No menu items!
11.1 C
Munich
Wednesday, April 29, 2026

ಆ ಇಬ್ಬರ ವಿಕೆಟ್ ಬಹಳ ಖುಷಿ ಕೊಡ್ತು ಎಂದ ಅವೇಶ್ ಖಾನ್

Must read

ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಅಂತಾರಾಷ್ಟ್ರೀಯ ಬೌಲರ್‌ಗಳಿಗಿಂತ ಅನ್‌ಕ್ಯಾಪ್ಡ್ ಬೌಲರ್‌ಗಳೇ ಅತ್ಯುತ್ತಮ ಪ್ರದರ್ಶನವನ್ನು ನೀಡುವುದರ ಮೂಲಕ ಮಿಂಚಿದರು. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅವೇಶ್ ಖಾನ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹರ್ಷಲ್ ಪಟೇಲ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡದ ಚೇತನ್ ಸಕಾರಿಯಾ ಸೇರಿದಂತೆ ಹಲವಾರು ಯುವ ಪ್ರತಿಭೆಗಳು ಮಿಂಚಿದವು.

 

 

ಅದರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅವೇಶ್ ಖಾನ್ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಪ್ರಮುಖ ಆಟಗಾರರ ವಿಕೆಟ್‍ಗಳನ್ನು ಪಡೆದು ಮಿಂಚಿದರು. ಪ್ರಸ್ತುತ ಐಪಿಎಲ್ ಟೂರ್ನಿ ನಿಲುಗಡೆಗೊಳ್ಳುವ ವೇಳೆಗೆ 8 ಪಂದ್ಯಗಳನ್ನಾಡಿರುವ ಅವೇಶ್ ಖಾನ್ 14 ವಿಕೆಟ್‍ಗಳನ್ನು ಪಡೆದು ಟೂರ್ನಿಯಲ್ಲಿ ಅತಿಹೆಚ್ಚು ವಿಕೆಟ್ ಪಡೆದ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ಇಷ್ಟು ಉತ್ತಮ ಪ್ರದರ್ಶನ ತೋರಿದ ಅವೇಶ್ ಖಾನ್ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿನ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

 

ಈ ಬಾರಿಯ ಟೂರ್ನಿ ಆರಂಭಕ್ಕೂ ಮುನ್ನ ಹೆಚ್ಚೆಂದರೆ ಒಂದೆರಡು ಪಂದ್ಯಗಳಲ್ಲಿ ತನಗೆ ಆಡಲು ಅವಕಾಶ ಸಿಗಬಹುದು ಎಂದು ಅವೇಶ್ ಖಾನ್ ಊಹಿಸಿದ್ದರಂತೆ. ಆದರೆ ತಂಡದ ಪ್ರಮುಖ ಬೌಲರ್‌ಗಳು ಆಡಲು ಅಲಭ್ಯರಾದಾಗ ಅವೇಶ್ ಖಾನ್ ಅವರಿಗೆ ಉತ್ತಮ ಅವಕಾಶಗಳು ಆರಂಭದ ಪಂದ್ಯಗಳಲ್ಲಿ ದೊರಕಿದವು. ಇದನ್ನು ಸದುಪಯೋಗ ಬಳಸಿಕೊಂಡ ಅವೇಶ್ ಖಾನ್ ಪ್ರಮುಖ ವಿಕೆಟ್‍ಗಳನ್ನು ಪಡೆದುಕೊಂಡು ಮುಂದಿನ ಪಂದ್ಯಗಳಲ್ಲೂ ಆಡುವ ಅವಕಾಶವನ್ನು ಗಿಟ್ಟಿಸಿಕೊಂಡರು. ಈ ಬಾರಿಯ ಟೂರ್ನಿಯಲ್ಲಿ ಅವೇಶ್ ಖಾನ್ ಪಡೆದಿರುವ 14 ವಿಕೆಟ್‍ಗಳ ಪೈಕಿ ವಿರಾಟ್ ಕೊಹ್ಲಿ ಮತ್ತು ಮಹೇಂದ್ರ ಸಿಂಗ್ ಧೋನಿ ಅವರ ವಿಕೆಟ್‍ಗಳನ್ನು ಪಡೆದದ್ದು ಹೆಚ್ಚಿನ ಸಂತೋಷ ನೀಡಿತು ಎಂದು ಅವೇಶ್ ಖಾನ್ ಹೇಳಿಕೊಂಡಿದ್ದಾರೆ.

 

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article