No menu items!
13.9 C
Munich
Wednesday, April 29, 2026

ಅಪ್ಪು ಹುಟ್ಟುಹಬ್ಬಕ್ಕೆ ವಿಶ್ ಮಾಡದ ಯಶ್!

Must read

ಪುನೀತ್ ರಾಜ್ ಕುಮಾರ್ ಅವರ ಹುಟ್ಟು ಹಬ್ಬಕ್ಕೆ ಕರ್ನಾಟಕದ ಬಹುತೇಕ ಎಲ್ಲ ಸ್ಟಾರ್ ನಟನಟಿಯರು ಶುಭಾಶಯವನ್ನು ಕೋರಿದ್ದಾರೆ. ಚಂದನವನದ ಅಜಾತ ಶತ್ರು ಯಾರು ಎಂದರೆ ಎಲ್ಲರ ಬಾಯಲ್ಲೂ ಬರುವುದು ಅದು ಪುನೀತ್ ರಾಜ್ ಕುಮಾರ್ ಅಂತ. ಇಷ್ಟೊಂದು ಸ್ನೇಹ ಸಹಾಯಕವಾಗಿರುವ ಪುನೀತ್ ಅವರ ಹುಟ್ಟುಹಬ್ಬಕ್ಕೆ ಎಲ್ಲರೂ ವಿಶ್ ಮಾಡಿದ್ದಾರೆ ಆದರೆ ಪುನೀತ್ ಅವರ ಅಪ್ಪಟ ಸ್ನೇಹಿತ ತಮ್ಮನ ಸ್ಥಾನದಲ್ಲಿರುವ ಯಶ್ ಅವರು ಮಾತ್ರ ವಿಶ್ ಮಾಡಿಲ್ಲ..

 

 

ಪುನೀತ್ ಮತ್ತು ಯಶ್ ಅವರು ಎಷ್ಟು ಕ್ಲೋಸ್ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ. ಈ ಹಬ್ಬಗಳ ಸಂದರ್ಭಗಳಲ್ಲಿ ಇಬ್ಬರೂ ಪರಸ್ಪರ ತಮ್ಮ ಮನೆಗಳಿಗೆ ಭೇಟಿ ನೀಡುವಷ್ಟು ಉತ್ತಮ ಬಾಂಧವ್ಯ ಹೊಂದಿರುವ ಇವರಿಬ್ಬರು ಎಲ್ಲೇ ಸಿಕ್ಕರೂ ಸಹ ನಗುನಗುತಾ ಮಾತನಾಡುತ್ತಾರೆ.

 

 

 

ಇಷ್ಟು ಸ್ನೇಹ ಸೌಹಾರ್ದದಿಂದ ಇರುವ ಯಶ್ ಮತ್ತು ಪುನೀತ್ ಸ್ನೇಹದ ಕುರಿತು ಇದೀಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳಾಗುತ್ತಿವೆ. ಉತ್ತಮ ಸ್ನೇಹಿತರಾಗಿರುವ ಪುನೀತ್ ಅವರಿಗೆ ಯಶ್ ಅವರು ಯಾಕೆ ವಿಶ್ ಮಾಡಲಿಲ್ಲ? ಎಷ್ಟೇ ಬ್ಯುಸಿ ಇರಲಿ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ಕೋರಲು 5ನಿಮಿಷಗಳು ಸಾಕು. 5 ನಿಮಿಷಗಳು ಸಹ ಫ್ರೀ ಆಗದಷ್ಟು ಯಶ್ ಅವರು ಬ್ಯುಸಿಯಾಗಿಬಿಟ್ಟಿದ್ದಾರಾ? ಕೆಜಿಎಫ್ ಬರುವ ಮುಂಚೆ ಪುನೀತ್ ಅವರ ಹುಟ್ಟುಹಬ್ಬಕ್ಕೆ ತಪ್ಪದೆ ಸಾಮಾಜಿಕ ಜಾಲತಾಣದಲ್ಲಿ ವಿಶ್ ಮಾಡುತ್ತಿದ್ದ ಯಶ್ ಅವರು ಕೆಜಿಎಫ್ ನಂತರ ಬದಲಾಗಿದ್ದಾರಾ? ಎಂದೆಲ್ಲಾ ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ ಗಳು ಬರತೊಡಗಿವೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article