No menu items!
11.1 C
Munich
Wednesday, April 29, 2026

ಕೊರೊನಾ ಔಷಧ ಯಾವಾಗ ಸಿಗುತ್ತೆ ಗೊತ್ತಾ?

Must read

 

ಕೊರೊನಾ ಹೆಮ್ಮಾರಿಯ ಅಟ್ಟಹಾಸ ಮಿತಿ ಮೀರ್ತಿದೆ. ದೇಶದಲ್ಲಿ ಉಲ್ಬಣವಾಗ್ತಾಯಿರೋ ಹಿನ್ನಲೆಯಲ್ಲಿ ಜನ ನಡುಗಿ ಹೋಗಿದ್ದಾರೆ.ಕೊರೊನಾ ಬಂದ್ರೆ ಹೇಗಪ್ಪ ಚಿಕಿತ್ಸೆ ಪಡೆಯೋದು ಅನ್ನೀ ಭಯದಲ್ಲೇ ದಿನಾ ದೂಡ್ತಿದ್ದಾರೆ. ಇಂಥ ಕಷ್ಟಕಾಲದಲ್ಲಿ ಸಂಜೀವಿನಿಯಾಗಿದ್ದು ಡಿಆರ್​ಡಿಓ. ತೀವ್ರವಾದ ಕೋವಿಡ್ -19 ಪ್ರಕರಣಗಳಲ್ಲಿ ಸಹಾಯಕ ಚಿಕಿತ್ಸೆಯಾಗಿ ಬಳಸಲು 2-ಡಿಆಕ್ಸಿ-ಡಿ-ಗ್ಲೂಕೋಸ್ (2-ಡಿಜಿ). “ಗ್ಲೂಕೋಸ್‌ನ ಜೆನೆರಿಕ್ ಅಣು ಆಗಿರುವುದರಿಂದ ಇದನ್ನು ಸುಲಭವಾಗಿ ಉತ್ಪಾದಿಸಬಹುದು ಮತ್ತು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಾಗಿಸಬಹುದು” ಎಂದು ಡಿಆರ್‌ಡಿಒ ತಿಳಿಸಿತ್ತು.

ಡಿಆರ್‌ಡಿಒ ಪ್ರಕಟಣೆಯ ಪ್ರಕಾರ, 2-ಡಿಜಿಯೊಂದಿಗೆ ಚಿಕಿತ್ಸೆ ಪಡೆದ ರೋಗಿಗಳು ರೋಗ ಲಕ್ಷಣದ ಆಧಾರದ ಮೇಲೆ ನೀಡುವ ಚಿಕಿತ್ಸೆಯಲ್ಲಿ ಕಡಿಮೆ ಎಂದರೂ 2.5 ದಿನ, ಬೇಗ ಚೇತರಿಸಿಕೊಳ್ಳುವ ಸಾಧ್ಯತೆ ಇದೆ ಎಂದು ತಿಳಿಸಿತ್ತು. ಇನ್ನು ಈ ಔಷಧಿಯನ್ನು ಫೇಸ್​-2 ನಲ್ಲಿ 110 ರೋಗಿಗಳಿಗೆ ಹಾಗೂ ಫೇಸ್​​-3 ನಲ್ಲಿ ​3 ರೋಗಿಗಳಿಗೆ ನೀಡಲಾಗಿದ್ದು ಪ್ರಯೋಗ ಸಂಪೂರ್ಣ ಯಶಸ್ಸನ್ನು ಕಂಡಿದೆ ಅಂತಾ ಡಿಆರ್​ಡಿಓ ವಿಜ್ಞಾನಿ ಡಾ.ಸುಧೀರ್​ ಚಂದ್ನಾ ತಿಳಿಸಿದ್ದಾರೆ.

ಡಾ. ಸುಧೀರ್ ತಿಳಿಸುವಂತೆ ಪ್ರಯೋಗದ ವೇಳೆ ಈ ಔಷಧಿ ಪಡೆದ ಸೋಂಕಿತರು, 2ರಿಂದ 3ದಿನಗಳಷ್ಟು ಬೇಗ ವಾಸಿಯಾಗಿದ್ದಾರೆ. ಫೇಸ್​ 3 ಪ್ರಯೋಗದಲ್ಲಿ ಸೋಂಕಿತರು ಆಕ್ಸಿಜನ್​ ಉಪಯೋಗಿಸಿರೋದು ಕುಡ ಕಡಿಮೆಯಾಗಿದೆ ಅನ್ನೋದನ್ನ ಅವ್ರು ಹೇಳಿದ್ದಾರೆ.

ವಿಶೇಷ ಅಂದ್ರೆ ಹೈದರಾಬಾದ್​ನ ಡಾ. ರೆಡ್ಡೀಸ್ ಲ್ಯಾಬ್​ ಡಿಆರ್​ಡಿಓ ಜೊತೆ ಈ ಔಷಧ ಉತ್ಪಾದನೆಯ ಪಾಲುದಾರ ಸಂಸ್ಥೆಯಾಗಿದೆ. ಈ ಸಂಸ್ಥೆ ಅತ್ಯಂತ ಶೀಘ್ರದಲ್ಲಿ 2-ಡಿಆಕ್ಸಿ-ಡಿ-ಗ್ಲೂಕೋಸ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ ಎಂದು ಅವರು ತಿಳಿಸಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article