No menu items!
28.1 C
Munich
Friday, June 19, 2026

ಆಟೋ ಪ್ರಯಾಣಿಕರಿಗೆ ಕಾದಿದ್ಯಾ ಬಿಗ್ ಶಾಕ್.? ಶೀಘ್ರದಲ್ಲೇ ಹೆಚ್ಚಳವಾಗುತ್ತಾ ಆಟೋ ಮೀಟರ್ ದರ!?

Must read

ಬೆಂಗಳೂರು: ಬೆಂಗಳೂರು ಜನರಿಗೆ ಒಂದಲ್ಲ ಒಂದು ಶಾಕ್ ಕಾಡ್ತಾನೆ ಇದೆ. ಶ್ರೀ ಸಾಮಾನ್ಯರು ಮಧ್ಯಮ ವರ್ಗದ ಜನರಿಗಂತೂ ಈ ದುನಿಯಾದಲ್ಲಿ ಜೀವನ ಮಾಡೋಕೆ ಆಗ್ತಿಲ್ಲ. ಎಲ್ಲಾವೂ ತುಂಬನೇ ಕಾಸ್ಟ್ಲಿ . ಸರ್ಕಾರಿ ಇಲಾಖೆಗಳು ಅಂತೂ ನಷ್ಟದ ನೆಪವೊಡ್ಡಿ ಕರೆಂಟ್ ದರ ನಂದಿನಿ ಹಾಲು ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯನ್ನ ಏರಿಕೆ ಮಾಡ್ತಾನೆ ಬಂದಿದೆ.ಆದ್ರೆ ಈಗ ಸರ್ಕಾರಿ ಇಲಾಖೆಗಳಂತೆ ನಮಗೂ ಪ್ರತಿ ವರ್ಷ ಆಟೋ ಪ್ರಯಾಣದ ಏರಿಸಿ ಅಂತ ಆಟೋ ಚಾಲಕರು ಪಟ್ಟು ಹಿಡಿದಿದ್ದಾರೆ.
ಹೌದು.. ಒಂದು ಕಡೆ ಪೆಟ್ರೋಲ್ ರೇಟ್ ಇಳಿಕೆಯಾಗಿದೆ. ಸರ್ಕಾರ ವಾಹನ ಸವಾರರಿಗೆ ತಾತ್ಕಾಲಿಕವಾಗಿ ನಿಟ್ಟುಸಿರು ಬಿಡುವಂತೆ ರಿಲೀಫ್ ನೀಡಿದೆ. ಆದ್ರೆ, ಕರ್ಮಶಿಯಲ್ ಗ್ಯಾಸ್ ರೇಟ್ ಜಾಸ್ತಿ ಆಗಿದೆ. ತೈಲ ಬೆಲೆ ಇಳಿಕೆಯಾದ್ರೂ ಆಟೋ ಚಾಲಕರಿಗೆ ಗ್ಯಾಸ್ ರೇಟ್ ಹೊರೆಯಾಗ್ತಿವೆ. ಹೀಗಾಗಿ ಆಟೋ ಮೀಟರ್ ದರ ಏರಿಸುವಂತೆ ಸರ್ಕಾರದ ಕದ ತಟ್ಟಿದ್ದಾರೆ ಆಟೋ ಚಾಲಕರು ಹಾಗೂ ಮಾಲೀಕರು. ಈ ಸಂಬಂಧ ಆಟೋ ಯೂನಿಯನ್‌ಗಳು ಸಾರಿಗೆ ಸಚಿವರಿಗೆ ಪತ್ರ ಬರೆದಿದ್ದು ಕೂಡಲೇ ದರ ಪರಿಷ್ಕರಣೆ ಮಾಡುವಂತೆ ಒತ್ತಾಯಿಸುತ್ತಿದ್ದಾರೆ.
ಬೆಂಗಳೂರಿನಲ್ಲಿ ಆಟೋ ದರ ಪರಿಷ್ಕರಣೆ 2013 ಹಾಗೂ 2021 ರಲ್ಲಿ ಆಗಿತ್ತು. ಕಳೆದ ಬಾರಿ ಒಂದು ಕೀ ಮೀಟರ್ಗೆ ಕೆವಲ 2 ರೂಪಾಯಿ ಅಷ್ಟೆ ಹೆಚ್ಚಿಸಿದ್ರು. ಕಳೆದ ಎರಡು ವರ್ಷಗಳಿಂದ ಯಾವದೇ ದರ ಪರಿಷ್ಕರಣೆ ಆಗಿಲ್ಲ . ಗ್ಯಾಸ್ ದರ ಕೂಡ ಜಾಸ್ತಿಯಾಗಿದೆ. ಬಿಡಿಬಾಗಗಳ ಖರೀದಿ ತುಂಬಾನೇ ಜಾಸ್ತಿಯಾಗಿದೆ. ಹೀಗಾಗಿ ಸರ್ಕಾರ ಕಾಲ ಕಾಲಕ್ಕೆ ದರ ಹೆಚ್ಚುಸುವ ಕೆಲಸ ಮಾಡಬೇಕು. ಪ್ರತಿ ವರ್ಷದ ಕಿ. ಮೀಟರ್ 2 ರಿಂದ 5 ವರಿಗೆ ಏರಿಕೆ ಮಾಡುವಂತೆ ಆಟೋ ಚಾಲಕರು ಬೇಡಿಕೆ ಇಟ್ಟಿದ್ದಾರೆ.

- Advertisement -spot_img

More articles

- Advertisement -spot_img

Latest article