No menu items!
17.7 C
Munich
Friday, May 1, 2026

ಆಡಳಿತ ಕಲಿಯಲು ಕುಮಾರಸ್ವಾಮಿ ಅವರಿಂದ ಪಾಠ ಬೇಕಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

Must read

ಆಡಳಿತ ಕಲಿಯಲು ಕುಮಾರಸ್ವಾಮಿ ಅವರಿಂದ ಪಾಠ ಬೇಕಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರು: ರಾಜಕೀಯ ಹಾಗೂ ಆಡಳಿತದಲ್ಲಿ ನನಗೆ ಎಚ್.ಡಿ. ಕುಮಾರಸ್ವಾಮಿ ಅವರಿಗಿಂತ ಹೆಚ್ಚಿನ ಅನುಭವವಿದೆ. ನಾನು ಮುಖ್ಯಮಂತ್ರಿ ಆಗದೇ ಇರಬಹುದು, ಆದರೆ ಆಡಳಿತ ವಿಚಾರದಲ್ಲಿ ಅವರು ಕಲಿಸಬೇಕಾದ ಅಗತ್ಯ ನನಗಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದರು.
ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ಬಳ್ಳಾರಿಯಲ್ಲಿ ಪೊಲೀಸ್ ಅಧಿಕಾರಿಗಳೊಂದಿಗೆ ನಡೆಸಿದ ಸಭೆಗೆ ಕುಮಾರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿರುವ ವಿಚಾರಕ್ಕೆ ಉತ್ತರಿಸಿದರು.
“ನಾನು ಬಹಳ ವರ್ಷಗಳಿಂದ ಸಚಿವನಾಗಿ ಕೆಲಸ ಮಾಡಿದ್ದೇನೆ. ಆಡಳಿತವನ್ನು ಹೇಗೆ ನಡೆಸಬೇಕು, ಯಾರೊಂದಿಗೆ ಸಭೆ ನಡೆಸಬೇಕು, ನಡೆಸಬಾರದು ಎಂಬುದರ ಬಗ್ಗೆ ನನಗೆ ಸ್ಪಷ್ಟ ಅರಿವಿದೆ” ಎಂದು ಹೇಳಿದರು. ಈ ಮೂಲಕ ಆಡಳಿತ ವಿಚಾರದಲ್ಲಿ ತಾನು ಅನುಭವಸಂಪನ್ನನಾಗಿರುವುದನ್ನು ಶಿವಕುಮಾರ್ ಸ್ಪಷ್ಟಪಡಿಸಿದರು.

- Advertisement -spot_img

More articles

- Advertisement -spot_img

Latest article