No menu items!
12.4 C
Munich
Wednesday, April 29, 2026

ಹುಡುಗಿಯರೇ ಹುಡುಗರ ಈ ರಹಸ್ಯ ತಿಳಿಯಿರಿ..!

Must read

  1. ಹುಡುಗಿಯರೇ ಹುಡುಗರ ಈ ರಹಸ್ಯ ತಿಳಿಯಿರಿ..!

ಪ್ರೀತಿಸುವಾಗ, ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಸುಖೀ ಜೀವನ ನಡೆಸುತ್ತಿರುವಾಗಲೂ ಕೂಡ ಪರಸ್ಪರ ಎಲ್ಲಾ ವಿಷಯಗಳನ್ನು ಅರಿತುಕೊಳ್ಳಲು ಬಹುಶಃ ಸಾಧ್ಯವೇ ಇಲ್ಲ. ಪ್ರತಿಯೊಬ್ಬರಲ್ಲೂ ರಹಸ್ಯ ಇರುತ್ತದೆ. ಹುಡುಗರ ಬಗ್ಗೆ ಹುಡುಗಿಯರಿಗೆ ಗೊತ್ತಿರದ ಹಾಗೂ ಅವರು ತಿಳಿಯಲೇ ಬೇಕಾದ ರಹಸ್ಯಗಳಿವೆ.

* ಹುಡುಗರ ಕೇವಲ ದೊಡ್ಡ ದೊಡ್ಡ ಗಿಫ್ಟ್​, ಇಷ್ಟವಾಗುವ ಹೂವಿನ ಗುಚ್ಛ , ಚಾಕಲೇಟ್ ಗಳು ಮಾತ್ರ ನಿಮ್ಮನ್ನು ಆಕರ್ಷಿಸಲು ಆತ ಮಾಡುವಂತಹ ಕೆಲಸ ಎಂದು ಹುಡುಗಿಯರೇ ನೀವು ಭಾವಿಸಿರಬಹುದು. ಹೀಗೆ ಭಾವಿಸಿದ್ದರೆ ನಿಮ್ಮದು ತಪ್ಪು ಕಲ್ಪನೆಯಾಗಿದೆ. ಏಕೆಂದರೆ ಬರೀ ಅಷ್ಟರಲ್ಲಿ ಹುಡುಗರು ನಿಮ್ಮನ್ನು ಆಕರ್ಷಿಸಲು ಎದುರು ನೋಡುತ್ತಾನೆ. ಆತನ ವರ್ತನೆಯು ಮಾಮೂಲಿ, ಅವನಿರೋದೇ ಹೀಗೆ ಎಂದು ನಿಮಗೆ ಅನಿಸಬಹುದು. ಆದರೆ, ಗಮನವಿಟ್ಟರೆ ಗೊತ್ತಾಗುತ್ತದೆ ಅವನು ನಿಮ್ಮನ್ನು ಗಮನಸೆಳೆಯಲು ಹಾಗೆ ಮಾಡುತ್ತಿರುತ್ತಾನೆ.

* ಹುಡುಗರು ನಿಮ್ಮ ಪ್ರೀತಿಯ ಜೊತೆ ಜೊತೆಗೆ ಪ್ರಶಂಸೆಯನ್ನೂ ಇಷ್ಟಪಡುತ್ತಾರೆ. ಎಂಥಾ ಕಲ್ಲು ಹೃದಯದವರಿಗೂ ನಿಮ್ಮ ಪ್ರಶಂಸೆ ಬೇಕಾಗುತ್ತದೆ, ನೀವು ನಿಜವಾಗಿಯೂ , ಒಳ್ಳೆಯ ರೀತಿಯಲ್ಲಿ ಪ್ರಶಂಸೆ ಮಾಡಿದರೆ ಅವರು ನಿಮಗೆ ಮತ್ತಷ್ಟೂ ಹತ್ತಿರವಾಗುತ್ತಾರೆ.

* ನಿಮ್ಮ ಪಿರಿಯಡ್ಸ್ ಟೈಮ್​ನಲ್ಲಿ ನಿಮ್ಮ ಗಂಡ ಅಥವಾ ಹುಡುಗನಿಗೆ ಭಯವಿರುತ್ತದೆ. ನಿಮಗೆ ಏನಾಗುತ್ತದೋ..ನೀವು ಹೇಗೆ ನೋವು ತಡೆದುಕೊಳ್ಳುತ್ತೀರಾ ಎನ್ನುವ ಭಾವನೆ ಅವರಲ್ಲಿರುತ್ತದೆ ಅದನ್ನು ತೋರಿಸಿಕೊಳ್ಳುವುದಿಲ್ಲ. ನೀವು ಗರ್ಭಿಣಿ ಆಗಿರುವಾಗ ಅವರಿಗೆ ನಿಮ್ಮ ಬಗ್ಗೆ ತುಂಬಾ ಕಾಳಜಿ ಇರುತ್ತದೆ. ಆದರೆ, ಇವೆಲ್ಲಾವನ್ನು ಮುಕ್ತವಾಗಿ ತೋರಿಸಿಕೊಳ್ಳುವುದಿಲ್ಲ.
* ಎಷ್ಟೇ ಸ್ಟ್ರಿಕ್ಟ್ ಎಂದು ಅನಿಸಿದರೂ ನಿಮ್ಮನ್ನು ಮುದ್ದಾಡಲು ಇಷ್ಟಪಡುತ್ತಾನೆ. ನಿಮ್ಮ ಇಷ್ಟಗಳು ಅವನಿಗೂ ಇಷ್ಟವಾಗುತ್ತವೆ. ನೀವ ನೋಡುವ ಧಾರವಾಹಿ ಸಿನಿಮಾಗಳನ್ನೂ ಇಷ್ಟ ಪಡುತ್ತಾ ಹೋಗುತ್ತಾನೆ.

ಈ ನಗರಗಳಲ್ಲೇ ಹೆಚ್ಚು ಸಂಬಳ ಸಿಗೋದು..!

ಭಾರತದ ಎಲ್ಲಾ ವಿದ್ಯಾವಂತ ಯುವಕ/ಯುವತಿಯರಿಗೆ ತನ್ನ ವಿದ್ಯಾಭ್ಯಾಸಕ್ಕೆ ತಕ್ಕಂತೆ ಉದ್ಯೋಗ ಪಡೆಯಬೇಕೆಂಬುದು ಎಲ್ಲರ ಬಯಕೆ. ಅದರಲ್ಲೂ ಬೇರೆ ಬೇರೆ ನಗರಗಳಲ್ಲಿ ಅತೀ ಹೆಚ್ಚು ವೇತನ ನೀಡುವ ಕಂಪನಿಗಳಲ್ಲಿ ಕೆಲಸ ಸಿಕ್ಕಿದರಂತು ಬಿಡಿ.. ಅದರಿಂದಾಗುವ ಖುಷಿ ಮತ್ತೊಂದಿಲ್ಲ. ಅದೇ ರೀತಿ ಭಾರತದಲ್ಲಿರುವ ಪ್ರಸಿದ್ದ 10 ನಗರಗಳು ಜನರಿಗೆ ಉದ್ಯೋಗವಕಾಶ ನೀಡುವ ಜೊತೆಯಲ್ಲಿ ಊಹೆಗೂ ಮೀರಿದ ಸಂಭಾವನೆ ನೀಡ್ತಾ ಇವೆ. ಬೇರೆ ಬೇರೆ ರಾಷ್ಟ್ರದ ನಗರಗಳನ್ನು ಹೋಲಿಸಿಕೊಂಡರೆ ಈ ಹತ್ತು ನಗರಗಳಲ್ಲಿನ ಬೆಳವಣಿಗೆಯ ದರ ಹೆಚ್ಚಿದೆ ಎಂದು ವರದಿಯೊಂದು ನೀಡಿದೆ ಈ ಪೇಸ್ಕೇಲ್ ಡಾಟ್ ಕಾಮ್. ಈ ಹತ್ತು ಸೂಪರ್ ಸ್ಯಾಲರಿ ನಗರಗಳಲ್ಲಿ ಕರ್ನಾಟಕ ಸಿಲಿಕಾನ್ ಸಿಟಿ ಬೆಂಗಳೂರು ನಂ.1 ಸ್ಥಾನದಲ್ಲಿರೋದು ಶ್ಲಾಘನೀಯ. ಭಾರತದ ಹತ್ತು ನಗರಗಳಲ್ಲಿನ ಉದ್ಯೋಗಿಗಳ ವಾರ್ಷಿಕ ವೇತನದ ಡೀಟೆಲ್ಸ್ ಇಲ್ಲದೆ ನೋಡಿ.
ಬೆಂಗಳೂರು.
ರಾಜ್ಯ ರಾಜಧಾನಿ ಬೆಂಗಳೂರು ಭಾರತದಲ್ಲೇ ಅತೀ ಹೆಚ್ಚು ವೇತನ ನೀಡುವ ನಗರ ಎಂಬ ಹೆಗ್ಗಳಿಗೆ ಪಾತ್ರವಾಗಿದೆ. ಇಲ್ಲನ ಉದ್ಯೋಗಿಗಳಿಗೆ ಕಂಪನಿಗಳು ವಾರ್ಷಿಕ 5.85 ಲಕ್ಷ ಹಣ ವೇತನವಾಗಿ ನೀಡ್ತಾ ಇದೆ. ಇನ್ನು ಇಲ್ಲಿನ ನಗರ ಬೆಳವಣಿಗೆ ದರ ಶೇ.29.
ಪುಣೆ.
ಮಹಾರಾಷ್ಟ್ರದ ಪುಣೆ ನಗರ ಅತೀ ಹೆಚ್ಚು ವೇತನ ನೀಡುವ ನಗರದಲ್ಲಿ ಎರಡನೇ ಸ್ಥಾನದಲ್ಲಿದೆ. ಇಲ್ಲಿನ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ವಾರ್ಷಿಕ 5.30 ಲಕ್ಷ ರೂ. ವೇತನ ನೀಡ್ತಾ ಇದೆ. ಅಲ್ಲದೇ ಭಾರತದ ಇತರೆ ನಗರಗಳಿಗಿಂತ ಅತೀ ಹೆಚ್ಚು ಉದ್ಯೋಗಿಗಳನ್ನ ಹೊಂದಿರುವ ಏಕೈಕ ನಗರ ಈ ಪುಣೆ.
ನೋಯಿಡಾ.
ನೋಯಿಡಾ ನಗರದಲ್ಲಿ ಉದ್ಯೋಗಿಗಳಿಗೆ ಸಿಕ್ತಾ ಇರೋ ವಾರ್ಷಿಕ ಸಂಭಾವನೆ 5 ಲಕ್ಷ ರೂ. ಇನ್ನು ನಗರದ ಬೆಳವಣಿಗೆ ದರ ಶೇ.14
ಮುಂಬೈ.
ದೇಶದ ವಾಣಿಜ್ಯ ನಗರಿ ಎಂದು ಪ್ರಖ್ಯಾತಗೊಂಡಿರುವ ಮುಂಬೈ, ಅಲ್ಲಿನ ಕಂಪನಿ ಮಾಲಿಕರು ಉದ್ಯೋಗಿಗಳಿಗೆ ನೀಡ್ತಾ ಇರೋ ವಾರ್ಷಿಕ ವೇತನ 4.98 ಲಕ್ಷ ರೂ. ಇನ್ನು ಈ ನಗರ ವರ್ಷಕ್ಕೆ ಬರೋಬ್ಬರಿ 19,000 ಹೊಸ ಹೊಸ ಉದ್ಯೋಗಿಗಳಿಗೆ ಕೆಲಸ ನೀಡುತ್ತಾ ಬರುತ್ತಿವೆ.
ಹೈದರಾಬಾದ್.
ಆಂಧ್ರ ಪ್ರದೇಶದ ರಾಜಧಾನಿ ಹೈದರಾಬಾದ್‍ನ ಉದ್ಯೋಗಿಗಳು ಪಡೆಯುತ್ತಿರೋ ವಾರ್ಷಿಕ ಹಣ 4.89 ಲಕ್ಷ. ಇಲ್ಲಿನ ಬೆಳವಣಿಗೆ ದರ ಶೇ.30
ಗುರ್‍ಗಾಂವ್
ಗುರ್ಗಾಂವ್ ಎಂದೆ ಹೆಸರುವಾಸಿಯಾಗಿರೋ ಇಂದಿನ ಗುರ್‍ಗಾಂವ್ ನಲ್ಲಿ ಉದ್ಯೋಗಿಗಳಿಗೆ ಶೇ.4.50 ಲಕ್ಷ ವಾರ್ಷಿಕ ವೇತನ ಸಿಕ್ತಾ ಇದೆ. ಆ ಮುಖೇನ ಈ ನಗರದ ಬೆಳವಣಿಗೆ ದರವೂ ಕೂಡ ಶೇ.11 ರಷ್ಟಿದೆ.
ದೆಹಲಿ.
ರಾಷ್ಟ್ರ ರಾಜಧಾನಿ ದೆಹಲಿಯೂ ಕೂಡ ಅತೀ ಹೆಚ್ಚು ಉದ್ಯೋಗಿಗಳನ್ನು ಹಾಗೂ ಸಾಫ್ಟ್‍ವೇರ್ ಕಂಪನಿಗಳನ್ನು ಹೊಂದಿರುವ ನಗರವಾಗಿದ್ದು, ಇಲ್ಲಿನ ಉದ್ಯೋಗಿಗಳಿಗೆ 4.82 ಲಕ್ಷ ವಾರ್ಷಿಕ ವೇತನ ನೀಡುತ್ತಿದೆ. ಬೆಳವಣಿಗೆ ದರ ಶೇ.32.
ಚೆನ್ನೈ.
ದಕ್ಷಿಣ ಭಾರತದ ಪ್ರಖ್ಯಾತ ನಗರಗಳಲ್ಲಿ ಒಂದಾದ ಚೆನ್ನೈನ ಉದ್ಯೋಗಿಗಳಿಗೆ ಅಲ್ಲಿನ ಕಂಪನಿ ನೀಡುತ್ತಿರೋ ವಾರ್ಷಿಕ ಸಂಭಾವನೆ 4.44 ಲಕ್ಷ ರೂ. ಅಲ್ಲದೇ ಈ ನಗರದಲ್ಲಿ ಅತೀ ಹೆಚ್ಚು ಕೆಲಸ ಹುಡುಕುತ್ತಿರುವ ಯುವಕರು ಹೆಚ್ಚಾಗಿದ್ದು ನಗರ ಬೆಳವಳಿಗೆ ದರ ಮಾತ್ರ ಕೇವಲ ಶೇ.6 ರಷ್ಟು.
ಚಂಡೀಗಡ್
ಚಂಡೀಗಡ್ ನಗರದ ಬೆಳವಣಿಗೆ ದರ ಶೇ. 22. ಇಲ್ಲಿನ ವಾರ್ಷಿಕ ಆದಾಯ ದರ 5.52 ಲಕ್ಷ.
ಅಹಮದಾಬಾದ್.
ಅಹಮದಾಬಾದ್ ಕೂಡ ಸಾಕಷ್ಟು ಉದ್ಯೋಗಿಗಳನ್ನು ಹೊಂದಿರುವ ನಗರ. ಇಲ್ಲಿನ ಉದ್ಯೋಗಿಗಳ ವಾರ್ಷಿಕ ಆದಾಯದ ಕುರಿತಾಗಿ ಹೆಚ್ಚಿ ಮಾಹಿತಿ ಲಭ್ಯವಿಲ್ಲದಿದ್ದರೂ, ನಗರ ಬಗೆಳವಣಿಗೆ ದರ ಮಾತ್ರ ಕೇವಲ ಶೇ.2 ರಷ್ಟು.

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article