಾರ” ಮಾತ್ರ ಆಗಿದ್ರು! ಈ ವಿದ್ಯಾವಂತರನ್ನು ಜನ ಪಂಚಾಯಿತಿ ಚುನಾವಣೆಯಲ್ಲಿ ಗೆಲ್ಲಿಸಿಯೇ ಬಿಟ್ತಾರೆ!

This website and its content is copyright of – © Thenewindiantimes.com 2015. All rights reserved.
Any redistribution or reproduction of part or all of the contents Without Permission or Courtesy in any form is prohibited.

ಚುನಾವಣೆಯಲ್ಲಿ ಗೆಲ್ಲುತ್ತಿದ್ದಂತೆ ಮಹತ್ವದ ಹೆಜ್ಜೆಯನ್ನಿಟ್ಟ “ಪೋಪಟರಾವ ಪವಾರ” ನಾಲ್ಕನೇ ತರಗತಿ ತನಕ ಮಾತ್ರ ಇದ್ದ ಶಿಕ್ಷಣವನ್ನು 10ನೇ ತರಗತಿ ತನಕ ಹೆಚ್ಚಿಸಿದ್ರು! ಅದರಿಂದಾಗಿ ಮಕ್ಕಳು ನಾಲ್ಕನೇ ತರಗತಿ ನಂತರದ ಕಲಿಕೆಗೆ ಬೇರೆಕಡೆ ಹೋಗುವ ತಲೆನೋವು ತಪ್ಪಿತು! ಇದರಿಂದ ಸುಲಭವಾಗಿ ಮಕ್ಕಳಿಗೆ ಶಿಕ್ಷಣ ಲಭ್ಯವಾಗುವಂತಾಯಿತು! ನಂತರ ” ಜಲ ಸಂರಕ್ಷಣಾ ಯೋಜನೆ” ಯನ್ನು ಕೈಗೆತ್ತಿಕೊಳ್ತಾರೆ! ಕೊಳವೆ ಬಾವಿಯನ್ನು ನಿಷೇಧಿಸ್ತಾರೆ! ಅಂತರ್ಜಲ ಮಟ್ಟ ಕುಸಿಯದೇ ಇರಲು “ತೆರೆದ ಬಾವಿ” ನೀರಿನ ಬಳಕೆ ಮಾಡಿ ಎಂದು ಹಳ್ಳಿಗರಿಗೆ ಹೇಳ್ತಾರೆ! ಅವರ ಮಾತನ್ನು ಹಳ್ಳಿಗರು ತಳ್ಳಿ ಹಾಕ್ಲೇ ಇಲ್ಲ! ಅಂತರ್ಜಲದ ಹೆಚ್ಚಳಕ್ಕೆ ಸುಮಾರು 4000 ಟ್ರಂಚಸ್ ನಿರ್ಮಾಣ ಮಾಡಿದ್ರು! ಕಡಿಮೆ ನೀರಿನ ಬಳಕೆಯಿಂದ ಹೆಚ್ಚು ಹಣವನ್ನು ಪಡೆಯುವಂತಹ ಬೆಳೆಗಳನ್ನು ಬೆಳೆಯುವಂತೆ ಉತ್ತೇಜಿಸಿದ್ರು! ಮರಕಡಿಯುವುದಕ್ಕೆ ಕಡಿವಾಣ ಹಾಕಿದ್ರು! ಹತ್ತು ಲಕ್ಷಮರಗಳನ್ನು ನೆಡುವ ಕಾರ್ಯಕ್ಕೆ ಮುಂದಾದ್ರು! ಸಾರಾಯಿ ಅಂಗಡಿಗಳನ್ನು ಮುಚ್ಚಿಸಿದ್ರು! 1995ರಲ್ಲಿ “ಆದರ್ಶ ಗಾಂವ್ ಯೋಜನೆ” ಯಲ್ಲಿ ಈ ಹಳ್ಳಿ ಆದರ್ಶ ಹಳ್ಳಿಯಾಗಿ ಶಹಬ್ಬಾಷ್ ಅನಿಸಿಕೊಂಡ್ತು! ಇವತ್ತು ದೇಶದ ಶ್ರೀಮಂತಹಳ್ಳಿಗಳಲ್ಲಿ “ಹಿವರೆ ಬಾಜಾರ್” ಕೂಡ ಒಂದು!
“ಪೋಪಟರಾವ ಪವಾರ” ತಾನು ತನ್ನ ಕುಟುಂಬ ಮಾತ್ರ ಅನ್ನೋ ಯೋಚ್ನೆ ಮಾಡಿ, ನಗರ ಜೀವನ ಬಯಸಿ, ತಮ್ಮ ಕ್ವಾಲಿಫಿಕೇಶನ್ ಗೆ ಸಿಗ್ತಾ ಇದ್ದ ವೈಟ್ ಕಾಲರ್ ಜಾಬ್ ಹುಡ್ಕೊಂಡು ಹೋಗಿದ್ರೆ ಅವರೊಬ್ಬರೇ ಉದ್ಧಾರ ಆಗ್ತಾ ಇದ್ರು! ಆದ್ರೆ ತಮ್ಮ ವಿದ್ಯೆಯನ್ನ ಹಳ್ಳಿ ಉದ್ಧಾರಕ್ಕೆ ಬಳಸಿದ್ರಿಂದಾಗಿ, ಅವತ್ತು ಯಾರಿಗೂ ಬೇಡವಾಗಿದ್ದ ಹಳ್ಳಿಯಲ್ಲಿ 60 ಮಿಲಿಯನೇರ್ಸ್ ಗಳಿದ್ದಾರೆ! ಊರಿನಲ್ಲಿ ಡಾಕ್ಟರ್ ಇಲ್ಲ ಆದ್ರೆ ಸುಮಾರು 32ಜನ ಎಂಬಿಬಿಎಸ್ ಮಾಡ್ತಾ ಇದ್ದಾರೆ! ಹೇಗಿದ್ದ ಹಳ್ಳಿಯನ್ನು ಹೇಗೆ ಮಾಡಿದ್ರು ನೋಡಿ! ಅವತ್ತಿನ ಬರಹಳ್ಳಿ ಇವತ್ತು ಅರವತ್ತು ಮಿಲಿಯನೇರ್ಸ್ ಗಳ ತಾಣ! 55 ವರ್ಷದ ಶಿಕ್ಷಿತ “ಪೋಪಟರಾವ ಪವಾರ” ಒಂದುಕಾಲದಲ್ಲಿ ಸ್ಮಶಾನದಂತಿದ್ದ ಹಳ್ಳಿಯನ್ನು ಇವತ್ತು ಭೂಲೋಕದ ಸ್ವರ್ಗಮಾಡಿದ್ದಾರೆ! ಏಕಾಂಗಿಯಾಗಿ ಇಡೀ ಹಳ್ಳಿಯನ್ನು ಬದಲಾಯಿಸಿದರು! ಎತ್ತನೋಡೊದರೂ ಹಚ್ಚ ಹಸಿರು ಕಣ್ಮನ ಸೆಳೆಯುತ್ತಿದೆ! ಶಿಕ್ಷಿತರೆಲ್ಲಾ ತಮ್ಮ ತಮ್ಮ ಹಳ್ಳಿ ಉದ್ಧಾರಕ್ಕೆ ಇವರಂತೆ ಶ್ರಮಿಸಿದರೆ….? ವ್ಹಾವ್! ಸೂಪರ್!
ಒಟ್ನಲ್ಲಿ “ಪೋಪಟರಾವ ಪವಾರ”ರ ಶ್ರಮ, ಸಾಧನೆ ಮೆಚ್ಚಲೇ ಬೇಕು ಸಾರ್…ಹಿ ಈಸ್ ಗ್ರೇಟ್ ಇಂಡಿಯನ್!

  • ಶಶಿಧರ ಡಿ ಎಸ್ ದೋಣಿಹಕ್ಲು

If you Like this Story , Like us on Facebook  The New India Times

 

1 COMMENT

LEAVE A REPLY

Please enter your comment!
Please enter your name here