ಅವಳನ್ನು ಒಲಿಸಿಕೊಳ್ಳುವುದು ಹೇಗೆ?

1
135

ಹುಡುಗಿಯರನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ, ಅವರಿಗೆ ಯಾವುದು ಇಷ್ಟವಾಗುತ್ತದೆ. ಯಾವುದು ಇಷ್ಟವಾಗುವುದಿಲ್ಲ ಎಂದು ಗೊತ್ತಾವಗುವುದಿಲ್ಲ. ಹೀಗಂತ ನೀವು ಪದೇ ಪದೇ ಹೇಳುತ್ತಿದ್ದೀರಾ? ಹಾಗಾದರೆ ನೀವು ಅವಳನ್ನು ಇನ್ನೂ ಅರ್ಥ ಮಾಡಿಕೊಂಡಿಲ್ಲ ಎಂದೇ ಅರ್ಥ.

ಹುಡುಗಿಯರ ಭಾವನೆ ತುಂಬಾ ಸೂಕ್ಷ್ಮ. ನೀವು ಅವಳ ಭಾವನೆಗಳನ್ನು ಅರ್ಥ ಮಾಡಿಕೊಳ್ಳದೇ ಇದ್ದಲ್ಲಿ ಅವರಿಗೆ ಬೇಜಾರಾಗುತ್ತದೆ. ಪ್ರತಿಯೊಬ್ಬ ಹುಡುಗಿಗೆ ಅವಳದ್ದೇ ಆದ ಇಷ್ಟಗಳಿರುತ್ತವೆ.


ನೀವು ನಿಮ್ಮ ಹುಡುಗಿಗಾಗಿ ಏನು ಮಾಡಬೇಕು ಎನ್ನುವುದರ ಸಣ್ಣ ಪಟ್ಟಿ ಇಲ್ಲಿದೆ.
* ನೀವು ನಿಮ್ಮ ಹುಡುಗಿ ಜೊತೆ ಸಿನಿಮಾ ನೋಡುವಾಗ, ಸುಮ್ಮನೇ ಕುಳಿತುಕೊಂಡು ನೀವು ಮಾತನಾಡುತ್ತಿರುವಾಗ ಅವಳ ಕೂದಲಿನ ಮೇಲೆ ನೀವು ಕೈ ಯಾಡಿಸುತ್ತಾ ಇರುವುದು ಅವಳ ಮುಂಗುರುಳ ಹಿಂದೆ ಸರಿಸುವುದು ಮಾಡಿದರೆ ಅವಳಿಗೆ ಇಷ್ಟವಾಗುತ್ತದೆ.


* ಅವಳಿಗೆ ಚಳಿಯಾದಾ ನಿಮ್ಮ ಜಾಕೆಟ್ ಬಿಚ್ಚಿ ಅವಳಿ ಹಾಕುವುದು, ಅವಳನ್ನು ಕೇರ್ ಮಾಡುವುದು ನಿಮಗೆ ಇಷ್ಟ.
* ನೀವು ಅವಳನ್ನು ಎಷ್ಟು ಪ್ರೀತಿಸುತ್ತಿದ್ದೀರಿ ಎಂದು ಮನಸ್ಸಲ್ಲೇ ಇಟ್ಟುಕೊಳ್ಳುವುದಕ್ಕಿಂತ ನಿಮ್ಮಾಕೆಯಲ್ಲಿ ಹೇಳಿಬಿಡಿ.
* ನಿಮ್ಮ ಸ್ವರ ಹೇಗೆ ಇರಲಿ ಅವಳಿಗಾಗಿ ಹಾಡು ಗುನುಗುತ್ತಿರಿ.
* ನೀವಾಗಿಯೇ ಅವಳ ಇಷ್ಟ-ಕಷ್ಟಗಳನ್ನು ತಿಳಿದು ಅವಳನ್ನು ನೋಡಿಕೊಳ್ಳಿ.
* ಅವಳನ್ನು ಆಚೆ ಕರೆದುಕೊಂಡು ಹೋಗಿ, ಅವಳಿಗೆ ಪ್ರೀತಿಯಿಂದ ಏನನ್ನಾದರೂ ಕೊಡಿಸುತ್ತಿರಿ.
* ಕೈ ಹಿಡಿದು ಅವಳೊಡನೆ ಹೆಜ್ಜೆ ಹಾಕಿ.
*ಅವಳಿಗೊಂದು ಸಿಹಿ ಮುತ್ತು ಮತ್ತು ಅಪ್ಪುಗೆ ಮಿಸ್ ಮಾಡಬೇಡಿ.

ಬ್ರೇಕಪ್ ಮಾಡಿಕೊಳ್ಳೋ ಟೈಮ್ ಬಂದಿದ್ಯಾ?

ನೀವು ಯಾವುದೇ ಸಂಬಂಧ ತೆಗೆದುಕೊಳ್ಳಿ ಪರಸ್ಪರ ನಂಬಿಕೆ, ಪ್ರೀತಿ, ವಿಶ್ವಾಸ , ಗೌರವ ಅಗತ್ಯ. ‌ಯಾವ ಸಂಬಂಧದಲ್ಲಿ ಇವುಗಳ ಕೊರತೆ ಕಂಡುಬರುತ್ತದೆಯೋ ಅಂಥಾ ಸಂಬಂಧವನ್ನು ಮುರಿದು ಕೊಳ್ಳುವುದೇ ಉತ್ತಮ .

ನೀವು ನಿಮ್ಮ ಸಂಬಂಧ ಮುರಿದುಕೊಳ್ಳಲೇ ಬೇಕಾದ ಅನಿವಾರ್ಯತೆ ನಿಮಗಾಗಿ ಅವಶ್ಯಕ ಎಂದು ಮನಗಾಣುವುದು ಹೇಗೆ? ಸಂಬಂಧ ಮುರಿದುಕೊಳ್ಳೋ ಟೈಮ್ ಬಂದಿದ್ಯಾ? ನೀವು ಬ್ರೇಕಪ್ ಮಾಡಿಕೊಳ್ಳೋದೇ ಉತ್ತಮ ಅಂತ ತಿಳಿಯುವುದು ಹೇಗೆ ಎಂಬ ಪ್ರಶ್ನೆ ಕಾಡುತ್ತಿದೆಯಾ? ಅದಕ್ಕೆ ಇಲ್ಲಿ ಉತ್ತರ ಕೊಡುವ ಪ್ರಯತ್ನ ಮಾಡಿದ್ದೇವೆ.

 

ಪದೇ ಪದೇ ನಿಂದನೆ : ಯಾವುದೇ ಆರೋಗ್ಯಕಾರಿಯಾದ  ಸಂಬಂಧವೆಂದರೆ ಅಲ್ಲಿ ಪರಸ್ಪರ ಗೌರವ  ಕಾಳಜಿ ಇರಬೇಕು‌. ಪದೇ ಪದೇ ದೈಹಿಕ ಹಿಂಸೆ ಮಾನಸಿಕ ಹಿಂಸೆ ಆಗುತ್ತಿದ್ದರೆ ನಿಮ್ಮನ್ನು ಯಾವಾಗಲೂ ಭಾವನೆಗಳಿಗೆ ನೋವುಂಟಾಗುವ ಹಾಗೆ ಮಾಡ್ತಿದ್ರೆ ಅಂಥಾ ಸಂಬಂಧದಿಂದ ಹೊರಬರುವುದೇ ಉತ್ತಮ.

 

ಮನೆಯಲ್ಲಿ, ಸ್ನೇಹಿತರಿಗೆ ಗೊತ್ತಿರದೆ ರಹಸ್ಯ ಕಾಪಾಡುತ್ತಿದ್ದರೆ : ನಿಮ್ಮವನು ನಿಮ್ಮ ಪರಿಚಯವನ್ನು ಮನೆಯಲ್ಲಿ ಮಾಡಿಕೊಡದೆ, ಸ್ನೇಹಿತರಿಗೂ ಪರಿಚಯ ಮಾಡಿಕೊಡದೆ ರಹಸ್ಯವಾಗಿಯೇ ನಿಮ್ಮೊಡನೆ ಸಂಬಂಧ ಹೊಂದಿದ್ದರೆ ನೀವು ಅವನ ಜೀವನದ ರಹಸ್ಯ ಮಾತ್ರ…! ಅಂಥಾ ಸಂಭಂದ ನಿಮಗೆ ಮುಂದೆ ಮುಳು ಆಗಬಹುದು.

ಕಾರ್ಯಕ್ರಮ ಬದಲಾವಣೆ : ಶಾಪಿಂಗ್, ಮೂವಿ ಅಥವಾ ಯಾವ್ದಾದ್ರು ಕಾರ್ಯಕ್ರಮಕ್ಕೆ ಹೋಗೋ ಪ್ಲ್ಯಾನ್ ಮಾಡಿಕೊಂಡಿರುವಾಗ ಪದೇ ಪದೇ  ಏನಾದರೂ ಕಾರಣ ಹೇಳಿ ನಿಮ್ಮವ ತಪ್ಪಿಸಿಕೊಳ್ಳುತ್ತಿದ್ದರೆ ಅವರಿಗೆ ನಿಮ್ಮನ್ನು ಆಚೆ ಕರೆದುಕೊಂಡು ಹೋಗಲು, ನಿಮಗಾಗಿ ಸಮಯ ಮೀಸಲಿಡಲು ಆಗದಿದ್ದರೆ ಅವರಿಗೆ ನೀವು ಏನೂ ಅಲ್ಲ, ನಿಮ್ ಸಂಬಂಧ ಬೇಡ ಎಂದೇ ಅರ್ಥ… ಇನ್ನು ತೀರ್ಮಾನ ನಿಮ್ಮದು..

ನಂಬಿಕೆಗೆ ಅರ್ಹವಾಗಿರದಿದ್ದರೆ : ಸಂಬಂಧಗಳಲ್ಲಿ ಮುಖ್ಯವಾಗಿ ಬೇಕಾಗುವುದೇ ನಂಬಿಕೆ . ಆ ನಂಬಿಕೆ ಇಲ್ಲದಿದ್ದರೆ ಅಥವಾ ಅವರು ನಿಮ್ಮ ನಂಬಿಕೆಗೆ ಅರ್ಹರಲ್ಲದೆ ಇದ್ದರೆ ನೀವು ಸಂಬಂಧ ಕಡಿದುಕೊಳ್ಳುವುದೇ ಲೇಸು.

ಆಯ್ಕೆಗಳು ವಿಭಿನ್ನ : ನಿಮ್ಮ ಆಯ್ಕೆಗೂ ಅವರ ಆಯ್ಕೆಗಳಿಗೂ ಬಹಳ ವಿಭಿನ್ನತೆ ಇದ್ದರೆ,‌ನಿಮ್ಮ ಯೋಚನೆಗಳಿಗೂ ಅವತ ಯೋಚನೆಗಳಿಗೂ ಬಹಳ ವ್ಯತ್ಯಾಸವಿದ್ದರೆ ನೀವು ದೂರ ಆಗುವುದೇ ಒಳ್ಳೆಯದು ಎಂದು ಅರ್ಥ

 

ಕೆಟ್ಟ ಪದ ಬಳಕೆ ಜಗಳ :

ಜಗಳಗಳು ಕಾಮನ್…ಆದ್ರೆ ಜಗಳ ಆಡುವಾಗ ತೀರ ಕೆಟ್ಟ , ಅಶ್ಲೀಲ ಪದಗಳ ಬಳಕೆ ಮಾಡಿ ನಿಮ್ಮನ್ನು ನಿಂದಸುತ್ತಿದ್ದರೆ, ನಿಮಗೆ ನೋವುಂಟು ಮಾಡುತ್ತಿದ್ದರೆ ಅವರನ್ನು ದೂರವಿಡಿ.

ಹೊಟ್ಟೆಕಿಚ್ಚು , ಸಂಶಯ : ನಿಮ್ಮ ಕಷ್ಟ ಸುಖಕ್ಕೆ ಆಗದೆ , ನಿಮ್ಮ ಶ್ರೇಯಾಭಿವೃದ್ಧಿಯನ್ನು ಸಹಿಸದೆ ಹೊಟ್ಟೆ ಕಿಚ್ಚು ತೋರುತ್ತಿದ್ದರೆ, ನಿಮ್ಮ ಮೇಲೆ ಸಂಶಯ ಪಡುತ್ತಿದ್ದರೆ ದೂರಾಗುವುದೇ ಒಳ್ಳೆಯದೇ…

6 ನೇ ಕ್ಲಾಸ್ ಫೇಲ್ , IAS 2 ನೇ ರ್ಯಾಂಕ್..!

ಒಂದು ಪ್ರಯತ್ನದಲ್ಲಿ ಪದೇ ಪದೇ ಸೋಲುತ್ತಿದ್ದರೆ, ಆ ಕೆಲಸವೇ ಬೇಡ ಎನ್ನುವವರೇ ಹೆಚ್ಚು. ಇನ್ನೂ ಕೆಲವರು ಒಂದೆರೆಡು ಬಾರಿ ಸೋತರಂತೂ ನನ್ನಿಂದಾಗದು ಎಂದು ಕೈಕಟ್ಟಿ ಕುಳಿತುಬಿಡುತ್ತಾರೆ. ಆದರೆ ಕೆಲವರು ಮಾತ್ರ ಅದೆಷ್ಟೇ ಬಾರಿ ಸೋತರೂ ಕೂಡಾ ಯಶಸ್ಸು ಸಿಗುವವರೆಗೆ ಪ್ರಯತ್ನ ಮಾಡುತ್ತಲೇ ಇರುತ್ತಾರೆ. ಇಲ್ಲೋರ್ವ ಯುವತಿಯೂ ಕೂಡಾ ಅದೇ ಲಿಸ್ಟ್ ಗೆ ಸೇರ್ಪಡೆಯಾಗುತ್ತಾಳೆ. ಈಕೆ 6ನೇ ತರಗತಿಯಲ್ಲಿ ಫೇಲ್ ಆಗಿದ್ದಳು. ಆದರೆ ಅದನ್ನೇ ಸವಾಲಾಗಿ ಸ್ವೀಕರಿಸಿ ಯುಪಿಎಸ್ ಸಿ ಪರೀಕ್ಷೆಯಲ್ಲಿ ಇಡೀ ದೇಶಕ್ಕೆ 2ನೇ ರ್ಯಾಂಕ್ ಪಡೆದ ಸಾಧನೆ ಮಾಡಿದ್ದಾಳೆ.
ಯೆಸ್.. ಚಂಡಿಘಡ ಮೂಲದ ರುಕ್ಮಿಣಿ ರಿಯಾತ್ ಎಂಬುವವರು ಶಾಲಾ ದಿನಗಳಲ್ಲೇ ಬರೋಬ್ಬರಿ ಆರು ಬಾರಿ ಫೇಲ್ ಆಗಿದ್ದರು. ಆದ್ದರಿಂದ ಅವರನ್ನು ಹೀಯಾಳಿಸುತ್ತಿದ್ದವರೇ ಹೆಚ್ಚು. ಆದರೆ 2011ರಲ್ಲಿ ಅವರನ್ನು ದಡ್ಡಿ ಎಂದು ಹೀಯಾಳಿಸುತ್ತಿದ್ದವರೇ ಶಹಬ್ಬಾಶ್ ಗಿರಿ ನೀಡಲಾರಂಭಿಸಿದರು. ಏಕೆಂದರೆ ಆ ವರ್ಷದ ಯುಪಿಎಸ್ ಸಿ ಪರೀಕ್ಷೆಯಲ್ಲಿ ರುಕ್ಮಿಣಿಯವರು ದೇಶಕ್ಕೇ ಎರಡನೇ ರ್ಯಾಂಕ್ ಪಡೆದಿದ್ದರು. ಅದೂ ಕೂಡಾ ಮೊದಲ ಪ್ರಯತ್ನದಲ್ಲೇ ಎಂಬುದು ವಿಶೇಷ..!


ರುಕ್ಮಿಣಿಯವರು ಆರನೇ ತರಗತಿಯಲ್ಲಿ ಫೇಲ್ ಆದಾಗ ಖಿನ್ನತೆ ಉಂಟಾಗಿತ್ತಂತೆ. ಆದರೆ ಅದನ್ನೇ ಸವಾಲಾಗಿ ಸ್ವೀಕರಿಸಿದ ಅವರು ಸಿವಿಲ್ ಸರ್ವೀಸ್, ಸಮಾಜಶಾಸ್ತ್ರ ಮತ್ತು ರಾಜ್ಯಶಾಸ್ತ್ರಗಳನ್ನು ಪ್ರಮುಖ ವಿಷಯಗಳನ್ನಾಗಿ ಆಯ್ಕೆ ಮಾಡಿಕೊಂಡರು. ಬಳಿಕ ಯುಪಿಎಸ್ ಸಿ ಪರೀಕ್ಷೆಗಾಗಿ ಕಷ್ಟಪಟ್ಟು ಓದಲಾರಂಭಿಸಿದರು. ಅದರ ಫಲಿತಾಂಶವೇ ಇಡೀ ದೇಶದ ಮುಂದಿದೆ ಎಂದು ಅವರು ಹೇಳುತ್ತಾರೆ. ಇನ್ನು ರುಕ್ಮಿಣಿಯವರು ತಂದೆ-ತಾಯಿ, ಸ್ನೇಹಿತರು ಹೆಚ್ಚು ಸಮಾಯ ಮಾಡಿದರು, ನನ್ನ ಪ್ರಯತ್ನದಲ್ಲಿ ಅವರದ್ದೂ ಪಾಲಿದೆ, ಅವರು ನನ್ನ ಪ್ರಯತ್ನಕ್ಕೆ ಬೆನ್ನೆಲುಬಾಗಿದ್ದರು, ಅವರಿಲ್ಲದಿದ್ದರೆ ನಾನು ಇಷ್ಟು ಎತ್ತರಕ್ಕೆ ಏರುತ್ತಿರಲಿಲ್ಲ ಎನ್ನುತ್ತಾರೆ ರುಕ್ಮಿಣಿ ರಿಯಾತ್.
`ಸೋಲೇ ಗೆಲುವಿನ ಸೋಪಾನ’ ಎಂಬ ಮಾತು ನಿಜಕ್ಕೂ ಸತ್ಯ. ಒಂದು ಬಾರಿ ಸೋತರೆ ಕೈಕಟ್ಟಿ ಕೂರುವ ಬದಲು ಗೆದ್ದು ತೋರಿಸುವ ಛಲ ಹೊಂದುವುದು ಮುಖ್ಯ. ಅಂಥದ್ದೇ ಸಾಧನೆಯನ್ನು ರುಕ್ಮಿಣಿ ರಿಯಾತ್ ರವರು ಮಾಡಿದ್ದಾರೆ.

ಅಕ್ಷರ ಮಾಂತ್ರಿಕ ರವಿ ಬೆಳಗೆರೆ ಬರಹಗಳು

ಅಕ್ಷರ ಮಾಂತ್ರಿಕ ರವಿ ಬೆಳಗೆರೆ ಇನ್ನು ಬರೀ ನೆನಪು ಮಾತ್ರ. ಕನ್ನಡ ಪತ್ರಿಕೋದ್ಯಮ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ ಅಮೂಲ್ಯ. ಲೇಖನಗಳು, ಕಾದಂಬರಿ, ಕಥಾಸಂಕಲನ , ಅನುವಾದ ಹೀಗೆ ಸಾಕಷ್ಟು ಅಕ್ಷರ ಕೃಷಿ ಮಾಡಿದ್ದಾರೆ ರವಿ ಬೆಳಗೆರೆ.

 

ಕಾದಂಬರಿಗಳು:
ಗೋಲಿಬಾರ್ (1983), ಅರ್ತಿ (1990), ಮಾಂಡೋವಿ (1996), ಮಾಟಗಾತಿ (1998), ಒಮರ್ಟಾ (1999), ಸರ್ಪಸಂಬಂಧ (2000), ಹೇಳಿ ಹೋಗು ಕಾರಣ (2003), ನೀ ಹಿಂಗ ನೋಡಬ್ಯಾಡ ನನ್ನ (2003), ಗಾಡ್‍ಫಾದರ್ (2005), ಕಾಮರಾಜ ಮಾರ್ಗ (2010), ಹಿಮಾಗ್ನಿ (2012).
ಲೇಖನಿಯಲ್ಲಿ..:
ಕಾರ್ಗಿಲ್‍ನಲ್ಲಿ ಹದಿನೇಳು ದಿನ (1999), ಬ್ಲ್ಯಾಕ್ ಫ್ರೈಡೆ (2005), ರೇಷ್ಮೆ ರುಮಾಲು (2007), ಇಂದಿರೆಯ ಮಗ ಸಂಜಯ (2002), ಗಾಂಧೀ ಹತ್ಯೆ ಮತ್ತು ಗೋಡ್ಸೆ (2003), ಡಯಾನಾ (2007), ನೀನಾ ಪಾಕಿಸ್ತಾನ, ಅವನೊಬ್ಬನಿದ್ದ ಗೋಡ್ಸೆ, ಮೇಜರ್ ಸಂದೀಪ್ ಹತ್ಯೆ, ಅನಿಲ್ ಲಾಡ್ ಮತ್ತು ನಲವತ್ತು ಕಳ್ಳರು, ಮುಸ್ಲಿಂ.
ಜೀವನ ಕಥನ:
ಪ್ಯಾಸಾ, 1991, ಪಾಪದ ಹೂವು ಫೂಲನ್, ಆಗಸ್ಟ್ 2001, ಸಂಜಯ 2000, ಚಲಂ (ಅನುವಾದ) ಮಾರ್ಚ್ 2008.

ಹತ್ಯಾಕಥನ:
ರಾಜೀವ್ ಹತ್ಯೆ ಏಕಾಯಿತು? ಹೇಗಾಯಿತು? 1991, ಮೈಸೂರಿನ ಸೀರಿಯಲ್ ಕಿಲ್ಲರ್ ರವೀಂದ್ರ ಪ್ರಸಾದ್, 1998, ರಂಗವಿಲಾಸ್ ಬಂಗಲೆಯ ಕೊಲೆಗಳು, ಬಾಬಾ ಬೆಡ್‍ರೂಂ ಹತ್ಯಾಕಾಂಡ (ತನಿಖಾ ವರದಿ) ಜನವರಿ 2007, ಪ್ರಮೋದ್ ಮಹಾಜನ್ ಹತ್ಯೆ (ಅನುವಾದ) ಅಕ್ಟೋಬರ್ 2012.

ಭೂಗತ ಇತಿಹಾಸ:
ಪಾಪಿಗಳ ಲೋಕದಲ್ಲಿ ಭಾಗ -1 (1995), ಪಾಪಿಗಳ ಲೋಕದಲ್ಲಿ ಭಾಗ 2 (ಸೆಪ್ಟಂಬರ್ 1997), ಭೀಮಾ ತೀರದ ಹಂತಕರು (ಮೇ 2001), ಪಾಪಿಗಳ ಲೋಕದಲ್ಲಿ (2005), ಡಿ ಕಂಪನಿ (2008).
ಬದುಕು:
ಖಾಸ್‍ಬಾತ್ 96, 1997, ಖಾಸ್‍ಬಾತ್ 97, ಸೆಪ್ಟಂಬರ್ 1997, ಖಾಸ್‍ಬಾತ್ 98, ಸೆಪ್ಟಂಬರ್ 1998, ಖಾಸ್‍ಬಾತ್ 99, ಅಕ್ಟೋಬರ್ 2003, ಖಾಸ್‍ಬಾತ್ 2000, ಅಕ್ಟೋಬರ್ 2003, ಖಾಸ್‍ಬಾತ್ 2001, ಜನವರಿ 2007, ಖಾಸ್‍ಬಾತ್ 2002, ಜನವರಿ 2008, ಖಾಸ್‍ಬಾತ್ 2003.

ಅಂಕಣ ಬರಹಗಳ ಸಂಗ್ರಹ:
ಜೀವನ ಪಾಠ, ಬಾಟಮ್ ಐಟಮ್ ಭಾಗ 1, ಫೆಬ್ರವರಿ2002, ಬಾಟಮ್ ಐಟಮ್ 2, ಅಕ್ಟೋಬರ್2003, ಬಾಟಮ್ ಐಟಮ್ ಭಾಗ 3, ಡಿಸೆಂಬರ್ 2006, ಬಾಟಂ ಐಟಮ್ 4 ಹಾಗೂ ಬಾಟಂ ಐಟಮ್ 5.

ಪ್ರೀತಿ ಪತ್ರಗಳು:
ಲವಲವಿಕೆ -1, ಡಿಸೆಂಬರ್ 1998, ಲವಲವಿಕೆ -2, ಸೆಪ್ಟಂಬರ್ 2004, ಲವಲವಿಕೆ -3, ಲವಲವಿಕೆ -4.

ಕವನ ಸಂಕಲನ:
ಅಗ್ನಿಕಾವ್ಯ, 1983, ಇತರೆ. ಹೀಗೆ ತಮ್ಮ ಬರಹದಿಂದಲೇ ಅಂಖ್ಯಾತ ಅಭಿಮಾನಿಗಳು ಹೊಂದಿರುವ ಮಾಂತ್ರಿಕರಾಗಿದ್ದರು.

‘ಅಕ್ಷರ ರಾಕ್ಷಸ’ ಖ್ಯಾತಿಯ ರವಿ ಬೆಳಗೆರೆ ಇನ್ನಿಲ್ಲ

ಬೆಂಗಳೂರು : ಅಕ್ಷರ ರಾಕ್ಷಸ ಖ್ಯಾತಿಯ ರವಿ ಬೆಳಗೆರೆ ಇನ್ನು ನೆನಪು ಮಾತ್ರ. ಅಕ್ಷರ ಕೆಲಸ ಮಾಡುತ್ತಲೇ ಅವರು ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 62 ವರ್ಷ ವಯಸ್ಸಾಗಿತ್ತು. ನಿನ್ನೆ ರಾತ್ರಿ ತಮ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿರುವಾಗ 12 ಗಂಟೆ ಸುಮಾರಿಗೆ ಹೃದಯಾಘಾತವಾಗಿದೆ. ಕೂಡಲೇ ಸಿಬ್ಬಂದಿ ಅಪೋಲಾ ಆಸ್ಪತ್ರೆಗೆ ಸೇರಿಸಿದ್ದಾರೆ. ಚಿಕಿತ್ಸೆ ಫಲಿಸದೆ ರಾತ್ರಿ 2.30 ರ ಸುಮಾರಿಗೆ ವಿಧಿವಶರಾದರು ಎಂದು ತಿಳಿದುಬಂದಿದೆ.

ಹಾಯ್ ಬೆಂಗಳೂರು ಎಂಬ ಪತ್ರಿಕೆಯನ್ನು ಹುಟ್ಟುಹಾಕಿದ್ದರು. ಆ ಕಪ್ಪು ಸುಂದರಿ ಕರ್ನಾಟಕದ ಮೂಲೆಮೂಲೆಗೂ ಚಿರಪರಿಚಿತವಾಗಿತ್ತು. ಓ ಮನಸೇ ಮೂಲಕ ಸಾಕಷ್ಟು ಜನಪ್ರಿಯತೆಗಳಿಸಿದ್ದರು. ಕಾದಂಬರಿ,ಅನುವಾದ, ಜೀವನ ಕಥನ ಸೇರಿದಂತೆ ಇನ್ನಿತರ ಬರಹಗಳನ್ನು ಬರೆದಿದ್ದ ಬೆಳಗೆರೆಯವರ ಪುಸ್ತಕಗಳು ಅಚ್ಚರಿಯ ರೀತಿಯಲ್ಲಿ , ದಾಖಲೆ ರೂಪದಲ್ಲಿ ಮಾರಾಟವಾಗುತ್ತಿದ್ದವು.

ನಗರದ ಕರಿಷ್ಮಾ ಹಿಲ್‌ನಲ್ಲಿರುವ ಅವರ ನಿವಾಸಕ್ಕೆ ಪಾರ್ಥೀವ ಶರೀರವನ್ನು ರವಾನೆ ಮಾಡಲಾಗಿದೆ. ಬೆಳಗೆರೆಯವರ ಕನಸಿನ ಪ್ರಾರ್ಥನಾ ಶಾಲೆಯಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸುವುದಾಗಿ ತಿಳಿದುಬಂದಿದೆ. ಬೆಳಗೆರೆಯವರ ಮೊದಲ ಪತ್ನಿಗೆ ಇಬ್ಬರು ಪುತ್ರಿಯರು ಹಾಗೂ ಎರಡನೇ ಪತ್ನಿಗೆ ಒಬ್ಬ ಮಗನಿದ್ದಾನೆ.

ಕಾಫಿ ಕುಡಿಯದೇ ಇರೋರು ಇದನ್ನು ಓದಿ..!

ಬಹುತೇಕರು ಕಾಫಿ ಕುಡಿಯುತ್ತಾರೆ. ಕಾಫಿ ಕುಡಿಯುವುದರಿಂದ ರಿಫ್ರೆಶ್ಮೆಂಟ್ ಸಿಗುತ್ತದೆ. ಅದು ನಮ್ಮಲ್ಲಿ ಹೊಸ ಹುರಪನ್ನು ನೀಡುತ್ತದೆ. ಆದರೆ,‌ಕೆಲವರು‌ ಕಾಫಿಯಿಂದ ದೂರ…ಬಹುದೂರ…ಕಾಫಿ ಕುಡಿಯುವುದೇ ತಪ್ಪು ಎನ್ನುವಂತೆ ವರ್ತನೆ ಮಾಡುವವರೂ ಇದ್ದಾರೆ. ಆದರೆ, ಇದನ್ನು ಓದಿದರೆ ಕಾಫಿ ಕುಡಿಯದೇ ಇರುವವರೂ ಕಾಫಿ ಕುಡಿಯಲು ಆರಂಭಿಸುತ್ತಾರೆ.
ಕೂದಲು ಉದುರುವಿಕೆ ಸಮಸ್ಯೆ ಇರುವವರಂತು ಕಾಫಿ ಮಿಸ್ ಮಾಡಲ್ಲ . ಯಾಕೆಂದರೆ ಕಾಫಿ ಕುಡಿಯುವುದರಿಂದ ಕೂದಲು ಗಟ್ಟಿಯಾಗುತ್ತದೆ.
ಕೂದಲು ಆರೋಗ್ಯವಾಗಿರಲು ಮತ್ತು ಸ್ಟ್ರಾಂಗ್ ಆಗಿರಲು ಸಹಕರಿಸುತ್ತದೆ. ಇದರ ಸೇವನೆಯಿಂದ ಮೆದುಳಿನ ಸ್ಟ್ರೆಸ್ ಫ್ರೀ ಆಗುತ್ತದೆ.
ಕಾಫಿಯಲ್ಲಿನ ಕೆಫೆನ್ ಕೂದಲನ್ನು ಬೆಳೆಸುತ್ತದೆ. ಕೆಫೆನ್ ಶರೀರದಲ್ಲಿ ಕೂದಲನ್ನು ದುರ್ಬಲಗೊಳಿಸುವಂತಹ ಫೋಸ್ಫೋಡಿಸ್ರೇಸ್ ಎಂಜೈಮ್ ಅನ್ನು ಹೆಚ್ಚಿಸುವುದನ್ನು ಅದು ತಡೆಯುತ್ತದೆ.

ಫೋಸ್ಫೋಡಿಸ್ರೇಸ್ ಎಂಜೈಮ್ ಶರೀರದಲ್ಲಿದ್ದರೆ, ಸೈಕ್ಲಿಕ್ ಎಡನೋಸೀಸ್ ಮೋನೋಫಾಸ್ಪೆಕ್ಟ್ ಹೆಚ್ಚುತ್ತದೆ. ಇದರಿಂದ ಕೂದಲು ಬೆಳೆಯುತ್ತದೆ. ಕೆಫೆನ್‌ನಲ್ಲಿ ಕೂದಲನ್ನು ಹೊಳೆಯುವಂತೆ ಮಾಡುವ ಹಾಗೂ ಸ್ಟ್ರಾಂಗ್ ಆಗಿಸುವ ಗುಣವಿದ್ದು, ಕೂದಲು ಬೆಳೆಯುವಿಕೆಗೆ ಭಾರೀ ಸಹಕಾರಿ ಆಗಿದೆ.

ಸಾಹಸಪ್ರಿಯರು ಹೋಗಲೇ ಬೇಕಾದ ಭಯಾನಕ ರಸ್ತೆಗಳು..!

ಕೆಲವರಿಗೆ ಹುಚ್ಚು ಸಾಹಸಗಳನ್ನು ಮಾಡುವ ಹುಚ್ಚುತನಗಳಿರುತ್ತವೆ. ಅದೇ ಹುಚ್ಚುಗಳಿಗೆ ಅನೇಕರು ಬಲಿಯಾಗಿದ್ದಾರೆ. ಅದರೂ ಸಾಹಸ ಮಾಡುವ ತೆವಲುಗಳು ಮಾತ್ರ ಕಡಿಮೆಯಾಗಿಲ್ಲ. ಈ ಜಗತ್ತಿನಲ್ಲಿ ಅಸಾಮಾನ್ಯ ಸಾಧಕರುಗಳಿದ್ದಾರೆ. ನೀವು ಸಾಹಸಪ್ರಿಯರಾದ್ರೇ ಈ ರಸ್ತೆಗಳಲ್ಲಿ ರೈಡು ಹೊಡೆದು ಬನ್ನಿ ನೋಡೋಣ. ಆದರೆ ಅಲ್ಲಿಗೆ ತಲುಪೋದು ಮಾತ್ರ ಕಾಸ್ಟ್ಲೀ ವಿಚಾರ… ಅದು ನಿಮಗೆ ಬಿಟ್ಟ ವಿಚಾರ.
ನಾರ್ಥ್ ಯುಂಗಾಸ್ ರೋಡ್

road_yungas11_0

69 ಕಿ.ಮಿ.ಗಳಿರುವ, ಬೋಲಿವಿಯಾದ `ಲಾಫಾಝ್’ ನಗರದಿಂದ ಸ್ಟಾರ್ಟ್ ಆಗಿ `ಕೊರೈಕೋ’ ಊರಿಗೆ ಮುಗಿಯುವ ಈ ರಸ್ತೆ ವಿಶ್ವದ ಭಯಾನಕ ರಸ್ತೆಯೆಂದು “ಇಂಟರ್ ಅಮೇರಿಕನ್ ಡೆವೆಲಪ್ಮೆಂಟ್ ಬ್ಯಾಂಕ್” ಹೆಸರಿಟ್ಟಿದೆ. ಅಂಕಿ ಅಂಶದ ಪ್ರಕಾರ ವರ್ಷಕ್ಕೆ ಸುಮಾರು 300ಕ್ಕೂ ಹೆಚ್ಚು ಮಂದಿ ಇಲ್ಲಿ “ರೋಡ್ಆ್ಯಕ್ಸಿಡೆಂಟ್”ಗೆ ಬಲಿಯಾಗುತ್ತಾರೆ. 20 ವರ್ಷಗಳ ಪುನರ್ನಿರ್ಮಾಣದ ಬಳಿಕ 2006ರಲ್ಲಿ ಪಬ್ಲಿಕ್ಗೆ ಮುಕ್ತವಾದ ಈ ರಸ್ತೆ, ಆ ರಸ್ತೆ ಅಪಘಾತ ತಡೆಯುತ್ತದೆ ಎಂದು ಅಲ್ಲಿಯ ಸರ್ಕಾರ ಹೇಳಿಕೊಂಡರೂ ಜನರಿಗೆ ಅರಿವಾದಂತಿಲ್ಲ. ಹೀಗಾಗಿ ಈ ರಸ್ತೆಯನ್ನು ಹೆಚ್ಚಾಗಿ ಬಳಸುವುದು ವಾಹನ ಸವಾರರಲ್ಲ, ಬದಲಾಗಿ ಸಾಹಸ ಕ್ರೀಡೆಯಲ್ಲಿ ತೊಡಗುವ ಜನರು.
ಗೋಲಿಯಾಂಗ್ ಟನಲ್ ರೋಡ್

goliyang

ಹೆಸರೇ ಹೇಳುವಂತೆ ಈ ರಸ್ತೆ ಗುಡ್ಡ ಪ್ರದೇಶದಲ್ಲಿದ್ದು ಚೀನಾದ `ತೈವಾಂಗ್ ನಲ್ಲಿದೆ’. ಇದನ್ನು ಅಲ್ಲಿ ವಾಸಿಸುವ ಜನಾಂಗದವರೇ ನಿರ್ಮಿಸಿದ್ದು ವಿಶೇಷ. ಈ ಕಾರ್ಯದಲ್ಲಿ ಅದೆಷ್ಟು ಜನರು ಇಲ್ಲಿಂದ ಬಿದ್ದು ಅವರ ಪ್ರಾಣ ಕಳೆದುಕೊಂಡಿದ್ದಾರೋ ಆ ದೇವರಿಗೇ ಗೊತ್ತು. ಈ ಕಣಿವೆ 5 ಮೀಟರ್ ಉದ್ದ, 4 ಮೀಟರ್ ಅಗಲವಿದ್ದು, ಇಲ್ಲಿ ಪ್ರಯಾಣಿಸಲು ನಿಮಗೆ ಗಟ್ಟಿಯಾದ ಗುಂಡಿಗೆ ಬೇಕು.
ಆಫ್ರಿಕಾ ಇಕ್ಯುಕಿರೋಡ್

africa-iquika

ಉತ್ತರ ಪ್ರಾಂತ್ಯದ `ಚಿಲಿ’ಯಲ್ಲಿರುವ ಇದು, `ಆಫ್ರಿಕಾ’ದಿಂದ `ಇಕ್ಯುಕಿ’ಗೆ ಸಂಪರ್ಕಕೊಂಡಿಯಂತಿದೆ. ಈ ರಸ್ತೆ `ಡೇಂಜರಸ್ ಡ್ರೈವ್’ಗಳಿಗೆ ಹೆಸರುವಾಸಿಯಾಗಿದ್ದು, ರಸ್ತೆಯುದ್ದಕ್ಕೂ ಅಪಾಯಕಾರಿ. ಈ ರಸ್ತೆ ಜನರಿಗೆ ಸ್ಪೀಡ್ ಡ್ರೈವ್ ಮಾಡುವುದಕ್ಕೆ ಆಕರ್ಷಿಸುವಂತಿದ್ದು, ಚಾಲಕರು ರಸ್ತೆಯ ಮರ್ಮವನ್ನರಿಯದೇ ಪ್ರಪಾತಕ್ಕೆ ಬೀಳಿಸುತ್ತಾರೆ.

ಸೈಬೀರಿಯನ್ ರೋಡ್

syberian

`ಮಾಸ್ಕೋ’ದಿಂದ `ಯಾಕುಸ್ಕ’ ತನಕ ಇರುವ ಈ ರಸ್ತೆ ಸಾಮನ್ಯದಂತಿದ್ದರೂ ಅಲ್ಲಿನ ಹವಾಮಾನ ಕೆಲವೊಮ್ಮೆ ಅಂಟಾರ್ಟಿಕವನ್ನೂ ಮೀರಿಸುವಂತಿದ್ದು, ಆ ಸಮಯದಲ್ಲಿ ಈ ರಸ್ತೆ ಮಂಜು, ಬರ್ಫ್ ಗಳಿಂದ ಮುಚ್ಚಿಹೋಗಿ ರಸ್ತೆ ಜಾರುವಂತೆ ಮಾಡುತ್ತದೆ. ಹೀಗಾಗಿ ಈ ಸಮಯದಲ್ಲಿ ಯಾವ ವಾಹನಗಳು ಓಡಾಡುವಂತಿಲ್ಲ. ಆದ್ದರಿಂದ ದೊಡ್ಡ ಟ್ರೈನ್ ನಂತೆ ಕಾಣುವ ಟ್ರಾಫಿಕ್ ಜಾಮ್ ಇಲ್ಲಿ ನೀವು ನೋಡಬಹುದು. ಕೆಲವೊಮ್ಮೆ ವಾಹನಗಳು ಓಡಾಡುವಾಗಲೇ ಹವಾಮಾನ ವೈಪರಿತ್ಯ ಉಂಟಾಗಿ ಹೆಚ್ಚು ವಾಹನಗಳ ಅಪಘಾತ ಉಂಟಾಗಿರುವ ಉದಾಹರಣೆಗಳು ಸಾಕಷ್ಟಿವೆ.
ಸಿಚುವಾನ್ ಟಿಬೆಟ್ ಹೈವೇ

strada-taroko-797x600

ಇದು ಚೀನಾ ದೇಶದ ಮುಖ್ಯ ಹೈವೆಗಳೊಂದಾಗಿದ್ದು, ದೇಶದ ಅತ್ಯಂತ ಎತ್ತರದ ರಸ್ತೆ. ಇಲ್ಲಿ ಯಾವಾಗ ಭೂಕುಸಿತ ಉಂಟಾಗುತ್ತದೆ ಎಂದು ಹೇಳುವುದು ಕಷ್ಟ. ಸಾಕಷ್ಟು ಬಾರಿ ಇದೇ ರೀತಿ ಆಗಿದ್ದು, ಅದೆಷ್ಟೋ ಜನ ಪ್ರಯಾಣದಲ್ಲಿ ಭೂಕುಸಿತಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ.

 

 

 

1 COMMENT

LEAVE A REPLY

Please enter your comment!
Please enter your name here