ಅಹಂ, ಹಠ ಅನುಮಾನ ಕೊಂದ ಪ್ರೀತಿ…! ನಿಮ್ಮ ಸ್ಟೋರಿಯೂ ಇದಾಗಿರಬಹುದು..?!

1
939

ಅವಳಿಲ್ದೆ ಬದುಕ ಬಲ್ಲೆ…! ಅವಳು ಮೋಸ ಮಾಡಿದ್ದು ನನಗಲ್ಲ..! ಅವಳಿಗೆ ಅವಳೇ ಮೋಸ ಮಾಡಿಕೊಂಡಳು. ನನ್ನ ಪರಿಶುದ್ಧ ಪ್ರೀತಿ ಏನು ಅಂತ ಅವಳಿಗೆ ಗೊತ್ತಿದೆ. ಗೊತ್ತಿದ್ರೂ ಅದ್ಯಾಕೆ ನನ್ನ ಬಿಟ್ಟು ಹೋದಳೋ? ದೂರಾಗಿದ್ದಾಳೆ…ದೂರವೇ ಇರಲಿ. ನಾನಂತೂ ಇನ್ಯಾವತ್ತೂ ಅವಳ ಹಿಂದೆ ಹೋಗಲ್ಲ. ಅವಳು ಮರಳಿ ಬರುವುದೂ ಇಲ್ಲ…! ಅಕಸ್ಮಾತ್ ತಪ್ಪಿನ ಅರಿವಾಗಿ ಮರಳಿದರೆ ನನ್ನಲ್ಲಿ ಅವಳಿಗೆ ಜಾಗವಿಲ್ಲ ಎಂದು ಅವನು ನಿರ್ಧರಿಸಿ ಬಿಟ್ಟಿದ್ದ!

ಬೇಡ, ಒಮ್ಮೆ ಯೋಚಿಸು. ಇಬ್ಬರೂ ಹಠ ಹಿಡಿದರೆ ಒಳ್ಳೆಯದಲ್ಲ, ಸ್ನೇಹ, ಪ್ರೀತಿ ಉಳಿಯಲು ಒಬ್ಬರಿಗಾಗಿ ಇನ್ನೊಬ್ಬರು ಕೆಲವೊಮ್ಮೆ ಸೋಲ ಬೇಕಾಗುತ್ತೆ ಅಂತ ಫ್ರೆಂಡ್ಸ್ ಒಂದಿಷ್ಟು ಬುದ್ಧಿ ಮಾತು ಹೇಳಿದರೂ ಅವನು ಕೇಳಲಿಲ್ಲ. ಅತ್ತ ಅವಳೂ ಅಷ್ಟೇ ಗೆಳತಿಯರ ಮಾತು ಕೇಳಲಿಲ್ಲ. ಇಬ್ಬರದ್ದೂ ಮೊಂಡು ಹಠ . ಅರ್ಥವಿಲ್ಲದ ಸಣ್ಣ ಮನಸ್ತಾಪ 3 ವರ್ಷದ ಪ್ರೀತಿಗೆ ಎಳ್ಳು ನೀರು ಬಿಟ್ಟಿತು. ಇದು ದೀಪಕ್ ಮತ್ತು ಪ್ರಿಯ ಲವ್ ಸ್ಟೋರಿ.
ದೀಪಕ್ ಮತ್ತು ಪ್ರಿಯ ಪರಿಚಯ ಆಗಿದ್ದು ಮಂಗಳೂರಿನಲ್ಲಿ. ದೀಪಕ್ ಮೂಲತಃ ಶಿವಮೊಗ್ಗದವನು. ಪ್ರಿಯ ಉಡುಪಿಯವಳು.
ಪಿಯುಸಿ ಮುಗಿಯುತ್ತಿದ್ದಂತೆ ದೀಪಕ್ ಮಂಗಳೂರಿಗೆ ಹೊರಟ. ಅಲ್ಲಿನ ಪ್ರತಿಷ್ಠಿತ ಕಾಲೇಜು ಒಂದರಲ್ಲಿ ಬಿಎಸ್ಸಿ ಪದವಿಗೆ ಸೇರಿದ. ಅದೇ ಕಾಲೇಜಿಗೆ ಬಿಕಾಂಗೆ ಸೇರಿದಳು ಪ್ರಿಯ.
ಅದು ಪದವಿ ಕಾಲೇಜು ಮೆಟ್ಟಿಲೇರಿದ ಮೊದಲ ದಿನ. ಅವತ್ತು ಉದ್ದನೆಯ ಜಡೆಯ ಹುಡುಗಿ ಪ್ರಿಯ ದೀಪಕ್ ನ ಕಣ್ಣಿಗೆ ಬಿದ್ದಳು! ಅವಳನ್ನು ನೋಡಿದ ಕ್ಷಣವೇ ದೀಪಕ್ ಪ್ರೀತಿಯಲ್ಲಿ ಬಿದ್ದ. ಅವಳ ಜಡೆ, ನಗು ದೀಪಕ್ ಗೆ ಇಷ್ಟವಾಗಿತ್ತು.
ಪ್ರತಿದಿನ ಅವಳು ಕ್ಯಾಂಪಸ್ ನಲ್ಲಿ ಸಿಗ್ತಾ ಇದ್ಲು! ಅವಳ ನೋಡಿದ ಕೂಡಲೇ ಇವನ ಹೃದಯದ ಬಡಿತ ಹೆಚ್ಚಾಗುತ್ತಿತ್ತು. ಅವಳನ್ನು ಮಾತನಾಡಿಸುವ ದೈರ್ಯ ಅವನಿಗೆ ಬಂದಿರಲಿಲ್ಲ. ಅಷ್ಟೇ ಅಲ್ಲ ಅವಳ ಹೆಸರೇ ಅವನಿಗೆ ಗೊತ್ತಿರಲಿಲ್ಲ!
ಕೊನೆಗೆ ಒಂದು ದಿನ ಗೆಳೆಯ ರೋಹಿತ್ ಬಳಿಯಲ್ಲಿ ತನಗೊಬ್ಬಳು ಹುಡುಗಿ ಇಷ್ಟ ಆಗಿದ್ದಾಳೆ. ಅವಳು ಬಿಕಾಂ ಎಂದು ತಾನು ಲವ್ವಲ್ಲಿ ಬಿದ್ದ ವಿಷಯವನ್ನು ಹೇಳಿದ. ಅವಳ ಹೆಸರು ಗೊತ್ತಿಲ್ಲ, ಮಾತನಾಡಿಸೋಕೆ ಭಯ ಆಗುತ್ತೆ ಎಂದೂ ಸಹ ರೋಹಿತ್ ಹತ್ರ ಹೇಳಿಕೊಂಡ.
ಅಷ್ಟೆಲ್ಲ ಭಯ ಇದ್ರೆ ಲವ್ ಮಾಡಬಾರದು. ನಾಳೆ ಬೆಳಗ್ಗೆ ಅವಳನ್ನು ತೋರಿಸು . ನಿನಗೆ ಸರಿ ಆಗ್ತಾಳ ಇಲ್ವಾ? ಅಂತ ಮೊದಲು ನೋಡಣ ಎಂದ ರೋಹಿತ್.
ಮರುದಿನ ದೀಪಕ್ ಮತ್ತು ರೋಹಿತ್ ಫಸ್ಟ್ ಇಯರ್ ಬಿಕಾಂ ಕ್ಲಾಸ್ ರೂಂ ಗೆ ಹೋಗುವ ಕಾರಿಡಾರ್ ನಲ್ಲಿ ಕಟ್ಟೆ ಮೇಲೆ ಕುಳಿತು ಕೊಂಡಿದ್ರು! ಅಷ್ಟರಲ್ಲಿ ಗೆಳತಿಯರ ಜೊತೆ ಪ್ರಿಯಳ ಆಗಮನವಾಯ್ತು. ಇನ್ನೇನು ಅವಳನ್ನು ನೋಡಿದ ದೀಪಕ್ ..ಅವಳೇ ಕಣೋ ಎಂದು ರೋಹಿತ್ ಗೆ ತೋರಿಸಬೇಕು. ಅಷ್ಟರಲ್ಲಿ ಪ್ರಿಯ ರೋಹಿತ್ ಕಡೆಗೆ ಸ್ಮೈಲ್ ಬಕೊಡ್ತಾ ಬಂದಳು! ರೋಹಿತ್ ಹಾಯ್ ಎಂದು ಪ್ರಿಯಳನ್ನ ಬರಮಾಡಿಕೊಂಡ! ದೀಪಕ್ ಗೆ ಶಾಕ್…! ಹೃದಯಲ್ಲಿ ನೋವಿನ ಭಾವ..!
ರೋಹಿತ್ ಪ್ರಿಯಳಿಗೆ ದೀಪಕ್ ನ ಪರಿಚಯ ಮಾಡಿಸಿದ. ಅಷ್ಟರಲ್ಲಿ ಲಕ್ಚೆರರ್ ಬಂದ್ರು. ಪ್ರಿಯ ಕ್ಲಾಸ್ ರೂಂಗೆ ಹೋದ್ಲು.
ಲೋ, ಇಷ್ಟೊತ್ತು ಕಾದ್ರು ನಿನ್ನ ಹುಡುಗಿ ಬರ್ಲಿಲ್ವಲ್ಲ. ಇದೇ ಕ್ಲಾಸ್ ಹೌದ ಅಲ್ವಾ? ಅಂತ ರೋಹಿತ್ ದೀಪಕ್ ಗೆ ಕೇಳಿದ. ದೀಪಕ್ ಸಪ್ಪೆ ಮುಖ ಹಾಕಿಕೊಂಡು ಬಾ ಮಗ, ಕ್ಲಾಸ್ ಮುಗಿದ ಮೇಲೆ ಮಾತಡಣ ಅಂತ ಅವನನ್ನು ಕರೆದುಕೊಂಡು ತನ್ನ ಡಿಪಾರ್ಟ್ ಮೆಂಟ್ ಕಡೆ ಹೋದ.
ಸಂಜೆ ಕಾಫಿ ಕುಡಿಯುತ್ತಾ ದೀಪಕ್ ರೋಹಿತ್ ನಲ್ಲಿ ಕೇಳಿದ , ಮಗ, ಬೆಳಗ್ಗೆ ಪ್ರಿಯ ಅಂತ ಒಬ್ರನ್ನ ಪರಿಚಯಿಸಿ ಕೊಟ್ಟಿಯಲ್ಲ. ಅವಳು ನಿನಗೆ ಹೇಗೆ ಪರಿಚಯ ಅಂದ.


ಅಯ್ಯೋ ಅವಳಾ? ಸಂಬಂಧದಲ್ಲಿ ಸೋದರ ಮಾವನ ಮಗಳು! ಚಿಕ್ಕಂದಿನಿಂದಲೂ ಜೊತೆಯಲ್ಲೇ ಓದಿದ್ವಿ. ಪಿಯುಸಿ ನೂ ಒಂದೇ ಕಾಲೇಜು. ಕಾಂಬಿನೇಷನ್ ಮಾತ್ರ ಬೇರೆ ಬೇರೆ. ನಾವು ಇಲ್ಲಿತನಕ ಹೊರಗಡೆ ರಿಲೇಷನ್ಸ್ ಅಂತ ಯಾರಲ್ಲೂ ಪರಿಚಯ ಮಾಡಿಕೊಂಡಿಲ್ಲ. ಫ್ರೆಂಡ್ಸ್ ಅಂತಾನೆ ಪರಿಚಯ ಮಾಡಿಕೊಂಡಿದ್ದೀವಿ ಅಂದ…ದೀಪಕ್ ಹ್ಞೂಂ ಎಂದು ಮೌನ ದೇವತೆಗೆ ಶರಣಾದ.
ಹೇ ನಿನ್ನ ಹುಡುಗಿ ಸಿಗಲೇ ಇಲ್ವಲ್ಲ? ನಾಳೆನಾದ್ರು ತೋರಿಸೋ ಎಂದು ರೋಹಿತ್ ದೀಪಕ್ ಗೆ ಕೇಳಿದ.
ಹೇಳುವುದು ಬೇಡ ಅನಿಸಿದರೂ ದೀಪಕ್ ಗಟ್ಟಿ ಮನಸ್ಸು ಮಾಡಿ ಹೇಳಿಯೇ ಬಿಟ್ಟ.. ರೋಹಿತ್ ನನಗೆ ಇಷ್ಟವಾದ ಹುಡುಗಿ ಪ್ರಿಯ! ತಪ್ಪು ಅನಿಸಿದ್ರೆ ದಯವಿಟ್ಟು ಕ್ಷಮಿಸಿ ಬಿಡು .
ಹೇ ಹೇ..ಏನೋ..? ಕ್ಷಮೆ ಕೇಳೋ ತಪ್ಪು ನೀನೇನು ಮಾಡಿದ್ದೀಯ? ನೀನು ಹೇಗಿದ್ರು ನನ್ನ ಫ್ರೆಂಡ್ . ನೀನು ನಾನು ಯಾವಾಗ್ಲು ಜೊತೆಯಲ್ಲಿ ಇರ್ತೀವಲ್ಲಾ ಹಾಗಾಗಿ ಪ್ರಿಯ ನಿನ್ನ ಜೊತೆನೂ ಆದಷ್ಟು ಬೇಗ ಕ್ಲೋಸ್ ಆಗ್ತಾಳೆ. ಗಡಿಬಿಡಿ ಬೇಡ. ಸ್ವಲ್ಪ ದಿನ ಆದ್ಮೇಲೆ ಅವಳ ಬಳಿ ಈ ಬಗ್ಗೆ ಮಾತಾಡೋಣ ಎಂದು ದೀಪಕ್ ಗೆ ಸಲಹೆ ನೀಡಿದ ರೋಹಿತ್.
ಬರುಬರುತ್ತಾ ಪ್ರಿಯ ದೀಪಕ್ ಗೆ ಆತ್ಮೀಯಳಾದಳು. ದೀಪಕ್ ಪ್ರೀತಿಯ ವಿಷಯವನ್ನು ಪ್ರಸ್ತಾಪಿಸಿದಾಗ ಹುಸಿ ಕೋಪವನ್ನೂ ಮಾಡಿಕೊಂಡು ಸತಾಯಿಸಿದಳು. ಎಷ್ಟೋ ದಿನದ ನಂತರ ಗ್ರೀನ್ ಸಿಗ್ನಲ್ ಕೊಟ್ಟಳು!
ಅಂತೂ ಇಂತೂ ಡಿಗ್ರಿಯ ಮೂರು ವರ್ಷಗಳು ಉರುಳಿದ್ದೇ ಗೊತ್ತಾಗಿಲ್ಲ. ಪದವಿ ಮುಗಿಯಿತು. ದೀಪಕ್ , ರೋಹಿತ್ ಮತ್ತವರ ಸ್ನೇಹಿತರು ಮಂಗಳೂರು ವಿವಿಯಲ್ಲಿ ಎಂಎಸ್ಸಿಗೆ ಸೇರಿದರು. ಪ್ರಿಯ ಮತ್ತವಳ ಗೆಳತಿಯರು ಇದೇ ವಿವಿಗೆ ಎಂಕಾಂಗೆ ಸೇರಿದ್ರು.


ಹೀಗಿರುವಾಗ ಒಂದು ದಿನ..ದೀಪಕ್ ಬೈಕಿನಲ್ಲಿ ಒಬ್ಬಳು ಹುಡುಗಿಯನ್ನು ಕೂರಿಸಿಕೊಂಡು ಹೋಗುತ್ತಿದ್ದುದನ್ನು ನೋಡಿದ ಪ್ರಿಯಳಲ್ಲಿ ಅನುಮಾನ ಮೂಡತೊಡಗಿತು. ಕೂಡಲೇ ದೀಪಕ್ ಗೆ ಕಾಲ್ ಮಾಡಿದ್ಲು. ದೀಪಕ್ ರಿಸೀವ್ ಮಾಡ್ಲಿಲ್ಲ . ಇವಳ ಅನುಮಾನ ಹೆಚ್ಚಾಯ್ತು. ಎಷ್ಟೋ ಹೊತ್ತಿನ ಬಳಿಕ ದೀಪಕ್ ಪ್ರಿಯಗೆ ಕಾಲ್ ಮಾಡ್ದ. ಅವಳು ಬೇಕಂತಲೇ ರಿಸೀವ್ ಮಾಡ್ಲಿಲ್ಲ. ಪದೇ ಪದೇ ಕಾಲ್ ಮಾಡಿದ ..ಹ್ಞೂಂ, ಹ್ಞೂಂ ಅವಳು ರಿಸೀವ್ ಮಾಡಲೇ ಇಲ್ಲ..! ಮರುದಿನ ಕ್ಯಾಂಪಸ್ ನಲ್ಲಿ ಸಿಕ್ಕಾಗ, ಕೇಳಿದ ಏನಾಯ್ತು ನಿಂಗೆ? ಕೋಪದಿಂದ ಮಾತಾಡಲಾರಂಭಿಸಿದ್ಲು. ನಿನ್ನೆ ಬೈಕಲ್ಲಿ ಕೂರಿಸಿಕೊಂಡು ಹೋದಿಯಲ್ಲ? ಆ ಹುಡುಗಿಯಾರು?
ದೀಪಕ್ ಹೇಳಿದ ಅವಳಾ ನನ್ನ ಫ್ರೆಂಡ್. ಹುಷಾರಿರ್ಲಿಲ್ಲ ಆಸ್ಪತ್ರೆ ಗೆ ಕರೆದುಕೊಂಡು ಹೋಗಿದ್ದೆ.
ನನ್ನ ಕಾಲ್ ಯಾಕೆ ಪಿಕ್ ಮಾಡಿಲ್ಲ? ಅಕ್ಷತಾಳ ಪ್ರಶ್ನೆ.
ಬೈಕಲಿ ಇದ್ದೆ ,ಆಸ್ಪತ್ರೆಯಿಂದ ವಾಪಾಸ್ಸಾದ ಮೇಲೆ ಎಷ್ಟು ಸಲ ನಾನ್ ನಿಂಗೆ ಕಾಲ್ ಮಾಡಿಲ್ಲ ಹೇಳು? ನೀನು ರಿಸೀವ್ ಮಾಡಿದ್ಯಾ? ನೋಡು, ಪ್ರಿಯ. ಇಷ್ಟೆಲ್ಲ ಅನುಮಾನ ಒಳ್ಳೆಯದಲ್ಲ. ನಿನ್ನ ಎಲ್ಲಾ ಪ್ರಶ್ನೆಗಳಿಗೆ ನಾನು ಉತ್ತರಿಸಬೇಕು ಅಂತೇನೂ ಇಲ್ಲ ಎಂದು ಗಟ್ಟಿ ದನಿಯಲ್ಲಿ ಉತ್ತರಿಸಿದ.


ಸರಿ, ಬಿಡು ಎಂದು ಕೋಪ ಮಾಡ್ಕೊಂಡು ಹೊರಟು ಹೋದಳು ಪ್ರಿಯ.
ಮೂರ್ನಾಲ್ಕು ದಿನ ಆಯ್ತು ಇಬ್ಬರೂ ಒಬ್ಬರಿಗೊಬ್ಬರಿಗೆ ಕಾಲ್ ಮಾಡಿಲ್ಲ. ಅಹಂನಿಂದ ದೂರ ಉಳಿದರು.
ಒಂದು ದಿನ ಬೇಕಂತಲೇ ಪ್ರಿಯ ದೀಪಕ್ ಎದುರೇ ಕ್ಯಾಂಪಸ್ನಲ್ಲಿ ಕ್ಲಾಸ್ ಮೇಟ್ ಒಬ್ಬನ ಬೈಕ್ ಹತ್ತಿದಳು..! ಇದು ದೀಪಕ್ ಗೆ ಮತ್ತಷ್ಟು ಸಿಟ್ಟು ತರಿಸ್ತು. ಅವಳು ಉರಿಸೋಕೆ ಹೀಗೆ ಮಾಡ್ತಾ ಇದ್ದಾಳೆ ಅಂತ ಗೊತ್ತಿದ್ರೂ ದ್ವೇಷಿಸಲಾರಂಭಿಸಿದ. ಒಬ್ಬರಿಗೆ ಒಬ್ಬರು ಪೈಪೋಟಿ ನಡೆಸುವವರಂತೆ ಬೇರೆ ಬೇರೆಯವರ ಜೊತೆ ಸುತ್ತಾಡಲು ಶುರುಮಾಡಿದ್ರು. ಮಾತು ಬಿಟ್ಟೇ ಬಿಟ್ಟರು. ಇವತ್ತಿಗೂ ದೂರಾಗಿದ್ದಾರೆ. ಇಬ್ಬರ ಗೆಳೆಯರು ಇವರಿಬ್ಬರಿಗೂ ಬುದ್ಧಿಮಾತು ಹೇಳಿದ್ರು ಪ್ರಯೋಜನವಾಗಿಲ್ಲ. ಹಠ ಸಾಧಿಸ್ತಾ ಇದ್ದಾರೆ. ಮಾತು ಬಿಟ್ಟು ಈಗಾಗಲೇ ಎರಡು ವರ್ಷ ಆಯ್ತು ಮಾತುಬಿಟ್ಟು.


ಸ್ನೇಹಿತರೇ, ಪ್ರೀತಿ ಮಾಡುವುದು ದೊಡ್ಡದಲ್ಲ. ಅದನ್ನು ಉಳಿಸಿಕೊಂಡು ಹೋಗುವುದು ಮುಖ್ಯ. ಅನುಮಾನ, ಸಣ್ಣ ಪುಟ್ಟ ಜಗಳವನ್ನು ದೊಡ್ಡದಾಗಿ ಮಾಡಿಕೊಂಡು ಸಂಬಂಧ ಹಾಳು ಮಾಡಿಕೊಳ್ಳಬಾರದು. ಪ್ರೀತಿಗಾಗಿ ಸೋಲಿ, ಪ್ರೀತಿಯನ್ನು ಸೋಲಿಸಿ ನಿಮಗೆ ನೀವೇ ಮೋಸ ಮಾಡಿಕೊಳ್ಳದಿರಿ.

ಮಹೇಂದ್ರ ಸಿಂಗ್ ಧೋನಿಯ ಬಗ್ಗೆ ನಿಮ್ಗೆ ಗೊತ್ತಿಲ್ಲದ ಸಂಗತಿಗಳು..!

ಪತಿಗೆ ರೊಮ್ಯಾಂಟಿಕ್ ‌ಅನಿಸುವ ವಿಷಯಗಳ ಬಗ್ಗೆ ನಿಮಗೆ ಗೊತ್ತೇ…?

ಪತಿಗೆ ರೊಮ್ಯಾಂಟಿಕ್ ‌ಅನಿಸುವ ವಿಷಯಗಳ ಬಗ್ಗೆ ನಿಮಗೆ ಗೊತ್ತೇ…?

ಹಗಲುಗನಸು ಕಾಣೋರು ಸ್ಮಾರ್ಟ್ ಅಂಡ್ ಕ್ರಿಯೇಟಿವ್.!

ಮೇ 3 ರವರೆಗೆ ಲಾಕ್ ಡೌನ್ ಮುಂದುವರಿಕೆ : ಮೋದಿ ಘೋಷಣೆ

ರಾಹುಲ್ ದ್ರಾವಿಡ್ ಬಗ್ಗೆ ನೀವೆಲ್ಲೂ ಓದಿರದ ಸಂಗತಿಗಳು..!

ದೇಶದಲ್ಲಿನ ಈ ವಿಸ್ಮಯ ಸ್ಥಳಗಳ ಪರಿಚಯ ನಿಮಗಿದೆಯಾ?

ಬ್ರೇಕಪ್​ನಿಂದ ಇಷ್ಟೆಲ್ಲಾ ಯೂಸ್ ಇದೆ ಎಂದು ಗೊತ್ತಾದ್ರೆ, ನಿಮ್ ಲವ್ ಯಕ್ಕುಟ್ಟು ಹೋಗಿದ್ದಕ್ಕೆ ಖುಷಿ ಪಡ್ತೀರಿ..!

ಸುಖ ಸಂಸಾರದಲ್ಲಿ ಜೀನ್ ಗಳ ಪಾತ್ರ ಎಂಥಹದ್ದು ಗೊತ್ತಾ..?

ಒಂದೇ ಒಂದು ಒಡಿಐ ಶತಕ ಸಿಡಿಸಿದ 5 ಸ್ಟಾರ್ ಬ್ಯಾಟ್ಸ್ ಮನ್ ಗಳು …! ಈ ಐವರಲ್ಲಿ ಒಬ್ಬರು ಭಾರತೀಯರು ‌..!

ಮಲ ಅತಿಯಾದ ದುರ್ವಾಸನೆ ಬರುತ್ತಿದ್ರೆ ಎಚ್ಚರ .. ಎಚ್ಚರ ‌.. ಕ್ಯಾನ್ಸರ್ ಲಕ್ಷಣವಿರಬಹುದು ..!

ಇನ್ ಸ್ಟಾಗ್ರಾಂ ಡೈರೆಕ್ಟ್ ಮೆಸೇಜ್ ಡೆಸ್ಕ್ ಟಾಪ್ ಗೂ ಲಭ್ಯ ..!

ಇನ್ಮುಂದೆ ಬೆಡ್ ರೂಂ, ಮುತ್ತಿನ ದೃಶ್ಯ ಚಿತ್ರೀಕರಣ ಹೇಗೆ ? ಬಾಲಿವುಡ್ ಡೈರೆಕ್ಟರ್ ಹೀಗೊಂದು ಪ್ರಶ್ನೆ ಎತ್ತಿದ್ದೇಕೆ ..?

ಮೆಗಾಸ್ಟಾರ್ ಚಿರಂಜೀವಿ ಸಿನಿಮಾಕ್ಕೆ ನೋ ಅಂದ್ರಾ ಅನುಷ್ಕಾ ಶೆಟ್ಟಿ …? ಅನುಷ್ಕಾ ಬದಲಿಗೆ ಯಾರು ?

ಬಂದೇ ಬಿಟ್ಟಿತು ಸ್ಯಾಮ್‌ಸಂಗ್ 5G ಸ್ಮಾರ್ಟ್‌ಫೋನ್ ….!

ನಾಪತ್ತೆ ಆಗಿದ್ದ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಪ್ರತ್ಯಕ್ಷ …! ಎಲ್ಲಿ ? ಏನ್ ವಿಷ್ಯ ? ಏನಂದ್ರು ?

ಟೀಮ್ ಇಂಡಿಯಾಕ್ಕೆ ಕಮ್ ಬ್ಯಾಕ್ ಮಾಡುವ ವಿಶ್ವಾಸದಲ್ಲಿ ಕನ್ನಡಿಗ …!

ಲಾಕ್ ಡೌನ್ ನಲ್ಲಿ ರೋರಿಂಗ್ ಸ್ಟಾರ್ ಶ್ರೀಮುರುಳಿಯಿಂದ ಜೀವನ ಪಾಠ …!

ಕೊರೋನಾ ಎಮರ್ಜೆನ್ಸಿ ನಡುವೆಯೇ ಸದ್ದಿಲ್ಲದೆ IPL ಆಯೋಜನೆಗಾಗಿ BCCI ಚಿಂತನೆ ..!

2011ರ ವರ್ಲ್ಡ್ ಕಪ್ ಗೆಲುವಿನ ಹಿಂದಿನ ಆ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು ಧೋನಿ ಅಲ್ಲ …!

ಕೆಟ್ಟದಾಗಿ ಸ್ಪರ್ಶಿಸಿದ್ದ ಆ ಕ್ರಿಕೆಟರ್ ಗೆ ಪ್ರಿಯಾಮಣಿ ಕಪಾಳಮೋಕ್ಷ ಮಾಡಿದ್ದು ಸತ್ಯನಾ?

2011 ರ ವಿಶ್ವಕಪ್ ನಲ್ಲಿ ಸಚಿನ್ ಪುತ್ರ ಅರ್ಜುನ್ ಜೊತೆ ಮ್ಯಾಚ್ ನೋಡಿದ್ದ ಪೋರ ಇವತ್ತು ಟೀಮ್ ಇಂಡಿಯಾ ಆಟಗಾರ…!

ಇದು ಕಾಳಿಂಗ ಸರ್ಪಗಳ ರಾಜಧಾನಿ…! ಇದು ನಿಮಗೂ ಚಿರಪರಿಚಿತ ..!

ಮನಸ್ಸು ಗಾಯಗೊಳಿಸಿ ಕ್ಷಮೆ ಎಂಬ ಮುಲಾಮು ಹಚ್ಚುವುದಲ್ಲ…

ಧೋನಿ ನಾಯಕತ್ವದ ವಿಶ್ವ ಏಕದಿನ ತಂಡ ಪ್ರಕಟಿಸಿದ ವಾಸಿಮ್ ಜಾಫರ್ …

ದಿ ನ್ಯೂ ಇಂಡಿಯನ್ ಟೈಮ್ಸ್ ನಿಂದ ಹಿಮಾಲಯ ಡ್ರಗ್ಸ್ ಸಹಯೋಗದಲ್ಲಿ ಮಿತ್ರರಿಗೆ ಸ್ಯಾನಿಟೈಸರ್ ವಿತರಣೆ

ನೀವಿಬ್ಬರು ಹೀಗಿದ್ದರೆ ನಿಮ್ಮ ನಡುವೆ ಇರೋದು ಬರೀ ಫ್ರೆಂಡ್ಶಿಪ್ ಅಲ್ಲ…!

ಫ್ರೀ ಟಾಕ್ ಟೈಮ್ ಆಫರ್ , ವ್ಯಾಲಿಡಿಟಿ ವಿಸ್ತರಣೆ ನೀಡುತ್ತಿವೆ‌ ಟೆಲಿಕಾಂ ಕಂಪನಿಗಳು‌..!

ಬಾಸ್ ನೀನೇನು ಮಾಡ್ತಿದ್ಯಾ … ? ಸಿಕ್ಸರ್ ಸಿಡಿಸಿದ ಅಯ್ಯರ್ ಗೆ ದ್ರಾವಿಡ್ ಕೂಲ್ ವಾರ್ನಿಂಗ್ ..!

1 COMMENT

LEAVE A REPLY

Please enter your comment!
Please enter your name here